ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ಸಭ್ಯವಾಗಿ ವರ್ತಿಸಿ
ಕ್ರೈಸ್ತರು ಲೋಕದ ಜನರಿಗೆ ‘ರಂಗಸ್ಥಳದ ಪ್ರೇಕ್ಷಣೀಯ ನೋಟವಾಗಿದ್ದಾರೆ.’ (1ಕೊರಿಂ 4:9) ಆದ್ದರಿಂದ ಕೆಲವೊಮ್ಮೆ ಮನೆಯವರು ನಮ್ಮನ್ನು ಕಿಟಕಿಯಿಂದ ನೋಡುತ್ತಿರಬಹುದು ಅಥವಾ ನಮ್ಮ ಮಾತನ್ನು ಹಿಂದಿನಿಂದ ಕೇಳಿಸಿಕೊಳ್ಳುತ್ತಿರಬಹುದು. ಕೆಲವು ಮನೆಗಳಲ್ಲಿ ಕ್ಯಾಮರಾ ಇರುತ್ತದೆ. ಇದರಿಂದ ಮನೆಯವರು ನಾವೇನು ಮಾಡುತ್ತಿದ್ದೇವೆಂದು ಮನೆ ಒಳಗಿನಿಂದಲೇ ನೋಡಬಹುದು ಮತ್ತು ನಮ್ಮ ಮಾತನ್ನು ಕೇಳಿಸಿಕೊಳ್ಳಬಹುದು ಅಥವಾ ರೆಕಾರ್ಡ್ ಮಾಡಬಹುದು. ಆದ್ದರಿಂದ ಸೇವೆಯಲ್ಲಿ ಮನೆಬಾಗಿಲಲ್ಲಿ ನಿಂತಿರುವಾಗ ಸಭ್ಯವಾಗಿ ವರ್ತಿಸಬೇಕು. ಹೇಗೆ?—2ಕೊರಿಂ 6:3.
ನಿಮ್ಮ ನಡತೆಯ ಮೂಲಕ (ಫಿಲಿ 1:27):
ಕಿಟಕಿಯಿಂದ ಒಳಗೆ ನೋಡದಿರುವ ಮೂಲಕ ಮನೆಯವರಿಗೆ ಗೌರವ ತೋರಿಸಿ. ಮನೆಬಾಗಿಲಲ್ಲಿ ನಿಂತಾಗ ತಿನ್ನೋದು, ಕುಡಿಯೋದು, ಫೋನ್ ಮಾಡುವುದು, ಮೆಸೇಜ್ ಮಾಡುವುದು ಮಾಡಬೇಡಿ
ನಿಮ್ಮ ಮಾತಿನ ಮೂಲಕ (ಎಫೆ 4:29):
ಯಾವ ವಿಷಯವನ್ನು ನೀವು ಮನೆಯವರ ಮುಂದೆ ಹೇಳುವುದಿಲ್ಲವೋ ಅದನ್ನು ಮನೆಬಾಗಿಲಲ್ಲಿ ನಿಂತಿರುವಾಗಲೂ ಹೇಳಬೇಡಿ. ಕೆಲವರು ಪ್ರಚಾರಕರು ಮನೆಬಾಗಿಲನ್ನು ತಲುಪಿದಾಗ ಬೇರೇನೂ ಮಾತಾಡದೆ ಮನೆಯವರ ಹತ್ತಿರ ಏನು ಮಾತಾಡಬೇಕೆಂದು ಯೋಚಿಸುತ್ತಿರುತ್ತಾರೆ