ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡುವ ವಿಧ
ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಲಿಕ್ಕಾಗಿರುವ ಅನೇಕ ಸಲಹೆಗಳು ಈ ಪುರವಣಿಯಲ್ಲಿ ಕೊಡಲ್ಪಟ್ಟಿವೆ. ಹೆಚ್ಚು ಪರಿಣಾಮಕಾರಿಯಾಗಿರಲಿಕ್ಕಾಗಿ, ಇವುಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸಿರಿ, ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ತಕ್ಕ ಹಾಗೆ ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಿರಿ ಮತ್ತು ಬೈಬಲಾಧಾರಿತ ಚರ್ಚೆಗಾಗಿ ನೀವು ಪುಸ್ತಕದಲ್ಲಿರುವ ಯಾವ ನಿರ್ದಿಷ್ಟ ವಿಷಯಗಳನ್ನು ಉಪಯೋಗಿಸಲಿದ್ದೀರೊ ಅವನ್ನು ಚೆನ್ನಾಗಿ ಪರಿಚಯಿಸಿಕೊಳ್ಳಿರಿ. ನಿಮ್ಮ ಟೆರಿಟೊರಿಗೆ ಅನ್ವಯವಾಗುವ ಇತರ ಪ್ರಾಯೋಗಿಕ ನಿರೂಪಣೆಗಳನ್ನೂ ಉಪಯೋಗಿಸಬಹುದು.—2005, ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ನ್ನು ನೋಡಿ.
ಬೈಬಲ್
◼ “ಜನರು ಬೈಬಲನ್ನು ಅನೇಕವೇಳೆ ದೇವರ ವಾಕ್ಯ ಎಂಬುದಾಗಿ ಸಂಬೋಧಿಸಿ ಮಾತಾಡುತ್ತಾರೆ. ಆದರೆ, ಮನುಷ್ಯರಿಂದ ಬರೆಯಲ್ಪಟ್ಟಿರುವ ಒಂದು ಪುಸ್ತಕವು, ದೇವರ ವಾಕ್ಯವೆಂದು ಕರೆಯಲ್ಪಡಲು ಹೇಗೆ ತಕ್ಕದ್ದಾಗಿದೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 2 ಪೇತ್ರ 1:21ನ್ನು ಮತ್ತು ಪುಟ 19-20ರಲ್ಲಿರುವ ಪ್ಯಾರಗ್ರಾಫ್ 5ನ್ನು ಓದಿರಿ.] ಈ ಪ್ರಕಾಶನವು ಈ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರಗಳನ್ನು ಕೊಡುತ್ತದೆ.” ಪುಟ 6ರಲ್ಲಿರುವ ಪ್ರಶ್ನೆಗಳನ್ನು ತೋರಿಸಿರಿ.
◼ “ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಜನರಿಗೆ ಹೆಚ್ಚಿನ ಮಾಹಿತಿಯನ್ನು ಸುಲಭವಾಗಿಯೇ ಪಡೆದುಕೊಳ್ಳುವ ಸೌಕರ್ಯವಿದೆ. ಆದರೆ, ಸಂತೋಷ ಹಾಗೂ ಯಶಸ್ವಿಕರವಾದ ಜೀವನವನ್ನು ನಡೆಸಲು ವಿಶ್ವಸನೀಯ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 2 ತಿಮೊಥೆಯ 3:16, 17 ಮತ್ತು ಪುಟ 23ರಲ್ಲಿರುವ ಪ್ಯಾರಗ್ರಾಫ್ 12ನ್ನು ಓದಿರಿ.] ಈ ಪ್ರಕಾಶನವು, ದೇವರನ್ನು ಮೆಚ್ಚಿಸುವಂಥ ಮತ್ತು ನಮಗೆ ಪ್ರಯೋಜನ ತರುವಂಥ ರೀತಿಯಲ್ಲಿ ನಾವು ಹೇಗೆ ಜೀವಿಸಬಹುದು ಎಂಬುದನ್ನು ವಿವರಿಸುತ್ತದೆ.” ಪುಟ 122-3ರಲ್ಲಿರುವ ಚಾರ್ಟ್ ಮತ್ತು ಚಿತ್ರವನ್ನು ತೋರಿಸಿರಿ.
ಮರಣ/ಪುನರುತ್ಥಾನ
◼ “ಮೃತಪಟ್ಟಾಗ ನಿಜವಾಗಿಯೂ ಏನು ಸಂಭವಿಸುತ್ತದೆ ಎಂದು ಅನೇಕರು ಸೋಜಿಗಪಡುತ್ತಾರೆ. ನಾವಿದನ್ನು ತಿಳಿಯಸಾಧ್ಯವಿದೆ ಎಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಸಂಗಿ 9:5 ಮತ್ತು ಪುಟ 58-9ರಲ್ಲಿರುವ ಪ್ಯಾರಗ್ರಾಫ್ 5-6ನ್ನು ಓದಿರಿ.] ಪುನರುತ್ಥಾನದ ಕುರಿತಾದ ಬೈಬಲಿನ ವಾಗ್ದಾನವು ಸತ್ತವರಿಗೆ ಯಾವ ಅರ್ಥದಲ್ಲಿದೆ ಎಂಬುದನ್ನೂ ಈ ಪುಸ್ತಕವು ವಿವರಿಸುತ್ತದೆ.” ಪುಟ 75ರಲ್ಲಿರುವ ಚಿತ್ರವನ್ನು ತೋರಿಸಿರಿ.
◼ “ನಾವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಆ ವ್ಯಕ್ತಿಯನ್ನು ಪುನಃ ನೋಡಬೇಕೆಂದೆನಿಸುವುದು ಸಹಜ. ಇದನ್ನು ನೀವು ಒಪ್ಪುವುದಿಲ್ಲವೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಪುನರುತ್ಥಾನದ ವಾಗ್ದಾನದಿಂದ ಅನೇಕರು ಸಾಂತ್ವನವನ್ನು ಕಂಡುಕೊಂಡಿದ್ದಾರೆ. [ಯೋಹಾನ 5:28, 29 ಮತ್ತು ಪುಟ 72ರಲ್ಲಿರುವ ಪ್ಯಾರಾಗ್ರಾಫ್ 16-17ನ್ನು ಓದಿರಿ.] ಈ ಅಧ್ಯಾಯವು ಈ ಪ್ರಶ್ನೆಗಳಿಗೆ ಸಹ ಉತ್ತರವನ್ನು ಕೊಡುತ್ತದೆ.” ಪುಟ 66ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.
ನಿತ್ಯಜೀವ
◼ “ಹೆಚ್ಚಿನ ಜನರು ಒಳ್ಳೆಯ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತಾರೆ. ಆದರೆ, ಸದಾಕಾಲ ಜೀವಿಸಲು ಸಾಧ್ಯವಿರುತ್ತಿದ್ದಲ್ಲಿ, ನೀವು ಹಾಗೆ ಜೀವಿಸಲು ಇಷ್ಟಪಡುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪ್ರಕಟನೆ 21:3, 4 ಮತ್ತು ಪುಟ 54ರಲ್ಲಿರುವ ಪ್ಯಾರಗ್ರಾಫ್ 17ನ್ನು ಓದಿರಿ.] ನಾವು ಹೇಗೆ ನಿತ್ಯಜೀವವನ್ನು ಪಡೆಯಬಲ್ಲೆವು ಮತ್ತು ಆ ವಾಗ್ದಾನವು ನಿಜವಾಗುವಾಗ ಜೀವನ ಹೇಗಿರುವುದು ಎಂಬುದನ್ನು ಈ ಪುಸ್ತಕವು ಚರ್ಚಿಸುತ್ತದೆ.”
ಕುಟುಂಬ
◼ “ಸಂತೋಷಕರ ಕುಟುಂಬ ಜೀವನವನ್ನು ಹೊಂದಿರುವುದು ನಮಗೆಲ್ಲರಿಗೂ ಆಸಕ್ತಿಕರವಾದ ವಿಷಯವಾಗಿದೆ. ನೀವು ಇದನ್ನು ಒಪ್ಪುವುದಿಲ್ಲವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬದ ಸಂತೋಷಕ್ಕೆ ನೆರವಾಗಲು ಅದರ ಪ್ರತಿಯೊಬ್ಬ ಸದಸ್ಯನು ಮಾಡಸಾಧ್ಯವಿರುವ ವಿಷಯದ ಕುರಿತು ಬೈಬಲ್ ಮಾತಾಡುತ್ತದೆ—ಅದು ಪ್ರೀತಿಯನ್ನು ತೋರಿಸುವುದರಲ್ಲಿ ದೇವರನ್ನು ಅನುಕರಿಸುವುದೇ ಆಗಿದೆ.” ಎಫೆಸ 5:1, 2 ಮತ್ತು ಪುಟ 135ರಲ್ಲಿರುವ ಪ್ಯಾರಗ್ರಾಫ್ 4ನ್ನು ಓದಿರಿ.
ವಸತಿ
◼ “ಹೆಚ್ಚಿನ ಸ್ಥಳಗಳಲ್ಲಿ, ಜೀವಿಸಲು ಸೂಕ್ತವಾದ ಮನೆಯೊಂದನ್ನು ಹೊಂದಿರುವುದು ತುಂಬ ಕಷ್ಟದ ಸಂಗತಿಯಾಗಿದೆ. ಒಂದು ದಿನ ಎಲ್ಲರಿಗೂ ಒಳ್ಳೇ ಮನೆಗಳಿರುವವು ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯೆಶಾಯ 65:21, 22 ಮತ್ತು ಪುಟ 34ರಲ್ಲಿರುವ ಪ್ಯಾರಗ್ರಾಫ್ 20ನ್ನು ಓದಿರಿ.] ದೇವರಿಂದ ಕೊಡಲ್ಪಟ್ಟ ಈ ವಾಗ್ದಾನವು ಹೇಗೆ ನೆರವೇರಿಸಲ್ಪಡುವುದು ಎಂಬುದನ್ನು ಈ ಪ್ರಕಾಶನವು ವಿವರಿಸುತ್ತದೆ.”
ಯೆಹೋವ ದೇವರು
◼ “ದೇವರಲ್ಲಿ ನಂಬಿಕೆಯಿಡುವ ಹೆಚ್ಚಿನ ಜನರು ಆತನಿಗೆ ಸಮೀಪವಾಗಿರಲು ಬಯಸುತ್ತಾರೆ. ಆತನಿಗೆ ಸಮೀಪವಾಗುವಂತೆ ಬೈಬಲ್ ನಮಗೆ ಕರೆಕೊಡುತ್ತದೆ ಎಂಬುದು ನಿಮಗೆ ತಿಳಿದಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯಾಕೋಬ 4:8ಎ ಮತ್ತು ಪುಟ 16ರಲ್ಲಿರುವ ಪ್ಯಾರಗ್ರಾಫ್ 20ನ್ನು ಓದಿರಿ.] ತಮ್ಮ ಸ್ವಂತ ಬೈಬಲ್ ಪ್ರತಿಯನ್ನು ಉಪಯೋಗಿಸಿ ದೇವರ ಕುರಿತು ಹೆಚ್ಚನ್ನು ತಿಳಿಯಲು ಜನರಿಗೆ ಸಹಾಯಮಾಡುವ ಉದ್ದೇಶದಿಂದ ಈ ಪ್ರಕಾಶನವು ತಯಾರಿಸಲ್ಪಟ್ಟಿದೆ.” ಪುಟ 8ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.
◼ “ದೇವರ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ ಅಥವಾ ಗೌರವಿಸಲ್ಪಡಲಿ ಎಂದು ಅನೇಕರು ಪ್ರಾರ್ಥಿಸುತ್ತಾರೆ. ಆ ಹೆಸರು ಏನಾಗಿದೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 83:18 ಮತ್ತು ಪುಟ 195ರಲ್ಲಿರುವ ಪ್ಯಾರಗ್ರಾಫ್ 2-3ನ್ನು ಓದಿರಿ.] ಬೈಬಲ್ ಯೆಹೋವ ದೇವರ ಕುರಿತು ಮತ್ತು ಮಾನವಕುಲಕ್ಕಾಗಿರುವ ಆತನ ಉದ್ದೇಶದ ಕುರಿತು ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ.”
ಯೇಸು ಕ್ರಿಸ್ತನು
◼ “ಭೂಮಿಯಾದ್ಯಂತ ಇರುವ ಜನರು ಯೇಸು ಕ್ರಿಸ್ತನ ಬಗ್ಗೆ ಕೇಳಿಸಿಕೊಂಡಿದ್ದಾರೆ. ಕೆಲವರ ದೃಷ್ಟಿಯಲ್ಲಿ, ಅವನು ಕೇವಲ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾನಷ್ಟೆ. ಇನ್ನು ಕೆಲವರು ಅವನನ್ನು ಸರ್ವಶಕ್ತ ದೇವರೆಂದು ಪೂಜಿಸುತ್ತಾರೆ. ಯೇಸು ಕ್ರಿಸ್ತನ ಕುರಿತು ನಾವು ಏನನ್ನು ನಂಬುತ್ತೇವೊ ಅದು ಪ್ರಾಮುಖ್ಯವೆಂದು ನಿಮಗನಿಸುತ್ತದೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಯೋಹಾನ 17:3 ಮತ್ತು ಪುಟ 37-8ರಲ್ಲಿರುವ ಪ್ಯಾರಗ್ರಾಫ್ 3ನ್ನು ಓದಿರಿ. ಅಧ್ಯಾಯದ ಶೀರ್ಷಿಕೆಯ ಕೆಳಗಿರುವ ಪೀಠಿಕಾರೂಪದ ಪ್ರಶ್ನೆಗಳ ಕಡೆಗೆ ಗಮನವನ್ನು ನಿರ್ದೇಶಿಸಿರಿ.
ಕಡೇ ದಿವಸಗಳು
◼ ನಾವು ಲೋಕದ ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೆಂದು ಅನೇಕರು ನಂಬುತ್ತಾರೆ. ಭವಿಷ್ಯತ್ತಿನಲ್ಲಿ ಪರಿಸ್ಥಿತಿಗಳು ಉತ್ತಮಗೊಳ್ಳುವವು ಎಂದು ನಿರೀಕ್ಷಿಸಲು ಸಕಾರಣವಿದೆಯೇ?” [ಪ್ರತಿಕ್ರಿಯೆಗಾಗಿ ಅನುಮತಿಸಿರಿ. 2 ಪೇತ್ರ 3:13ನ್ನು ಓದಿರಿ.] ಕಡೇ ದಿವಸಗಳ ಅನಂತರ ಜೀವನ ಹೇಗಿರುವುದು ಎಂದು ತಿಳಿಸುವ ಈ ಹೇಳಿಕೆಯನ್ನು ಗಮನಿಸಿರಿ.” ಪುಟ 94ರಲ್ಲಿರುವ ಪ್ಯಾರಗ್ರಾಫ್ 15ನ್ನು ಓದಿರಿ.
ಪ್ರಾರ್ಥನೆ
◼ “ದೇವರು ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆಂದು ನೀವು ಎಂದಾದರೂ ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 1 ಯೋಹಾನ 5:14, 15 ಮತ್ತು ಪುಟ 170-2ರಲ್ಲಿರುವ ಪ್ಯಾರಗ್ರಾಫ್ 16-18ನ್ನು ಓದಿರಿ.] ಈ ಅಧ್ಯಾಯವು, ನಾವು ಏಕೆ ದೇವರಿಗೆ ಪ್ರಾರ್ಥಿಸಬೇಕು ಮತ್ತು ಆತನಿಂದ ನಮ್ಮ ಪ್ರಾರ್ಥನೆಗಳು ಆಲಿಸಲ್ಪಡಬೇಕಾದರೆ ನಾವು ಏನು ಮಾಡಬೇಕೆಂಬುದನ್ನು ಸಹ ವಿವರಿಸುತ್ತದೆ.”
ಧರ್ಮ
◼ ಅನೇಕ ಜನರು, ಲೋಕದಲ್ಲಿರುವ ಧರ್ಮಗಳನ್ನು ಮಾನವಕುಲದ ಸಮಸ್ಯೆಗಳಿಗೆ ಪರಿಹಾರವಾಗಿ ಪರಿಗಣಿಸುವ ಬದಲು ಅವುಗಳಿಗೆ ಕಾರಣವಾಗಿ ಪರಿಗಣಿಸಲು ಆರಂಭಿಸುತ್ತಿದ್ದಾರೆ. ಧರ್ಮವು ಜನರನ್ನು ಸರಿಯಾದ ಮಾರ್ಗದಲ್ಲಿ ನಡಿಸುತ್ತಿದೆ ಎಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಮತ್ತಾಯ 7:13, 14 ಮತ್ತು ಪುಟ 146ರಲ್ಲಿರುವ ಪ್ಯಾರಗ್ರಾಫ್ 5ನ್ನು ಓದಿರಿ.] ಈ ಅಧ್ಯಾಯವು, ದೇವರು ಒಪ್ಪುವಂಥ ಆರಾಧನೆಯನ್ನು ಗುರುತಿಸುವ ಆರು ವಿಶಿಷ್ಟಾಂಶಗಳನ್ನು ಪರಿಶೀಲಿಸುತ್ತದೆ.” ಪುಟ 147ರಲ್ಲಿರುವ ಪಟ್ಟಿಯನ್ನು ತೋರಿಸಿರಿ.
ದುರಂತ/ಕಷ್ಟಸಂಕಟ
◼ “ಯಾವುದಾದರೊಂದು ದುರಂತ ಸಂಭವಿಸುವಾಗ, ದೇವರು ನಿಜವಾಗಿಯೂ ಜನರ ಕುರಿತು ಚಿಂತಿಸುತ್ತಾನೊ ಮತ್ತು ಅವರ ಕಷ್ಟಸಂಕಟಗಳನ್ನು ಗಮನಿಸುತ್ತಾನೊ ಎಂದು ಅನೇಕರು ಕೇಳುತ್ತಾರೆ. ಇದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ 1 ಪೇತ್ರ 5:7 ಮತ್ತು ಪುಟ 11ರಲ್ಲಿರುವ ಪ್ಯಾರಗ್ರಾಫ್ 11ನ್ನು ಓದಿರಿ.] ಈ ಅಧ್ಯಾಯವು, ದೇವರು ಸಂಪೂರ್ಣವಾಗಿ ಮಾನವಕುಲದ ಕಷ್ಟಸಂಕಟಗಳನ್ನು ಹೇಗೆ ತೆಗೆದುಹಾಕಲಿದ್ದಾನೆ ಎಂಬುದನ್ನು ವಿವರಿಸುತ್ತದೆ.” ಪುಟ 106ರಲ್ಲಿರುವ ಪೀಠಿಕಾರೂಪದ ಪ್ರಶ್ನೆಗಳನ್ನು ತೋರಿಸಿರಿ.
ಯುದ್ಧ/ಶಾಂತಿ
◼ “ಎಲ್ಲ ಕಡೆಗಳಲ್ಲಿರುವ ಜನರು ಶಾಂತಿಗಾಗಿ ಹಂಬಲಿಸುತ್ತಾರೆ. ಭೂಮಿಯ ಮೇಲೆ ಶಾಂತಿಯ ನಿರೀಕ್ಷೆಯು ಕೇವಲ ಕನಸಾಗಿದೆ ಎಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕೀರ್ತನೆ 46:8, 9ನ್ನು ಓದಿರಿ.] ಈ ಪ್ರಕಾಶನವು, ದೇವರು ಹೇಗೆ ತನ್ನ ಉದ್ದೇಶವನ್ನು ನೆರವೇರಿಸುವನು ಮತ್ತು ಭೌಗೋಳಿಕ ಶಾಂತಿಯನ್ನು ಹೇಗೆ ತರುವನು ಎಂಬುದನ್ನು ಚರ್ಚಿಸುತ್ತದೆ.” ಪುಟ 35ರಲ್ಲಿರುವ ಚಿತ್ರವನ್ನು ತೋರಿಸಿರಿ, ಮತ್ತು ಪುಟ 34ರಲ್ಲಿರುವ ಪ್ಯಾರಗ್ರಾಫ್ 17-21ನ್ನು ಪರಿಗಣಿಸಿರಿ.
[ಪುಟ 5ರಲ್ಲಿರುವಚೌಕ]
ದಾನದ ಏರ್ಪಾಡಿನ ಕುರಿತು ತಿಳಿಸುವ ವಿಧಗಳು
“ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ನೀವು ಇಂದು ಚಿಕ್ಕ ಕಾಣಿಕೆಯನ್ನು ಕೊಡಲು ಬಯಸುವುದಾದರೆ ನಾನದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.”
“ನಮ್ಮ ಸಾಹಿತ್ಯಗಳನ್ನು ಕ್ರಯವಿಲ್ಲದೆ ನೀಡುತ್ತೇವಾದರೂ, ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ಕೊಡಲ್ಪಡುವ ಉದಾರ ಕಾಣಿಕೆಗಳನ್ನು ನಾವು ಸ್ವೀಕರಿಸುತ್ತೇವೆ.”
“ನಮ್ಮ ಈ ಕೆಲಸವು ಹೇಗೆ ನಡೆಸಲ್ಪಡುತ್ತದೆ ಎಂದು ನೀವು ಆಲೋಚಿಸುತ್ತಿರಬಹುದು. ನಮ್ಮ ಈ ಲೋಕವ್ಯಾಪಕ ಕೆಲಸವು ಸ್ವಯಂಪ್ರೇರಿತ ಕಾಣಿಕೆಗಳಿಂದ ಬೆಂಬಲಿಸಲ್ಪಡುತ್ತದೆ. ಇಂದು ನೀವು ಚಿಕ್ಕ ಕಾಣಿಕೆಯನ್ನು ಕೊಡಲು ಬಯಸುವುದಾದರೆ ಅದನ್ನು ಸ್ವೀಕರಿಸಲು ನಾನು ಸಂತೋಷಿಸುತ್ತೇನೆ.”