ನೀವು ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಹೇಗೆ ತಲಪಬಲ್ಲಿರಿ?
1. ಅನೇಕ ಯುವ ಕ್ರೈಸ್ತರಿಗೆ ಯಾವ ಆಧ್ಯಾತ್ಮಿಕ ಗುರಿಗಳಿವೆ?
1 ಒಬ್ಬ ಯುವ ಕ್ರೈಸ್ತನಾಗಿ ನಿಮ್ಮ ಜೀವನದ ಗುರಿಗಳು ಯೆಹೋವನ ಮೇಲಿರುವ ಪ್ರೀತಿ ಮತ್ತು ‘ಮೊದಲಾಗಿ ದೇವರ ರಾಜ್ಯಕ್ಕೆ ತವಕಪಡಿರಿ’ ಎಂದು ಯೇಸು ಎಲ್ಲಾ ಕ್ರೈಸ್ತರಿಗೆ ಹೇಳಿದ ಮಾತುಗಳಿಂದ ಪ್ರಭಾವಿಸಲ್ಪಡುತ್ತವೆ ಎಂಬುದು ನಿಸ್ಸಂದೇಹ. (ಮತ್ತಾ. 6:33) ನಿಮ್ಮ ಗುರಿಯು ಒಬ್ಬ ಪಯನೀಯರನಾಗಿ ಅಥವಾ ಹೆಚ್ಚು ರಾಜ್ಯ ಘೋಷಕರ ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆಮಾಡುವ ಮೂಲಕ ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವುದು ಆಗಿರಬಹುದು. ಕೆಲವರು ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಲ್ಲಿ, ಬೆತೆಲ್ನಲ್ಲಿ ಅಥವಾ ಒಬ್ಬ ಮಿಷನೆರಿಯಾಗಿ ಸ್ವಯಂಸೇವೆ ಮಾಡಲು ಇಚ್ಛಿಸಬಹುದು. ಖಂಡಿತವಾಗಿಯೂ ಇವು ತೃಪ್ತಿದಾಯಕ ಮತ್ತು ಶ್ಲಾಘಣೀಯ ಗುರಿಗಳಾಗಿವೆ!
2. ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಲಪಲು ನಿಮಗೆ ಯಾವುದು ಸಹಾಯಮಾಡಬಲ್ಲದು?
2 ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಲಪಲು ಸಹಾಯಮಾಡುವ ಒಂದು ಅಂಶವು ಅವುಗಳನ್ನು ಬರೆದಿಡುವುದೇ ಆಗಿದೆ. 2004, ಜುಲೈ 15ರ ಕಾವಲಿನಬುರುಜು ತಿಳಿಸಿದ್ದು: “ಮನಸ್ಸಿನಲ್ಲಿರುವ ಒಂದು ಅಸ್ಪಷ್ಟವಾದ ವಿಚಾರವನ್ನು ವ್ಯಕ್ತಪಡಿಸಲಿಕ್ಕಾಗಿ [ನೀವು] ಮಾತುಗಳನ್ನು ಆಯ್ಕೆಮಾಡುವಾಗ, ಅದು ಸ್ಪಷ್ಟತೆ ಹಾಗೂ ಆಕಾರವನ್ನು ಪಡೆಯುತ್ತದೆ. ಆದುದರಿಂದ, [ನಿಮ್ಮ] ಗುರಿಗಳನ್ನೂ ಅವುಗಳನ್ನು ತಲಪಲು [ನೀವು] ಮಾಡಿರುವ ಯೋಜನೆಗಳನ್ನೂ [ನೀವು] ಬರೆದಿಡಬಹುದು.” ಇದಲ್ಲದೆ ನೀವು ಭವಿಷ್ಯದಲ್ಲಿ ತಲಪಬೇಕಾದ ಗುರಿಗಳನ್ನು ಬೆನ್ನಟ್ಟುತ್ತಿರುವಾಗ, ನಿಮ್ಮ ಪ್ರಗತಿಯನ್ನು ಅಳೆಯಲು ಮತ್ತು ಅವುಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯಮಾಡುವ ಇತರ ಚಿಕ್ಕ ಚಿಕ್ಕ ಗುರಿಗಳನ್ನಿಡಿರಿ.
3. ದೀಕ್ಷಾಸ್ನಾನಕ್ಕೆ ಅರ್ಹರಾಗಲಿಕ್ಕಾಗಿ ಈಗಲೇ ಮುಟ್ಟಬಹುದಾದ ಕೆಲವು ಗುರಿಗಳನ್ನು ಹೆಸರಿಸಿ.
3 ಈಗಲೇ ಮುಟ್ಟಬಹುದಾದ ಗುರಿಗಳು: ನೀವು ಇನ್ನೂ ದೀಕ್ಷಾಸ್ನಾನ ಪಡೆಯದಿದ್ದಲ್ಲಿ ಈ ಗುರಿಯನ್ನು ತಲಪಲು ನೀವೇನು ಮಾಡಬೇಕೆಂದು ಪರಿಗಣಿಸಿರಿ. ಮೂಲಭೂತ ಬೈಬಲ್ ಬೋಧನೆಗಳ ಉತ್ತಮ ತಿಳುವಳಿಕೆ ಪಡೆಯುವ ಅಗತ್ಯವಿರಬಹುದು. ಹಾಗಿರುವಲ್ಲಿ, ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಕೂಲಂಕಷವಾಗಿ ಅಧ್ಯಯನಮಾಡುವುದನ್ನು ನಿಮ್ಮ ಗುರಿಯಾಗಿ ಮಾಡಿರಿ. ಹೀಗೆ ಅಧ್ಯಯನಮಾಡುವಾಗ ಉದ್ಧರಿಸಲ್ಪಟ್ಟಿರುವ ಎಲ್ಲ ವಚನಗಳನ್ನು ತೆರೆದುನೋಡಿ. (1 ತಿಮೊ. 4:15) ಬೆತೆಲಿಗರಿಂದ ಮತ್ತು ಗಿಲ್ಯಡ್ ವಿದ್ಯಾರ್ಥಿಗಳಿಂದ ಕೇಳಿಕೊಳ್ಳಲ್ಪಡುವಂತೆ ಬೈಬಲನ್ನು ಆದಿಕಾಂಡದಿಂದ ಪ್ರಕಟನೆಯ ವರೆಗೆ ಪೂರ್ತಿಯಾಗಿ ಓದುವ ಗುರಿಯನ್ನಿಡಿರಿ. ತದನಂತರ ಪ್ರತಿದಿನ ಕ್ರಮವಾಗಿ ಬೈಬಲ್ ಓದುವ ರೂಢಿಯನ್ನು ಪಾಲಿಸಿರಿ. (ಕೀರ್ತ. 1:2, 3) ಅದು ಆಧ್ಯಾತ್ಮಿಕವಾಗಿ ಬೆಳೆಯಲು ನಿಮಗೆಷ್ಟು ಸಹಾಯಮಾಡಬಲ್ಲದೆಂದು ತುಸು ಊಹಿಸಿಕೊಳ್ಳಿ! ಪ್ರತಿ ಬಾರಿ ಬೈಬಲ್ ಓದುವ ಹಾಗೂ ಅಧ್ಯಯನಮಾಡುವ ಮುಂಚೆ ಮತ್ತು ನಂತರ ಹೃತ್ಪೂರ್ವಕವಾಗಿ ಪ್ರಾರ್ಥನೆಮಾಡಿರಿ. ಅಲ್ಲದೆ ನೀವು ಏನನ್ನು ಕಲಿಯುತ್ತೀರೋ ಅದನ್ನು ಅನ್ವಯಿಸಲು ಸದಾ ಪ್ರಯತ್ನಿಸಿರಿ.—ಯಾಕೋ. 1:25.
4. ಭವಿಷ್ಯದಲ್ಲಿ ಬೆತೆಲ್ ಅಥವಾ ಮಿಷನೆರಿ ಸೇವೆಮಾಡಬೇಕೆಂಬ ಗುರಿಗಳಿರುವ ಕ್ರೈಸ್ತನೊಬ್ಬನು ಈಗಲೇ ಮುಟ್ಟಬಹುದಾದ ಯಾವ ಗುರಿಗಳನ್ನು ಇಡಬಲ್ಲನು?
4 ನೀವು ಈಗಾಗಲೇ ದೀಕ್ಷಾಸ್ನಾನ ಹೊಂದಿರುವಲ್ಲಿ ಬೇರೆ ಯಾವ ಗುರಿಗಳನ್ನು ಬೆನ್ನಟ್ಟಬಲ್ಲಿರಿ? ನಿಮ್ಮ ಸಾರುವ ಕೌಶಲಗಳನ್ನು ಉತ್ತಮಗೊಳಿಸುವ ಅಗತ್ಯವಿದೆಯೇ? ಉದಾಹರಣೆಗೆ, ದೇವರ ವಾಕ್ಯವನ್ನು ಹೆಚ್ಚು ನಿಪುಣತೆಯಿಂದ ಉಪಯೋಗಿಸುವ ಗುರಿಯನ್ನು ನೀವು ಇಡಬಲ್ಲಿರೋ? (2 ತಿಮೊ. 2:15) ನಿಮ್ಮ ಶುಶ್ರೂಷೆಯನ್ನು ನೀವು ಹೇಗೆ ವಿಸ್ತರಿಸಬಲ್ಲಿರಿ? ನಿಮ್ಮ ವಯಸ್ಸು ಮತ್ತು ಪರಿಸ್ಥಿತಿಗಳೊಂದಿಗೆ ಸರಿಹೋಗುವ ಹಾಗೂ ನಿಮ್ಮ ಭವಿಷ್ಯದ ಗುರಿಗಳನ್ನು ತಲಪಲು ಸಹಾಯಮಾಡುವಂಥ, ಈಗಲೇ ಮುಟ್ಟಬಹುದಾದ ನಿರ್ದಿಷ್ಟ ಗುರಿಗಳನ್ನು ಇಡಿರಿ.
5. ಒಬ್ಬ ಸಹೋದರನಿಗೆ ಬೆತೆಲಿನಲ್ಲಿ ಸೇವೆಸಲ್ಲಿಸುವ ತನ್ನ ಭವಿಷ್ಯದ ಗುರಿಯನ್ನು ತಲಪಲು ಇತರ ಗುರಿಗಳು ಹೇಗೆ ಸಹಾಯಮಾಡಿದವು?
5 ಯಶಸ್ಸಿನ ಕಥೆ: ಹತ್ತೊಂಬತ್ತು ವರ್ಷದ ಟೋನಿ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸನ್ನು ಸಂದರ್ಶಿಸಿದಾಗ ಬೆತೆಲಿನಲ್ಲಿ ಸೇವೆಸಲ್ಲಿಸಬೇಕೆಂಬ ಆಶೆಯು ಅವನಲ್ಲಿ ಚಿಗುರಿತು. ಆದರೆ ಅವನ ಜೀವನಶೈಲಿಯು ವಕ್ರವಾಗಿತ್ತು, ಮತ್ತು ಅವನು ಆಗ ದೇವರಿಗೆ ಸಮರ್ಪಣೆಯನ್ನೂ ಮಾಡಿರಲಿಲ್ಲ. ಅದಕ್ಕಾಗಿ, ಟೋನಿ ತನ್ನ ಜೀವನವನ್ನು ಯೆಹೋವನ ಮಾರ್ಗಗಳಿಗೆ ಹೊಂದಿಕೆಯಲ್ಲಿ ತರಲು ನಿರ್ಣಯಿಸಿದನು ಮತ್ತು ದೀಕ್ಷಾಸ್ನಾನಕ್ಕೆ ಅರ್ಹನಾಗಬೇಕೆಂಬ ಗುರಿಯನ್ನಿಟ್ಟನು. ಆ ಗುರಿಯನ್ನು ಮುಟ್ಟಿದ ನಂತರ, ಅವನು ಆಕ್ಸಿಲಿಯರಿ ಪಯನೀಯರ್ ಸೇವೆಯ ಗುರಿಯನ್ನಿಟ್ಟನು, ತದನಂತರ ರೆಗ್ಯುಲರ್ ಪಯನೀಯರ್ ಸೇವೆಯ ಗುರಿಯನ್ನಿಟ್ಟನು ಮತ್ತು ತನ್ನ ಕ್ಯಾಲೆಂಡರ್ನಲ್ಲಿ ಅದನ್ನು ಆರಂಭಿಸುವ ತಾರೀಖುಗಳನ್ನು ಗುರುತಿಸಿಟ್ಟನು. ಅವನು ಕೆಲಕಾಲ ಪಯನೀಯರ್ ಸೇವೆಮಾಡಿದ ನಂತರ, ಬೆತೆಲಿನಲ್ಲಿ ಸೇವೆಸಲ್ಲಿಸಲು ಅವನಿಗೆ ಕರೆಬಂದಾಗ ಅವನಿಗೆಷ್ಟು ಸಂತೋಷವಾಯಿತೆಂದು ಊಹಿಸಿಕೊಳ್ಳಿ!
6. ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಲಪಲು ನಿಮಗೇನು ಸಹಾಯಮಾಡಬಲ್ಲದು?
6 ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನ ಕೊಡುವಾಗ ನೀವು ಸಹ ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಲಪಬಲ್ಲಿರಿ. ನಿಮ್ಮ “ಕಾರ್ಯಗಳನ್ನು” ಪ್ರಾರ್ಥನೆಯ ಮೂಲಕ ಯೆಹೋವನ ಮುಂದಿಡಿರಿ ಮತ್ತು ಆ ಗುರಿಗಳನ್ನು ತಲಪಲು ಶ್ರದ್ಧೆಯಿಂದ ಪ್ರಯತ್ನಪಡಿರಿ.—ಜ್ಞಾನೋ. 16:3, NIBV; 21:5.