2010ರ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮ
1. (ಎ) ಇತ್ತೀಚಿನ ವರ್ಷಗಳ ವಿಶೇಷ ಸಮ್ಮೇಳನ ದಿನದಲ್ಲಿ ಚರ್ಚಿಸಲಾದ ಶಾಸ್ತ್ರೀಯ ಮುಖ್ಯವಿಷಯಗಳು ಯಾವುವು? (ಬಿ) ಕಳೆದ ವಿಶೇಷ ಸಮ್ಮೇಳನ ದಿನಗಳಲ್ಲಿ ಚರ್ಚಿಸಲಾದ ಯಾವುದೇ ನಿರ್ದಿಷ್ಟ ಮುಖ್ಯಾಂಶಗಳು ಶುಶ್ರೂಷೆಯಲ್ಲಿ ನಿಮಗೆ ನೆರವಾದವೋ?
1 “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ,” “ಒಂದೇ ಹಿಂಡಾಗಿ ದೃಢವಾಗಿ ನಿಲ್ಲಿರಿ,” “ಸತ್ಯಕ್ಕೆ ಸಾಕ್ಷಿ ನೀಡುತ್ತಾ ಇರ್ರಿ,” “ನಾವು ಜೇಡಿಮಣ್ಣು—ಯೆಹೋವನು ನಮ್ಮ ಕುಂಬಾರನು.” (ಫಿಲಿ. 1:9, 10, 27; ಯೋಹಾ. 18:37; ಯೆಶಾ. 64:8) ಇವು, ಹಿಂದೆ ನಡೆದ ವಿಶೇಷ ಸಮ್ಮೇಳನ ದಿನಗಳಲ್ಲಿ ಚರ್ಚಿಸಲಾದ ಅನೇಕ ಮುಖ್ಯವಿಷಯಗಳಲ್ಲಿ ಕೆಲವು. 2010ರ ಸೇವಾ ವರ್ಷದ ವಿಶೇಷ ಸಮ್ಮೇಳನಕ್ಕೆ ಹಾಜರಾಗಲು ನೀವು ಆತುರದಿಂದಿದ್ದೀರೋ? ಅದರ ಮುಖ್ಯವಿಷಯ “ಉಳಿದಿರುವ ಸಮಯವು ಕೊಂಚವೇ” ಎಂದಾಗಿದೆ. ಇದು 1 ಕೊರಿಂಥ 7:29ರ ಮೇಲೆ ಆಧಾರಿತ.
2. ಈ ಸಮ್ಮೇಳನಕ್ಕಾಗಿ ಉತ್ಸಾಹವನ್ನು ಹೇಗೆ ಹುರಿದುಂಬಿಸಬಹುದು?
2 ವಿಶೇಷ ಸಮ್ಮೇಳನ ದಿನದ ತಾರೀಖನ್ನು ನಿಮ್ಮ ಸಭೆಯಲ್ಲಿ ಪ್ರಕಟಿಸಲಾದ ಕೂಡಲೇ ಅದಕ್ಕಾಗಿ ಉತ್ಸಾಹವನ್ನು ಹುರಿದುಂಬಿಸಿರಿ. ಕೆಲವು ಹೆತ್ತವರು ಸಮ್ಮೇಳನಕ್ಕಾಗಿ ಮಕ್ಕಳ ಉತ್ಸಾಹವನ್ನು ಹುರಿದುಂಬಿಸಲು ಮನೆಯ ಕ್ಯಾಲಂಡರಿನಲ್ಲಿ ಆ ತಾರೀಖನ್ನು ಗುರುತಿಸುತ್ತಾರೆ. ಏನೇನು ವಸ್ತುಗಳು ಬೇಕು ಎಂಬುದನ್ನೂ ನಮೂದಿಸುತ್ತಾರೆ. ಅನಂತರ ಆ ಸಮಯಕ್ಕಾಗಿ ಎದುರುನೋಡುತ್ತಿರುತ್ತಾರೆ. ನಿಮ್ಮ ಕುಟುಂಬ ಆರಾಧನೆ ಸಂಜೆಯಲ್ಲಿ ಹಿಂದಿನ ವಿಶೇಷ ಸಮ್ಮೇಳನ ದಿನಗಳಲ್ಲಿ ಬರೆದುಕೊಂಡಿದ್ದ ನೋಟ್ಸ್ನ್ನು ಪುನರಾವರ್ತಿಸಬಹುದು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಪುಟ 13-16ನ್ನು ಪುನಃ ಪರಿಶೀಲಿಸುವ ಮೂಲಕ ಹೃದಯವನ್ನು ನೀವು ಕೂಡ ಸಿದ್ಧಗೊಳಿಸಬಹುದು. ‘ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಲು’ ನಿಮಗೂ ನಿಮ್ಮ ಕುಟುಂಬಕ್ಕೂ ಹೀಗೆ ಸಹಾಯವಾಗುವುದು.—ಲೂಕ 8:18.
3. ಸಾದರ ಪಡಿಸಲಾಗುವ ವಿಷಯಗಳಿಂದ ನಾವು ಹೇಗೆ ಪೂರ್ಣವಾಗಿ ಪ್ರಯೋಜನ ಹೊಂದಬಲ್ಲೆವು?
3 ಕಲಿತದ್ದನ್ನು ಅನ್ವಯಿಸಿರಿ: ಸಮ್ಮೇಳನದ ನಂತರ ಕೇಳಿಬರುವ ಒಂದು ಸಾಮಾನ್ಯ ಶ್ಲಾಘನೆ “ಎಷ್ಟೊಂದು ಉತ್ತಮ ಕಾರ್ಯಕ್ರಮ!” ಎಂಬದೇ. ಇದು ಯಾವಾಗಲೂ ಸತ್ಯವೇ ಯಾಕಂದರೆ ಯೆಹೋವನ ಹೇರಳ ಒದಗಿಸುವಿಕೆಗಳಲ್ಲಿ ಇದು ಒಂದು. (ಜ್ಞಾನೋ. 10:22) ಸಮ್ಮೇಳನದಲ್ಲಿ ದೊರೆತ ಮಾಹಿತಿಯಿಂದ ಪ್ರಯೋಜನ ಸಿಗಬೇಕಾದರೆ ನಾವದನ್ನು ಮನನ ಮಾಡಬೇಕು ಮತ್ತು ಮನಸ್ಸಿನಲ್ಲಿ ಉಳಿಸಿಕೊಳ್ಳಬೇಕು. (ಲೂಕ 8:15) ಸಮ್ಮೇಳನದಿಂದ ಮನೆಗೆ ಹಿಂತೆರಳುವಾಗ ಸಮಯವನ್ನು ತಕ್ಕೊಂಡು ನಿಮ್ಮ ಕುಟುಂಬದೊಂದಿಗೆ ಅಥವಾ ಜೊತೆಯಲ್ಲಿ ಪ್ರಯಾಣಿಸುವವರೊಂದಿಗೆ ಕಾರ್ಯಕ್ರಮವನ್ನು ಚರ್ಚಿಸಿರಿ. ನಿಮ್ಮ ಶುಶ್ರೂಷೆಯಲ್ಲಿ ನೆರವಾಗುವಂಥ ಗುರಿಗಳನ್ನು ಮತ್ತು ವಿಷಯಗಳನ್ನು ಚರ್ಚಿಸಿರಿ. ಹೀಗೆ ಮಾಡುವುದರಿಂದ, ಸಮ್ಮೇಳನದಲ್ಲಿ ದೊರೆತ ಮಾಹಿತಿಯು ಅದರ ನಂತರವೂ ನಿಮಗೆ ಪ್ರಯೋಜಕಾರಿಯಾಗಿರುವುದು.—ಯಾಕೋ. 1:25.
4. ಈ ಸಮ್ಮೇಳನವು ನಮಗೆ ವಿಶೇಷ ಸಂದರ್ಭವೇಕೆ?
4 ನಮಗೆ ನಿಜವಾಗಿ ಬೇಕಾಗಿರುವ ಒಂದು ವ್ಯಾವಹಾರಿಕ ಕೊಡುಗೆಯು ನಮಗೆ ಸಿಗುವಾಗ ವಿಶೇಷ ಹಿಗ್ಗು ಉಂಟಾಗುತ್ತದೆ. ನಮ್ಮ ಮುಂದಿನ ವಿಶೇಷ ಸಮ್ಮೇಳನ ದಿನದಲ್ಲಿ ಯೆಹೋವನು ನಮಗಾಗಿ ಏನನ್ನು ಕಾದಿರಿಸಿದ್ದಾನೆಂದು ನಾವು ಆತುರದಿಂದ ಎದುರುನೋಡುವುದಿಲ್ಲವೇ? ಅದು ಎಲ್ಲಾ ರೀತಿಯಲ್ಲಿ ವ್ಯಾವಹಾರಿಕ ಸಲಹೆಗಳಾಗಿರುವವು ಎಂಬ ಖಾತ್ರಿ ನಮಗಿರಬಲ್ಲದು. ಯೆಹೋವನು ನಮಗೆ ನೇಮಿಸಿದ ಕೆಲಸವನ್ನು ಮಾಡಲಿಕ್ಕಾಗಿ ಉತ್ತೇಜನ ಮತ್ತು ತರಬೇತಿಯ ರೂಪದಲ್ಲಿ ತಕ್ಕದಾದ ಕೊಡುಗೆಯನ್ನೇ ನೀಡುತ್ತಾನೆಂದು ನಾವು ನಿರೀಕ್ಷಿಸಸಾಧ್ಯವಿದೆ.—2 ತಿಮೊ. 4:2; ಯಾಕೋ. 1:17.