ಆಗಸ್ಟ್ ತಿಂಗಳು ಒಂದು ಪ್ರಮುಖ ತಿಂಗಳಾಗಿರುವುದೊ?
1 ಯೆಹೋವನ ಜನರಿಗೆ 1963ನೆಯ ಇಸವಿಯು, ಒಂದು ಪ್ರಮುಖ ವರ್ಷವಾಗಿತ್ತು. ಏಕೆಂದು ನಿಮಗೆ ಗೊತ್ತೊ? ಲೋಕವ್ಯಾಪಕವಾಗಿ ಪ್ರಚಾರಕರ ಸಂಖ್ಯೆಯು, ಹತ್ತು ಲಕ್ಷ ಸಂಖ್ಯೆಯನ್ನು ತಲಪಿದ್ದು ಆಗಲೇ. ಆ ಸಮಯದಲ್ಲಿ ನೀವು ಸತ್ಯದಲ್ಲಿ ಇದ್ದಿದ್ದರೆ, ರಾಜ್ಯ ಸಂದೇಶವನ್ನು ಪ್ರಚಾರ ಮಾಡಲಿಕ್ಕಾಗಿ ಇಷ್ಟೊಂದು ಜನರನ್ನು ಹೊಂದಿದ್ದಕ್ಕಾಗಿ ನಾವು ಎಷ್ಟು ಸಂಭ್ರಮಪಟ್ಟೆವೆಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು! ಈಗ ಕೇವಲ ಅಮೆರಿಕವೊಂದರಲ್ಲೇ ಅಷ್ಟು ಮಂದಿ ಪ್ರಚಾರಕರಿದ್ದಾರೆ. ಆದರೆ, ಪ್ರತಿ ತಿಂಗಳು ಕೇವಲ ಅಮೆರಿಕವೊಂದರಲ್ಲೇ ಸರಾಸರಿ 90,000 ಪ್ರಚಾರಕರು, ತಮ್ಮ ಸೇವಾ ವರದಿಯನ್ನು ಹಾಕುವುದೇ ಇಲ್ಲ. ಭಾರತದಲ್ಲೂ ಇಂತಹದ್ದೇ ಪರಿಸ್ಥಿತಿಯಿದೆ.
2 ಪಂಥಾಹ್ವಾನವನ್ನು ಸ್ವೀಕರಿಸಿರಿ: ಆಗಸ್ಟ್ ತಿಂಗಳಿನಲ್ಲಿ ಸೊಸೈಟಿಯು, ಅಮೆರಿಕದಲ್ಲಿ ಸಾರ್ವಕಾಲಿಕ ಉಚ್ಚಾಂಕವಾಗಿರುವ ಹತ್ತು ಲಕ್ಷ ಪ್ರಚಾರಕರ ಸಂಖ್ಯೆಯನ್ನು ತಲಪಲು ಪ್ರಯತ್ನಿಸುತ್ತಿದೆ. ಭಾರತಕ್ಕಾಗಿರುವ ನಮ್ಮ ಗುರಿಯು, 20,000 ಪ್ರಚಾರಕರಾಗಿದ್ದಾರೆ. ನಮ್ಮ ಪ್ರಯತ್ನಗಳು ಯಶಸ್ವಿಯಾಗುವಲ್ಲಿ, ಆಗಸ್ಟ್ ತಿಂಗಳು ಇಲ್ಲಿಯೂ ಒಂದು ಪ್ರಮುಖ ತಿಂಗಳಾಗುವುದು! ನಾವೆಲ್ಲರೂ ನಮ್ಮ ಪಾಲನ್ನು ಮಾಡುವಲ್ಲಿ ನಾವು ಕೂಡ ಇದನ್ನು ಮಾಡಸಾಧ್ಯವಿದೆ.
3 ರಜೆಯನ್ನು ಕಳೆಯಲು ಯೋಜಿಸುತ್ತಿರುವವರು, ಹೋಗುವ ಮುಂಚೆ ಶುಶ್ರೂಷೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯಸಾಧ್ಯವಿದೆ. ನಿಮ್ಮ ರಜೆಯ ಸಮಯದಲ್ಲಿ ನೀವು ಭೇಟಿಯಾಗುವ ಜನರಿಗೆ ಒಂದು ಸಾಕ್ಷಿಯನ್ನು ಕೊಡಲು ಸಾಧ್ಯವಾಗುವಂತೆ, ಕಿರುಹೊತ್ತಗೆಗಳು, ಬ್ರೋಷರ್ಗಳು ಅಥವಾ ಪತ್ರಿಕೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಅಲ್ಲದೆ, ನೀವು ಹೋಗುವಂತಹ ಸ್ಥಳದಲ್ಲಿರುವ ಸ್ಥಳಿಕ ಪ್ರಚಾರಕರೊಂದಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದರಲ್ಲಿ ನೀವು ಆನಂದಿಸಸಾಧ್ಯವಿದೆ.
4 ಅಶಕ್ತರಾಗಿರುವುದಾದರೂ ನೀವು ಶುಶ್ರೂಷೆಯಲ್ಲಿ ಪಾಲ್ಗೊಳ್ಳಸಾಧ್ಯವಿದೆ. ನಿಮ್ಮನ್ನು ಭೇಟಿಮಾಡುವ ವೈದ್ಯರು, ನರ್ಸ್ಗಳು ಅಥವಾ ಸಂದರ್ಶಕರಿಗೆ ನೀವು ಒಂದು ಸಾಕ್ಷಿಯನ್ನು ಕೊಡಲು ಶಕ್ತರಾಗಬಹುದು. ನೀವು ಪ್ರಾಯಶಃ ಪತ್ರ ಅಥವಾ ಟೆಲಿಫೋನಿನ ಮೂಲಕ ಸಾಕ್ಷಿಯನ್ನು ನೀಡಸಾಧ್ಯವಿದೆ.
5 ಆಗಸ್ಟ್ ತಿಂಗಳಿನಲ್ಲಿ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಕೊಡಲ್ಪಡುವ ಸಹಾಯವನ್ನು, ಕೆಲವರು ನಿಸ್ಸಂದೇಹವಾಗಿಯೂ ಗಣ್ಯಮಾಡುವರು. ಹಿರಿಯರು, ಶುಶ್ರೂಷಾ ಸೇವಕರು, ಮತ್ತು ಅಭ್ಯಾಸ ಚಾಲಕರು, ಈ ಸಹಾಯವು ಒದಗಿಸಲ್ಪಡುವಂತೆ ಏರ್ಪಾಡನ್ನು ಮಾಡಬೇಕು. ಏನೇ ಆಗಲಿ, ತಿಂಗಳ ಅಂತ್ಯದಲ್ಲಿ ನಿಮ್ಮ ಕ್ಷೇತ್ರ ಸೇವಾ ವರದಿಯನ್ನು ತಡಮಾಡದೆ ಸಲ್ಲಿಸಲು ಮರೆಯಬೇಡಿರಿ. ಹೀಗೆ ನೀವು ಆಗಸ್ಟ್ ತಿಂಗಳಿನಲ್ಲಿ ಒಬ್ಬ ಪ್ರಚಾರಕರಾಗಿ ಎಣಿಸಲ್ಪಡುವಿರಿ.
6 ಆ ಸುಯೋಗವನ್ನು ಅಮೂಲ್ಯವೆಂದೆಣಿಸಿರಿ: ಶುಶ್ರೂಷೆಯು ಒಂದು “ಉತ್ತಮ ಆಸ್ತಿ” (NW)ಯಾಗಿದೆ. (2 ತಿಮೊ. 1:14) ಸುವಾರ್ತೆಯನ್ನು ಸಾರಲಿಕ್ಕಾಗಿ ನಮಗೆ ಕೊಡಲ್ಪಟ್ಟಿರುವ ಸುಯೋಗವನ್ನು ನಾವು ಗಣ್ಯಮಾಡುತ್ತೇವೆ. (1 ಥೆಸ. 2:4) ಯೆಹೋವನು ನಮಗಾಗಿ ಮಾಡಿರುವುದೆಲ್ಲವನ್ನೂ ನಾವು ಪರಿಗಣಿಸುವಾಗ, ಇಡೀ ವರ್ಷ ಈ ಬಹು ಮುಖ್ಯವಾದ ಕೆಲಸದಲ್ಲಿ ನಿರಂತರವಾಗಿ ಪಾಲ್ಗೊಳ್ಳುವಂತೆ ನಾವು ಪ್ರಚೋದಿಸಲ್ಪಡಬೇಕು. ಕ್ರಮವಾಗಿ ಸಾರುವುದರಿಂದ ನಮ್ಮನ್ನು ಯಾವುದೇ ಸಂಗತಿಯೂ ತಡೆಗಟ್ಟುವಂತೆ ನಾವು ಬಿಡಬಾರದು. ಈ ಆಗಸ್ಟ್ ತಿಂಗಳನ್ನು ಯೆಹೋವನ ಸೇವೆಯಲ್ಲಿ ಒಂದು ಪ್ರಮುಖ ತಿಂಗಳನ್ನಾಗಿ ಮಾಡೋಣ ಮತ್ತು ತದನಂತರದ ಪ್ರತಿ ತಿಂಗಳಿನಲ್ಲಿ ಆತನ ಕುರಿತಾಗಿ ಸಾಕ್ಷಿಕೊಡುವ ದೃಢನಿರ್ಧಾರವನ್ನು ಮಾಡೋಣ!—ಕೀರ್ತ. 34:1.