ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 7
  • ವೈದ್ಯಕೀಯ ತುರ್ತು ಪರಿಸ್ಥಿತಿಗೆ ಈಗಲೇ ತಯಾರಾಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೈದ್ಯಕೀಯ ತುರ್ತು ಪರಿಸ್ಥಿತಿಗೆ ಈಗಲೇ ತಯಾರಾಗಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ನೀವದನ್ನು ಮುಂದೂಡುತ್ತಿದ್ದೀರೊ?
    2010 ನಮ್ಮ ರಾಜ್ಯದ ಸೇವೆ
  • ನಿಮ್ಮ ಆಯ್ಕೆಗಳು ನಿಮಗೆ ತಿಳಿದಿವೆಯೋ?
    2009 ನಮ್ಮ ರಾಜ್ಯದ ಸೇವೆ
  • ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ನೆರವನ್ನು ನೀಡಲು ಹೊಸ ಒದಗಿಸುವಿಕೆ
    2004 ನಮ್ಮ ರಾಜ್ಯದ ಸೇವೆ
  • ನಿಮಗಿರುವ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತೊ?
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 7

ನಮ್ಮ ಕ್ರೈಸ್ತ ಜೀವನ

ವೈದ್ಯಕೀಯ ತುರ್ತು ಪರಿಸ್ಥಿತಿಗೆ ಈಗಲೇ ತಯಾರಾಗಿ

ಯಾಕೆ ತಯಾರಾಗಿರಬೇಕು? ನಮಗೆ ದಿಢೀರಂತ ಹುಷಾರು ತಪ್ಪಿ ಆಸ್ಪತ್ರೆಗೆ ಸೇರಿಸಬೇಕಾಗಿ ಬರಬಹುದು. ಆಗ ಒಳ್ಳೆ ಚಿಕಿತ್ಸೆ ಸಿಗಬೇಕಂದ್ರೆ ತಯಾರಿ ಮಾಡ್ಕೊಂಡಿರೋದು ತುಂಬ ಮುಖ್ಯ. ಇದ್ರಿಂದ ನಾವು ಜೀವವನ್ನ ಗೌರವಿಸ್ತೀವಿ ಮತ್ತು ರಕ್ತದ ಬಗ್ಗೆ ಯೆಹೋವ ದೇವರು ಕೊಟ್ಟಿರೋ ನಿಯಮವನ್ನ ಪಾಲಿಸ್ತೀವಿ ಅಂತ ತೋರಿಸಿಕೊಡಕ್ಕಾಗುತ್ತೆ.—ಅಕಾ 15:28, 29.

ತಯಾರಾಗಿರೋಕೆ ಏನೆಲ್ಲಾ ಮಾಡಬೇಕು?

  • ಪ್ರಾರ್ಥನೆ ಮಾಡಿ ಅಡ್ವಾನ್ಸ್‌ ಹೆಲ್ತ್‌ ಕೇರ್‌ ಡೈರೆಕ್ಟಿವ್‌ ಕಾರ್ಡ್‌ (DPA) ಭರ್ತಿಮಾಡಿ.a ದೀಕ್ಷಾಸ್ನಾನ ತಗೊಂಡಿರೋ ಎಲ್ಲ ಪ್ರಚಾರಕರೂ ಈ ಕಾರ್ಡನ್ನ ನಿಮ್ಮ ಸಭೆಯ ಸಾಹಿತ್ಯ ಸೇವಕನಿಂದ ತಗೊಳ್ಳಬಹುದು. ಅಪ್ರಾಪ್ತವಯಸ್ಸಿನ ತಮ್ಮ ಮಕ್ಕಳಿಗಾಗಿ ಹೆತ್ತವರು ಐಡೆಂಟಿಟಿ ಕಾರ್ಡ್‌ (ic) ಪಡೆದುಕೊಳ್ಳಬಹುದು

  • ನೀವು ಗರ್ಭಿಣಿಯಾಗಿದ್ದರೆ, ಇನ್ಫರ್ಮೇಷನ್‌ ಫಾರ್‌ ಎಕ್ಸ್‌ಪೆಕ್ಟಂಟ್‌ ಮದರ್ಸ್‌ (ತಾಯಿ ಆಗಲಿರುವವರಿಗೆ ಮಾಹಿತಿ) (S-401) ಫಾರ್ಮ್‌ ಅನ್ನು ಹಿರಿಯರ ಹತ್ರ ಕೇಳಿ. ಇದು ನಿಮಗೆ ಈಗ ಮತ್ತು ಹೆರಿಗೆಯ ಸಮಯದಲ್ಲಿ ವೈದ್ಯಕೀಯ ತೊಂದರೆಗಳಾದ್ರೆ ಸರಿಯಾದ ನಿರ್ಧಾರಗಳನ್ನ ಮಾಡೋಕೆ ಸಹಾಯ ಮಾಡುತ್ತೆ

  • ನೀವು ಆಸ್ಪತ್ರೆಗೆ ಅಡ್ಮಿಟ್‌ ಆಗಬೇಕಂತ ಇದ್ರೆ ಅಥವಾ ನಿಮಗೆ ಆಪರೇಷನ್‌ ಮಾಡುವಾಗ ರಕ್ತ ಕೊಡಬೇಕಾಗಬಹುದು ಅಂತ ಡಾಕ್ಟರ್‌ ಹೇಳಿದ್ರೆ ಮುಂಚೆನೇ ಹಿರಿಯರಿಗೆ ವಿಷಯ ತಿಳಿಸಿ. ಅಷ್ಟೇ ಅಲ್ಲ, ಡಾಕ್ಟರ್‌ಗೂ ‘ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮ ಹತ್ರ ಮಾತಾಡ್ತಾರೆ’ ಅಂತ ಹೇಳಿ.

ಹಿರಿಯರು ಯಾವೆಲ್ಲ ಸಹಾಯ ಮಾಡ್ತಾರೆ? ಡಿ.ಪಿ.ಎ ಕಾರ್ಡ್‌ ಭರ್ತಿ ಮಾಡೋಕೆ ಸಹಾಯ ಬೇಕಿದ್ದಾಗ ಸಹಾಯ ಮಾಡ್ತಾರೆ. ಆದ್ರೆ ನಿಮ್ಮ ಪರವಾಗಿ ತೀರ್ಮಾನಗಳನ್ನ ಮಾಡಲ್ಲ ಅಥವಾ ‘ಹೀಗೆ ಮಾಡಿದ್ರೆ ಚೆನ್ನಾಗಿರುತ್ತೆ, ಹಾಗ್‌ ಮಾಡಿದ್ರೆ ಚೆನ್ನಾಗಿರುತ್ತೆ’ ಅಂತ ತಮ್ಮ ಅಭಿಪ್ರಾಯಗಳನ್ನೂ ಹೇಳಲ್ಲ. (ರೋಮ 14:12; ಗಲಾ 6:5) ರಕ್ತ ತಗೊಳ್ಳಬೇಕಾದ ಸನ್ನಿವೇಶ ಬರಬಹುದು ಅಂತ ನಿಮಗೆ ಗೊತ್ತಾದ ತಕ್ಷಣ ಹಿರಿಯರಿಗೆ ಹೇಳಿದ್ರೆ ಅವರು ಆಸ್ಪತ್ರೆ ಸಂಪರ್ಕ ಸಮಿತಿಯವರಿಗೆ (HLC) ವಿಷಯ ತಿಳಿಸ್ತಾರೆ.

ಹೆಚ್‌.ಎಲ್‌.ಸಿ.ಯವರು ಹೇಗೆ ಸಹಾಯ ಮಾಡ್ತಾರೆ? ಅವರು ವೈದ್ಯಕೀಯ ಮತ್ತು ಕಾನೂನು ಸಿಬ್ಬಂದಿಗಳ ಹತ್ರ ನಮ್ಮ ಧಾರ್ಮಿಕ ನಂಬಿಕೆ ಬಗ್ಗೆ, ನಾವ್ಯಾಕೆ ರಕ್ತ ತಗೊಳ್ಳಲ್ಲ ಅನ್ನೋದರ ಬಗ್ಗೆ ಮಾತಾಡೋಕೆ ತರಬೇತಿ ಪಡೆದುಕೊಂಡಿದ್ದಾರೆ. ರಕ್ತ ಕೊಡದೇ ಹೇಗೆ ಚಿಕಿತ್ಸೆ ಮಾಡಬಹುದು ಅಂತ ಆಸ್ಪತ್ರೆಯ ಸಿಬ್ಬಂದಿ ಜೊತೆ ಅವರು ಚರ್ಚೆ ಮಾಡ್ತಾರೆ. ಡಾಕ್ಟರ್‌ಗಳು ಅದಕ್ಕೆ ಒಪ್ಪಿಕೊಳ್ಳದಿದ್ರೆ, ರಕ್ತ ರಹಿತ ಚಿಕಿತ್ಸೆ ಕೊಡೋ ಬೇರೆ ಡಾಕ್ಟರ್‌ಗಳ ಬಗ್ಗೆ ನಿಮಗೆ ಮಾಹಿತಿ ಕೊಡ್ತಾರೆ.

ಚಿಕಿತ್ಸೆಯಲ್ಲಿ ರಕ್ತದ ಬಳಕೆ: ಸರಿಯಾದ ನಿರ್ಧಾರ ಮಾಡೋದು ಹೇಗೆ? ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗೆ ಉತ್ತರ ಕೊಡಿ:

  • ರಕ್ತ ತಗೋಬೇಕು ಅನ್ನೋ ಸನ್ನಿವೇಶ ಬರೋಕೆ ಮುಂಚೆನೇ, ಏನೆಲ್ಲಾ ತಯಾರಿ ಮಾಡಬೇಕು ಅಂತ ಈ ವಿಡಿಯೋ ನೋಡಿ ತಿಳಿದುಕೊಂಡ್ರಿ?

a ರಕ್ತ ತೆಗೆದುಕೊಳ್ಳಬೇಕಾ ಬೇಡ್ವಾ ಅಂತ ಸರಿಯಾದ ತೀರ್ಮಾನ ಮಾಡೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 39ನೇ ಪಾಠ ಸಹಾಯ ಮಾಡುತ್ತೆ.

ನೀವು ತಯಾರಾಗಿದ್ದೀರಾ?

ರಕ್ತವನ್ನ ಬಳಸಲೇಬೇಕು ಅನ್ನೋ ಸನ್ನಿವೇಶ ಬಂದಾಗ ಈ ವಿಷಯಗಳ ಬಗ್ಗೆ ಯೋಚನೆ ಮಾಡಿ:

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ