ನೋಹನು ದೇವರೊಂದಿಗೆ ನಡೆದನು ಎಂಬ ವಿಡಿಯೋದಿಂದ ಎಲ್ಲರೂ ಕಲಿಯಬಲ್ಲರು
ಆದಿಕಾಂಡ 6:1ರಿಂದ 9:19ನ್ನು ಓದಿರಿ ಅಥವಾ ಪರಿಶೀಲಿಸಿರಿ. ನಂತರ ನೋಹ ವಿಡಿಯೋವನ್ನು ನೋಡಿರಿ, ಮತ್ತು ಈ ಪ್ರಶ್ನೆಗಳನ್ನು ಹೇಗೆ ಉತ್ತರಿಸಬಹುದು ಎಂದು ಯೋಚಿಸಿರಿ: (1) ನೋಹನ ದಿನದಲ್ಲಿ ಲೋಕವು ಹೇಗಿತ್ತು, ಮತ್ತು ಅದು ಈ ಸ್ಥಿತಿಗೆ ತಲಪಲು ಕಾರಣವೇನು? (2) ನೋಹನನ್ನು ಅಷ್ಟು ವಿಶೇಷ ಮನುಷ್ಯನಾಗಿ ಮಾಡಿದ್ದು ಯಾವುದು, ದೇವರು ಅವನಿಗೆ ಯಾವ ಕೆಲಸವನ್ನು ವಹಿಸಿದನು, ಮತ್ತು ಏಕೆ? (3) ನಾವೆಯು ಪ್ರಾಯಶಃ ಎಲ್ಲಿ ಕಟ್ಟಲ್ಪಟ್ಟಿತು, ಅದನ್ನು ಕಟ್ಟಲು ಎಷ್ಟು ಸಮಯ ಹಿಡಿಯಿತು, ಮತ್ತು ಅದು ಎಷ್ಟು ದೊಡ್ಡದಾಗಿತ್ತು? (4) ನಾವೆಯನ್ನು ಕಟ್ಟುವುದರ ಜೊತೆಗೆ, ನೋಹ ಮತ್ತು ಅವನ ಕುಟುಂಬವು ಬೇರೇನನ್ನು ಮಾಡಬೇಕಿತ್ತು? (5) ನಾವೆಯ ಬಾಗಿಲು ಮುಚ್ಚಲ್ಪಟ್ಟ ನಂತರ, ಅದರೊಳಗಿನ ಪರಿಸ್ಥಿತಿಯು ಹೇಗಿದ್ದಿರಬೇಕು ಎಂದು ನಿಮಗನಿಸುತ್ತದೆ? (6) ಜಲಪ್ರಳಯವನ್ನು ಪಾರಾದ ನಂತರ ನಿಮ್ಮ ಅನಿಸಿಕೆ ಏನಾಗಿರುತ್ತಿತ್ತು? (7) ಪ್ರಳಯದ ಕುರಿತಾದ ಯಾವ ಜ್ಞಾಪನವನ್ನು ನಾವು ಆಗಾಗ ನೋಡುತ್ತೇವೆ, ಮತ್ತು ಅದು ಏನನ್ನು ಅರ್ಥೈಸುತ್ತದೆ? (8) ನೋಹನ ಕುರಿತಾದ ಬೈಬಲಿನ ದಾಖಲೆಯು ಸ್ವತಃ ನಿಮ್ಮ ಕುರಿತಾಗಿ, ನಿಮ್ಮ ಕುಟುಂಬದ ಕುರಿತಾಗಿ, ಮತ್ತು ದೇವರು ನಮಗೆ ನೇಮಿಸಿರುವ ಕೆಲಸದ ಕುರಿತಾಗಿ ಏನನ್ನು ಕಲಿಸಿದೆ? (9) ನೋಹ ಮತ್ತು ಅವನ ಕುಟುಂಬವನ್ನು ನೀವು ಪರದೈಸಿನಲ್ಲಿ ಭೇಟಿಯಾಗುವಾಗ, ನೀವು ಯಾವ ಪ್ರಶ್ನೆಗಳನ್ನು ಕೇಳಬಯಸುತ್ತೀರಿ? (10) ಈಗ ನೀವು ನೋಹ ವಿಡಿಯೋವನ್ನು ಹೇಗೆ ಉಪಯೋಗಿಸಲು ಯೋಜಿಸುತ್ತೀರಿ?