ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಹಾಯ ಮಾಡುವ ಸಂಗಡಿಗರಾಗಿ
ಏಕೆ ಪ್ರಾಮುಖ್ಯ: ಜೊತೆಯಾಗಿ ಸೇವೆ ಮಾಡುವುದರ ಮಹತ್ವ ಯೇಸುವಿಗೆ ತಿಳಿದಿತ್ತು. ಆದ್ದರಿಂದ ಅವನು ತನ್ನ ಶಿಷ್ಯರಲ್ಲಿ ಎಪ್ಪತ್ತು ಮಂದಿಯನ್ನು ನೇಮಿಸಿದಾಗ ತನಗಿಂತ ಮುಂದೆ ಹೋಗಿ ಸಾರಲು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. (ಲೂಕ 10:1) ಮನೆಯವರಿಗೆ ಹೇಗೆ ಉತ್ತರಿಸುವುದು ಎಂದು ಪ್ರಚಾರಕನಿಗೆ ತಿಳಿಯದಿದ್ದಾಗ ಅಥವಾ ಯಾವುದೇ ಕಷ್ಟಕರ ಪರಿಸ್ಥಿತಿ ಎದುರಾದಾಗ ಜೊತೆಗಿರುವ ಸಂಗಡಿಗನು ಅಗತ್ಯವಿರುವ ನೆರವನ್ನು ನೀಡಬಲ್ಲನು. (ಪ್ರಸಂ. 4:9, 10) ಸಂಗಡಿಗನು ತನ್ನ ಅನುಭವಗಳನ್ನು ಹಂಚಿಕೊಳ್ಳಬಹುದು, ಕೆಲವೊಮ್ಮೆ ಸಲಹೆಗಳನ್ನು ಸಹ ನೀಡಬಹುದು. ಹೀಗೆ ಜೊತೆ ಪ್ರಚಾರಕನು ಇನ್ನೂ ಹೆಚ್ಚು ಪರಿಣಾಮಕಾರಿ ಸೌವಾರ್ತಿಕನಾಗಲು ನೆರವಾಗಬಹುದು. (ಜ್ಞಾನೋ. 27:17) ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವ ಸಮಯದಲ್ಲಿ ಭಕ್ತಿವರ್ಧಕ ಸಂಭಾಷಣೆ ಮಾಡುವ ಮೂಲಕ ಕೂಡ ಉತ್ತೇಜಿಸಬಹುದು.—ಫಿಲಿ. 4:8.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಸೇವೆ ಮುಗಿದ ನಂತರ, ಒಬ್ಬ ಉತ್ತಮ ಸಂಗಡಿಗನಲ್ಲಿರಬೇಕಾದ ಯಾವ ಗುಣಗಳನ್ನು ನೀವು ನಿಮ್ಮ ಸಂಗಡಿಗನಲ್ಲಿ ಗಮನಿಸಿದಿರೆಂದು ತಿಳಿಸಿ.