ಅಜರ್‌ಬೈಜಾನ್ ನಲ್ಲಿ ಪ್ರಚಾರಕರು ಸಿಹಿಸುದ್ದಿ ಕಿರುಹೊತ್ತಗೆಯನ್ನು ನೀಡುತ್ತಿದ್ದಾರೆ
ಮಾದರಿ ನಿರೂಪಣೆಗಳು
ಈ ಲೋಕ ಯಾರ ಕೈಯಲ್ಲಿದೆ? (T-33)
ಪ್ರಶ್ನೆ: ಈ ಲೋಕ ದೇವರ ಕೈಯಲ್ಲಿದೆ ಅಥವಾ ನಿಯಂತ್ರಣದಲ್ಲಿದೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಅದೇ ನಿಜ ಆಗಿದ್ದರೆ ಈ ಭೂಮಿಯಲ್ಲಿ ಇಷ್ಟೊಂದು ಕಷ್ಟ ಇರುತ್ತಿತ್ತಾ? ದೇವರು ಭೂಮಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಾಗ ಏನೆಲ್ಲಾ ಮಾಡುತ್ತಾನೆ ಅಂತ ಆತನೇ ಪವಿತ್ರ ಗ್ರಂಥದಲ್ಲಿ ತಿಳಿಸಿದ್ದಾನೆ. ಅದನ್ನು ನಾನು ನಿಮಗೆ ತೋರಿಸ್ಲಾ?
ವಚನ: ಕೀರ್ತ 37:10, 11
ಕರಪತ್ರ ಕೊಡುವಾಗ ಹೀಗೆ ಹೇಳಿ: ಈಗ ಈ ಲೋಕ ಯಾರ ಕೈಯಲ್ಲಿದೆ ಮತ್ತು ಮುಂದೇನಾಗಲಿದೆ ಎಂದು ಈ ಕರಪತ್ರದಲ್ಲಿ ತಿಳಿಸಲಾಗಿದೆ.
ಸತ್ಯವನ್ನು ಕಲಿಸಿ
ಪ್ರಶ್ನೆ: ದೇವರು ಈ ಭೂಮಿಯಲ್ಲಿ ಮನುಷ್ಯರನ್ನು ಏಕೆ ಸೃಷ್ಟಿ ಮಾಡಿದನು?
ವಚನ: ಕೀರ್ತ 37:29
ಸತ್ಯ: ಈ ಭೂಮಿಯಲ್ಲಿ ಶಾಶ್ವತವಾಗಿ ಬದುಕಬೇಕಂತ ದೇವರು ಮನುಷ್ಯರನ್ನು ಸೃಷ್ಟಿ ಮಾಡಿದನು.
ದೇವರಿಂದ ನಿಮಗೊಂದು ಸಿಹಿಸುದ್ದಿ!
ಪ್ರಶ್ನೆ: ಸಿಹಿಸುದ್ದಿ ಅಥವಾ ಸಂತೋಷದ ಸುದ್ದಿ ನಮಗೆ ಎಲ್ಲಿ ಕೇಳಲು ಸಿಗುತ್ತದೆ? [ಸಿಹಿಸುದ್ದಿ ಕೇಳಲು ಬಯಸುತ್ತೀರಾ? ಎಂಬ ವಿಡಿಯೋ ತೋರಿಸಿ]
ವಚನ: ಯೆಶಾ 52:7
ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಈ ಕಿರುಹೊತ್ತಗೆಯಲ್ಲಿ ಪವಿತ್ರ ಗ್ರಂಥ ಹೇಳುವ “ಶುಭದ ಸುವಾರ್ತೆ” ಅಥವಾ ಸಿಹಿಸುದ್ದಿ ಇದೆ.
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.