ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 11
  • ಯೆಹೋವನ ಯೋಚನೆ ಏನು ಅಂತ ಹುಡುಕಿ ತಿಳಿದುಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಯೋಚನೆ ಏನು ಅಂತ ಹುಡುಕಿ ತಿಳಿದುಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೇವರನ್ನೂ ಕೇಳಿ, ನಿರ್ಧಾರ ಮಾಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಪ್ರತಿದಿನ ಬೈಬಲ್‌ ಓದಿ, ವಿವೇಕಕ್ಕಾಗಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 11
‘ತಾಳ್ಮೆಯಿಂದ ಓಡಬೇಕು’—ಪೌಷ್ಠಿಕ ಆಹಾರ ಸೇವಿಸಿ ಅನ್ನೋ ವಿಡಿಯೋದಿಂದ ತಗೊಂಡಿರೋ ಒಂದು ಚಿತ್ರ. ಅದರಲ್ಲಿ ರೆಬೆಕ “ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ” ಉತ್ತರ ಅನ್ನೋ ಪತ್ರಿಕೆಯಿಂದ ಸಂಶೋಧನೆ ಮಾಡ್ತಿದ್ದಾಳೆ.

ನಮ್ಮ ಕ್ರೈಸ್ತ ಜೀವನ

ಯೆಹೋವನ ಯೋಚನೆ ಏನು ಅಂತ ಹುಡುಕಿ ತಿಳಿದುಕೊಳ್ಳಿ

ನಾವು ಯಾವಾಗಲೂ ಯೆಹೋವನಿಗೆ ಖುಷಿಯಾಗೋ ತರ ನಡೆದುಕೊಳ್ಳಬೇಕು ಅಂತ ಆಸೆ ಪಡ್ತೀವಿ. (ಜ್ಞಾನೋ 27:11) ಹಾಗಾಗಿ ನಾವು ನಿರ್ಧಾರಗಳನ್ನು ಮಾಡುವಾಗ, ಅದ್ರ ಬಗ್ಗೆ ಬೈಬಲಲ್ಲಿ ನೇರವಾದ ನಿಯಮ ಇಲ್ಲದಿದ್ದರೂ ಯೆಹೋವನಿಗೆ ಏನು ಇಷ್ಟ ಆಗುತ್ತೆ ಅಂತ ತಿಳ್ಕೊಬೇಕು. ಅದನ್ನ ತಿಳ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?

ಬೈಬಲನ್ನ ದಿನಾಲೂ ಓದಿ. ನಾವು ಬೈಬಲ್‌ ಓದಿದಾಗೆಲ್ಲಾ ಯೆಹೋವನ ಜೊತೆ ಸಮಯ ಕಳೆದ ಹಾಗೆ ಇರುತ್ತೆ. ಆತನು ತನ್ನ ಜನರ ಜೊತೆ ಹೇಗೆ ನಡ್ಕೊಂಡನು ಮತ್ತು ಜನರು ಆತನ ದೃಷ್ಟಿಯಲ್ಲಿ ಒಳ್ಳೇದನ್ನ ಮಾಡಿದಾಗ ಅಥವಾ ಕೆಟ್ಟದನ್ನ ಮಾಡಿದಾಗ ಯೆಹೋವನಿಗೆ ಹೇಗೆ ಅನಿಸ್ತು ಅಂತ ಓದುವಾಗ, ಆತನು ಹೇಗೆ ಯೋಚನೆ ಮಾಡ್ತಾನೆ ಅಂತ ತಿಳಿದುಕೊಳ್ತೀವಿ. ನಿರ್ಧಾರಗಳನ್ನ ಮಾಡಬೇಕಾದಾಗ, ಬೈಬಲಿಂದ ನಾವು ಕಲಿತ ಪಾಠಗಳು ಮತ್ತು ತತ್ವಗಳು ನಮ್ಮ ನೆನಪಿಗೆ ಬರೋ ತರ ಪವಿತ್ರ ಶಕ್ತಿ ಸಹಾಯ ಮಾಡುತ್ತೆ.—ಯೋಹಾ 14:26.

ಬೈಬಲ್‌ ಪ್ರಕಾಶನಗಳಲ್ಲಿ ಹುಡುಕಿ. ನೀವು ಏನಾದರೂ ನಿರ್ಧಾರ ಮಾಡಬೇಕಾದಾಗ, ಈ ವಿಷಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ಹೇಳೋ ಯಾವುದಾದರೂ ವಚನ ಅಥವಾ ಘಟನೆ ಇದೆಯಾ ಅಂತ ಯೋಚಿಸಿ. ಯೆಹೋವನ ಹತ್ರ ಸಹಾಯ ಕೇಳಿ, ನಿಮ್ಮ ಭಾಷೆಯಲ್ಲಿರೋ ಪ್ರಕಾಶನಗಳಲ್ಲಿ ಹುಡುಕಿ. ಆಗ ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡೋ ಬೈಬಲ್‌ ತತ್ವಗಳು ಸಿಗುತ್ತೆ.​—ಕೀರ್ತ 25:4.

ನಾವು ‘ತಾಳ್ಮೆಯಿಂದ ಓಡಬೇಕು’—ಪೌಷ್ಠಿಕ ಆಹಾರ ಸೇವಿಸಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ವಿಡಿಯೋದಲ್ಲಿ ನೋಡಿದ ಆ ಯುವ ಸಹೋದರಿಗೆ ಯಾವ ಒತ್ತಡ ಬಂತು?

  • ಅಂಥ ಒತ್ತಡಗಳು ನಿಮಗೆ ಬಂದ್ರೆ ಅದನ್ನ ನಿಭಾಯಿಸೋಕೆ ಪ್ರಕಾಶನಗಳಿಂದ ಹೇಗೆ ಸಹಾಯ ಪಡೆದುಕೊಳ್ತೀರ?

  • ಒಂದು ನಿರ್ಧಾರ ಮಾಡೋ ಮುಂಚೆ ನಾವ್ಯಾಕೆ ಅದರ ಬಗ್ಗೆ ಪ್ರಕಾಶನಗಳಲ್ಲಿ ಹುಡುಕಿ ಅಧ್ಯಯನ ಮಾಡಬೇಕು?—ಇಬ್ರಿ 5:13, 14

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ