ಪ್ರಶ್ನಾ ಚೌಕ
◼ ಯಾವ ಎರಡು ಪ್ರಕಾಶನಗಳನ್ನು ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಅಧ್ಯಯನಮಾಡತಕ್ಕದ್ದು?
ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಮತ್ತು ನಡೆಸಲು ನಮಗಿರುವ ಪ್ರಮುಖ ಸಾಧನವು ಬೈಬಲ್ ಬೋಧಿಸುತ್ತದೆ ಪುಸ್ತಕವಾಗಿದೆ. ಬೇರೊಂದು ಪ್ರಕಾಶನವನ್ನು, ಉದಾಹರಣೆಗೆ ಸೂಕ್ತವಾದ ಟ್ರ್ಯಾಕ್ಟ್‌ವೊಂದನ್ನು ಬಳಸಿ ಬೈಬಲ್ ಅಧ್ಯಯನವನ್ನು ಆರಂಭಿಸಲು ಅಭ್ಯಂತರವಿಲ್ಲ. ಆದರೆ ಅಧ್ಯಯನವನ್ನು ಆದಷ್ಟು ಬೇಗ ಬೈಬಲ್ ಬೋಧಿಸುತ್ತದೆ ಪುಸ್ತಕಕ್ಕೆ ಬದಲಾಯಿಸಲು ಪ್ರಯತ್ನಮಾಡಬೇಕು. ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸಿ ಅಧ್ಯಯನಗಳನ್ನು ಆರಂಭಿಸಿದ್ದರಿಂದ ಗಮನಾರ್ಹ ಫಲಿತಾಂಶಗಳು ಸಿಕ್ಕಿವೆ.
ವಿದ್ಯಾರ್ಥಿಯು ಪ್ರಗತಿ ಮಾಡುತ್ತಿರುವುದಾದರೆ, ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪೂರ್ತಿಗೊಳಿಸಿದ ಬಳಿಕ ದೇವರನ್ನು ಆರಾಧಿಸಿರಿ ಪುಸ್ತಕವನ್ನು ಅಧ್ಯಯನಕ್ಕಾಗಿ ಬಳಸಬೇಕು. (ಕೊಲೊ. 2:7) ಆ ಪುಸ್ತಕದ 2ನೇ ಪುಟ ವಿವರಿಸುವುದು: “ಯಾರು ದೇವರನ್ನು ಪ್ರೀತಿಸುತ್ತಾರೋ ಅವರೆಲ್ಲರೂ ಆತನ ಅಮೂಲ್ಯ ಸತ್ಯಗಳ ‘ಎತ್ತರ ಆಳ ಎಷ್ಟೆಂಬದನ್ನು ಗ್ರಹಿಸುವಂತೆ’ ಬೈಬಲು ಅವರನ್ನು ಪ್ರೋತ್ಸಾಹಿಸುತ್ತದೆ. (ಎಫೆಸ 3:18) ಇದನ್ನು ಮಾಡಲಿಕ್ಕಾಗಿಯೇ ಈ ಪುಸ್ತಕವು ಸಿದ್ಧಪಡಿಸಲ್ಪಟ್ಟಿದೆ. ನೀವು ಆತ್ಮಿಕವಾಗಿ ಬೆಳೆಯುವಂತೆ ಮತ್ತು ದೇವರ ನೀತಿಯ ನೂತನ ಲೋಕದಲ್ಲಿ ಜೀವಿತಕ್ಕೆ ನಡೆಸುವ ಇಕ್ಕಟ್ಟಾದ ದಾರಿಯಲ್ಲಿ ನಡೆಯಲು ಹೆಚ್ಚು ಸನ್ನದ್ಧರಾಗಿರುವಂತೆ ಇದು ನಿಮಗೆ ಸಹಾಯಮಾಡುವುದು ಎಂದು ನಾವು ನಿರೀಕ್ಷಿಸುತ್ತೇವೆ.”
ಆ ಎರಡು ಪುಸ್ತಕಗಳನ್ನು ಮುಗಿಸುವುದರೊಳಗೆ ವಿದ್ಯಾರ್ಥಿಯು ದೀಕ್ಷಾಸ್ನಾನಕ್ಕೆ ಅರ್ಹನಾಗುವುದಾದರೂ ಎರಡನೇ ಪುಸ್ತಕವನ್ನು ಪೂರ್ತಿಗೊಳಿಸುವವರೆಗೂ ಅಧ್ಯಯನವನ್ನು ಮುಂದುವರಿಸಬೇಕು. ವಿದ್ಯಾರ್ಥಿಯು ದೀಕ್ಷಾಸ್ನಾನ ಹೊಂದಿರುವುದಾದರೂ ಅಧ್ಯಯನ ನಡೆಸುವವನು ಆ ತಾಸು, ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನವನ್ನು ವರದಿಸಬಹುದು. ಅಧ್ಯಯನ ಚಾಲಕನ ಜೊತೆ ಹೋಗಿ ಅಧ್ಯಯನದಲ್ಲಿ ಭಾಗವಹಿಸುವ ಪ್ರಚಾರಕನೂ ಆ ತಾಸನ್ನು ವರದಿಸಬಹುದು.