ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 2 ಪು. 4-6
  • ಈ ಲೋಕ ನಾಶ ಆಗುತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಈ ಲೋಕ ನಾಶ ಆಗುತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾವುದೆಲ್ಲ ನಾಶ ಆಗಲ್ಲ?
  • ಯಾವುದೆಲ್ಲ ನಾಶ ಆಗುತ್ತೆ?
  • ಮನುಷ್ಯರ ಸರ್ಕಾರ ಯಾಕೆ ಕೊನೆಯಾಗಬೇಕು?
  • ಭೂಮಿ ನಾಶ ಆಗುತ್ತಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಜಲಪ್ರಳಯ-ಮತ್ತೆ ಲೋಕವನ್ನು ನಾಶಮಾಡುತ್ತಾ?
    ಮಹಾ ಬೋಧಕನಿಂದ ಕಲಿಯೋಣ
  • ಜಗತ್ತಿನ ವಿನಾಶ ಹೆದರಿಕೆ ಹಪಾಹಪಿ ಹತಾಶೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • “ಅಂತ್ಯ”—ಅಂದರೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 2 ಪು. 4-6
ಒಂದು ಕುಟುಂಬ ಹೊರಗಡೆ ಕೂತು ಊಟ ಮಾಡ್ತಿದ್ದಾರೆ. ಅಪ್ಪ ಕರಿದಿರೋ ಆಹಾರವನ್ನು ತಂದು ಕೊಡ್ತಿದ್ದಾರೆ.

ಈ ಲೋಕ ನಾಶ ಆಗುತ್ತಾ?

ಲೋಕದ ಅಂತ್ಯದ ಬಗ್ಗೆ ಬೈಬಲಲ್ಲಿ ಇದೆ ಅಂತ ನಿಮ್ಮಲ್ಲಿ ಕೆಲವರಿಗೆ ಗೊತ್ತಿರಬಹುದು. (1 ಯೋಹಾನ 2:17) ಲೋಕ ಅಂತ್ಯ ಆಗುವಾಗ ಭೂಮಿಯಲ್ಲಿ ಮನುಷ್ಯರೇ ಇರೋದಿಲ್ವಾ? ಈ ಭೂಮಿ ಯಾವ ಪ್ರಯೋಜನಕ್ಕೂ ಬಾರದೆ ಸರ್ವನಾಶ ಆಗಿಬಿಡುತ್ತಾ?

ಖಂಡಿತ ಇಲ್ಲ! ಅಂತ ಬೈಬಲ್‌ ಹೇಳುತ್ತೆ.

ಯಾವುದೆಲ್ಲ ನಾಶ ಆಗಲ್ಲ?

ಮನುಷ್ಯರು

ಬೈಬಲ್‌ ಏನು ಹೇಳುತ್ತೆ?: “ದೇವರು ಅದನ್ನ [ಭೂಮಿಯನ್ನು] ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.” —ಯೆಶಾಯ 45:18.

ಸರೋವರವನ್ನು ಕಾಡು ಮತ್ತು ಬೆಟ್ಟಗಳು ಸುತ್ತುವರಿದಿದೆ.

ಭೂಮಿ

ಬೈಬಲ್‌ ಏನು ಹೇಳುತ್ತೆ?: “ಒಂದು ಪೀಳಿಗೆ ಹೋಗುತ್ತೆ, ಇನ್ನೊಂದು ಪೀಳಿಗೆ ಬರುತ್ತೆ, ಆದ್ರೆ ಭೂಮಿ ಶಾಶ್ವತವಾಗಿ ಇರುತ್ತೆ.” —ಪ್ರಸಂಗಿ 1:4.

ಅರ್ಥ ಏನು?: ಭೂಮಿ ಯಾವತ್ತೂ ನಾಶ ಆಗಲ್ಲ ಅಂತ ಬೈಬಲ್‌ ಹೇಳುತ್ತೆ. ಅದ್ರಲ್ಲಿ ಯಾವಾಗ್ಲೂ ಜನರು ಇರ್ತಾರೆ. ಹಾಗಾದ್ರೆ ಲೋಕಾಂತ್ಯ ಅಂದ್ರೇನು?

ಯೋಚಿಸಿ: ಮುಂದೆ ಬರಲಿಕ್ಕಿರೋ ಲೋಕಾಂತ್ಯವನ್ನು ಬೈಬಲ್‌ ದೇವಭಕ್ತಿಯಿದ್ದ ನೋಹನ ದಿನಗಳಿಗೆ ಹೋಲಿಸಿ ಮಾತಾಡುತ್ತೆ. ಆ ಸಮಯದಲ್ಲಿ ಭೂಮಿಯಲ್ಲೆಲ್ಲಾ ಹಿಂಸೆ ತುಂಬಿತ್ತು. (ಆದಿಕಾಂಡ 6:13) ಆದ್ರೆ ನೋಹ ಒಳ್ಳೆಯವನಾಗಿದ್ದ. ಅದಕ್ಕೆ ದೇವರು ನೋಹ ಮತ್ತು ಅವನ ಕುಟುಂಬವನ್ನು ಕಾಪಾಡಿದ್ರು. ಆದ್ರೆ ಭೂಮಿಯಲ್ಲಿರೋ ಕೆಟ್ಟ ಜನರನ್ನೆಲ್ಲ ಜಲಪ್ರಳಯ ತಂದು ನಾಶ ಮಾಡಿದ್ರು. ಇದ್ರ ಬಗ್ಗೆ ಬೈಬಲ್‌ ಹೇಳೋದು: “ಆ ವಿಷ್ಯಗಳಿಂದಾನೇ ಇಡೀ ಭೂಮಿಯಲ್ಲಿ ನೀರು ತುಂಬ್ಕೊಂಡು ಆಗಿನ ಲೋಕ ನಾಶ ಆಯ್ತು.” (2 ಪೇತ್ರ 3:6) ಇದು ಒಂದು ಲೋಕಾಂತ್ಯ ಆಗಿತ್ತು. ಹಾಗಾದ್ರೆ ಆಗ ಭೂಮಿ ನಾಶ ಆಯ್ತಾ? ಇಲ್ಲ, ಕೆಟ್ಟ ಜನರಷ್ಟೇ ನಾಶ ಆದ್ರು. ಅದೇ ತರ ಮುಂದೆ ಲೋಕ ನಾಶ ಆಗುತ್ತೆ ಅಂತ ಬೈಬಲ್‌ ಹೇಳುವಾಗ ಅದ್ರ ಅರ್ಥ ಭೂಮಿ ನಾಶ ಆಗುತ್ತೆ ಅಂತಲ್ಲ. ಬದಲಿಗೆ ಭೂಮಿಲಿರೋ ಕೆಟ್ಟ ಜನರು ಮತ್ತು ಕೆಟ್ಟ ವಿಷ್ಯಗಳು ಸಂಪೂರ್ಣವಾಗಿ ನಾಶ ಆಗುತ್ತೆ.

ಯಾವುದೆಲ್ಲ ನಾಶ ಆಗುತ್ತೆ?

ಕಷ್ಟಸಮಸ್ಯೆಗಳು ಮತ್ತು ಕೆಟ್ಟತನ

ಬೈಬಲ್‌ ಏನು ಹೇಳುತ್ತೆ?: “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ. ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ, ಅವರು ನಿನಗೆ ಸಿಗೋದೇ ಇಲ್ಲ. ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತನೆ 37:10, 11.

ಕೊಲಾಜ್‌: 1. ದರೋಡೆಕೋರರು ಮುಖ ಮರೆಸಿ ಅಂಗಡಿಯನ್ನ ಲೂಟಿ ಮಾಡಿ ಹೊರಗೆ ಬರ್ತಿದ್ದಾರೆ. 2. ಒಬ್ಬ ಇನ್ನೊಬ್ಬನಿಗೆ ಪೆಟ್ಟಿಗೆ ತುಂಬ ಹಣ ಕೊಡ್ತಿದ್ದಾನೆ.

ಅರ್ಥ ಏನು?: ನೋಹನ ಸಮಯದಲ್ಲಿ ಜಲಪ್ರಳಯ ಆದಾಗ ಕೆಟ್ಟತನ ಅಲ್ಲಿಗೆ ಕೊನೆಯಾಗಲಿಲ್ಲ. ಪ್ರಳಯ ಆದಮೇಲೂ ಕೆಟ್ಟತನವನ್ನು ಜನರು ಮತ್ತೆ ಶುರುಮಾಡಿದ್ರು. ಆದ್ರೆ ಈ ಕೆಟ್ಟತನವನ್ನೆಲ್ಲ ದೇವರು ಬೇಗ ತೆಗೆದುಹಾಕ್ತಾರೆ. “ಕೆಟ್ಟವರು ಇಲ್ಲದೆ ಹೋಗ್ತಾರೆ” ಅಂತ ಕೀರ್ತನೆಗಾರ ಹೇಳಿದ ಮಾತು ಆದಷ್ಟು ಬೇಗ ನಿಜವಾಗುತ್ತೆ. ದೇವರು ಕೆಟ್ಟವರನ್ನೆಲ್ಲ ನಾಶಮಾಡಿ ಸ್ವರ್ಗದಿಂದ ಆಳ್ವಿಕೆ ಮಾಡುತ್ತಾರೆ. ಆಗ ಭೂಮಿ ಮೇಲೆ ಒಳ್ಳೆಯವರೇ ಇರ್ತಾರೆ.

ಯೋಚಿಸಿ: ಈಗಿನ ಲೋಕದ ನಾಯಕರು ದೇವರ ಆಳ್ವಿಕೆಯನ್ನು ಇಷ್ಟಪಡುತ್ತಾರಾ? ಖಂಡಿತ ಇಲ್ಲ. ಅವ್ರು ಅದನ್ನ ವಿರೋಧಿಸುತ್ತಾರೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 2:2) ಆಮೇಲೆ ಏನಾಗುತ್ತೆ? ದೇವರ ಸರ್ಕಾರ ಮನುಷ್ಯರ ಸರ್ಕಾರವನ್ನೆಲ್ಲ ನಾಶ ಮಾಡುತ್ತೆ. ನಂತರ ದೇವರ ಸರ್ಕಾರ ಮಾತ್ರ “ಸದಾಕಾಲ ಇರುತ್ತೆ.” (ದಾನಿಯೇಲ 2:44) ಆದ್ರೆ ಮನುಷ್ಯರ ಸರ್ಕಾರ ಯಾಕೆ ನಾಶವಾಗಬೇಕು?

ಮನುಷ್ಯರ ಸರ್ಕಾರ ಯಾಕೆ ಕೊನೆಯಾಗಬೇಕು?

ಬೈಬಲ್‌ ಏನು ಹೇಳುತ್ತೆ?: “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.”—ಯೆರೆಮೀಯ 10:23.

ರಾಜಕೀಯ ಪಕ್ಷದ ವ್ಯಕ್ತಿಗಳ ಭಿತ್ತಿಪತ್ರ ಗೋಡೆಗೆ ಅಂಟಿಸಿದ್ದಾರೆ. ಜನ ಅಲ್ಲಿರೋ ರಸ್ತೆಯಲ್ಲಿ ಓಡಾಡ್ತಿದ್ದಾರೆ.

ಅರ್ಥ ಏನು?: ಮನುಷ್ಯನಿಗೆ ಜನರನ್ನು ಸರಿಯಾಗಿ ನೋಡಿಕೊಳ್ಳೋ ಸಾಮರ್ಥ್ಯ ಇಲ್ಲ. ಅದಕ್ಕೆ ಸಮಸ್ಯೆ ತೆಗೆದುಹಾಕೋಕೆ, ಜನರನ್ನು ಚೆನ್ನಾಗಿ ನೋಡಿಕೊಳ್ಳೋಕೆ ಅವನಿಗೆ ಆಗ್ತಾ ಇಲ್ಲ.

ಯೋಚಿಸಿ: “ಯಾವುದೇ ಒಂದು ಸರ್ಕಾರದಿಂದ ಬಡತನ, ಹಸಿವೆ, ಕಾಯಿಲೆ, ವಿಪತ್ತು, ಯುದ್ಧ ಮತ್ತು ಹಿಂಸೆ ಇವುಗಳನ್ನೆಲ್ಲ ತೆಗೆದುಹಾಕೋಕೆ ಆಗಲ್ಲ. ಆದ್ರೆ ಎಲ್ಲಾ ಸರ್ಕಾರಗಳು ಒಂದಾಗಿ ಇದರ ವಿರುದ್ಧ ಹೋರಾಡಿದ್ರೆ ಒಂದು ಪರಿಹಾರ ಸಿಗುತ್ತೆ” ಅಂತ ಬ್ರಿಟಾನಿಕಾ ಅಕಾಡೆಮಿಕ್‌ ರೆಫರೆನ್ಸ್‌ ಹೇಳುತ್ತೆ. ಆದ್ರೆ ನಿಮ್ಗೆ ಏನನಿಸುತ್ತೆ? ಈಗಿರೋ ಎಲ್ಲಾ ಸರ್ಕಾರ ಒಟ್ಟಿಗೆ ಸೇರಿ ಎಷ್ಟೇ ಪ್ರಯತ್ನಪಟ್ಟರೂ ಈ ಸಮಸ್ಯೆಗಳನ್ನೆಲ್ಲ ಸರಿಮಾಡೋಕೆ ಆಗುತ್ತಾ? ಖಂಡಿತ ಇಲ್ಲ. ಈ ಲೋಕದಲ್ಲಿರೋ ಎಲ್ಲಾ ಸಮಸ್ಯೆಗಳಿಗೆ ದೇವರ ಸರ್ಕಾರ ಒಂದೇ ಶಾಶ್ವತ ಪರಿಹಾರ.

ಹಾಗಾಗಿ ಲೋಕಾಂತ್ಯಕ್ಕೆ ಒಳ್ಳೇ ಜನರು ಭಯಪಡಬೇಕಾಗಿಲ್ಲ, ಖುಷಿಪಡಬೇಕು. ಯಾಕಂದ್ರೆ ಈ ಕೆಟ್ಟತನವನ್ನೆಲ್ಲ ದೇವರು ತೆಗೆದು ಹಾಕಿ ಒಂದು ಸುಂದರ ಲೋಕ ತರ್ತಾರೆ.

ಆದ್ರೆ ಇದೆಲ್ಲ ಯಾವಾಗ ಆಗುತ್ತೆ? ಇದಕ್ಕೆ ಬೈಬಲ್‌ ಕೊಡೋ ಉತ್ತರ ಮುಂದಿನ ಲೇಖನದಲ್ಲಿ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ