ಜ್ಞಾಪಕಾಚರಣೆಯ ಮರುಜ್ಞಾಪನಗಳು
ಈ ವರ್ಷದ ಜ್ಞಾಪಕಾಚರಣೆಯು ಏಪ್ರಿಲ್ 2ರ ಸೋಮವಾರದಂದು ನಡೆಸಲ್ಪಡುವುದು. ಹಿರಿಯರು ಈ ಕೆಳಗಿನ ವಿಷಯಗಳಿಗೆ ಗಮನಕೊಡಬೇಕು:
◼ ಈ ಕೂಟಕ್ಕಾಗಿ ಸಮಯವನ್ನು ನಿಗದಿಪಡಿಸುವಾಗ, ಸೂರ್ಯಾಸ್ತಮಾನಕ್ಕಿಂತ ಮುಂಚೆ ಕುರುಹುಗಳು ದಾಟಿಸಲ್ಪಡದಿರುವುದನ್ನು ಖಚಿತಪಡಿಸಿಕೊಳ್ಳಿರಿ.
◼ ಭಾಷಣಕರ್ತನನ್ನು ಸೇರಿಸಿ ಪ್ರತಿಯೊಬ್ಬರಿಗೂ ಆಚರಣೆಯ ಸರಿಯಾದ ಸಮಯ ಮತ್ತು ಸ್ಥಳದ ಕುರಿತು ತಿಳಿಸಿರಿ.
◼ ಯಥೋಚಿತ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಪಡೆದು ಸಿದ್ಧವಾಗಿಡಬೇಕು.—2003, ಫೆಬ್ರವರಿ 15ರ ಕಾವಲಿನಬುರುಜು ಪುಟ. 14-15ನ್ನು ನೋಡಿರಿ.
◼ ತಟ್ಟೆಗಳು, ಗ್ಲಾಸ್ಗಳು, ತಕ್ಕದಾದ ಮೇಜು ಹಾಗೂ ಮೇಜುಬಟ್ಟೆಯನ್ನು ಸಭಾಂಗಣಕ್ಕೆ ತಂದು, ಅವನ್ನು ಮುಂಚಿತವಾಗಿಯೇ ಸಿದ್ಧಪಡಿಸಿರಬೇಕು.
◼ ರಾಜ್ಯ ಸಭಾಗೃಹವನ್ನು ಅಥವಾ ಕೂಟವನ್ನು ನಡೆಸುವ ಇತರ ಸ್ಥಳವನ್ನು ಮುಂಚಿತವಾಗಿಯೇ ಚೆನ್ನಾಗಿ ಶುಚಿಮಾಡಿರಬೇಕು.
◼ ಅಟೆಂಡೆಂಟರನ್ನು ಮತ್ತು ಕುರುಹುಗಳನ್ನು ದಾಟಿಸುವವರನ್ನು ಆಯ್ಕೆಮಾಡಿ, ಅವರ ಕೆಲಸಗಳ ಬಗ್ಗೆ, ಅನುಸರಿಸಬೇಕಾದ ಸೂಕ್ತ ಕಾರ್ಯವಿಧಾನದ ಬಗ್ಗೆ ಮತ್ತು ಘನತೆಯುಳ್ಳ ಉಡುಪು ಹಾಗೂ ಕೇಶಶೈಲಿಯ ಅಗತ್ಯದ ಬಗ್ಗೆ ಮುಂಚಿತವಾಗಿಯೇ ಅವರಿಗೆ ಹೇಳಬೇಕು.
◼ ಅಶಕ್ತರು ಹಾಗೂ ಉಪಸ್ಥಿತರಿರಲು ಅಸಮರ್ಥರು ಆಗಿರುವ ಅಭಿಷಿಕ್ತರಿರುವುದಾದರೆ, ಅವರಿಗೆ ಕುರುಹುಗಳನ್ನು ದಾಟಿಸಲು ಏರ್ಪಾಡುಗಳನ್ನು ಮಾಡಬೇಕು.
◼ ಒಂದಕ್ಕಿಂತ ಹೆಚ್ಚು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸಲಿರುವಲ್ಲಿ, ಸಭೆಗಳ ಮಧ್ಯೆ ಒಳ್ಳೆಯ ಸಹಕಾರವಿರಬೇಕು. ಇದು ಲಾಬಿಯಲ್ಲಿ ಅಥವಾ ಪ್ರವೇಶಾಂಗಣದಲ್ಲಿ, ಸಾರ್ವಜನಿಕ ಫುಟ್ಪಾತ್ಗಳಲ್ಲಿ ಮತ್ತು ವಾಹನ ನಿಲುಗಡೆಯ ಸ್ಥಳಗಳಲ್ಲಿ ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು.