ಪಾದಟಿಪ್ಪಣಿ
a ತುಂಬಾ ಕಷ್ಟಗಳನ್ನ ಸಹಿಸಿಕೊಂಡ ವ್ಯಕ್ತಿ ಅಂತ ಹೇಳಿದಾಗ ನಮ್ಮ ನೆನಪಿಗೆ ಬರೋದು ಯೋಬ. ಜೀವನ ಪೂರ್ತಿ ಅವನು ಯೆಹೋವನಿಗೆ ನಿಷ್ಠೆಯಿಂದ ಇದ್ದ. ಅವನ ಜೀವನದಲ್ಲಿ ನಡೆದ ಘಟನೆಗಳಿಂದ ನಾವು ತುಂಬ ವಿಷಯಗಳನ್ನ ಕಲಿಯಬಹುದು. ಉದಾಹರಣೆಗೆ ಸೈತಾನನಿಗೆ, ನಮ್ಮನ್ನ ಯೆಹೋವನಿಂದ ದೂರ ಮಾಡೋಕಾಗಲ್ಲ. ನಮ್ಮ ಪರಿಸ್ಥಿತಿಯನ್ನ ಯೆಹೋವ ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಯೋಬನಿಗೆ ಬಂದ ಕಷ್ಟಗಳನ್ನ ಯೆಹೋವ ಹೇಗೆ ಸರಿ ಮಾಡಿದನೋ ಅದೇ ತರ ನಮಗಿರೋ ಕಷ್ಟಗಳನ್ನ ಒಂದು ದಿನ ಸರಿ ಮಾಡ್ತಾನೆ. ಈ ನಂಬಿಕೆ ನಮಗಿದ್ದರೆ ‘ಯೆಹೋವನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೀವಿ’ ಅಂತ ಅರ್ಥ.