ಪಾದಟಿಪ್ಪಣಿ
c ಅವರ ಅಗೌರವದ ಕೃತ್ಯಗಳ ಎರಡು ಉದಾಹರಣೆಗಳನ್ನು ವೃತ್ತಾಂತ ತಿಳಿಸುತ್ತದೆ. ಒಂದು ಉದಾಹರಣೆ: ಯಾಜಕರು ಯಜ್ಞಾರ್ಪಿತ ಪ್ರಾಣಿಯ ಯಾವ ಭಾಗಗಳನ್ನು ಮಾತ್ರ ತಿನ್ನಬೇಕು ಎಂಬುದನ್ನು ಧರ್ಮಶಾಸ್ತ್ರ ತಿಳಿಸಿತ್ತು. (ಧರ್ಮೋಪದೇಶಕಾಂಡ 18:3) ಆದರೆ ಆ ದುಷ್ಟ ಯಾಜಕರು ದೇವರ ಗುಡಾರದಲ್ಲಿ ಇದಕ್ಕೆ ತದ್ವಿರುದ್ಧವಾದ ರೂಢಿಯನ್ನು ಆರಂಭಿಸಿದ್ದರು. ಅವರು ತಮ್ಮ ಆಳುಗಳನ್ನು ಕಳುಹಿಸಿ ದೊಡ್ಡ ಹಂಡೆಯಲ್ಲಿ ಮಾಂಸ ಬೇಯುತ್ತಿದ್ದಾಗಲೇ ದೊಡ್ಡ ಮುಳ್ಳುಚಮಚವನ್ನು ಹಾಕಿ ಚುಚ್ಚಿ, ಸಿಕ್ಕಿದ ಒಳ್ಳೊಳ್ಳೇ ತುಂಡುಗಳನ್ನು ತೆಗೆದುಕೊಂಡು ಬರುವಂತೆ ಹೇಳುತ್ತಿದ್ದರು. ಇನ್ನೊಂದು: ಒಬ್ಬ ವ್ಯಕ್ತಿ ಯಜ್ಞಗಳನ್ನು ವೇದಿಯ ಬಳಿ ತರುತ್ತಿದ್ದಾಗ ಆ ದುಷ್ಟ ಯಾಜಕರು ಒಬ್ಬ ಆಳನ್ನು ಕಳುಹಿಸುತ್ತಿದ್ದರು. ಪ್ರಾಣಿಯ ಕೊಬ್ಬು ಯೆಹೋವನಿಗೆ ಅರ್ಪಿಸಲ್ಪಡುವ ಮುಂಚೆಯೇ ಆ ಆಳು ಆ ವ್ಯಕ್ತಿಯನ್ನು ದಬಾಯಿಸಿ ಹಸಿಮಾಂಸವನ್ನು ಒತ್ತಾಯದಿಂದ ಪಡೆದು ಯಾಜಕರಿಗೆ ತಂದುಕೊಡುತ್ತಿದ್ದನು.—ಯಾಜಕಕಾಂಡ 3:3-5; 1 ಸಮುವೇಲ 2:13-17.