ನಮ್ಮ ಕ್ರೈಸ್ತ ಜೀವನ
ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ
ಈ ಕೊನೇ ದಿನಗಳಲ್ಲಿ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಬೇಕಾಗಿರೋ ಸಹಾಯವನ್ನ ದೇವರ ವಾಕ್ಯ ನಮಗೆ ಕೊಡುತ್ತೆ. (2ತಿಮೊ 3:1, 16, 17) ಆದ್ರೆ ಕೆಲವೊಮ್ಮೆ ಆ ಸನ್ನಿವೇಶಕ್ಕೆ ತಕ್ಕ ಬೈಬಲ್ ತತ್ವಗಳನ್ನ ನಾವು ಹುಡುಕಬೇಕಾಗುತ್ತೆ. ಉದಾಹರಣೆಗೆ, ಹೆತ್ತವರೇ, ಮಕ್ಕಳನ್ನ ಬೆಳೆಸೋಕೆ ನಿಮಗೆ ಸಹಾಯ ಬೇಕಾ? ಯುವಜನರೇ, ನಿಮಗೆ ಕೆಲವೊಮ್ಮೆ ದೇವರ ಮೇಲೆ ನಂಬಿಕೆ ಕಾಪಾಡಿಕೊಳ್ಳೋಕೆ ಕಷ್ಟ ಆಗ್ತಿದ್ಯಾ? ನಿಮ್ಮಲ್ಲಿ ಯಾರಾದ್ರೂ ಸಂಗಾತಿಯನ್ನ ಕಳೆದುಕೊಂಡ ದುಃಖದಲ್ಲಿದ್ದೀರಾ? ಇಂಥ ಸನ್ನಿವೇಶಗಳನ್ನ ನಿಭಾಯಿಸೋಕೆ ಸಹಾಯ ಮಾಡೋ ಬೈಬಲ್ ತತ್ವಗಳು jw.orgನಲ್ಲಿ ಸಿಗುತ್ತೆ.—ಜ್ಞಾನೋ 2:3-6.
jw.orgನಲ್ಲಿ ಬೈಬಲ್ ಬೋಧನೆಗಳು ಅನ್ನೋ ಟ್ಯಾಬ್ ಒತ್ತಿ. (1ನೇ ಚಿತ್ರ ನೋಡಿ.) ಅದರಲ್ಲಿ ನಿಮಗಿಷ್ಟವಾದ ವಿಷಯವನ್ನ ಆರಿಸಿಕೊಳ್ಳಿ ಅಥವಾ ಲೈಬ್ರರಿ > ಲೇಖನ ಸರಣಿಗಳು ಒತ್ತಿ. ಅದರಲ್ಲಿ ನಿಮಗಿಷ್ಟವಾದ ವಿಷಯವನ್ನ ಆಯ್ಕೆ ಮಾಡಿಕೊಳ್ಳಿ. (2ನೇ ಚಿತ್ರ ನೋಡಿ.) JW ಲೈಬ್ರರಿಯಲ್ಲೂ ನೀವು ಹೀಗೇ ಹುಡುಕಬಹುದು.a ಆಮೇಲೆ ಆ ಲೇಖನಗಳನ್ನ ಓದಿ ಆನಂದಿಸಬಹುದು. ನಿಮಗೆ ಬೇಕಾಗಿರೋ ವಿಷಯದ ಬಗ್ಗೆ ಹುಡುಕೋಕೆ jw.orgನಲ್ಲಿ ಹುಡುಕು ಅನ್ನೋ ಟ್ಯಾಬ್‌ನಲ್ಲೂ ನಿಮಗೆ ಬೇಕಾಗಿರೋ ವಿಷಯವನ್ನ ಟೈಪ್ ಮಾಡಬಹುದು.
ಹುಡುಕಿ ಅನ್ನೋ ಟ್ಯಾಬ್‌ನಲ್ಲಿ ಈ ಕೆಳಗಿನ ವಿಷಯಗಳನ್ನ ಟೈಪ್ ಮಾಡಿ, ಅದರಲ್ಲಿ ಬರೋ ಯಾವ ಲೇಖನಗಳನ್ನ ಓದಬೇಕು ಅಂದುಕೊಂಡಿದ್ದೀರೋ ಅದನ್ನ ಬರೆದಿಡಿ.
ಮಕ್ಕಳನ್ನ ಬೆಳೆಸುವುದು
ಯುವಜನರಿಗೆ ಕಾಡೋ ಖಿನ್ನತೆ
ಸಂಗಾತಿ ತೀರಿಕೊಂಡಾಗ
a ಕೆಲವು ಲೇಖನ ಸರಣಿಗಳಲ್ಲಿ ಅನೇಕ ಲೇಖನಗಳಿವೆ. ಆದ್ರೆ ಅದರಲ್ಲಿ ಹೆಚ್ಚಿನ ಲೇಖನಗಳು ಸದ್ಯಕ್ಕೆ jw.orgನಲ್ಲಿ ಮಾತ್ರ ಸಿಗುತ್ತೆ.