ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/07 ಪು. 1
  • “ಬಹಳ ಫಲ” ಕೊಡುತ್ತಾ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಬಹಳ ಫಲ” ಕೊಡುತ್ತಾ ಇರಿ
  • 2007 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ‘ನೀವು ಬಹಳ ಫಲವನ್ನು ಕೊಡುತ್ತಾ ಇರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • “ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ದೇವರಾತ್ಮವು ನಿಮ್ಮನ್ನು ನಡಿಸುವಂತೆ ಬಿಡುತ್ತೀರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
2007 ನಮ್ಮ ರಾಜ್ಯದ ಸೇವೆ
km 6/07 ಪು. 1

“ಬಹಳ ಫಲ” ಕೊಡುತ್ತಾ ಇರಿ

1 ಸಾಂಕೇತಿಕ ಮಾತುಗಳನ್ನು ಉಪಯೋಗಿಸುತ್ತಾ, ಯೇಸು ತನ್ನನ್ನು ನಿಜವಾದ ದ್ರಾಕ್ಷಾಬಳ್ಳಿಗೆ, ತನ್ನ ತಂದೆಯನ್ನು ತೋಟಗಾರನಿಗೆ ಮತ್ತು ತನ್ನ ಆತ್ಮಾಭಿಷಿಕ್ತ ಹಿಂಬಾಲಕರನ್ನು ದ್ರಾಕ್ಷಾಬಳ್ಳಿಯ ಫಲೋತ್ಪಾದಕ ಕೊಂಬೆಗಳಿಗೆ ಹೋಲಿಸಿದನು. ಸಾಂಕೇತಿಕ ತೋಟಗಾರನ ಕೆಲಸವನ್ನು ವರ್ಣಿಸುವಾಗ, ದ್ರಾಕ್ಷಾಬಳ್ಳಿಗೆ ದೃಢವಾಗಿ ಅಂಟಿಕೊಂಡು ನೆಲೆನಿಲ್ಲುವ ಪ್ರಾಮುಖ್ಯವನ್ನು ಯೇಸು ಒತ್ತಿಹೇಳಿದನು. (ಯೋಹಾ. 15:​1-4) ಇದರಲ್ಲಿರುವ ಪಾಠವೇನಂದರೆ, ಯೆಹೋವನೊಂದಿಗೆ ಆಪ್ತ ವೈಯಕ್ತಿಕ ಸಂಬಂಧವಿರುವ ಪ್ರತಿಯೊಬ್ಬನು “ನಿಜವಾದ ದ್ರಾಕ್ಷೇಬಳ್ಳಿ”ಯಾದ ಯೇಸು ಕ್ರಿಸ್ತನ ಫಲೋತ್ಪಾದಕ ಕೊಂಬೆಯಂತಿರಬೇಕು ಎಂಬದೇ. ‘ದೇವರಾತ್ಮದಿಂದ ಉಂಟಾಗುವ ಫಲ’ ಮತ್ತು ರಾಜ್ಯ ಫಲ ಇವೆರಡನ್ನೂ ನಾವು ಬಹಳವಾಗಿ ಫಲಿಸುತ್ತಾ ಇರಬೇಕಾಗಿದೆ.​—⁠ಗಲಾ. 5:​22, 23; ಮತ್ತಾ. 24:14; 28:​19, 20.

2 ದೇವರಾತ್ಮದಿಂದ ಉಂಟಾಗುವ ಫಲ: ದೇವರಾತ್ಮದ ಫಲಗಳನ್ನು ನಾವೆಷ್ಟರ ಮಟ್ಟಿಗೆ ತೋರಿಸುತ್ತಿದ್ದೇವೆ ಎಂಬುದರಿಂದ ನಮ್ಮ ಆಧ್ಯಾತ್ಮಿಕ ಪ್ರಗತಿಯು ಅಳೆಯಲ್ಪಡಬಲ್ಲದು. ದೇವರ ವಾಕ್ಯವನ್ನು ಕ್ರಮವಾಗಿ ಅಧ್ಯಯನ ಮಾಡುವ ಮತ್ತು ಧ್ಯಾನಿಸುವ ಮೂಲಕ ದೇವರಾತ್ಮದ ಫಲವನ್ನು ಬೆಳೆಸಿಕೊಳ್ಳಲು ನೀವು ಪ್ರಯಾಸಪಡುತ್ತೀರೋ? (ಫಿಲಿ. 1:​9-11) ಪವಿತ್ರಾತ್ಮಕ್ಕಾಗಿ ಬೇಡುತ್ತಾ ಪ್ರಾರ್ಥನೆಮಾಡಲು ಹಿಂಜರಿಯಬೇಡಿರಿ. ಯಾಕಂದರೆ ಅದು ನಿಮ್ಮಲ್ಲಿ ಯೆಹೋವನನ್ನು ಘನಪಡಿಸುವ ಗುಣಗಳನ್ನು ಉತ್ಪಾದಿಸಬಲ್ಲದು ಮತ್ತು ಸತತವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ನಿಮಗೆ ನೆರವಾಗುವುದು.​—⁠ಲೂಕ 11:13; ಯೋಹಾ. 13:35.

3 ದೇವರಾತ್ಮದ ಫಲಗಳನ್ನು ಬೆಳೆಸಿಕೊಳ್ಳುವುದು ನಮಗೆ ಹೆಚ್ಚು ಹುರುಪುಳ್ಳ ಶುಶ್ರೂಷಕರಾಗುವಂತೆ ಸಹ ನೆರವಾಗಬಲ್ಲದು. ಉದಾಹರಣೆಗೆ, ನಮ್ಮ ಕಾರ್ಯಮಗ್ನ ಶೆಡ್ಯೂಲಿನಲ್ಲಿ ಕ್ರಮದ ಶುಶ್ರೂಷೆಗಾಗಿ ಸಮಯವನ್ನು ಬದಿಗಿಡಲು ಪ್ರೀತಿ ಮತ್ತು ನಂಬಿಕೆಯು ನಮ್ಮನ್ನು ಪ್ರೇರೇಪಿಸುವುದು. ಸಮಾಧಾನ, ದೀರ್ಘಶಾಂತಿ, ದಯೆ, ಸಾಧುತ್ವ ಮತ್ತು ಶಮೆದಮೆ ಮುಂತಾದ ಗುಣಗಳು ನಮ್ಮ ವಿರೋಧಕರಿಗೆ ಯೋಗ್ಯ ಪ್ರತಿವರ್ತನೆ ನೀಡಲು ನಮ್ಮನ್ನು ಪ್ರೇರಿಸುವುವು. ಜನರು ಒಳ್ಳೆಯ ಪ್ರತಿಕ್ರಿಯೆ ತೋರಿಸದೆ ಇರುವಾಗಲೂ ಶುಶ್ರೂಷೆಯಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವಂತೆ ಸಂತೋಷವು ನಮಗೆ ನೆರವಾಗುತ್ತದೆ.

4 ರಾಜ್ಯ ಫಲ: ನಾವು ರಾಜ್ಯ ಫಲವನ್ನು ಫಲಿಸಲು ಸಹ ಬಯಸುತ್ತೇವೆ. ಅದರಲ್ಲಿ ‘ಸ್ತೋತ್ರಯಜ್ಞ ಅಂದರೆ ಬಾಯಿಂದ ಮಾಡುವ [ಯೆಹೋವನ] ನಾಮದ ಬಹಿರಂಗ ಘೋಷಣೆಯು’ ಸೇರಿರುತ್ತದೆ. (ಇಬ್ರಿ. 13:​15, NW) ನಾವಿದನ್ನು ಮಾಡುವುದು ಸುವಾರ್ತೆಯನ್ನು ಹುರುಪಿನಿಂದ ಮತ್ತು ದೃಢಚಿತ್ತದಿಂದ ಘೋಷಿಸುವ ಮೂಲಕವೇ. ನಿಮ್ಮ ವೈಯಕ್ತಿಕ ಶುಶ್ರೂಷೆಯನ್ನು ಪ್ರಗತಿಗೊಳಿಸುವ ಮೂಲಕ ನೀವು ಹೆಚ್ಚು ರಾಜ್ಯ ಫಲವನ್ನು ಫಲಿಸಲು ಪ್ರಯಾಸಪಡುತ್ತೀರೋ?

5 ತನ್ನ ನಂಬಿಗಸ್ತ ಹಿಂಬಾಲಕರು ಬೇರೆ ಬೇರೆ ಪ್ರಮಾಣದಲ್ಲಿ ಫಲವನ್ನು ಫಲಿಸುವರು ಎಂದು ಯೇಸು ಸೂಚಿಸಿದನು. (ಮತ್ತಾ. 13:23) ಆದುದರಿಂದ ನಾವು ನಮ್ಮನ್ನು ಇತರರೊಂದಿಗೆ ತುಲನೆಮಾಡದೇ ನಮ್ಮ ಕೈಯಲ್ಲಾಗುವಷ್ಟು ಉತ್ತಮವಾದುದನ್ನು ಯೆಹೋವನಿಗೆ ಕೊಡತಕ್ಕದ್ದು. (ಗಲಾ. 6:4) ದೇವರ ವಾಕ್ಯದ ಸಹಾಯದಿಂದ ನಮ್ಮ ವೈಯಕ್ತಿಕ ಪರಿಸ್ಥಿತಿಗಳ ಪ್ರಾಮಾಣಿಕ ಸ್ವಪರೀಕ್ಷೆಯನ್ನು ಮಾಡಿಕೊಳ್ಳೋಣ. ಆಗ “ಬಹಳ ಫಲಕೊಡುತ್ತಾ” ಯೆಹೋವನನ್ನು ಘನಪಡಿಸಲು ನಮಗೆ ಸಹಾಯವಾಗುವುದು.​—⁠ಯೋಹಾ. 15:​8

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ