ಪಾದಟಿಪ್ಪಣಿ
a ಜರ್ಮನ್ ವಿದ್ವಾಂಸ ಹೈನ್ರಿಕ್ ಮಯರ್ ಹೇಳಿದ್ದು: “ಯೇಸುವಿನ ದೇಹ ಇನ್ನೂ ಮುರಿಯಲ್ಪಟ್ಟಿರಲಿಲ್ಲ (ಇನ್ನೂ ಜೀವಂತವಾಗಿತ್ತು), ಮತ್ತು ಅವನ ರಕ್ತ ಇನ್ನೂ ಸುರಿಸಲ್ಪಟ್ಟಿರಲಿಲ್ಲ. ಈ ಕಾರಣದಿಂದ ಅವನ ಅತಿಥಿಗಳಲ್ಲಿ ಯಾರೂ [ಅಪೊಸ್ತಲರು] . . . ತಾವು ಕರ್ತನ ದೇಹವನ್ನು ನಿಜವಾಗಿ ತಿನ್ನುತ್ತಿದ್ದೇವೆ, ರಕ್ತವನ್ನು ನಿಜವಾಗಿ ಕುಡಿಯುತ್ತಿದ್ದೇವೆಂದು ನೆನಸಿರಲು ಸಾಧ್ಯವಿಲ್ಲ. ತಾನು ಆಡಿದಂಥ ಸರಳ ಮಾತುಗಳನ್ನು ತನ್ನ ಅಪೊಸ್ತಲರು ಆ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕೆಂದೂ ಯೇಸು ಉದ್ದೇಶಿಸಿರಲು ಸಾಧ್ಯವಿಲ್ಲ.”