ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ವಿಶೇಷ ಸಮ್ಮೇಳನ ದಿನಗಳ ಏರ್ಪಾಡು, 1987ರಲ್ಲಿ ಆರಂಭವಾಯಿತು. ಈ ಒಂದು ದಿನದ ಒಟ್ಟುಗೂಡುವಿಕೆಗಳು, ಯೆಹೋವನ ಸೇವಕರಿಗೆ ಮತ್ತು ಹಾಜರಾಗುವ ಆಸಕ್ತ ಜನರಿಗೆ ಭಕ್ತಿವೃದ್ಧಿಮಾಡುವಂತಹವುಗಳಾಗಿ ಪರಿಣಮಿಸಿವೆ. 1999ರ ಜನವರಿ ತಿಂಗಳಿನಿಂದ ಆರಂಭಿಸಿ, ಒಂದು ಹೊಸ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವು ಸಾದರಪಡಿಸುವುದು. ಒಂಬತ್ತು ಭಾಷಣಗಳು ಮತ್ತು ಹಲವಾರು ಇಂಟರ್ವ್ಯೂಗಳು ಹಾಗೂ ಅನುಭವಗಳು ಆತ್ಮಿಕವಾಗಿ ಪ್ರಯೋಜನಕಾರಿಯಾಗಿರುವುದನ್ನು ನೀವು ಕಂಡುಕೊಳ್ಳುವಿರಿ.
ಈ ಹೊಸ ಕಾರ್ಯಕ್ರಮದ ಮುಖ್ಯ ವಿಷಯವು, “ಯೆಹೋವನ ಮೇಜಿಗಾಗಿ ಗಣ್ಯತೆಯನ್ನು ತೋರಿಸಿರಿ” ಎಂದಾಗಿರುವುದು. (ಯೆಶಾ. 65:1; 1 ಕೊರಿಂ. 10:21) ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯು, ನಮ್ಮ ಜೀವನಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದುಕೊಳ್ಳಬೇಕೆಂಬ ನಮ್ಮ ದೃಢನಿರ್ಧಾರವನ್ನು ಅದು ಬಲಪಡಿಸುವುದು. (ಕೀರ್ತ. 27:4) ಸರ್ಕಿಟ್ ಮೇಲ್ವಿಚಾರಕರ ಭಾಗವು, ಕೂಟದ ಹಾಜರಿಯ ಸಂಬಂಧದಲ್ಲಿ “ನಮ್ಮ ಹೃದಯಗಳ ಪ್ರವೃತ್ತಿಗಳನ್ನು ಪರೀಕ್ಷಿಸುವುದು” ಎಂಬ ವಿಷಯವನ್ನು ಚರ್ಚಿಸುವುದು. “ಯೆಹೋವನ ಮೇಜಿನಲ್ಲಿ ಉಣ್ಣುವ ಮೂಲಕ ಆತ್ಮಿಕತೆಯನ್ನು ಕಾಪಾಡಿಕೊಳ್ಳಿರಿ,” ಇದನ್ನು ಮಾಡುವುದು ಹೇಗೆಂಬುದನ್ನು ಒಬ್ಬ ಅತಿಥಿ ಭಾಷಣಕರ್ತರು ನಮಗೆ ತೋರಿಸುವರು. ದೇವರನ್ನು ಸೇವಿಸುವುದರಲ್ಲಿ ಸ್ಥಿರಚಿತ್ತತೆಯನ್ನು ಕಾಪಾಡಿಕೊಳ್ಳಲು, ಯೆಹೋವನ ಸಂಸ್ಥೆಯಲ್ಲಿರುವ ಯುವ ಜನರಿಗೆ ವ್ಯಾವಹಾರಿಕ ಉತ್ತೇಜನವು ಕೊಡಲ್ಪಡುವುದು. ಸಂದರ್ಶಿಸುವ ಭಾಷಣಕರ್ತರ ಮುಖ್ಯ ಭಾಷಣದ ಶೀರ್ಷಿಕೆಯು, “ಧೈರ್ಯದಿಂದ ಸಾಕ್ಷಿಕೊಡಲು ಆತ್ಮಿಕವಾಗಿ ಬಲಗೊಳಿಸಲ್ಪಟ್ಟವರು” ಎಂದಾಗಿರುವುದು. ಇದು, ರಾಜ್ಯದ ಕುರಿತಾಗಿ ಧೈರ್ಯದಿಂದ ಸಾಕ್ಷಿ ನೀಡುವಂತೆ, ಸಭೆಯ ಮೂಲಕ ಮಾಡಲ್ಪಡುವ ಒದಗಿಸುವಿಕೆಗಳು, ನಮ್ಮನ್ನು ಹೇಗೆ ಸಜ್ಜುಗೊಳಿಸುತ್ತವೆ ಎಂಬುದನ್ನು ತೋರಿಸುವುದು. ಈ ಕಾರ್ಯಕ್ರಮದಿಂದ ಯಾರು ತಾನೇ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸಲಾರರು?
ಹೊಸದಾಗಿ ಸಮರ್ಪಿತರಾಗಿದ್ದು, ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಬಯಸುವವರು, ಸಾಧ್ಯವಿರುವಷ್ಟು ಬೇಗನೆ ಅಧ್ಯಕ್ಷ ಮೇಲ್ವಿಚಾರಕರಿಗೆ ಅದನ್ನು ತಿಳಿಸಬೇಕು. ವಿಶೇಷ ಸಮ್ಮೇಳನ ದಿನವನ್ನು ಏರ್ಪಾಡಿನ 12ನೆಯ ವರ್ಷವನ್ನು ನಾವು ಆರಂಭಿಸಿದಂತೆ, ಹಾಜರಾಗುವವರೆಲ್ಲರೂ, ಮುಂದಿರುವ ಕೆಲಸಕ್ಕಾಗಿ ಆತ್ಮಿಕವಾಗಿ ಉತ್ತೇಜಿಸಲ್ಪಡುವರೆಂಬ ಭರವಸೆ ನಮಗಿದೆ.