ಬೈಬಲಿನಲ್ಲಿರುವ ರತ್ನಗಳು | ಮಾರ್ಕ 3-4
ಸಬ್ಬತ್ ದಿನದಲ್ಲಿ ವಾಸಿಮಾಡುವುದು
ಯೆಹೂದಿ ಧಾರ್ಮಿಕ ಮುಖಂಡರ ಮನೋಭಾವವನ್ನು ನೋಡಿ ಯೇಸು ಯಾಕೆ ಬಹಳವಾಗಿ ದುಃಖಿಸಿದನು? ಯಾಕೆಂದರೆ ಅವರು ಸಬ್ಬತ್ ದಿನದಂದು ಇದು ಮಾಡಬಾರದು ಅದು ಮಾಡಬಾರದು ಎಂದು ಅಷ್ಟು ಮುಖ್ಯವಲ್ಲದ ನೂರೆಂಟು ನಿಯಮಗಳನ್ನು ಮಾಡಿದ್ದರು. ಉದಾಹರಣೆಗೆ, ಒಂದು ಕೀಟವನ್ನು ಕೊಲ್ಲುವುದು ತಪ್ಪಾಗಿತ್ತು. ಜೀವಕ್ಕೆ ಅಪಾಯ ಇದ್ದರೆ ಮಾತ್ರ ಚಿಕಿತ್ಸೆ ಕೊಡಬಹುದಿತ್ತು. ಮೂಳೆ ಮುರಿದಿದ್ದರೆ ಅಥವಾ ಉಳುಕಿದ್ದರೆ ಅದನ್ನು ಸಬ್ಬತ್ ದಿನದಂದು ಸರಿಮಾಡುವ ಹಾಗಿರಲಿಲ್ಲ. ಆದ್ದರಿಂದ ಕೈಬತ್ತಿಹೋಗಿದ್ದ ಮನುಷ್ಯನ ಮೇಲೆ ಆ ಧಾರ್ಮಿಕ ಮುಖಂಡರಿಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ ಅನ್ನುವುದು ಸ್ಪಷ್ಟ.