ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/06 ಪು. 5
  • ಕೂಡಲೆ ದೊರಕುವ ವಿಶೇಷ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೂಡಲೆ ದೊರಕುವ ವಿಶೇಷ ಸಹಾಯ
  • 2006 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ರೇಖಾಚೌಕ
    1998 ನಮ್ಮ ರಾಜ್ಯದ ಸೇವೆ
  • ಕ್ರೈಸ್ತ ಸಭೆ—ಬಲಗೊಳಿಸುವ ನೆರವಿನ ಒಂದು ಮೂಲ
    ಕಾವಲಿನಬುರುಜು—1999
  • ಮುನ್ನಡೆ ಪ್ರಗತಿಯ ಕಡೆಗೆ ಸಕಾರಾತ್ಮಕ ಕ್ರಿಯೆ
    1992 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ರೇಖಾಚೌಕ
    2000 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2006 ನಮ್ಮ ರಾಜ್ಯದ ಸೇವೆ
km 2/06 ಪು. 5

ಕೂಡಲೆ ದೊರಕುವ ವಿಶೇಷ ಸಹಾಯ

1. ಒಬ್ಬ ವ್ಯಕ್ತಿಯ ಆಧ್ಯಾತ್ಮಿಕತೆಯು ಹೇಗೆ ದುರ್ಬಲವಾಗಸಾಧ್ಯವಿದೆ?

1  ಆನ್ನಾ ಎಂಬ ಒಬ್ಬ ಸಹೋದರಿಗೆ ನಂಬಿಕೆಯಲ್ಲಿಲ್ಲದ ಗಂಡನಿದ್ದನು ಮತ್ತು ಅವಳು ಮಾಡುತ್ತಿದ್ದ ಐಹಿಕ ಕೆಲಸವು ಹೆಚ್ಚಿನ ಸಮಯವನ್ನು ಕೇಳಿಕೊಳ್ಳುತ್ತಿತ್ತು. ಇದರಿಂದಾಗಿ ಅವಳಿಗೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲು, ಶುಶ್ರೂಷೆಯಲ್ಲಿ ಭಾಗವಹಿಸಲು ಮತ್ತು ದೇವರ ವಾಕ್ಯದ ಅಧ್ಯಯನ ಮಾಡಲು ಕಷ್ಟಕರವಾಗುತ್ತಿತ್ತು. ಅವಳು ಯೆಹೋವನನ್ನು ಪ್ರೀತಿಸುತ್ತಿದ್ದಳಾದರೂ ಅಕ್ರಿಯಳಾಗಿ ಪರಿಣಮಿಸಿದಳು. ಆದರೆ ಸಂತೋಷಕರ ವಿಷಯವೇನೆಂದರೆ, ಕಾಳಜಿಭರಿತ ಹಿರಿಯರಿಂದ ಅವಳು ಆಧ್ಯಾತ್ಮಿಕ ಸಹಾಯವನ್ನು ಪಡೆದುಕೊಂಡಳು.

2. ಯಾವ ವಿಧದಲ್ಲಿ ಎಲ್ಲ ಕ್ರೈಸ್ತರು ಕೂಡಲೆ ದೊರಕುವ ವಿಶೇಷ ಸಹಾಯವಾಗಿ ರುಜುವಾಗಬಲ್ಲರು?

2  ಕ್ರೈಸ್ತ ಸಭೆಯ ಮೂಲಕ ನೀಡಲ್ಪಡುವ ಸಹಾಯವನ್ನು ಸ್ವೀಕರಿಸುವುದು ಯೆಹೋವನ ಮೇಲಿನ ನಮ್ಮ ಅವಲಂಬನೆಯನ್ನು ತೋರಿಸುತ್ತದೆ. ಪ್ರೀತಿಪರ ಪರಾಮರಿಕೆಯನ್ನು ತೋರಿಸಿದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾ ಸಭೆಯಲ್ಲಿರುವ ಹಿರಿಯರು, ಆಧ್ಯಾತ್ಮಿಕ ಚಟುವಟಿಕೆಗಳನ್ನು ಬೆನ್ನಟ್ಟಲು ಕಷ್ಟಕರವಾಗುತ್ತಿರುವವರಿಗೆ ಉತ್ತೇಜನವನ್ನು ಮತ್ತು ಪ್ರಾಯೋಗಿಕ ನೆರವನ್ನು ನೀಡಲು ಪ್ರಯತ್ನಿಸುತ್ತಾರೆ. (1 ಥೆಸ. 5:14) ಅನೇಕ ಸಮಯಗಳಲ್ಲಿ, ಅಕ್ರಿಯರಾಗಿರುವವರಿಗೆ ಬೇಕಾಗಿರುವುದು ಪುನರಾಶ್ವಾಸನೆ ನೀಡುವಂಥ ಶಾಸ್ತ್ರವಚನಗಳ ಮೇಲೆ ಆಧಾರಿತವಾಗಿರುವ ಉತ್ತೇಜನದಾಯಕವಾದ ದಯಾಭರಿತ ಮಾತೇ ಆಗಿರಸಾಧ್ಯವಿದೆ. ತಾತ್ಕಾಲಿಕವಾಗಿ ಬಲಗುಂದಿದವರಿಗೆ ಸಹಾಯಮಾಡಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದು ಕೇವಲ ಹಿರಿಯರಿಗೆ ಸಂಬಂಧಿಸಿದ ವಿಷಯವಾಗಿಲ್ಲ, ಅದು ಎಲ್ಲ ಕ್ರೈಸ್ತರಿಗೆ ಸಂಬಂಧಿಸಿದ ವಿಷಯವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರು ಹಿತಚಿಂತನೆಯ ‘ಸಮಯೋಚಿತವಾದ ಮಾತುಗಳಿಗಿರುವ’ ಶಕ್ತಿಯನ್ನು ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೇವೆ ಎಂಬುದರಲ್ಲಿ ಸಂದೇಹವೇ ಇಲ್ಲ.​—⁠ಜ್ಞಾನೋ. 25:11; ಯೆಶಾ. 35:3, 4.

3, 4. ಇತರರಿಗೆ ಸಹಾಯಮಾಡುವುದರಲ್ಲಿ ಏನು ಒಳಗೂಡಿದೆ, ಮತ್ತು ನಾವು ಅದನ್ನು ಹೇಗೆ ಮಾಡಬಹುದು?

3  ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಿರಿ: ಸಹಾಯದ ಅಗತ್ಯವಿರುವವರಿಗೆ ಪ್ರೀತಿಪರ ಆಸಕ್ತಿಯನ್ನು ತೋರಿಸಲಿಕ್ಕಾಗಿ ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದು, ಅನುಕಂಪ ತೋರಿಸುವುದು ಮತ್ತು ಶ್ರದ್ಧಾಪೂರ್ವಕರಾಗಿರುವುದು ಅಗತ್ಯವಾಗಿದೆ. ದಾವೀದನು ಮನಗುಂದಿದಂಥ ಪರಿಸ್ಥಿತಿಯಲ್ಲಿದ್ದಾನೆಂದು ಯೋನಾತಾನನು ತಿಳಿದುಕೊಂಡಾಗ ‘[ಹೋರೆಷ್‌ಗೆ] ಹೋಗಿ ಅವನನ್ನು ಬಲಪಡಿಸಿದನು.’ (1 ಸಮು. 23:15-17) ಇತರರಿಗೆ ಕೋಮಲವಾದ ರೀತಿಯಲ್ಲಿ ಸಹಾಯಮಾಡಿರಿ. ನಿಜವಾದ ಹಿತಚಿಂತನೆಯಿಂದ ಹೊಮ್ಮುವ ಮಾತುಗಳು ಉತ್ತಮ ಫಲಿತಾಂಶಗಳನ್ನು ತರುತ್ತವೆ. ಅಷ್ಟುಮಾತ್ರವಲ್ಲ, ಆಧ್ಯಾತ್ಮಿಕ ಸಹೋದರ ಅಥವಾ ಸಹೋದರಿಯನ್ನು ಸಂಪಾದಿಸಿಕೊಳ್ಳುವುದರಲ್ಲಿ ಶ್ರದ್ಧಾಪೂರ್ವಕವಾದ ಉದ್ದೇಶಭರಿತ ಪ್ರಯತ್ನವು ಒಳಗೂಡಿದೆ ಎಂದು ಯೇಸು ಸ್ಪಷ್ಟವಾಗಿ ದೃಷ್ಟಾಂತಿಸಿದನು. (ಲೂಕ 15:4) ಇನ್ನೊಬ್ಬ ವ್ಯಕ್ತಿಗೆ ಸಹಾಯಮಾಡಲು ಮನಃಪೂರ್ವಕವಾದ ಆಸೆ ನಮಗಿದ್ದರೆ, ಒಂದುವೇಳೆ ಪ್ರಗತಿಯು ಕೂಡಲೆ ಕಂಡುಬರದಿರುವುದಾದರೂ ನೆರವನ್ನು ನೀಡುತ್ತಾ ಇರುವಂತೆ ಅದು ನಮ್ಮನ್ನು ಪ್ರೇರಿಸುವುದು.

4  ಶುಶ್ರೂಷೆಯಲ್ಲಿ ನಮ್ಮನ್ನು ಜೊತೆಗೂಡುವಂತೆ ನಮ್ಮ ಪುಸ್ತಕ ಅಧ್ಯಯನದಲ್ಲಿರುವವರನ್ನು ಮತ್ತು ಇತರರನ್ನು ಆಮಂತ್ರಿಸಲು ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವುದು ಎಷ್ಟೊಂದು ಉತ್ತೇಜನದಾಯಕವಾಗಿರುತ್ತದೆ! ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಯೆಹೋವನ ಜೊತೆ ಸೇವಕನೊಬ್ಬನಿಗೆ ನಾವು ಸಹಾಯಮಾಡುತ್ತಿರುವಾಗ, ಆ ಸಂದರ್ಭವನ್ನು ದೇವರ ಸೇವೆಯಲ್ಲಿ ಅವನು ಇನ್ನೂ ಹೆಚ್ಚನ್ನು ಮಾಡಲು ಪ್ರೋತ್ಸಾಹಿಸಲಿಕ್ಕಾಗಿ ಉಪಯೋಗಿಸಬಹುದು. ಈ ರೀತಿಯಲ್ಲಿ, ಒಟ್ಟಿಗೆ ಯೆಹೋವನ ಸೇವೆಯಲ್ಲಿ ಕಳೆಯುವ ಸಂತಸದ ಕ್ಷಣಗಳು ಪುನಃ ಆಧ್ಯಾತ್ಮಿಕ ಸಮತೋಲನದ ಸ್ಥಿತಿಗೆ ಬರುತ್ತಿರುವವರಿಗೆ ವಿಶೇಷವಾಗಿ ಪ್ರೋತ್ಸಾಹಕರವಾಗಿರುತ್ತದೆ.

5. ಕೆಲವು ಸನ್ನಿವೇಶಗಳಲ್ಲಿ ಹಿರಿಯರು ಯಾವ ನೆರವನ್ನು ನೀಡಬಹುದು?

5  ಒಂದು ಪ್ರೀತಿಯ ಏರ್ಪಾಡು: ಸ್ವಲ್ಪ ಸಮಯದಿಂದ ಸಾರುವ ಕೆಲಸದಲ್ಲಿ ಪಾಲ್ಗೊಳ್ಳದಿದ್ದವರಿಗೆ ಅಥವಾ ಸಭೆಯೊಂದಿಗೆ ಸಹವಾಸ ಮಾಡದಿದ್ದವರಿಗೆ ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಸಹಾಯವು ಅಗತ್ಯವಿರಬಹುದು. ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ, ಯೆಹೋವನ ಸಮೀಪಕ್ಕೆ ಬನ್ನಿರಿ ಅಥವಾ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪ್ರಕಾಶನದಿಂದ ಒಂದು ವೈಯಕ್ತಿಕ ಬೈಬಲ್‌ ಅಧ್ಯಯನವೇ ಅವರಿಗೆ ಅಗತ್ಯವಾಗಿರಬಹುದು. ಆ ವ್ಯಕ್ತಿಯು ಈಗಾಗಲೇ ದೀಕ್ಷಾಸ್ನಾನವನ್ನು ಪಡೆದುಕೊಂಡಿರುವ ಕಾರಣ ಸಾಮಾನ್ಯವಾಗಿ ಅಧ್ಯಯನವನ್ನು ದೀರ್ಘ ಸಮಯದ ವರೆಗೆ ಮುಂದುವರಿಸುವ ಅಗತ್ಯವಿಲ್ಲ. ಸಭಾ ಸೇವಾ ಕಮಿಟಿಯು ಈ ಏರ್ಪಾಡಿನಿಂದ ಯಾರು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ಜಾಗರೂಕತೆಯಿಂದ ಗಮನಿಸಬೇಕು.​—⁠1998ರ ನವೆಂಬರ್‌ ಮತ್ತು 2000ದ ನವೆಂಬರ್‌ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ಚೌಕಗಳನ್ನು ನೋಡಿರಿ.

6. ಒಬ್ಬ ಸಹೋದರಿಯು ಮತ್ತೆ ಆಧ್ಯಾತ್ಮಿಕ ಬಲವನ್ನು ಹೇಗೆ ಪಡೆದುಕೊಂಡಳು?

6  ಆರಂಭದಲ್ಲಿ ತಿಳಿಸಲ್ಪಟ್ಟ ಆನ್ನಾ, ಆಧ್ಯಾತ್ಮಿಕವಾಗಿ ಪ್ರೌಢಳಾದ ಒಬ್ಬ ಸಹೋದರಿಯು ಅವಳೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸುವಂತೆ ಹಿರಿಯರು ಏರ್ಪಡಿಸಿದಾಗ ಕೃತಜ್ಞತಾಭಾವದಿಂದ ಅದನ್ನು ಸ್ವೀಕರಿಸಿದಳು. ಅವಳೊಂದಿಗೆ ಕೇವಲ ನಾಲ್ಕು ಬಾರಿ ಅಧ್ಯಯನ ಮಾಡುವಷ್ಟರಲ್ಲಿ, ಪುನಃ ಒಮ್ಮೆ ಯೆಹೋವನ ಸಮೀಪಕ್ಕೆ ಬರಲು ಅವಳಿಗೆ ಸಹಾಯ ಸಿಕ್ಕಿತು. ಅವಳು ಪುನಃ ಸಭಾ ಕೂಟಗಳಿಗೆ ಹಾಜರಾಗಲು ಆರಂಭಿಸಿದಳು ಮತ್ತು ಯೆಹೋವ ದೇವರನ್ನು ಬಹಿರಂಗವಾಗಿ ಸ್ತುತಿಸುವ ಬಯಕೆಯು ಅವಳಲ್ಲಿ ಮತ್ತೆ ಚಿಗುರಿತು. ಆ ಪ್ರೌಢ ಸಹೋದರಿಯು ಆನ್ನಾಳಿಗೆ ಶುಶ್ರೂಷೆಯಲ್ಲಿ ಭಾಗವಹಿಸಲೂ ಸಹಾಯಮಾಡಿದಳು. ಆನ್ನಾ ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಸಾಕಷ್ಟು ಬಲಹೊಂದುವ ವರೆಗೆ ಇತರ ಬೈಬಲ್‌ ಅಧ್ಯಯನಗಳಿಗೆ ಅವಳನ್ನು ಕರೆದುಕೊಂಡು ಹೋದಳು. ಪುನಃ ಆಧ್ಯಾತ್ಮಿಕ ಚಟುವಟಿಕೆಗಳನ್ನು ಬೆನ್ನಟ್ಟಲು ಆನ್ನಾಳಿಗೆ ಅಗತ್ಯವಾಗಿದದ್ದು ಒಂದು ಸಹಾಯಹಸ್ತವೇ ಆಗಿತ್ತು.

7. ಇತರರನ್ನು ಆಧ್ಯಾತ್ಮಿಕವಾಗಿ ಬಲಪಡಿಸುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

7  ಅಗತ್ಯದಲ್ಲಿರುವವರನ್ನು ಬಲಪಡಿಸುವುದು ಎಲ್ಲರಿಗೂ ಆಶೀರ್ವಾದಗಳನ್ನು ತರುತ್ತದೆ. ಸಹಾಯವನ್ನು ಪಡೆದುಕೊಳ್ಳುವ ವ್ಯಕ್ತಿಯು ಯೆಹೋವನ ಸಮೀಪಕ್ಕೆ ಬರುವುದರಿಂದ ಮತ್ತು ಆತನ ಸಂಘಟನೆಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರಿಂದ ಸಿಗುವ ಆನಂದವನ್ನು ಸವಿಯುತ್ತಾನೆ. ಹಿರಿಯರು ಅಂತಹ ಆಧ್ಯಾತ್ಮಿಕ ಪ್ರಗತಿಯನ್ನು ನೋಡಿ ಸಂತೋಷಪಡುತ್ತಾರೆ. (ಲೂಕ 15:​5, 6) ಒಬ್ಬರಿಗೊಬ್ಬರು ಪ್ರೀತಿಭರಿತ ಕಾಳಜಿಯನ್ನು ತೋರಿಸುತ್ತಿರುವಾಗ ಸಭೆಯು ಐಕಮತ್ಯದಲ್ಲಿ ಆನಂದಿಸುತ್ತದೆ. (ಕೊಲೊ. 3:​12-14) ಕೂಡಲೆ ವಿಶೇಷ ಸಹಾಯವನ್ನು ನೀಡುವ ಯೆಹೋವನನ್ನು ಅನುಕರಿಸಲು ನಮಗೆ ಎಷ್ಟೊಂದು ಸಕಾರಣಗಳಿವೆ!​—⁠ಎಫೆ. 5:⁠1.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ