ವಿರಾಮಕಾಲವನ್ನು ಅದರ ತಕ್ಕ ಸ್ಥಾನದಲ್ಲಿಡಿರಿ
1 ಕಷ್ಟಕರವಾದ ಈ ದಿನಗಳಲ್ಲಿ, ಆಗಿಂದಾಗ್ಗೆ ನಮಗೆಲ್ಲರಿಗೆ ಬದಲಾವಣೆಯ ಅಗತ್ಯವಿದೆ. ನಿರ್ದಿಷ್ಟ ಪ್ರಮಾಣದ ಮನೋರಂಜನೆಯು ಯೋಗ್ಯವಾದದ್ದಾಗಿದೆ. ಆದರೂ, ವಿರಾಮ, ಮನೋರಂಜನೆ ಹಾಗೂ ಸಾಮಾಜಿಕ ಗೋಷ್ಠಿಗಳಲ್ಲಿ ಅತ್ಯಧಿಕ ಸಮಯವನ್ನು ಕಳೆಯುವುದು, ಒಬ್ಬ ವ್ಯಕ್ತಿಯು ನಿಧಾನವಾಗಿ ಆತ್ಮಿಕ ಬೆನ್ನಟ್ಟುವಿಕೆಗಳಲ್ಲಿ ತೀರ ಕಡಿಮೆ ಸಮಯವನ್ನು ವ್ಯಯಿಸುವಂತೆ ಮಾಡಸಾಧ್ಯವಿದೆ. ಆದುದರಿಂದ, ನಾವು ವಿರಾಮವನ್ನು ತಕ್ಕ ಸ್ಥಾನದಲ್ಲಿಡಬೇಕಾಗಿದೆ. (ಮತ್ತಾ. 5:3) ಇದು ಹೇಗೆ ಸಾಧ್ಯ? ಎಫೆಸ 5:15-17ರಲ್ಲಿ (NW) ಕಂಡುಬರುವ ಬುದ್ಧಿವಾದವನ್ನು ಅನುಸರಿಸುವ ಮೂಲಕವೇ.
2 ಮಿತಿಗಳನ್ನಿಡಿರಿ: ತಾವು ಎಷ್ಟು ವಿವೇಕದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದೇವೆ ಎಂಬುದನ್ನು ಕ್ರೈಸ್ತರು “ಕಟ್ಟುನಿಟ್ಟಾಗಿ ಗಮನಿಸುವ” ಅಗತ್ಯವಿದೆ ಎಂದು ಪೌಲನು ಬರೆದನು. ವಿರಾಮಕಾಲವನ್ನು ನಿಜವಾಗಿಯೂ ಅಗತ್ಯವಿರುವ ವಿಷಯಕ್ಕೆ ಮಾತ್ರ ಸೀಮಿತಗೊಳಿಸಲು ಮಿತಭಾವ ಹಾಗೂ ಆತ್ಮನಿಯಂತ್ರಣದ ಆವಶ್ಯಕತೆಯಿದೆ. ನಾವು ನಮ್ಮ ಬಿಡುವಿನ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತೇವೆ ಎಂಬುದರ ಕುರಿತು ಗಂಭೀರವಾಗಿ ಆಲೋಚಿಸುವುದು ಒಳ್ಳೇದು. ಮನೋರಂಜನೆಯು, ನಾವು ನಮ್ಮ ಸಮಯವನ್ನು ಹಾಳುಮಾಡಿದ್ದೇವೆ ಎಂಬ ಅನಿಸಿಕೆಯನ್ನು ನಮ್ಮಲ್ಲಿ ಉಂಟುಮಾಡುವುದಕ್ಕೆ ಬದಲಾಗಿ ಅಥವಾ ನಮ್ಮನ್ನು ಆಯಾಸಗೊಳಿಸುವುದಕ್ಕೆ ಬದಲಾಗಿ, ಒಂದು ಪ್ರಯೋಜನದಾಯಕ ಉದ್ದೇಶವನ್ನು ಪೂರೈಸಬೇಕು. ಒಂದು ಚಟುವಟಿಕೆಯಲ್ಲಿ ಒಳಗೂಡಿದ ಬಳಿಕ ನಮ್ಮಲ್ಲಿ ಒಂದು ಶೂನ್ಯ, ನಿಷ್ಪ್ರಯೋಜಕ ಹಾಗೂ ತಪ್ಪಿತಸ್ಥ ಮನೋಭಾವವು ಉಂಟಾಗುವಲ್ಲಿ, ನಾವು ಸಮಯವನ್ನು ಉಪಯೋಗಿಸುವ ವಿಧದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂಬುದನ್ನು ಇದು ಸೂಚಿಸುವುದು.
3 ವಿವೇಚನಾಶೀಲರಾಗಿರಿ: “ವಿವೇಚನಾಹೀನರಾಗಿ” ಪರಿಣಮಿಸದೆ, ಜೀವಿತದಲ್ಲಿ ಹೆಚ್ಚು ಪ್ರಾಮುಖ್ಯವಾಗಿರುವ ವಿಷಯಗಳಿಗಾಗಿ “ತಕ್ಕ ಸಮಯವನ್ನು ಕೊಂಡುಕೊಳ್ಳುವಂತೆ” ಪೌಲನು ಸಲಹೆಯನ್ನು ಕೊಟ್ಟನು. ಸಮರ್ಪಿತ ಕ್ರೈಸ್ತರು, ತಮ್ಮ ಜೀವಿತಗಳನ್ನು ವಿರಾಮದ ಮೇಲೆ ಕೇಂದ್ರೀಕರಿಸುವಂತೆ ಬಿಡಲು ಸಾಧ್ಯವಿಲ್ಲ. ವಿಶ್ರಾಂತಿ ಮತ್ತು ಬೇರೆ ರೀತಿಯ ಚಟುವಟಿಕೆಗಳು ಶಾರೀರಿಕವಾಗಿ ನಮಗೆ ನವಚೈತನ್ಯವನ್ನು ಉಂಟುಮಾಡಸಾಧ್ಯವಿರುವುದಾದರೂ, ಆತ್ಮಿಕ ಶಕ್ತಿಯ ಮೂಲವು ದೇವರ ಕ್ರಿಯಾಶೀಲ ಶಕ್ತಿಯಾಗಿದೆ. (ಯೆಶಾ. 40:29-31) ಮನೋರಂಜನೆಯ ಮೂಲಕವಾಗಿ ಅಲ್ಲ, ಬದಲಾಗಿ ಬೈಬಲನ್ನು ಅಭ್ಯಾಸಿಸುವುದು, ಸಭಾ ಕೂಟಗಳಿಗೆ ಹಾಜರಾಗುವುದು, ಮತ್ತು ಕ್ಷೇತ್ರ ಸೇವೆಯಲ್ಲಿ ಒಳಗೂಡುವಂಥ ದೇವಪ್ರಭುತ್ವಾತ್ಮಕ ಚಟುವಟಿಕೆಗಳ ಸಂಬಂಧದಲ್ಲಿ ನಾವು ಈ ಆತ್ಮವನ್ನು ಪಡೆದುಕೊಳ್ಳುತ್ತೇವೆ.
4 ಆದ್ಯತೆಗಳನ್ನು ಇಡಿರಿ: “ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ ಮುಂದುವರಿಯುವಂತೆ” ಪೌಲನು ಕ್ರೈಸ್ತರಿಗೆ ಉಪದೇಶಿಸಿದನು. ಜೀವಿತದಲ್ಲಿನ ನಮ್ಮ ಆದ್ಯತೆಯು ದೇವರ ರಾಜ್ಯವಾಗಿದ್ದು, ಅದರ ಮೇಲೆ ನಮ್ಮ ಚಟುವಟಿಕೆಗಳು ಕೇಂದ್ರೀಕರಿಸಬೇಕು ಎಂದು ಯೇಸು ಕಲಿಸಿದನು. (ಮತ್ತಾ. 6:33) ಯೆಹೋವನಿಗೆ ನಾವು ಮಾಡಿದ ಸಮರ್ಪಣೆಗನುಸಾರ ಜೀವಿಸುವಂತೆ ನಮ್ಮನ್ನು ಅನುಮತಿಸುವಂಥ ವಿಷಯಗಳನ್ನು ನಾವು ಮೊದಲು ಮಾಡುವುದು ಅತ್ಯಗತ್ಯವಾದದ್ದಾಗಿದೆ. ತದನಂತರ, ವಿರಾಮಕಾಲವನ್ನು ಅದರ ತಕ್ಕ ಸ್ಥಾನದಲ್ಲಿ ಇಡಸಾಧ್ಯವಿದೆ. ಹೀಗೆ ಮಾಡುವಾಗ, ಇದು ಹಿತಕರವಾದ ಪರಿಣಾಮವನ್ನು ಬೀರುವುದು ಮತ್ತು ನಾವು ಅದರಲ್ಲಿ ಇನ್ನಷ್ಟು ಆನಂದಿಸುವೆವು.—ಪ್ರಸಂ. 5:12.