ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಸಿಹಿಸುದ್ದಿ ಕಿರುಹೊತ್ತಗೆಯಿಂದ ಅಧ್ಯಯನ ಮಾಡುವುದು ಹೇಗೆಂದು ತೋರಿಸಿ
ಏಕೆ ಪ್ರಾಮುಖ್ಯ: ನಾವು ಉಚಿತ ಬೈಬಲ್ ಅಧ್ಯಯನ ಮಾಡುತ್ತೇವೆ ಎಂದು ಹೇಳಿದರೆ ತುಂಬ ಜನರಿಗೆ ಅರ್ಥನೇ ಆಗುವುದಿಲ್ಲ. ಜನರನ್ನು ಒಂದೆಡೆ ಸೇರಿಸಿ ನಡೆಸುವ ಬೈಬಲ್ ಕ್ಲಾಸ್ ಅಂತ ಅವರು ನೆನಸಬಹುದು. ಆದ್ದರಿಂದ ಬೈಬಲ್ ಅಧ್ಯಯನ ಮಾಡುತ್ತೇವೆ ಅಂತ ಹೇಳುವ ಬದಲು ಹಾಗಂದರೆ ಏನಂತ ಮಾಡಿ ತೋರಿಸಿ. ಕೆಲವೇ ನಿಮಿಷಗಳಲ್ಲಿ, ಬೈಬಲ್ ಅಧ್ಯಯನ ಅಂದರೇನು, ಅದೆಷ್ಟು ಸುಲಭ, ಅದರ ಪ್ರಯೋಜನ ಏನು? ಅಂತ ಅವರ ಮನೆ ಬಾಗಿಲಲ್ಲೇ ತೋರಿಸಬಹುದು.
ಹೇಗೆ ಮಾಡುವುದು:
• ಮೊದಲು ನಿಮ್ಮ ಪರಿಚಯ ಮಾಡಿಕೊಳ್ಳಿ. ನಂತರ “ಅನೇಕರು ತಮ್ಮ ಭವಿಷ್ಯದ ಬಗ್ಗೆ ತುಂಬ ಚಿಂತೆ ಮಾಡುತ್ತಾರೆ, ನಿಮಗೂ ಆ ಚಿಂತೆ ಇದೆಯಾ?” ಎಂದು ಮನೆಯವರನ್ನು ಕೇಳಿ.
• ಅವರು ತಮ್ಮ ಅಭಿಪ್ರಾಯ ಹೇಳಲಿ. ನಂತರ ಬೈಬಲ್ ಬೋಧಿಸುತ್ತದೆ ಪುಸ್ತಕದ ಎರಡನೆಯ ಪುಟದಲ್ಲಿರುವ ಅಥವಾ ಸಿಹಿಸುದ್ದಿ ಕಿರುಹೊತ್ತಗೆಯ ಕೊನೆಯ ಪುಟದಲ್ಲಿರುವ ಪರಿವಿಡಿಯನ್ನು ಮನೆಯವನಿಗೆ ತೋರಿಸಿ, ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆಂದು ಕೇಳಿ. ಭವಿಷ್ಯದ ಬಗ್ಗೆ ಮತ್ತು ಇತರ ಪ್ರಾಮುಖ್ಯ ವಿಷಯಗಳ ಬಗ್ಗೆ ಬೈಬಲ್ ಏನು ಕಲಿಸುತ್ತದೋ ಅದನ್ನು ಈ ಸಾಹಿತ್ಯ ಸುಲಭವಾಗಿ ಅರ್ಥ ಆಗುವ ರೀತಿಯಲ್ಲಿ ವಿವರಿಸಿದೆ ಎಂದು ಹೇಳಿ.
• ನೀವು ತೋರಿಸಿದ ಸಾಹಿತ್ಯದ ಒಂದು ಪ್ರತಿಯನ್ನು ಅವರಿಗೆ ಕೊಟ್ಟು ಅವರು ಆರಿಸಿದಂಥ ಅಧ್ಯಾಯ ತೋರಿಸಿ. ಅಧ್ಯಾಯದ ಆರಂಭದಲ್ಲಿರುವ ಪ್ರಶ್ನೆಗಳಿಗೆ ಅಥವಾ ಶೀರ್ಷಿಕೆಯಲ್ಲಿರುವ ಪ್ರಶ್ನೆಗೆ ಉತ್ತರ ಕೆಳಗಿನ ಪ್ಯಾರಗಳಲ್ಲಿದೆ ಎಂದು ಹೇಳಿ.
• ಮನೆಯವರು ಒಪ್ಪಿದರೆ, ಮೊದಲ ಪ್ಯಾರವನ್ನು ಅವರಿಗೆ ಓದಲು ಹೇಳಿ, ನಂತರ ಅದಕ್ಕಿರುವ ಪ್ರಶ್ನೆಯನ್ನು ಕೇಳಿ. ಪ್ಯಾರದಲ್ಲಿರುವ ಉತ್ತರವನ್ನು ಕಂಡುಹಿಡಿಯಲು ಸಹಾಯ ಮಾಡಿ. ಉತ್ತರಕ್ಕೆ ತಕ್ಕ ವಚನಗಳನ್ನು ಬೈಬಲಿಂದ ತೆರೆದು ಓದಿ, ಚರ್ಚಿಸಿ. ನಿಮ್ಮ ಪ್ರತಿಯಲ್ಲಿ ಉತ್ತರಕ್ಕೆ ಗುರುತು ಹಾಕಿರುವುದನ್ನೂ ತೋರಿಸಿ.
• ಮುಂದಿನ ಪ್ಯಾರ ಚರ್ಚಿಸುವಾಗ ತಮ್ಮ ಸ್ವಂತ ಮಾತಿನಲ್ಲಿ ಉತ್ತರ ಹೇಳುವಂತೆ ಉತ್ತೇಜಿಸಿ.
• ಅವರು ಕೊಟ್ಟ ಉತ್ತರ ಚೆನ್ನಾಗಿತ್ತು ಎಂದು ಪ್ರಶಂಸಿಸಿ. ಉಳಿದ ಪ್ಯಾರಗಳನ್ನು ಚರ್ಚಿಸಲು ಪುನರ್ಭೇಟಿಗೆ ಏರ್ಪಾಡು ಮಾಡಿ.
• ಸಮಯ, ಸಂದರ್ಭ ನೋಡಿಕೊಂಡು jw.org ವೆಬ್ಸೈಟ್ನಲ್ಲಿರುವ ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ಹೊಸ ಬೈಬಲ್ ಅಧ್ಯಯನ ಆರಂಭಿಸಲು ನೀವು ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸಿ.—ಫಿಲಿ. 2:13.
• ಸೇವೆಗೆ ಹೋದಾಗೆಲ್ಲಾ, ಒಂದು ಬಾರಿಯಾದರೂ ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಸಿಹಿಸುದ್ದಿ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನ ಹೇಗೆ ಮಾಡುವುದೆಂದು ಮನೆಯವನಿಗೆ ತೋರಿಸಿ ಅಥವಾ ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸಿ.