ಬೇರೆ ಭಾಷೆಗಳನ್ನಾಡುವವರಿಗೆ ನೆರವು
1. ನಮ್ಮ ನೇಮಿತ ಟೆರಿಟೊರಿಯಲ್ಲಿ ಸಾರುವಾಗ ಯಾವುದಕ್ಕೆ ಅವಕಾಶವಿರುತ್ತದೆ?
1 ಟೆರಿಟೊರಿಯಲ್ಲಿ ನಾವು ಪ್ರಧಾನವಾಗಿ ಗಮನ ಕೊಡುವುದು ನಮ್ಮ ಸಭೆಯ ಭಾಷೆಯ ಜನರಿಗೆ. ಹಾಗಿದ್ದರೂ ಬೇರೆ ಭಾಷೆಯನ್ನಾಡುವ ಜನರನ್ನು ಗಮನದಲ್ಲಿಟ್ಟು ಅವರಿಗೂ ರಾಜ್ಯ ಸಂದೇಶವನ್ನು ತಿಳಿಸಲು ನಾವು ಮಾರ್ಗಗಳಿಗಾಗಿ ಹುಡುಕಬೇಕು. ಹೀಗೆ ಯೆಹೋವನಂತೆಯೇ ನಾವು ಟೆರಿಟೊರಿಯಲ್ಲಿ ಎಲ್ಲರಿಗೆ ಪಕ್ಷಪಾತವಿಲ್ಲದೆ ಪ್ರೀತಿ ತೋರಿಸುವೆವು. (ಕೀರ್ತ. 83:18; ಅ. ಕಾ. 10:34, 35) ಆದರೆ ನಾವು ಬೇರೆ ಭಾಷೆಯನ್ನಾಡುವವರಿಗೆ ನೆರವು ನೀಡುವುದು ಹೇಗೆ?
2. ಯಾವ ಉಪಯುಕ್ತ ಪುಸ್ತಿಕೆಯನ್ನು ನಮಗೆ ಒದಗಿಸಲಾಗಿದೆ, ಮತ್ತು ಅದನ್ನು ಬಳಸಲು ನಾವು ಹೇಗೆ ತಯಾರಿಸಬಹುದು?
2 ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆ ಬಳಸಿ: ಈ ಪುಸ್ತಿಕೆಯನ್ನು ಯಾವಾಗಲೂ ನಿಮ್ಮೊಟ್ಟಿಗೆ ತಕ್ಕೊಂಡು ಹೋಗಿ. ಅದರಲ್ಲಿರುವ ಭಿನ್ನಭಿನ್ನ ವೈಶಿಷ್ಟ್ಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ ಮತ್ತು ಅದನ್ನು ಬಳಸಿರಿ. ನಿಮ್ಮ ಟೆರಿಟೊರಿಯಲ್ಲಿ ಆಡಲಾಗುವ ಇತರ ಪ್ರಧಾನ ಭಾಷೆಗಳಲ್ಲಿ ಸಾಹಿತ್ಯ ಲಭ್ಯವಿರುವಲ್ಲಿ ಕೆಲವೊಂದನ್ನು ನಿಮ್ಮೊಟ್ಟಿಗಿಡುವುದು ಪ್ರಾಯೋಗಿಕ. ಆ ಪುಸ್ತಿಕೆಯಲ್ಲಿರುವ ಸಂದೇಶವನ್ನು ಬಳಸಿದ ಬಳಿಕ ಮನೆಯವನಿಗೆ ಅದನ್ನು ನೀಡಬಹುದು. ಪುನರ್ಭೇಟಿಗಾಗಿ ಪಕ್ಕಾ ಏರ್ಪಾಡು ಮಾಡಿರಿ.
3. ಪರಭಾಷೆಯನ್ನಾಡುವ ಆಸಕ್ತ ವ್ಯಕ್ತಿಯನ್ನು ಭೇಟಿಯಾಗುವಲ್ಲಿ ನಮಗೆ ಯಾವ ಜವಾಬ್ದಾರಿಯಿದೆ?
3 ಸಂಪರ್ಕಿಸಲು ಏರ್ಪಾಡುಗಳು: ಆ ವ್ಯಕ್ತಿಗೆ ದೇವರಲ್ಲಿ ಮತ್ತು ಆತನ ವಾಕ್ಯವಾದ ಬೈಬಲಲ್ಲಿ ನಿಜವಾಗಿ ಆಸಕ್ತಿಯಿದೆಯೆಂದು ನಮಗೆ ನಿಶ್ಚಯವಾದ ಬಳಿಕ ಆ ಭಾಷೆಯ ಪ್ರಚಾರಕನೊಬ್ಬನು ಅವರನ್ನು ಭೇಟಿಮಾಡಲಾಗುವಂತೆ ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ನಾವು ತುಂಬಿಸಬೇಕು. ಅದನ್ನು ತಡಮಾಡದೆ ಸಭಾ ಸೆಕ್ರಿಟರಿಗೆ ಕೊಡಬೇಕು. ಅವರು ಅದನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವರು. ಸೆಕ್ರಿಟರಿ ಈ ಫಾರ್ಮ್ನ ನಕಲುಪ್ರತಿಯನ್ನು ಸೇವಾ ಮೇಲ್ವಿಚಾರಕರಿಗೆ ಕೊಡಬಹುದು. ಹೀಗೆ ಒಂದು ನಿರ್ದಿಷ್ಟ ಭಾಷಾ ಗುಂಪಿನ ಜನರು ಆಸಕ್ತಿ ತೋರಿಸುತ್ತಿದ್ದಾರೆಂದು ಅವರಿಗೂ ತಿಳಿದಿರುವುದು. ಆಸಕ್ತ ವ್ಯಕ್ತಿಯನ್ನು ಅದೇ ಭಾಷೆಯಾಡುವ ಪ್ರಚಾರಕನು ಸಂಪರ್ಕಿಸುವ ವರೆಗೆ S-43 ಫಾರ್ಮ್ ಕೊಟ್ಟ ಪ್ರಚಾರಕನೇ ಪುನರ್ಭೇಟಿ ಮಾಡುತ್ತಾ ಇರಬಹುದು. ಕೆಲವು ವಿದ್ಯಮಾನಗಳಲ್ಲಿ ಬೈಬಲ್ ಅಧ್ಯಯನವನ್ನೂ ನಡೆಸಬಹುದು.
4. ಬೇರೆ ಭಾಷೆಯ ಸಾಹಿತ್ಯ ಪಡೆಯಲು ಯಾವ ಏರ್ಪಾಡು ಇದೆ?
4 ಬೇರೆ ಭಾಷೆಗಳಲ್ಲಿ ಸಾಹಿತ್ಯ: ಸಭೆಗಳು ಬೇರಾವುದೇ ಭಾಷೆಗಳ ಸಾಹಿತ್ಯದ ದೊಡ್ಡ ಸ್ಟಾಕ್ ಅನ್ನು ಇಟ್ಟುಕೊಳ್ಳಬಾರದು. ಆದರೆ ಒಂದು ನಿರ್ದಿಷ್ಟ ಭಾಷಾ ಗುಂಪಿನವರು ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿರುವುದು ಸೇವಾ ಮೇಲ್ವಿಚಾರಕರಿಗೆ ಖಚಿತವಾಗುವಲ್ಲಿ, ಪ್ರಚಾರಕರ ಉಪಯೋಗಕ್ಕಾಗಿ ಆ ಭಾಷೆಯಲ್ಲಿ ಮಿತ ಪ್ರಮಾಣದ ಸಾಹಿತ್ಯವನ್ನು ಸ್ಟಾಕ್ನಲ್ಲಿಡಬಹುದು. ಅಲ್ಲದೆ, ನೂರಾರು ಭಾಷೆಗಳ ಸಾಹಿತ್ಯವಿರುವ www.watchtower.org. ವೆಬ್ಸೈಟ್ನಿಂದ ಬೇಕಾದ ಭಾಷೆಯ ಸಾಹಿತ್ಯದ ಪ್ರಿಂಟ್ಔಟ್ ತೆಗೆಯಬಹುದು.
5. ಪರಭಾಷೀಯರ ಆಸಕ್ತಿಯನ್ನು ಬೆಳೆಸುವುದರಲ್ಲಿ ಸಭೆಯ ಪಾತ್ರವೇನು?
5 ಸಭೆಯ ಪಾತ್ರ: ಸಾಧ್ಯವಿರುವಲ್ಲಿ ತಮ್ಮ ಭಾಷೆಯಲ್ಲಿ ಕೂಟಗಳು ನಡೆಯುವ ಸಭೆಗೆ ಹಾಜರಾಗಲು ಆಸಕ್ತರನ್ನು ಉತ್ತೇಜಿಸುವುದು ಅತ್ಯುತ್ತಮ. ಆದರೆ ಕೆಲವೊಂದು ಸ್ಥಳಗಳಲ್ಲಿ ಆ ಭಾಷೆಯಲ್ಲಿ ಕೂಟಗಳನ್ನು ನಡೆಸುವ ಯಾವುದೇ ಸಭೆ ಹತ್ತಿರದಲ್ಲಿರಲಿಕ್ಕಿಲ್ಲ. ಹಾಗಿರುವಾಗ ಅವರು ನಿಮ್ಮ ಸಭೆಯ ಕೂಟಗಳನ್ನೇ ಹಾಜರಾಗುವಂತೆ ನೀವು ಆಮಂತ್ರಿಸಬಹುದು. ಅವರನ್ನು ಪ್ರೀತಿಯಿಂದ ಬರಮಾಡುವುದು ಮತ್ತು ವೈಯಕ್ತಿಕ ಆಸಕ್ತಿ ತೋರಿಸುವುದು, ಅವರು ಕ್ರಮವಾಗಿ ಹಾಜರಾಗುವಂತೆ ಉತ್ತೇಜಿಸಬಹುದು. ಮೊದಮೊದಲು ಭಾಷಾ ಹಾಗೂ ಸಾಂಸ್ಕೃತಿಕ ತಡೆ ಇರಬಹುದಾದರೂ, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಂಘಟನೆಯಲ್ಲಿ ನಿಜ ಕ್ರೈಸ್ತ ಪ್ರೀತಿಯನ್ನು ತೋರಿಸಲು ಯಾವುದೇ ತಡೆಗಳಿಲ್ಲ.—ಚೆಫ. 3:9; ಯೋಹಾ. 13:35.
6. ಸ್ಥಳಿಕ ಭಾಷೆಯನ್ನಾಡುವುದು ಏಕೆ ಉಪಯುಕ್ತ?
6 ನೀವು ಸ್ಥಳಿಕ ಭಾಷೆಯನ್ನಾಡುತ್ತೀರೋ? ಇಲ್ಲದಿದ್ದಲ್ಲಿ ನೀವು ಆ ಭಾಷೆ ಕಲಿತು, ಆಸಕ್ತ ಜನರಿಗೆ ಉತ್ತಮ ನೆರವನ್ನು ಕೊಡಲು ಶಕ್ತರಾಗುವಿರಿ. ಸ್ಥಳಿಕ ಭಾಷೆ ತಿಳಿದಿರುವುದರಿಂದ ವಿರೋಧಿಗಳೊಂದಿಗೆ ಮಾತಾಡುವಾಗಲೂ ತುಂಬ ಸಹಾಯವಾಗುತ್ತದೆ. ಸಾಮಾನ್ಯವಾಗಿ ಜನರು, ತಮ್ಮ ಭಾಷೆಯನ್ನಾಡುವವರಿಗೆ ಹೆಚ್ಚು ಗಮನಕೊಡುತ್ತಾರೆ.—ಅ. ಕಾ. 22:1, 2.
7. ಪರಭಾಷಾ ಗುಂಪನ್ನು ಯಾವಾಗ ರಚಿಸಬಹುದು, ಮತ್ತು ಇದನ್ನು ಹೇಗೆ ನಿರ್ಧರಿಸಲಾಗುತ್ತದೆ?
7 ಪರಭಾಷಾ ಗುಂಪಿನ ರಚನೆ: ನಿರ್ದಿಷ್ಟ ಭಾಷೆಯೊಂದರ ಗುಂಪನ್ನು ರಚಿಸಲು ನಾಲ್ಕು ಆವಶ್ಯಕತೆಗಳಿವೆ. (1) ಆ ಭಾಷೆಯನ್ನಾಡುವ ಆಸಕ್ತರು ಸಾಕಷ್ಟಿರಬೇಕು ಮತ್ತು ಆ ಭಾಷಾಕ್ಷೇತ್ರದಲ್ಲಿ ಬೆಳವಣಿಗೆಯಾಗುವ ಸಾಧ್ಯತೆಗಳಿರಬೇಕು. (2) ಆ ಭಾಷೆ ತಿಳಿದಿರುವ ಅಥವಾ ಕಲಿಯುತ್ತಿರುವ ಪ್ರಚಾರಕರ ಚಿಕ್ಕ ಗುಂಪಿರಬೇಕು. (3) ಮುಂದಾಳತ್ವ ವಹಿಸಲು ಮತ್ತು ವಾರಕ್ಕೆ ಕಡಿಮೆಪಕ್ಷ ಒಂದು ಕೂಟವನ್ನಾದರೂ ಆ ಭಾಷೆಯಲ್ಲಿ ನಿರ್ವಹಿಸಲು ಒಬ್ಬ ಅರ್ಹ ಹಿರಿಯನೋ ಶುಶ್ರೂಷಾ ಸೇವಕನೋ ಲಭ್ಯವಿರಬೇಕು. (4) ಒಂದು ಸಭೆಯ ಹಿರಿಯರ ಮಂಡಲಿ ಆ ಗುಂಪಿನ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಾಗಿರಬೇಕು. ಈ ಎಲ್ಲ ಆವಶ್ಯಕತೆಗಳು ತಕ್ಕಮಟ್ಟಿಗೆ ಪೂರೈಸಲ್ಪಡುವಲ್ಲಿ ಆಗ ಆ ಹಿರಿಯರ ಮಂಡಲಿಯು ಆ ಗುಂಪಿನ ವಿವರಗಳ ಬಗ್ಗೆ ಬ್ರಾಂಚ್ ಆಫೀಸಿಗೆ ಪತ್ರಬರೆದು, ಆ ನಿರ್ದಿಷ್ಟ ಭಾಷಾ ಗುಂಪಿನ ಜವಾಬ್ದಾರಿ ಹೊತ್ತಿರುವ ಸಭೆಯಾಗಿ ವಿಧಿಬದ್ಧವಾದ ಮನ್ನಣೆಗೆ ವಿನಂತಿಸುವುದು. (ಸಂಘಟಿತರು ಪು. 106-107 ನೋಡಿ.) ಆ ಗುಂಪಿನ ಮುಂದಾಳತ್ವ ವಹಿಸುವ ಹಿರಿಯ ಇಲ್ಲವೆ ಶುಶ್ರೂಷಾ ಸೇವಕನನ್ನು “ಗುಂಪು ಮೇಲ್ವಿಚಾರಕ” ಅಥವಾ “ಗುಂಪು ಸೇವಕ” ಎಂದು ಪರಿಗಣಿಸಲಾಗುವುದು. ಆ ಗುಂಪನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದೇ.
8. ನಮ್ಮ ನೇಮಿತ ಟೆರಿಟೊರಿಯಲ್ಲಿ ಪರಭಾಷೆಯವರು ತೋರಿಸುವ ಆಸಕ್ತಿಯನ್ನು ಬೆಳೆಸುವುದು ಏಕೆ ಒಂದು ಸುಯೋಗ?
8 ನಮ್ಮ ನೇಮಿತ ಟೆರಿಟೊರಿಯಲ್ಲಿ ಪರಭಾಷೆಯನ್ನಾಡುವವರಿಗೆ ಸಹಾಯಮಾಡುವುದು, ನಮ್ಮ ಮಾದರಿಯಾದ ಯೇಸು ಕ್ರಿಸ್ತನು ಜಾರಿಗೆತಂದ ಲೋಕವ್ಯಾಪಕ ಸಾರುವ ಅಭಿಯಾನದ ಮುಖ್ಯ ಭಾಗವಾಗಿದೆ. ಹುರುಪಿನಿಂದ ನಾವು ನಮ್ಮ ಪಾಲನ್ನು ಮಾಡೋಣ ಮತ್ತು ಯೆಹೋವನು ಜನಾಂಗಗಳನ್ನು ನಡುಗಿಸುತ್ತಾ ಇಷ್ಟವಸ್ತುಗಳನ್ನು ಒಳತರುವುದನ್ನು ನೋಡೋಣ.—ಹಗ್ಗಾ. 2:7.