ನೀವು ನಿಷ್ಕೃಷ್ಟವಾದ ವರದಿಯನ್ನು ನೀಡಲು ಸಹಾಯಮಾಡುತ್ತೀರೋ?
1 ಅನೇಕ ಬೈಬಲ್ ವೃತ್ತಾಂತಗಳಲ್ಲಿ ನಿರ್ದಿಷ್ಟ ಸಂಖ್ಯೆಗಳು ಒಳಗೂಡಿಸಲ್ಪಟ್ಟಿದ್ದು, ಏನು ಸಂಭವಿಸಿತೋ ಅದರ ಸುಸ್ಪಷ್ಟವಾದ ಚಿತ್ರಣವನ್ನು ನೀಡಲು ಅವು ಸಹಾಯಕರವಾಗಿವೆ. ಉದಾಹರಣೆಗೆ, ಗಿದ್ಯೋನನು ಕೇವಲ 300 ಮಂದಿಯ ಸಹಾಯದಿಂದ ಮಿದ್ಯಾನ್ಯರ ಪಾಳೆಯವನ್ನು ನೆಲಸಮಮಾಡಿಬಿಟ್ಟನು. (ನ್ಯಾಯ. 7:7) ಯೆಹೋವನ ದೂತನು ಅಶ್ಶೂರ್ಯರ 1,85,000 ಮಂದಿ ಸೈನಿಕರನ್ನು ಸಂಹರಿಸಿಬಿಟ್ಟನು. (2 ಅರ. 19:35) ಸಾ.ಶ. 33ರ ಪಂಚಾಶತ್ತಮದಂದು, ಸುಮಾರು 3,000 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು ಮತ್ತು ತದನಂತರ ಸ್ವಲ್ಪದರಲ್ಲೇ ವಿಶ್ವಾಸಿಗಳ ಸಂಖ್ಯೆಯು ಸುಮಾರು 5,000ಕ್ಕೆ ಬೆಳೆಯಿತು. (ಅ. ಕೃ. 2:41; 4:4) ದೇವರ ಪುರಾತನ ಸೇವಕರು, ಸಂಪೂರ್ಣವಾದ ಮತ್ತು ನಿಷ್ಕೃಷ್ಟವಾದ ದಾಖಲೆಯನ್ನು ಸಂಗ್ರಹಿಸಲಿಕ್ಕಾಗಿ ಅತ್ಯಧಿಕ ಪ್ರಯತ್ನವನ್ನು ಮಾಡಿದರು ಎಂಬುದು ಈ ವೃತ್ತಾಂತಗಳಿಂದ ವ್ಯಕ್ತವಾಗುತ್ತದೆ.
2 ಇಂದು ಯೆಹೋವನ ಸಂಸ್ಥೆಯು, ಪ್ರತಿ ತಿಂಗಳು ನಮ್ಮ ಕ್ಷೇತ್ರ ಸೇವಾ ಚಟುವಟಿಕೆಯ ವರದಿಯನ್ನು ಹಾಕುವಂತೆ ನಮಗೆ ಸಲಹೆ ನೀಡುತ್ತದೆ. ಈ ಏರ್ಪಾಡಿನೊಂದಿಗೆ ನಾವು ನಂಬಿಗಸ್ತಿಕೆಯಿಂದ ಸಹಕರಿಸುವುದು, ಸಾರುವ ಕೆಲಸದ ಪರಿಣಾಮಕಾರಿ ಮೇಲ್ವಿಚಾರಣೆಗೆ ಹೆಚ್ಚಿನ ನೆರವನ್ನು ನೀಡುತ್ತದೆ. ಶುಶ್ರೂಷೆಯ ಒಂದು ಅಂಶಕ್ಕೆ ಗಮನ ನೀಡುವ ಆವಶ್ಯಕತೆಯಿದೆ ಅಥವಾ ಕ್ಷೇತ್ರದ ಒಂದು ನಿರ್ದಿಷ್ಟ ಭಾಗದಲ್ಲಿ ಹೆಚ್ಚಿನ ಕೆಲಸಗಾರರ ಅಗತ್ಯವಿದೆ ಎಂಬುದನ್ನು ವರದಿಗಳು ಪ್ರಕಟಪಡಿಸಬಹುದು. ಸಭೆಯಲ್ಲಿ, ತಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಸಾಧ್ಯತೆ ಇರುವವರನ್ನು ಹಾಗೂ ಸಹಾಯದ ಅಗತ್ಯವಿರುವವರನ್ನು ಹಿರಿಯರು ಸುಲಭವಾಗಿ ಗುರುತಿಸಲು ಕ್ಷೇತ್ರ ಸೇವಾ ವರದಿಗಳು ಅವರಿಗೆ ಸಹಾಯಮಾಡುತ್ತವೆ. ಮತ್ತು ರಾಜ್ಯ ಸಾರುವಿಕೆಯ ಕೆಲಸದ ಪ್ರಗತಿಯ ಕುರಿತಾದ ವರದಿಗಳು, ಇಡೀ ಕ್ರೈಸ್ತ ಸಹೋದರರ ಬಳಗಕ್ಕೇ ಉತ್ತೇಜನವನ್ನು ನೀಡುತ್ತವೆ. ನಿಷ್ಕೃಷ್ಟವಾದ ವರದಿಯನ್ನು ನೀಡುವುದರಲ್ಲಿ ನೀವು ನಿಮ್ಮ ಪಾಲನ್ನು ಮಾಡುತ್ತಿದ್ದೀರೋ?
3 ನಿಮ್ಮ ವೈಯಕ್ತಿಕ ಜವಾಬ್ದಾರಿ: ತಿಂಗಳ ಕೊನೆಯಲ್ಲಿ, ಶುಶ್ರೂಷೆಯಲ್ಲಿ ನೀವು ಏನನ್ನು ಮಾಡಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳುವುದನ್ನು ನೀವು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತೀರೋ? ಹಾಗಿರುವಲ್ಲಿ, ಕ್ಷೇತ್ರ ಸೇವೆಯಲ್ಲಿ ನೀವು ಪ್ರತಿ ಬಾರಿ ಭಾಗವಹಿಸಿದಾಗಲೂ ನಿಮ್ಮ ಚಟುವಟಿಕೆಯ ಕುರಿತು ನೀವು ಏಕೆ ಬರೆದಿಡಬಾರದು? ಕೆಲವರು ಒಂದು ಕ್ಯಾಲೆಂಡರನ್ನೋ ಒಂದು ಡೈರಿಯನ್ನೋ ಉಪಯೋಗಿಸುತ್ತಾರೆ. ಇನ್ನಿತರರು ಒಂದು ಖಾಲಿ ಕ್ಷೇತ್ರ ಸೇವಾ ರಿಪೋರ್ಟ್ ಸ್ಲಿಪ್ ಅನ್ನು ತಮ್ಮೊಂದಿಗೆ ತೆಗೆದುಕೊಂಡುಹೋಗುತ್ತಾರೆ. ತಿಂಗಳ ಕೊನೆಯಲ್ಲಿ ತಪ್ಪದೆ ನಿಮ್ಮ ವರದಿಯನ್ನು ನಿಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೀಡಿರಿ. ಅಥವಾ ನಿಮಗೆ ಇಷ್ಟವಿರುವಲ್ಲಿ, ನೀವು ನಿಮ್ಮ ವರದಿಯನ್ನು ರಾಜ್ಯ ಸಭಾಗೃಹದಲ್ಲಿರುವ ರಿಪೋರ್ಟ್ ಬಾಕ್ಸ್ನಲ್ಲಿ ಹಾಕಬಹುದು. ಒಂದುವೇಳೆ ನೀವು ನಿಮ್ಮ ವರದಿಯನ್ನು ನೀಡಲು ಮರೆತುಹೋಗುವಲ್ಲಿ, ನಿಮ್ಮ ಪುಸ್ತಕ ಅಧ್ಯಯನ ಮೇಲ್ವಿಚಾರಕನು ನಿಮ್ಮ ಬಳಿಗೆ ಬಂದು ಕೇಳಲಿ ಎಂದು ಕಾಯುವುದಕ್ಕೆ ಬದಲಾಗಿ, ಆ ಕೂಡಲೆ ನೀವೇ ಅವರನ್ನು ಸಂಪರ್ಕಿಸಿರಿ. ಶುದ್ಧಾಂತಃಕರಣದಿಂದ ನಿಮ್ಮ ಚಟುವಟಿಕೆಯನ್ನು ವರದಿಸುವುದು, ಯೆಹೋವನ ಏರ್ಪಾಡಿಗೆ ಗೌರವವನ್ನು ಮತ್ತು ವರದಿಗಳನ್ನು ಸಂಗ್ರಹಿಸಿ, ಅವುಗಳನ್ನು ಒಟ್ಟುಗೂಡಿಸಲು ನೇಮಿಸಲ್ಪಟ್ಟಿರುವಂಥ ಸಹೋದರರಿಗಾಗಿ ಪ್ರೀತಿಯ ಪರಿಗಣನೆಯನ್ನು ತೋರಿಸುತ್ತದೆ.—ಲೂಕ 16:10.
4 ಪುಸ್ತಕ ಅಧ್ಯಯನ ಮೇಲ್ವಿಚಾರಕರ ಪಾತ್ರ: ಕಾಳಜಿವಹಿಸುವ ಹಾಗೂ ಪರಿಗಣನೆ ತೋರಿಸುವ ಕುರುಬನೋಪಾದಿ ಪುಸ್ತಕ ಅಧ್ಯಯನ ಮೇಲ್ವಿಚಾರಕನು, ತನ್ನ ಗುಂಪು ತಿಂಗಳಾದ್ಯಂತ ನಡೆಸುವ ಚಟುವಟಿಕೆಯಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುತ್ತಾನೆ. (ಜ್ಞಾನೋ. 27:23) ಪ್ರತಿಯೊಬ್ಬ ಪ್ರಚಾರಕನು/ಳು ಕ್ರಮವಾದ, ಅರ್ಥಭರಿತ, ಹಾಗೂ ಆನಂದಕರ ರೀತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೋ ಎಂಬುದು ಅವನಿಗೆ ತಿಳಿದಿರುತ್ತದೆ ಮತ್ತು ಇಡೀ ತಿಂಗಳು ಯಾರು ಈ ಚಟುವಟಿಕೆಯಲ್ಲಿ ಭಾಗವಹಿಸಿರುವುದಿಲ್ಲವೋ ಅಂಥವರಿಗೆ ಆ ಕೂಡಲೆ ಸಹಾಯವನ್ನು ನೀಡುತ್ತಾನೆ. ಹೆಚ್ಚಾಗಿ, ಒಂದು ಪ್ರೋತ್ಸಾಹಭರಿತ ಮಾತು, ಒಂದು ಪ್ರಾಯೋಗಿಕ ಸಲಹೆ, ಅಥವಾ ಕ್ಷೇತ್ರ ಸೇವೆಯಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಕೊಡಲ್ಪಡುವ ಒಂದು ಆಮಂತ್ರಣವು ತಾನೇ ಒಬ್ಬನಿಗೆ ಅಗತ್ಯವಾಗಿರುತ್ತದೆ.
5 ತಿಂಗಳ ಕೊನೆಯಲ್ಲಿ, ಮುಂದಿನ ತಿಂಗಳ ಆರನೆಯ ತಾರೀಖಿನಷ್ಟಕ್ಕೆ ಸೆಕ್ರಿಟರಿಯು ಬ್ರಾಂಚ್ ಆಫೀಸಿಗೆ ನಿಷ್ಕೃಷ್ಟವಾದ ಸಭಾ ವರದಿಯನ್ನು ಕಳುಹಿಸಸಾಧ್ಯವಾಗುವಂತೆ, ಗುಂಪಿನಲ್ಲಿರುವವರೆಲ್ಲರೂ ತಮ್ಮ ಚಟುವಟಿಕೆಯನ್ನು ವರದಿಸುವ ಜವಾಬ್ದಾರಿಯನ್ನು ಪೂರೈಸಿದ್ದಾರೆ ಎಂಬುದನ್ನು ಪುಸ್ತಕ ಅಧ್ಯಯನ ಮೇಲ್ವಿಚಾರಕನು ಖಾತ್ರಿಮಾಡಿಕೊಳ್ಳುತ್ತಾನೆ. ತಿಂಗಳ ಕೊನೆಯು ಸಮೀಪಿಸುತ್ತಿರುವಂತೆ, ಪುಸ್ತಕ ಅಧ್ಯಯನ ಮೇಲ್ವಿಚಾರಕನು ತನ್ನ ಗುಂಪಿಗೆ ಇದರ ಕುರಿತು ಜ್ಞಾಪಕ ಹುಟ್ಟಿಸುವುದು ಮತ್ತು ಪುಸ್ತಕ ಅಧ್ಯಯನ ಸ್ಥಳದಲ್ಲಿ ರಿಪೋರ್ಟ್ ಸ್ಲಿಪ್ಗಳನ್ನು ಲಭ್ಯಗೊಳಿಸುವುದು ಸಹಾಯಕರವಾಗಿರಬಹುದು. ತಮ್ಮ ಚಟುವಟಿಕೆಯನ್ನು ವರದಿಮಾಡುವುದನ್ನು ಯಾರಾದರೂ ಮರೆತುಬಿಡುವವರಾಗಿರುವಲ್ಲಿ, ಅವನು ಸೂಕ್ತವಾದ ಜ್ಞಾಪನಗಳನ್ನು ಹಾಗೂ ಉತ್ತೇಜನವನ್ನು ನೀಡಸಾಧ್ಯವಿದೆ.
6 ನಮ್ಮ ಕ್ಷೇತ್ರ ಸೇವಾ ವರದಿಗಳನ್ನು ತಪ್ಪದೆ ನೀಡುವುದು, ಕ್ಷೇತ್ರದಲ್ಲಿ ಏನು ಸಾಧಿಸಲ್ಪಟ್ಟಿತ್ತೊ ಅದನ್ನು ನಿಷ್ಕೃಷ್ಟವಾಗಿ ಪ್ರತಿಬಿಂಬಿಸುವಂಥ ಒಂದು ವರದಿಯನ್ನು ಸಂಗ್ರಹಿಸಲು ಸಹಾಯಮಾಡುತ್ತದೆ. ಪ್ರತಿ ತಿಂಗಳು ನಿಮ್ಮ ಚಟುವಟಿಕೆಯನ್ನು ತಪ್ಪದೆ ವರದಿಮಾಡುವ ಮೂಲಕ ನೀವು ನಿಮ್ಮ ಪಾಲನ್ನು ಮಾಡುವಿರೋ?