ನಿರ್ಮಾಣಿಕ ಪುಸ್ತಕವನ್ನು ನಾವು ನೀಡಬಹುದೋ?
ಕಳೆದ ವರ್ಷ ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕನು ಇದ್ದಾನೋ? (ಇಂಗ್ಲಿಷ್) ಎಂಬ ಪುಸ್ತಕವನ್ನು ಪಡೆದುಕೊಳ್ಳುವುದರಲ್ಲಿ ನಾವೆಲ್ಲರೂ ಆನಂದಿಸಿದೆವು. ಈ ಪುಸ್ತಕವು ವಿಶೇಷವಾಗಿ, ಸುಶಿಕ್ಷಿತರಿಗೆ, ಆದರೆ ದೇವರಲ್ಲಿ ನಂಬಿಕೆಯನ್ನಿಡದ ಜನರಿಗಾಗಿ ಮಾಡಲ್ಪಟ್ಟಿದೆ. ಈ ಪುಸ್ತಕವು ಅತ್ಯಗತ್ಯವಾದ ವಿಷಯಗಳನ್ನು ಒದಗಿಸುತ್ತದೆ.
ಪ್ರಾಯೋಗಿಕ ಕಾರಣಗಳಿಂದಾಗಿ, ಮಾಸಿಕ ಸಾಹಿತ್ಯ ನೀಡುವಿಕೆಯು ಹೆಚ್ಚಿನ ಆಕರ್ಷಣೆಯುಳ್ಳ ಪ್ರಕಾಶನಗಳನ್ನು ಸಾಮಾನ್ಯವಾಗಿ ನೀಡುತ್ತದೆ. ಅಂದರೆ ನಿರ್ಮಾಣಿಕ ಪುಸ್ತಕವನ್ನು ನಾವು ನೀಡಬಾರದೆಂಬುದನ್ನು ಇದು ಅರ್ಥೈಸುತ್ತದೋ? ಇಲ್ಲವೇ ಇಲ್ಲ! ದೇವರಲ್ಲಿ ನಂಬಿಕೆಯನ್ನಿಡದ ಮತ್ತು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿರುವ ಜನರಿಗೆ ವರ್ಷಪೂರ್ತಿ ಯಾವುದೇ ಸಮಯದಲ್ಲಿ ಈ ಪುಸ್ತಕವನ್ನು ನೀಡಬಹುದು. ದೇವರಲ್ಲಿ ನಂಬಿಕೆಯನ್ನಿಡುವ, ಆದರೆ ಆತನು ಯಾರಾಗಿದ್ದಾನೆ, ಆತನ ಗುಣಗಳು ಮತ್ತು ಉದ್ದೇಶಗಳೇನು ಎಂಬಂತಹ ವಿಚಾರಗಳನ್ನು ಅರಿತಿರದ ಜನರಿಗೆ ಸಹ ಇದನ್ನು ನೀಡಬಹುದು. ಆದುದರಿಂದ ಯಾವಾಗಲೂ ನಿಮ್ಮ ಸೇವಾ ಬ್ಯಾಗ್ನಲ್ಲಿ ಒಂದು ಪ್ರತಿಯನ್ನು ಕೊಂಡೊಯ್ಯಿರಿ ಮತ್ತು ಅದನ್ನು ಓದಲು ಇಷ್ಟಪಡುವರೆಂದು ನೀವು ನೆನಸುವ ಯಾವುದೇ ವ್ಯಕ್ತಿಗೆ ಪುಸ್ತಕವನ್ನು ನೀಡಲು ಸಿದ್ಧರಾಗಿರಿ.