ನೀವದನ್ನು ಮುಂದೂಡುತ್ತಿದ್ದೀರೊ?
ಏನನ್ನು? ದೀಕ್ಷಾಸ್ನಾನ ಪಡೆದಿರುವ ಸಾಕ್ಷಿಗಳಿಗೆ ಕೊಡಲಾಗಿರುವ ಡಿಪಿಎ (ಡ್ಯೂರಬಲ್ ಪವರ್ ಆಫ್ ಅಟಾರ್ನಿ) ಕಾರ್ಡ್ ತುಂಬಿಸುವುದನ್ನು. ‘ನಾಳೆ ಏನಾಗುವುದೋ ನಿಮಗೆ ತಿಳಿಯದ’ ಕಾರಣ, ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಲ್ಲಿ ನೀವು ಯಾವ ಚಿಕಿತ್ಸಾಕ್ರಮಗಳನ್ನು ಸ್ವೀಕರಿಸುವಿರೆಂಬುದನ್ನು ಮುಂಚಿತವಾಗಿಯೇ ನಿರ್ಣಯಿಸಿ ಅದನ್ನು ಬರೆದಿಡುವುದು ತುಂಬ ಪ್ರಾಮುಖ್ಯ. (ಯಾಕೋ. 4:14; ಅ. ಕೃ. 15:28, 29) ನಿಮ್ಮ ಸಹಾಯಕ್ಕಾಗಿ, ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು ಎಂಬ (ಇಂಗ್ಲಿಷ್) ವಿಡಿಯೋ ಅನ್ನು ತಯಾರಿಸಲಾಗಿದೆ. ಅದನ್ನು ವೀಕ್ಷಿಸಿದ ನಂತರ, ನೀವೇನು ಕಲಿತಿರೋ ಅದನ್ನು ಕೆಳಕಂಡ ಪ್ರಶ್ನೆಗಳ ಸಹಾಯದಿಂದ ಪ್ರಾರ್ಥನಾಪೂರ್ವಕವಾಗಿ ಪುನರ್ವಿಮರ್ಶಿಸಿರಿ.—ಸೂಚನೆ: ಈ ವಿಡಿಯೋದಲ್ಲಿ ಶಸ್ತ್ರಚಿಕಿತ್ಸೆಯ ಚುಟುಕಾದ ದೃಶ್ಯಗಳಿರುವುದರಿಂದ, ಇದನ್ನು ಎಳೆಯ ಮಕ್ಕಳೊಂದಿಗೆ ವೀಕ್ಷಿಸುವುದರ ಬಗ್ಗೆ ಹೆತ್ತವರು ವಿವೇಚನೆ ಬಳಸಬೇಕು.
(1) ವೈದ್ಯಕೀಯ ಕ್ಷೇತ್ರದಲ್ಲಿ ಕೆಲವರು, ರಕ್ತಪೂರಣಗಳ ಬಳಕೆಯ ಬಗ್ಗೆ ಪುನಃ ಮೌಲ್ಯಮಾಪನ ಮಾಡುತ್ತಿರುವುದು ಏಕೆ? (2) ರಕ್ತಪೂರಣಗಳಿಲ್ಲದೆ ನಡೆಸಲಾದ ಮೂರು ಜಟಿಲ ಶಸ್ತ್ರಚಿಕಿತ್ಸೆಗಳ ಉದಾಹರಣೆ ಕೊಡಿ. (3) ರಕ್ತಪೂರಣಗಳನ್ನು ಬಳಸದೆ ರೋಗಿಗಳಿಗೆ ಚಿಕಿತ್ಸೆನೀಡಲು ಲೋಕವ್ಯಾಪಕವಾಗಿ ಎಷ್ಟು ಮಂದಿ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಸಿದ್ಧರಿದ್ದಾರೆಂದು ಸೂಚಿಸಿದ್ದಾರೆ? ಅದನ್ನು ಮಾಡಲು ಅವರೇಕೆ ಸಿದ್ಧರಿದ್ದಾರೆ? (4) ಇತ್ತೀಚೆಗೆ ಆಸ್ಪತ್ರೆಗಳಲ್ಲಿ ನಡೆಸಲಾದ ಅಧ್ಯಯನಗಳು ರಕ್ತದ ಬಳಕೆಯ ಬಗ್ಗೆ ಏನನ್ನು ಪ್ರಕಟಪಡಿಸಿವೆ? (5) ರಕ್ತಪೂರಣಗಳಿಂದಾಗುವ ವೈದ್ಯಕೀಯ ಅಪಾಯಗಳು ಯಾವವು? (6) ರಕ್ತಪೂರಣಗಳ ಬದಲಿಗಳನ್ನು ಬಳಸುವುದರ ಪ್ರಯೋಜನಗಳ ಬಗ್ಗೆ ಅನೇಕ ಶಸ್ತ್ರಚಿಕಿತ್ಸಕರ ತೀರ್ಮಾನವೇನು? (7) ರಕ್ತಹೀನತೆ ಉಂಟಾಗುವುದು ಹೇಗೆ? ಮನುಷ್ಯರಲ್ಲಿ ಅದರ ಅಪಾಯದ ಮಟ್ಟ ಯಾವುದು? ಅದನ್ನು ನೀಗಿಸಲು ಏನು ಮಾಡಸಾಧ್ಯ? (8) ರೋಗಿಯ ದೇಹದಲ್ಲಿ ಕೆಂಪು ರಕ್ತಕಣದ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು? (9) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತನಷ್ಟವನ್ನು ಕಡಿಮೆಮಾಡಲು ಯಾವ ವಿಧಾನಗಳನ್ನು ಬಳಸಲಾಗುತ್ತಿದೆ? (10) ಎಳೆಯ ಮಕ್ಕಳಿಗೆ ಇಲ್ಲವೆ ಜೀವಘಾತಕ ತುರ್ತುಪರಿಸ್ಥಿತಿಗಳಲ್ಲಿ ಇರುವವರಿಗೆ ರಕ್ತಪೂರಣ ಬದಲಿಗಳನ್ನು ಬಳಸುವುದು ಫಲಕಾರಿ ಆಗಿರಬಲ್ಲದೋ? (11) ಉತ್ತಮ ವೈದ್ಯಕೀಯ ಆರೈಕೆಯ ಪ್ರಧಾನ ನೀತಿಸೂತ್ರಗಳಲ್ಲಿ ಒಂದು ಯಾವುದು? (12) ರಕ್ತರಹಿತ ಚಿಕಿತ್ಸಾ ಆಯ್ಕೆಗಳನ್ನು ಕ್ರೈಸ್ತರು ಬಹಳಷ್ಟು ಮುಂಚೆಯೇ ಮಾಡುವುದು ಏಕೆ ಪ್ರಾಮುಖ್ಯ? ನಾವಿದನ್ನು ಹೇಗೆ ಮಾಡಬಲ್ಲೆವು?
ವಿಡಿಯೋದಲ್ಲಿ ತೋರಿಸಲಾದ ಕೆಲವು ಚಿಕಿತ್ಸಾಕ್ರಮಗಳನ್ನು ಸ್ವೀಕರಿಸಬೇಕೋ ಇಲ್ಲವೋ ಎಂಬುದು ಪ್ರತಿಯೊಬ್ಬರು ತಮ್ಮ ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ಹೊಂದಿಕೆಯಲ್ಲಿ ಮಾಡಬೇಕಾದ ವೈಯಕ್ತಿಕ ನಿರ್ಣಯವಾಗಿದೆ. ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ನೀವು ಯಾವ ರೀತಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಚಿಕಿತ್ಸಾಕ್ರಮಗಳನ್ನು ಅಂಗೀಕರಿಸಲು ಸಿದ್ಧರಿದ್ದೀರೆಂಬ ಖಚಿತ ನಿಲುವನ್ನು ತೆಗೆದುಕೊಂಡಿದ್ದೀರೋ? ಈ ವಿಷಯಗಳ ಕುರಿತು ಹೆಚ್ಚು ಪೂರ್ಣವಾದ ಚರ್ಚೆಗಾಗಿ, 2004 ಜೂನ್ 15 ಹಾಗೂ 2000 ಅಕ್ಟೋಬರ್ 15ರ ಕಾವಲಿನಬುರುಜು ಸಂಚಿಕೆಗಳಲ್ಲಿ “ವಾಚಕರಿಂದ ಪ್ರಶ್ನೆಗಳು” ಮತ್ತು ನಮ್ಮ ರಾಜ್ಯದ ಸೇವೆಯ ನವೆಂಬರ್ 2006ರ ಸಂಚಿಕೆಯಲ್ಲಿ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಎಂಬ ಪುರವಣಿ ನೋಡಿ. ನೀವು ಆಯ್ಕೆಮಾಡಿರುವ ಆರೋಗ್ಯಾರೈಕೆ ಏಜೆಂಟರು ಮತ್ತು ಕುಟುಂಬದ ಅವಿಶ್ವಾಸಿ ಸದಸ್ಯರಿಗೆ ನಿಮ್ಮ ನಿರ್ಣಯಗಳ ಬಗ್ಗೆ ಮುಂಚಿತವಾಗಿಯೇ ಪೂರ್ಣ ಮಾಹಿತಿ ಕೊಡಬೇಕು.