ನಮ್ಮ ಕ್ರೈಸ್ತ ಜೀವನ
ಯೋನ ಪುಸ್ತಕದಿಂದ ಪಾಠಗಳು
ನಮಗೆ ಅಮೂಲ್ಯ ಪಾಠಗಳನ್ನು ಕಲಿಸಲಿಕ್ಕಾಗಿ ಯೆಹೋವನು ತನ್ನ ವಾಕ್ಯವಾದ ಬೈಬಲಿನಲ್ಲಿ ನಂಬಿಗಸ್ತ ಸ್ತ್ರೀ-ಪುರುಷರ ಜೀವನ ಕಥೆಗಳನ್ನು ಬರೆಸಿಟ್ಟಿದ್ದಾನೆ. (ರೋಮ 15:4) ಯೋನನ ಪುಸ್ತಕದಿಂದ ನೀವೇನು ಕಲಿತಿದ್ದೀರಿ? ಕುಟುಂಬ ಆರಾಧನೆ: ಯೋನ—ಯೆಹೋವನ ಕರುಣೆಯಿಂದ ಕಲಿಯಿರಿ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಕೇಳಿ:
ಈ ವಿಡಿಯೋದಲ್ಲಿರುವ ಮೂರು ಪ್ರಚಾರಕರು ಯಾವ ಸಮಸ್ಯೆಗಳನ್ನು ಎದುರಿಸಿದರು?
ನಮಗೆ ಶಿಸ್ತು ಸಿಕ್ಕಿದಾಗ ಅಥವಾ ಸೇವಾ ಸುಯೋಗಗಳನ್ನು ಕಳೆದುಕೊಂಡಾಗ ಯೋನನ ಪುಸ್ತಕ ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ? (1ಸಮು 16:7; ಯೋನ 3:1, 2)
ನಮ್ಮ ಟೆರಿಟೊರಿಯ ಬಗ್ಗೆ ಸಕಾರಾತ್ಮಕ ನೋಟವನ್ನು ಕಾಪಾಡಿಕೊಳ್ಳುವಂತೆ ಯೋನನ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತದೆ? (ಯೋನ 4:11; ಮತ್ತಾ 5:7)
ನಾವು ದೀರ್ಘಕಾಲಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಾಗ ಯೋನನ ಅನುಭವ ನಮಗೆ ಹೇಗೆ ಸಾಂತ್ವನ ನೀಡುತ್ತದೆ? (ಯೋನ 2:1, 2, 7, 9)
ಬೈಬಲನ್ನು ಓದಿ ಧ್ಯಾನಿಸುವುದರ ಮೌಲ್ಯದ ಬಗ್ಗೆ ಈ ವಿಡಿಯೋದಿಂದ ನೀವೇನು ಕಲಿತಿದ್ದೀರಿ?