ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 13
  • ಸಮುವೇಲನಿಂದ ನಾವೇನು ಕಲಿಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮುವೇಲನಿಂದ ನಾವೇನು ಕಲಿಬಹುದು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದ” ಬಾಲಕ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದವನು’
    ಅವರ ನಂಬಿಕೆಯನ್ನು ಅನುಕರಿಸಿ
  • ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನು ಸಮುವೇಲನೊಂದಿಗೆ ಮಾತಾಡಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 13
ಚಿತ್ರಗಳು: “ಸಮುವೇಲನಿಂದ ಕಲಿಯೋಣ” ಅನ್ನೋ ವಿಡಿಯೋದಲ್ಲಿ 1. ಡ್ಯಾನಿ. 2. ಪುಟ್ಟ ಸಮುವೇಲ.

ನಮ್ಮ ಕ್ರೈಸ್ತ ಜೀವನ

ಸಮುವೇಲನಿಂದ ನಾವೇನು ಕಲಿಬಹುದು?

ಸಮುವೇಲ ಕೊನೇ ತನಕ ಯೆಹೋವನಿಗೆ ನಿಯತ್ತಾಗಿದ್ದ. ಅವನು ಚಿಕ್ಕ ಹುಡುಗನಾಗಿದ್ದಾಗ ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸನ ಜೊತೆ ಸೇರಿ ಕೆಟ್ಟವನಾಗಲಿಲ್ಲ. (1ಸಮು 2:22-26) ಅವನು ಹಾಗೇ ಬೆಳೆಯುತ್ತಾ ಬಂದ, ಯೆಹೋವ ಅವನ ಜೊತೆ ಇದ್ದನು. (1ಸಮು 3:19) ಅವನಿಗೆ ವಯಸ್ಸಾದ್ರೂ, ಅವನ ಮಕ್ಕಳು ಯೆಹೋವನನ್ನ ಬಿಟ್ಟುಹೋದ್ರೂ ಅವನು ಯೆಹೋವನಿಗೆ ನಿಯತ್ತಾಗಿದ್ದ.—1ಸಮು 8:1-5.

ಸಮುವೇಲನಿಂದ ನಾವೇನು ಕಲಿಬಹುದು? ಮಕ್ಕಳೇ, ನಿಮ್ಮ ಮನಸ್ಸಲ್ಲಿ ಏನಿದೆ, ನಿಮಗೆ ಯಾವ ಕಷ್ಟ ಇದೆ ಅಂತ ಯೆಹೋವ ಚೆನ್ನಾಗಿ ಅರ್ಥಮಾಡಿಕೊಳ್ತಾರೆ. ನಿಮಗೆ ಸಹಾಯ ಮಾಡ್ತಾರೆ. (ಯೆಶಾ 41:10, 13) ಹೆತ್ತವರೇ, ನಿಮ್ಮ ಮಕ್ಕಳು ಯೆಹೋವನಿಂದ ದೂರ ಹೋಗಿದ್ರೆ ಸಮುವೇಲನ ತರ ಧೈರ್ಯ ತಂದ್ಕೊಳ್ಳಿ. ತನ್ನ ಮಕ್ಕಳು ದೇವರ ಮಾತನ್ನ ಕೇಳೋ ತರ ಮಾಡೋದು ಸಮುವೇಲನ ಕೈಯಲ್ಲಿ ಇರಲಿಲ್ಲ. ಮಕ್ಕಳ ವಿಷಯನ ದೇವರಿಗೆ ಬಿಟ್ಟುಬಿಟ್ಟ, ಅವನು ನಿಯತ್ತಾಗಿದ್ದು ದೇವರಿಗೆ ಇಷ್ಟ ಆಗೋ ತರ ನಡೆದುಕೊಳ್ತಿದ್ದ. ನೀವೂ ಸಮುವೇಲನ ತರ ಇರಿ. ಆಗ ನಿಮ್ಮ ಮಕ್ಕಳು ನಿಮ್ಮನ್ನ ನೋಡಿ ಯೆಹೋವನ ಹತ್ರ ಬರಬಹುದು.

ಸಮುವೇಲನಿಂದ ಕಲಿಯೋಣ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • “ಸಮುವೇಲನಿಂದ ಕಲಿಯೋಣ” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಪುಟ್ಟ ಸಮುವೇಲ ಕಟ್ಟಿಗೆಗಳನ್ನ ಎತ್ತಿಕೊಂಡು ಪವಿತ್ರ ಡೇರೆಯ ಅಂಗಳದಲ್ಲಿ ಹೋಗ್ತಿದ್ದಾನೆ.

    ಚಿಕ್ಕ ಹುಡುಗನಾಗಿದ್ದಾಗ ಸಮುವೇಲ ಹೇಗೆ ಧೈರ್ಯ ತೋರಿಸಿದ?

  • “ಸಮುವೇಲನಿಂದ ಕಲಿಯೋಣ” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಡ್ಯಾನಿ ಅವನ ಅಣ್ಣ ಮಾಡ್ತಿರೋ ಇಬ್ಬಗೆಯ ಜೀವನದ ಬಗ್ಗೆ ಮಾತಾಡೋಕೆ ಅವನ ಹತ್ರ ಹೋಗ್ತಿದ್ದಾನೆ.

    ಡ್ಯಾನಿ ಹೇಗೆ ಧೈರ್ಯ ತೋರಿಸಿದ?

  • “ಸಮುವೇಲನಿಂದ ಕಲಿಯೋಣ” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ವಯಸ್ಸಾಗಿರೋ ಪ್ರವಾದಿ ಸಮುವೇಲ.

    ವಯಸ್ಸಾದ್ರೂ ಸಮುವೇಲ ಹೇಗೆ ಒಳ್ಳೇ ಮಾದರಿಯಾಗಿದ್ದ?

  • “ಸಮುವೇಲನಿಂದ ಕಲಿಯೋಣ” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಡ್ಯಾನಿ ಜೊತೆ ಸಾರ್ವಜನಿಕ ಸಾಕ್ಷಿಕಾರ್ಯ ಮುಗಿಸಿದ ಮೇಲೆ ಅವನ ಅಪ್ಪ ಅಮ್ಮ ನಿಂತಿದ್ದಾರೆ.

    ಸರಿಯಾದ ದಾರಿಯಲ್ಲಿ ನಡೆಯುವವರ ಜೊತೆ ಯೆಹೋವ ಯಾವಾಗಲೂ ಇರುತ್ತಾನೆ

    ಡ್ಯಾನಿಯ ಅಪ್ಪ-ಅಮ್ಮ ಹೇಗೆ ಒಳ್ಳೇ ಮಾದರಿ ಇಟ್ರು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ