ನಮ್ಮ ಕ್ರೈಸ್ತ ಜೀವನ
ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ
ಬೈಬಲನ್ನು ಓದುವಾಗ ಒಂದು ಘಟನೆ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳೋದು ಹೇಗೆ? ಹಿನ್ನಲೆ ಏನು, ಯಾರ ಬಗ್ಗೆ ಹೇಳ್ತಿದೆ, ಅವರು ಏನು ಹೇಳಿದ್ರು, ಯಾಕೆ ಹಾಗೆ ಮಾಡಿದ್ರು ಅಂತ ತಿಳುಕೊಳ್ಳಲು ಪ್ರಯತ್ನಿಸಿ. ಓದುವ ವಿಷಯಗಳನ್ನು ಚಿತ್ರಿಸಿಕೊಳ್ಳಿ. ಆ ಘಟನೆಗಳನ್ನು ಕಣ್ಣಾರೆ ಕಂಡಂತೆ, ಧ್ವನಿಯನ್ನು ಕೇಳಿಸಿಕೊಂಡಂತೆ ಮತ್ತು ಅವರ ಜಾಗದಲ್ಲಿ ನೀವೇ ಇದ್ದೀರೇನೋ ಎಂಬಂತೆ ಕಲ್ಪಿಸಿಕೊಳ್ಳಿ.
ಬೈಬಲಲ್ಲಿ ಇರೋ ನಿಧಿಯನ್ನು ಅಗೆದು ತೆಗೆಯಿರಿ—ತುಣುಕು ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಯೋಸೇಫ ಮತ್ತು ಅವನ ಅಣ್ಣಂದಿರ ಮಧ್ಯ ಒಡಕು ಬರಲು ಕಾರಣ ಏನಿರಬಹುದು?
ಯೋಸೇಫನ ಅಣ್ಣಂದಿರಲ್ಲಿ ದುಡುಕಿನ ಸ್ವಭಾವ ಯಾಕೆ ಇದ್ದಿರಬಹುದು?
ಯೋಸೇಫನ ತಂದೆ ಯಾಕೋಬನ ಬಗ್ಗೆ ಬೈಬಲಿನಿಂದ ಏನು ಗೊತ್ತಾಗುತ್ತೆ?
ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ವಿಷಯದಲ್ಲಿ ಯಾಕೋಬ ತನ್ನ ಮಕ್ಕಳಿಗೆ ಯಾವ ಒಳ್ಳೇ ಮಾದರಿ ಇಟ್ಟನು?
ಈ ವಿಡಿಯೋದಿಂದ ನೀವು ಯಾವ ಪ್ರಯೋಜನ ಪಡಕೊಂಡ್ರಿ?