ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ನಮ್ಮ ಅಧ್ಯಯನವನ್ನು ಆನಂದಿಸಿರಿ
1 “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನದಲ್ಲಿ ಕುತೂಹಲವನ್ನು ಕೆರಳಿಸಿದ ವೈಶಿಷ್ಟ್ಯವು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಬಿಡುಗಡೆಯಾಗಿತ್ತು. ಶೀಘ್ರದಲ್ಲೇ ನಾವದನ್ನು ಕ್ಷೇತ್ರ ಸೇವೆಯಲ್ಲಿ, ವಿಶೇಷವಾಗಿ ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವಾಗ ವ್ಯಾಪಕವಾಗಿ ಉಪಯೋಗಿಸಲಿದ್ದೇವೆ. ಆದುದರಿಂದ, ಈ ಹೊಸ ಪ್ರಕಾಶನದಲ್ಲಿರುವ ವಿಷಯಗಳನ್ನು ನಾವು ಚೆನ್ನಾಗಿ ತಿಳಿದುಕೊಳ್ಳುವುದು ಅಗತ್ಯ. ಇದು ಸಾಧ್ಯವಾಗಲಿದೆ, ಏಕೆಂದರೆ ಅದನ್ನು ನಾವು ಸಭಾ ಪುಸ್ತಕ ಅಧ್ಯಯನದಲ್ಲಿ 2006ರ ಏಪ್ರಿಲ್ 17ರಿಂದ ಆರಂಭವಾಗುವ ವಾರದಿಂದ ಅಧ್ಯಯನಮಾಡಲಿದ್ದೇವೆ.
2 ಸಭಾ ಪುಸ್ತಕ ಅಧ್ಯಯನದ ಮೇಲ್ವಿಚಾರಕನು, ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳ ಕಡೆಗೆ ಗಮನವನ್ನು ಸೆಳೆಯುವನು. ಅನಂತರ, ಪುಟದ ಕೆಳಭಾಗದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ ಅಧ್ಯಯನವು ನಡೆಸಲ್ಪಡುವುದು. ಮುಖ್ಯ ಅಂಶಗಳನ್ನು ಬೆಂಬಲಿಸುವ ಶಾಸ್ತ್ರವಚನಗಳನ್ನು ಓದಿ ಚರ್ಚಿಸಲಾಗುವುದು ಮತ್ತು ವಿಷಯಭಾಗವನ್ನು ಪುನರ್ವಿಮರ್ಶಿಸಲು ಪ್ರತಿ ಅಧ್ಯಾಯದ ಕೊನೆಯಲ್ಲಿರುವ “ಬೈಬಲು ಹೀಗೆ ಬೋಧಿಸುತ್ತದೆ” ಎಂಬ ಚೌಕವು ಸಹಾಯಕಾರಿಯಾಗಿರುವುದು. ಏಕೆಂದರೆ ಈ ಚೌಕವು ಅಧ್ಯಾಯದ ಆರಂಭದಲ್ಲಿರುವ ಪ್ರಶ್ನೆಗಳಿಗೆ ಶಾಸ್ತ್ರಾಧಾರಿತ ಉತ್ತರಗಳನ್ನು ನೀಡುತ್ತದೆ. ಈ ಪುಸ್ತಕವು ವಿಷಯಗಳನ್ನು ಸ್ಪಷ್ಟ, ಸರಳ ಮತ್ತು ಆಸಕ್ತಿಕರವಾದ ವಿಧದಲ್ಲಿ ಆವರಿಸುವುದರಿಂದ ನೀವು ಉತ್ತರಗಳನ್ನು ಕೊಡುವುದರಲ್ಲಿ ಆನಂದಿಸುವಿರಿ.
3 ಈ ಪುಸ್ತಕದ ಪರಿಶಿಷ್ಟವು ವಿವಿಧ ವಿಷಯಗಳ ಕುರಿತು ವಿವರಗಳನ್ನು ನೀಡುತ್ತದೆ. ಬೈಬಲ್ ವಿದ್ಯಾರ್ಥಿಗೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಹೆಚ್ಚು ಮಾಹಿತಿಯು ಅಗತ್ಯವಿರುವಾಗ ನಾವು ಆ ವಿಷಯಭಾಗವನ್ನು ಉಪಯೋಗಿಸಸಾಧ್ಯವಿದೆ. ಸಭಾ ಪುಸ್ತಕ ಅಧ್ಯಯನದ ಸಮಯದಲ್ಲಿ ಕೆಲವೊಮ್ಮೆ ಪರಿಶಿಷ್ಟದಲ್ಲಿರುವ ಭಾಗಗಳನ್ನು ಚರ್ಚಿಸಲಾಗುವುದು. ಒಂದು ವಿಷಯಕ್ಕೆ ಸಂಬಂಧಿಸಿದ ಪರಿಶಿಷ್ಟದ ಎಲ್ಲ ಭಾಗಗಳನ್ನು ಪುಸ್ತಕ ಅಧ್ಯಯನದ ಓದುಗನು ಓದುವನು. ಉದ್ದ ಲೇಖನಗಳನ್ನು ಭಾಗಭಾಗವಾಗಿ ಚರ್ಚಿಸಸಾಧ್ಯವಿದೆ. ಪರಿಶಿಷ್ಟದಲ್ಲಿ ಅಧ್ಯಯನ ಪ್ರಶ್ನೆಗಳನ್ನು ಕೊಡಲಾಗಿಲ್ಲ. ಆದರೆ, ಪುಸ್ತಕ ಅಧ್ಯಯನದ ಮೇಲ್ವಿಚಾರಕನು ಮುಖ್ಯ ಅಂಶಗಳನ್ನು ಎತ್ತಿತೋರಿಸುವಂಥ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಜರಿರುವವರಿಂದ ಉತ್ತರಗಳನ್ನು ಬರಮಾಡಸಾಧ್ಯವಿದೆ.
4 ಸಭಾ ಪುಸ್ತಕ ಅಧ್ಯಯನದಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿರುವ ವಿಷಯವನ್ನು ಬೇಗಬೇಗನೆ ಆವರಿಸಲಾಗುವುದು. ಆದರೆ, ನಾವು ಈ ಪ್ರಕಾಶನವನ್ನು ಇತರರೊಂದಿಗೆ, ವಿಶೇಷವಾಗಿ ಬೈಬಲಿನ ಕುರಿತು ಸ್ವಲ್ಪ ಗೊತ್ತಿರುವವರೊಂದಿಗೆ ಇಲ್ಲವೆ ಏನೂ ತಿಳಿಯದವರೊಂದಿಗೆ ಅಧ್ಯಯನ ಮಾಡುವಾಗ ಬೇಗಬೇಗನೆ ಆವರಿಸುವಂತೆ ನಮ್ಮಿಂದ ಕೇಳಿಕೊಳ್ಳಲಾಗುವುದಿಲ್ಲ. (ಅ. ಕೃ. 26:28, 29) ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವಾಗ ನಾವು ವಚನಗಳನ್ನು ಹೆಚ್ಚು ಪೂರ್ಣವಾಗಿ ಚರ್ಚಿಸಬೇಕಾಗಿರುತ್ತದೆ, ಉದಾಹರಣೆಗಳನ್ನು ವಿವರಿಸಬೇಕಾಗಿರುತ್ತದೆ ಮತ್ತು ಇನ್ನೂ ಹೆಚ್ಚು ವಿಷಯಗಳನ್ನು ಮಾಡಬೇಕಾಗಿರುತ್ತದೆ. ಆದುದರಿಂದ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ನಮ್ಮ ಅಧ್ಯಯನಕ್ಕೆ ಪ್ರತಿ ವಾರವೂ ಹಾಜರಾಗಿ, ಪೂರ್ಣವಾಗಿ ಪಾಲ್ಗೊಳ್ಳುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ.