ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮಾರ್ಚ್‌ ಪು. 7
  • ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವಿಡಿಯೋ ಬಳಸಿ ಕಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಕಲಿಸಲು ದೃಶ್ಯ ಸಾಧನಗಳನ್ನು ಉಪಯೋಗಿಸಿರಿ
    2006 ನಮ್ಮ ರಾಜ್ಯದ ಸೇವೆ
  • ಕಲಿಕೆಯಲ್ಲಿ ವಿಡಿಯೊಗಳನ್ನು ಬಳಸಿ
    2013 ನಮ್ಮ ರಾಜ್ಯದ ಸೇವೆ
  • ಭಾಗ 2ರಲ್ಲಿ ನೀವೇನು ಕಲಿತ್ರಿ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮಾರ್ಚ್‌ ಪು. 7
ಒಬ್ಬ ಸಹೋದರಿ ತನ್ನ ಬೈಬಲ್‌ ವಿದ್ಯಾರ್ಥಿಗೆ ವಿಡಿಯೋ ತೋರಿಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ

ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ

ನಾವು ಕಲಿಸುವ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ದೃಶ್ಯ ಸಾಧನಗಳು ಸಹಾಯ ಮಾಡುತ್ತವೆ. ಇದನ್ನೇ ನಮ್ಮ ಮಹೋನ್ನತ ಬೋಧಕನಾದ ಯೆಹೋವನು ಸಹ ಪ್ರಾಮುಖ್ಯ ಪಾಠಗಳನ್ನು ಕಲಿಸುವಾಗ ಉಪಯೋಗಿಸಿದನು. (ಆದಿ 15:5; ಯೆರೆ 18:1-6) ಮಹಾ ಬೋಧಕನಾದ ಯೇಸು ಕೂಡ ದೃಶ್ಯ ಸಾಧನಗಳನ್ನು ಬಳಸಿದನು. (ಮತ್ತಾ 18:2-6; 22:19-21) ಇತ್ತೀಚಿಗೆ ವಿಡಿಯೋಗಳನ್ನು ಉಪಯೋಗಿಸುವುದರಿಂದ ತುಂಬ ಪ್ರಯೋಜನ ಸಿಕ್ಕಿದೆ. ನೀವು ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುವಾಗ ವಿಡಿಯೋಗಳನ್ನು ಚೆನ್ನಾಗಿ ಉಪಯೋಗಿಸುತ್ತೀರಾ?

ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯಲ್ಲಿರುವ ಪಾಠಗಳನ್ನು ಕಲಿಸಲು ಸಹಾಯ ಮಾಡುವ ಹತ್ತು ವಿಡಿಯೋಗಳನ್ನು ತಯಾರಿಸಲಾಗಿದೆ. ಹೆಚ್ಚಿನಾಂಶ, ಪ್ರತಿಯೊಂದು ವಿಡಿಯೋವಿನ ಶೀರ್ಷಿಕೆಯು ಕಿರುಹೊತ್ತಗೆಯಲ್ಲಿ ದಪ್ಪಕ್ಷರದಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಪ್ರಶ್ನೆ ತರ ಇದೆ. ಈ ಕಿರುಹೊತ್ತಗೆಯನ್ನು ನಮ್ಮ ವೆಬ್‌ಸೈಟಲ್ಲಿ ತೆಗೆದು ನೋಡಿದರೆ ಅಲ್ಲಿ ಯಾವ ವಿಡಿಯೋವನ್ನು ಯಾವಾಗ ತೋರಿಸಬೇಕೆಂದು ಕೊಡಲಾಗಿದೆ. ಜೊತೆಗೆ ನಮ್ಮ ಬೋಧನಾ ಸಲಕರಣೆಯಲ್ಲಿ ನಾವು ಅಧ್ಯಯನ ಮಾಡಲು ಉಪಯೋಗಿಸುವ ಬೇರೆ ಪ್ರಕಾಶನಗಳು ಸಹ ಇವೆ. ಈ ಪ್ರಕಾಶನಗಳಲ್ಲಿರುವ ಮಾಹಿತಿಗೆ ಪೂರಕವಾಗಿ ಬೇರೆ ವಿಡಿಯೋಗಳನ್ನು ಸಹ ತಯಾರಿಸಲಾಗಿದೆ.

ನೀವು ನಿಮ್ಮ ವಿದ್ಯಾರ್ಥಿ ಜೊತೆ ಚರ್ಚಿಸುತ್ತಿರುವ ವಿಷಯ ಅವರಿಗೆ ಅರ್ಥಮಾಡಿಕೊಳ್ಳಲು ಕಷ್ಟ ಆಗುತ್ತಿದೆಯಾ? ಅಥವಾ ನಿಮ್ಮ ಬೈಬಲ್‌ ವಿದ್ಯಾರ್ಥಿ ಯಾವುದಾದರೂ ಪರೀಕ್ಷೆಯನ್ನು ಎದುರಿಸುತ್ತಿದ್ದಾರಾ? jw.orgನಲ್ಲಿ ಮತ್ತು JW ಪ್ರಸಾರದಲ್ಲಿರುವ ಯಾವ ವಿಡಿಯೋದಿಂದ ಅವರಿಗೆ ಸಹಾಯ ಆಗಬಹುದು ಎಂದು ಹುಡುಕಿ. ಅಂಥ ವಿಡಿಯೋ ಸಿಕ್ಕಿದರೆ ನೀವು ಅದನ್ನು ವಿದ್ಯಾರ್ಥಿ ಜೊತೆ ನೋಡಿ ಚರ್ಚಿಸಬಹುದು.

ಪ್ರತಿ ತಿಂಗಳು ಹೊಸ-ಹೊಸ ವಿಡಿಯೋಗಳು ಬರುತ್ತಾ ಇರುತ್ತವೆ. ನೀವು ಆ ವಿಡಿಯೋಗಳನ್ನು ನೋಡುವಾಗ, ‘ಬೇರೆಯವರಿಗೆ ಕಲಿಸುವಾಗ ನಾನು ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು’ ಎಂದು ಯೋಚಿಸಿ.

ಸಿಹಿಸುದ್ದಿ ಕಿರುಹೊತ್ತಗೆಯಲ್ಲಿರುವ ಮಾಹಿತಿಗೆ ಪೂರಕವಾಗಿರುವ ಕೆಲವು ವಿಡಿಯೋಗಳು

  • ದೇವರಿಗೊಂದು ಹೆಸರಿದೆಯಾ? ವಿಡಿಯೋ

    ಪಾಠ 2

    ದೇವರಿಗೊಂದು ಹೆಸರಿದೆಯಾ?

  • ಬೈಬಲನ್ನು ಯಾರು ಬರೆಸಿದರು? ವಿಡಿಯೋ

    ಪಾಠ 3

    ಬೈಬಲನ್ನು ಯಾರು ಬರೆಸಿದರು?

  • ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ವಿಡಿಯೋ

    ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?

  • ಯೇಸು ಏಕೆ ಜೀವಕೊಟ್ಟನು? ವಿಡಿಯೋ

    ಪಾಠ 4

    ಯೇಸು ಏಕೆ ಜೀವಕೊಟ್ಟನು?

  • ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ವಿಡಿಯೋ

    ಪಾಠ 5

    ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು?

  • ಸತ್ತ ಮೇಲೆ ಏನಾಗುತ್ತದೆ? ವಿಡಿಯೋ

    ಪಾಠ 6

    ಸತ್ತ ಮೇಲೆ ಏನಾಗುತ್ತದೆ?

  • ದೇವರ ರಾಜ್ಯ ಅಂದರೇನು? ವಿಡಿಯೋ

    ಪಾಠ 7

    ದೇವರ ರಾಜ್ಯ ಅಂದರೇನು?

  • ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ವಿಡಿಯೋ

    ಪಾಠ 8

    ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

  • ದೇವರು ಎಲ್ಲ ರೀತಿಯ ಆರಾಧನೆಯನ್ನು ಒಪ್ಪುತ್ತಾನಾ? ವಿಡಿಯೋ

    ಪಾಠ 10

    ದೇವರು ಎಲ್ಲ ರೀತಿಯ ಆರಾಧನೆಯನ್ನು ಒಪ್ಪುತ್ತಾನಾ?

  • ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ? ವಿಡಿಯೋ

    ಪಾಠ 12

    ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ