ಕಾಲಾತೀತ ಸಂದೇಶವನ್ನು ಹೊಂದಿರುವ ಒಂದು ವಿಡಿಯೋ
ದಾವೀದನು ದೇವರಲ್ಲಿ ಭರವಸೆಯಿಟ್ಟನುa ಎಂಬ ವಿಡಿಯೋದಲ್ಲಿ ಯಾವ ಸಂದೇಶವಿದೆ? ನಾವು ದಾವೀದನಂತೆ ಯೆಹೋವನಲ್ಲಿ ಭರವಸೆಯಿಡಬೇಕೆಂಬುದೇ. (ಕೀರ್ತ. 91:2) ದಾವೀದನ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು ಚಿತ್ರಿಸಲ್ಪಟ್ಟಿರುವುದನ್ನು ನೋಡುವುದು, ಅವನಿಟ್ಟ ಮಾದರಿಯಿಂದ ಪಾಠವನ್ನು ಕಲಿತುಕೊಳ್ಳುವಂತೆ ಮಕ್ಕಳಿಗೂ ವಯಸ್ಕರಿಗೂ ಸಹಾಯಮಾಡುವುದು. (ಕೀರ್ತ. 31:14) ನಾವು ಹೆಚ್ಚಿನ ಪ್ರಯೋಜನವನ್ನು ಹೊಂದಸಾಧ್ಯವಾಗುವಂತೆ, ಈ ಡಿವಿಡಿಯಲ್ಲಿ ಒಂದು “ವಿಡಿಯೋ ಕ್ವಿಝ್” ಮತ್ತು ಇತರ ಅನೇಕ “ಕಲಿಕೆಯ ಚಟುವಟಿಕೆಗಳು” ಕೊಡಲ್ಪಟ್ಟಿವೆ.
ವಿಡಿಯೋವನ್ನು ನೋಡಿ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: (1) ಯೆಹೋವನು ಹೆಚ್ಚು ಉತ್ತಮನಾದ ಒಬ್ಬ ರಾಜನನ್ನು ಆರಿಸಿಕೊಂಡದ್ದೇಕೆ? (1 ಸಮು. 15:10, 11; 16:1) (2) ಆತನು ದಾವೀದನ ಸಹೋದರರಲ್ಲಿ ಒಬ್ಬನನ್ನು ಆರಿಸಿಕೊಳ್ಳಲಿಲ್ಲವೇಕೆ? (1 ಸಮು. 16:6, 7) (3) ದಾವೀದನು ಕಿನ್ನರಿಯನ್ನು ಬಾರಿಸುವುದನ್ನು ಸೌಲನು ಇಷ್ಟಪಟ್ಟನೇಕೆ? (1 ಸಮು. 16:14-23) (4) ಗೊಲ್ಯಾತನು ಯಾರಾಗಿದ್ದನು? (1 ಸಮು. 17:4-10) (5) ಗೊಲ್ಯಾತನ ವಿರುದ್ಧ ಹೋರಾಡಲು ದಾವೀದನು ಮನಸ್ಸುಮಾಡಿದ್ದೇಕೆ? (1 ಸಮು. 17:23, 24, 36, 37) (6) ಯೋನಾತಾನನು ಯಾರಾಗಿದ್ದನು? (1 ಸಮು. 14:1) (7) ಯಾವ ಹಂತದಲ್ಲಿ ಸೌಲನು ದಾವೀದನ ಪರಮ ವಿರೋಧಿಯಾದನು? (1 ಸಮು. 18:25-29) (8) ದಾವೀದನು ಸೌಲನನ್ನು ಕೊಲ್ಲದೆ ಬಿಟ್ಟದ್ದೇಕೆ? (1 ಸಮು. 26:7-11) (9) ಸೌಲನು ಹೇಗೆ ಸತ್ತನು? (1 ಸಮು. 31:1-6) (10) ಯೋನಾತಾನನ ಮರಣದ ಕುರಿತು ಕೇಳಿಸಿಕೊಂಡಾಗ ದಾವೀದನ ಪ್ರತಿಕ್ರಿಯೆ ಏನಾಗಿತ್ತು? (2 ಸಮು. 1:11, 12) (11) ಯೆಹೋವನು ದಾವೀದನಿಗೆ ಯಾವ ವಾಗ್ದಾನವನ್ನು ಮಾಡಿದನು? (2 ಸಮು. 7:12, 13, 16) (12) ದಾವೀದನು ಯಾವ ಗಂಭೀರವಾದ ತಪ್ಪನ್ನು ಮಾಡಿದನು? (2 ಸಮು. 11:1-5, 14-17) (13) ಮಾಡಿದ ತಪ್ಪಿಗಾಗಿ ತಾನು ತುಂಬ ವಿಷಾದಿಸುತ್ತೇನೆ ಎಂಬುದನ್ನು ದಾವೀದನು ಹೇಗೆ ತೋರಿಸಿದನು? (ಕೀರ್ತ. 51) (14) ಯುವ ಸೊಲೊಮೋನನಿಗೆ ದಾವೀದನು ಯಾವ ಪಾಠಗಳನ್ನು ಕಲಿಸಿದನು? (1 ಅರ. 2:1-4; 1 ಪೂರ್ವ. 22:6-13; 28:9, 10) (15) ಯೇಸುವಿನ ಆಳ್ವಿಕೆಯು ದಾವೀದನಿಗೆ, ಯೋನಾತಾನನಿಗೆ ಮತ್ತು ನಿಮಗೆ ಹೇಗೆ ಪ್ರಯೋಜನವನ್ನು ತರುವುದು?—ಯೆಶಾ. 11:6-9; ಯೋಹಾ. 11:25, 26.
ಈಗ ಇದರ ಕುರಿತು ಆಲೋಚಿಸಿರಿ: ದಾವೀದನು ದೇವರಲ್ಲಿ ತೋರಿಸಿದಂಥ ಭರವಸೆಯನ್ನು ನೀವು ಹೇಗೆ ವೈಯಕ್ತಿಕವಾಗಿ ಅನುಕರಿಸಬಲ್ಲಿರಿ?
ಹೆತ್ತವರೇ, ದಾವೀದನಂತೆ ದೇವರಲ್ಲಿ ಭರವಸೆಯಿಡುವುದು ಕಾಲಾತೀತವಾಗಿ ಪ್ರಾಮುಖ್ಯವಾಗಿದೆ ಎಂಬುದನ್ನು ನಿಮ್ಮ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿರಿ.—ಕೀರ್ತ. 56:11.
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.