ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 2 ಪು. 10-12
  • ಹೊಸ ಲೋಕದಲ್ಲಿರಲು ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೊಸ ಲೋಕದಲ್ಲಿರಲು ಏನು ಮಾಡಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಂತ್ಯ ಪಾರಾಗಬೇಕಾದ್ರೆ ದೇವ್ರನ್ನ ತಿಳಿಲೇಬೇಕು
  • ದೇವರ ವಾಕ್ಯವನ್ನು ಪ್ರತಿ ದಿನ ಓದಿ
  • ಸಹಾಯಕ್ಕಾಗಿ ಪ್ರಾರ್ಥಿಸಿ
  • ದೇವರು ಏನು ಮಾಡಿದ್ದಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ದೇವರ ಹೊಸ ಲೋಕದಲ್ಲಿ ಜೀವಿಸಲು ನೀನೇನು ಮಾಡಬೇಕು?
    ಮಹಾ ಬೋಧಕನಿಂದ ಕಲಿಯೋಣ
  • ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 2 ಪು. 10-12

ಹೊಸಲೋಕದಲ್ಲಿ ಇರಲು ಏನು ಮಾಡಬೇಕು?

ಈ ದುಷ್ಟ ಲೋಕಕ್ಕೆ ದೇವರು ಬೇಗ ಅಂತ್ಯ ತರ್ತಾರೆ ಅಂತ ಹಿಂದಿನ ಲೇಖನಗಳಲ್ಲಿ ಓದಿದ್ವಿ. ಅದು ಖಂಡಿತ ನಿಜ ಆಗುತ್ತೆ ಅಂತ ದೇವರ ವಾಕ್ಯ ಹೇಳಿದೆ.

“ಲೋಕ . . . ನಾಶ ಆಗುತ್ತೆ.”—1 ಯೋಹಾನ 2:17.

ಅಂತ್ಯ ಪಾರಾಗುವವರೂ ಇರ್ತಾರೆ ಅಂತ ದೇವರ ವಾಕ್ಯ ಸಾಂತ್ವನ ಕೊಡುತ್ತೆ. ಮೇಲೆ ಕೊಟ್ಟಿರೋ ವಚನದಲ್ಲಿ ಮುಂದುವರಿಸಿ ಹೀಗೆ ಹೇಳುತ್ತೆ:

“ದೇವರ ಇಷ್ಟವನ್ನ ಮಾಡೋ ವ್ಯಕ್ತಿ ಯಾವಾಗ್ಲೂ ಇರ್ತಾನೆ.”

ನಾವು ಅಂತ್ಯ ಪಾರಾಗಬೇಕಾದ್ರೆ ದೇವ್ರಿಗೆ ಏನು ಇಷ್ಟನೋ ಅದನ್ನ ಮಾಡಬೇಕು. ಆತನ ಇಷ್ಟ ತಿಳ್ಕೊಳ್ಳೋಕೂ ಮುಂಚೆ ದೇವರ ಬಗ್ಗೆ ತಿಳ್ಕೊಬೇಕು.

ಅಂತ್ಯ ಪಾರಾಗಬೇಕಾದ್ರೆ ದೇವ್ರನ್ನ ತಿಳಿಲೇಬೇಕು

ಕೊಲಾಜ್‌: 1. ಆಸ್ಪತ್ರೆಯಲ್ಲಿ ನರ್ಸ್‌ ಒಬ್ಬರು ಚಿಂತೆಯಿಂದ ಬಳಲಿ ಬೆಂಡಾಗಿ ನೆಲದಲ್ಲಿ ಕೂತಿದ್ದಾರೆ. 2. ಅವರು ಕ್ಯಾಂಟೀನಲ್ಲಿದ್ದಾಗ ಸಹೋದ್ಯೋಗಿ ಒಬ್ಬರು ಖುಷಿಯಾಗಿದ್ದು ಪತ್ರಿಕೆ ಓದೋದನ್ನು ಗಮನಿಸ್ತಾರೆ. 3. ಆ ಸಹೋದ್ಯೋಗಿ ಅವರಿಗೆ ಬೈಬಲ್‌ ವಚನ ತೋರಿಸಿ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡ್ತಿದ್ದಾರೆ.

“ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ . . . ತಿಳ್ಕೊಳ್ಳಲೇಬೇಕು” ಅಂತ ಯೇಸು ಹೇಳಿದರು. (ಯೋಹಾನ 17:3) ನಾವು ಅಂತ್ಯ ಪಾರಾಗಿ ಶಾಶ್ವತ ಜೀವ ಪಡೆಯಬೇಕಿದ್ದರೆ ದೇವ್ರನ್ನ ತಿಳಿಲೇಬೇಕು. ದೇವ್ರನ್ನ ತಿಳಿಯೋದು ಅಂದ್ರೆ ಆತನ ಬಗ್ಗೆ ಅಲ್ಪಸ್ವಲ್ಪ ಗೊತ್ತಿರೋದು ಅಥವಾ ದೇವರು ಇದ್ದಾನೆ ಅಂತ ನಂಬೋದು ಮಾತ್ರ ಅಲ್ಲ, ಬದಲಿಗೆ ಆತನ ಜೊತೆ ಒಳ್ಳೇ ಸ್ನೇಹಿತರಾಗಿ ಇರೋದು ಅಂತರ್ಥ. ನಾವು ನಮ್ಮ ಸ್ನೇಹಿತರ ಜೊತೆ ಸಮಯ ಕಳೆದಾಗ್ಲೇ ನಮ್ಮ ಸ್ನೇಹ ಬಲವಾಗಿರೋದು. ಅದೇ ತರ ದೇವರ ಜೊತೆ ಸ್ನೇಹ ಬೆಳೆಸೋಕೆ ಸಮಯ ಕೊಡಬೇಕು. ಆ ಸ್ನೇಹ ಗಟ್ಟಿ ಮಾಡೋಕೆ ಬೈಬಲಲ್ಲಿರೋ ಕೆಲವು ಸತ್ಯಗಳು ಸಹಾಯ ಮಾಡುತ್ತೆ.

ಬೈಬಲಲ್ಲಿರೋ ಕೆಲವು ಸತ್ಯಗಳು

ಆ ನರ್ಸ್‌ ಮನೆಗೆ ಬಂದು jw.org ವೆಬ್‌ಸೈಟ್‌ ನೋಡ್ತಿದ್ದಾರೆ.

ನಾವು ಪರದೈಸಲ್ಲಿ ಬದುಕಬೇಕಂತ ದೇವರು ಬಯಸಿದ್ರು.

ಮೊದಲ ಮನುಷ್ಯರಾದ ಆದಾಮ ಮತ್ತು ಹವ್ವರನ್ನ ದೇವರು ಸೃಷ್ಟಿ ಮಾಡಿ ಬದುಕೋಕೆ ಏದೆನ್‌ ಅನ್ನೋ ತೋಟವನ್ನು ಕೊಟ್ರು. ಅವರು ಯಾವುದೇ ದೋಷ ಇಲ್ಲದ ಪರಿಪೂರ್ಣ ಮನುಷ್ಯರಾಗಿದ್ರು. ಖುಷಿಖುಷಿಯಾಗಿ ಇರಲಿಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನ ದೇವರು ಅವರಿಗೆ ಕೊಟ್ರು. ಅವರು ಯಾವಾಗ್ಲೂ ದೇವರ ಸ್ನೇಹಿತರಾಗಿ ಇದ್ದಿದ್ರೆ ಸಾಯದೆ ಶಾಶ್ವತವಾಗಿ ಬದುಕ್ತಿದ್ರು. ಆದರೆ ದೇವರು ಹೇಳಿದ ಒಂದು ಸಣ್ಣ ಮಾತನ್ನ ಪಾಲಿಸದೆ ಇದ್ದಿದ್ರಿಂದ ಎಲ್ಲ ತಲೆಕೆಳಗಾಯ್ತು.

ನಮ್ಮ ಕಷ್ಟಗಳಿಗೆ ಕಾರಣ.

ಮೊದಲ ಮನುಷ್ಯನಾದ ಆದಾಮ ದೇವರ ಮಾತು ಕೇಳದೆ ಇದ್ದಿದ್ರಿಂದ ಶಾಶ್ವತ ಜೀವ ಕಳ್ಕೊಂಡ. ಅದ್ರಿಂದಾನೇ ನಮಗೂ ಶಾಶ್ವತವಾಗಿ ಬದುಕೋ ಅವಕಾಶ ಕೈ ತಪ್ಪಿ ಹೋಯ್ತು. ಬೈಬಲ್‌ ಹೇಳೋದು, “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು.” (ರೋಮನ್ನರಿಗೆ 5:12) ಅಪ್ಪಅಮ್ಮನಿಂದ ಸಿಕ್ಕಿರೋ ಕಾಯಿಲೆಗಳು ಮಕ್ಕಳಿಗೆ ಹೇಗೆ ಬರುತ್ತೋ ಹಾಗೆ ಆದಾಮ ಪಾಪ ಮಾಡಿದ್ರಿಂದ ನಾವೂ ಪಾಪಿಗಳಾದ್ವಿ, ಅದಕ್ಕೇ ನಾವು ವಯಸ್ಸಾಗಿ ಸಾಯ್ತಾ ಇದ್ದೀವಿ.

ಈಗಾಗ್ಲೇ ದೇವರು ಮಾಡಿರೋ ಸಹಾಯ.

ಬೈಬಲಲ್ಲಿ ಹೀಗೆ ಹೇಳುತ್ತೆ, “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.” (ಯೋಹಾನ 3:16) ದೇವರು ತನ್ನ ಮಗನನ್ನ ನಮಗೋಸ್ಕರ ಕೊಟ್ಟಿದ್ದರ ಬಗ್ಗೆ ಭಾರತದಲ್ಲಿರೋ 86 ವಯಸ್ಸಿನ ಪ್ರಭಾಕರ್‌ ಹೇಳಿದ್ದು, “ಯೆಹೋವa ಕೊಟ್ಟಿರೋ ಈ ಉಡುಗೊರೆಯಿಂದ ದೇವರಿಗೆ ನಾನು ಎಷ್ಟು ಇಷ್ಟ ಅಂತ ಗೊತ್ತಾಗುತ್ತೆ. ಆತನಿಗೆ ನನ್ನ ಮೇಲಿರೋ ಪ್ರೀತಿಯಿಂದಾನೇ ಶಾಶ್ವತ ಜೀವದ ನಿರೀಕ್ಷೆನೂ ಕೊಟ್ಟಿದ್ದಾರೆ.”

ದೇವರ ಸಹಾಯಕ್ಕೆ ಕೃತಜ್ಞತೆ ತೋರಿಸಿ.

ನಾವು ದೇವರ ಮಾತನ್ನು ಕೇಳೋ ಒಂದು ವಿಧ “ಆತನ ಆಜ್ಞೆಗಳನ್ನ” ಪಾಲಿಸೋದೇ ಆಗಿದೆ. (1 ಯೋಹಾನ 2:3) ಈಗ ನಾವು ಸಂತೋಷವಾಗಿ ಇರೋಕೆ ಏನು ಮಾಡಬೇಕು ಅಂತ ದೇವರು ತಿಳಿಸಿದ್ದಾರೆ. (ಯೆಶಾಯ 48:17, 18, ಪಾದಟಿಪ್ಪಣಿ) ದೇವರಿಗೆ ನಾವು ಕಷ್ಟಪಡೋದು ಒಂಚೂರು ಇಷ್ಟ ಇಲ್ಲ. ಅದಕ್ಕೆ ನಾವು ಆತನ ಮಾತನ್ನ ಕೇಳಿದ್ರೆ ಶಾಶ್ವತವಾಗಿ ಸಂತೋಷದಿಂದ ಬದುಕಬಹುದು ಅಂತ ಮಾತುಕೊಟ್ಟಿದ್ದಾರೆ.

ದೇವರ ವಾಕ್ಯವನ್ನು ಪ್ರತಿ ದಿನ ಓದಿ

ಅವರು ಮಧ್ಯಾಹ್ನ ಊಟದ ಸಮಯದಲ್ಲಿ ಹೊರಗೆ ಬೆಂಚಲ್ಲಿ ಕೂತು ಬೈಬಲ್‌ ಓದಿದ ಮೇಲೆ ಆಕಾಶ ನೋಡ್ತಿದ್ದಾರೆ.

ನೀವು ಲೋಕಾಂತ್ಯ ಪಾರಾಗಬೇಕಾದ್ರೆ ದೇವರಿಗೆ ಪ್ರಾರ್ಥಿಸಬೇಕು, ಆತನ ಇಷ್ಟದ ಪ್ರಕಾರ ನಡ್ಕೊಬೇಕು

ನಾವು ಬದುಕೋಕೆ ಪ್ರತಿದಿನ ಊಟ ಮಾಡಲೇಬೇಕು. ಆದರೆ ಅದಕ್ಕಿಂತ ಮುಖ್ಯವಾಗಿರೋ ಒಂದು ವಿಷ್ಯದ ಬಗ್ಗೆ ಯೇಸು ಹೇಳಿದರು. “ಮನುಷ್ಯ ರೊಟ್ಟಿ ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು.”—ಮತ್ತಾಯ 4:4.

ಯೆಹೋವ ದೇವರು ಹೇಳಿರೋದು ನಮಗೆ ಗೊತ್ತಾಗಬೇಕಂದ್ರೆ ಬೈಬಲ್‌ ಓದಬೇಕು. ಆಗ ದೇವರು ನಮ್ಮೆಲ್ಲರಿಗೋಸ್ಕರ ಹಿಂದೆ ಏನು ಮಾಡಿದ್ರು, ಈಗ ಏನು ಮಾಡ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಏನೆಲ್ಲ ಮಾಡ್ತಾರೆ ಅಂತ ಗೊತ್ತಾಗುತ್ತೆ.

ಸಹಾಯಕ್ಕಾಗಿ ಪ್ರಾರ್ಥಿಸಿ

ದೇವರಿಗೆ ಇಷ್ಟ ಆಗೋ ರೀತಿಯಲ್ಲಿ ನಡ್ಕೊಳ್ಳುವಾಗ ಕೆಟ್ಟ ವಿಷಯಗಳನ್ನ ಬಿಡೋಕೆ ನೀವು ತುಂಬ ಕಷ್ಟಪಡ್ತಿದ್ದೀರಾ? ಹಾಗಾದ್ರೆ ದೇವರು ನಿಮ್ಮ ಕೈಬಿಡಲ್ಲ. ಖಂಡಿತ ನಿಮಗೆ ಸಹಾಯ ಮಾಡ್ತಾರೆ.

ಸಕುರಾ ಅನ್ನೋ ಸ್ತ್ರೀಯ ಬಗ್ಗೆ ನೋಡಿ. ಅವರು ಮುಂಚೆ ಅನೈತಿಕ ಜೀವನ ನಡೆಸ್ತಿದ್ರು. ಆದ್ರೆ ಬೈಬಲ್‌ ಕಲಿಯೋಕೆ ಶುರುಮಾಡಿದ ಮೇಲೆ “ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ” ಅನ್ನೋ ದೇವರ ನಿಯಮ ಕಲಿತ್ರು. (1 ಕೊರಿಂಥ 6:18) ಅವರು ತುಂಬ ಪ್ರಾರ್ಥನೆ ಮಾಡಿದ್ರಿಂದ ಆ ಕೆಟ್ಟ ಚಟ ಬಿಡೋಕೆ ಆಯ್ತು. ಆದರೂ ಆ ಕೆಟ್ಟ ಯೋಚನೆಗಳು ಅವರ ಮನಸ್ಸಿಗೆ ಬರ್ತಾನೇ ಇತ್ತು. ಆ ಸಮಯದಲ್ಲಿ ಅವರಿಗೆ ಪ್ರಾರ್ಥನೆ ಹೇಗೆ ಸಹಾಯಮಾಡ್ತು ಅಂತ ಹೇಳ್ತಾರೆ: “ಕೆಟ್ಟ ಯೋಚನೆಗಳು ಮನಸ್ಸಿಗೆ ಬಂದಾಗ ಯೆಹೋವ ದೇವರ ಹತ್ರ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡ್ತಿನಿ. ಯಾಕಂದ್ರೆ ಯೆಹೋವ ದೇವರ ಸಹಾಯ ಇಲ್ಲದೆ ಅದನ್ನ ಜಯಿಸೋಕೆ ಆಗಲ್ಲ. ನಾನು ಮಾಡಿರೋ ಪ್ರಾರ್ಥನೆಗೆ ದೇವರು ಉತ್ತರ ಕೊಟ್ಟಿರೋದ್ರಿಂದ ಆತನಿಗೆ ಇನ್ನಷ್ಟು ಹತ್ರ ಆಗಿದ್ದೀನಿ.” ಸಕುರಾ ತರ ಯೆಹೋವನ ಬಗ್ಗೆ ತಿಳ್ಕೊಳ್ತಿರೋ ಲಕ್ಷಾಂತರ ಜನ್ರಿಗೆ ಆತನು ಸಹಾಯ ಮಾಡ್ತಿದ್ದಾನೆ. ಇದ್ರಿಂದ ಅವರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಂಡು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ತಿದ್ದಾರೆ.—ಫಿಲಿಪ್ಪಿ 4:13.

ನೀವು ದೇವರ ಬಗ್ಗೆ ಚೆನ್ನಾಗಿ ತಿಳ್ಕೊಂಡಾಗ ‘ದೇವರೂ ನಿಮ್ಮ ಬಗ್ಗೆ ಚೆನ್ನಾಗಿ ತಿಳ್ಕೊಳ್ತಾರೆ.’ ಅಂದ್ರೆ ನೀವು ದೇವರ ಬೆಸ್ಟ್‌ ಫ್ರೆಂಡ್‌ ಆಗ್ತಿರ. (ಗಲಾತ್ಯ 4:9; ಕೀರ್ತನೆ 25:14) ಆಗ ನೀವು ಅಂತ್ಯ ಪಾರಾಗಿ ಹೊಸ ಲೋಕದಲ್ಲಿ ಜೀವನ ಮಾಡ್ತಿರ. ಹಾಗಾದ್ರೆ ಆ ಸುಂದರ ಲೋಕ ಹೇಗಿರುತ್ತೆ? ಅದನ್ನ ಮುಂದಿನ ಪುಟ ವಿವರಿಸುತ್ತೆ.

a ಯೆಹೋವ ಅನ್ನೋದು ಬೈಬಲಲ್ಲಿ ತಿಳಿಸಿರೋ ದೇವರ ಹೆಸರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ