ಪಾದಟಿಪ್ಪಣಿ
b ಯೋನನು ನಿದ್ದೆಯಲ್ಲಿದ್ದಾಗ ಗೊರಕೆಹೊಡೆಯುತ್ತಿದ್ದನು ಎಂದು ಕೂಡಿಸುವ ಮೂಲಕ ಅವನ ನಿದ್ರೆಯ ಆಳವನ್ನು ಸೆಪ್ಟ್ಯುಅಜಿಂಟ್ ಭಾಷಾಂತರ ಒತ್ತಿಹೇಳುತ್ತದೆ. ಆದರೆ ಯೋನನ ಆ ನಿದ್ದೆಯನ್ನು ಅವನ ದುರ್ಲಕ್ಷ್ಯದ ಚಿಹ್ನೆಯಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಕೆಲವೊಮ್ಮೆ ತೀರಾ ಮನಗುಂದಿದವರನ್ನು ನಿದ್ದೆಯ ಮಬ್ಬು ಆವರಿಸುತ್ತದೆ ಎಂಬುದನ್ನು ನಾವು ನೆನಪಿಸಬಹುದು. ಗೆತ್ಸೇಮನೆ ತೋಟದಲ್ಲಿ ಯೇಸು ಅತೀ ವೇದನೆಯಲ್ಲಿದ್ದ ಸಮಯದಲ್ಲಿ ಪೇತ್ರ, ಯಾಕೋಬ, ಯೋಹಾನರಿಗೆ ‘ದುಃಖಭಾರದಿಂದ ನಿದ್ರೆಹತ್ತಿತ್ತು.’—ಲೂಕ 22:45.