ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿ
    ಕಾವಲಿನಬುರುಜು—1999 | ಸೆಪ್ಟೆಂಬರ್‌ 15
    • ಜ್ಞಾನೋಕ್ತಿ ಪುಸ್ತಕದ ಉದ್ದೇಶವನ್ನು ಅದರ ಆರಂಭದ ಮಾತುಗಳಲ್ಲಿ ವಿವರಿಸಲಾಗಿದೆ: “ಇಸ್ರಾಯೇಲ್ಯರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಇವುಗಳಿಂದ ಜನರು ಜ್ಞಾನವನ್ನೂ [“ವಿವೇಕವನ್ನೂ,” NW] ಶಿಕ್ಷೆಯನ್ನೂ [“ಶಿಸ್ತನ್ನೂ,” NW] ಪಡೆದು ಬುದ್ಧಿವಾದಗಳನ್ನು ಗ್ರಹಿಸಿ ವಿವೇಕಮಾರ್ಗದಲ್ಲಿ ಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗುವರು. ಇವು ಮೂಢರಿಗೆ [“ಅನನುಭವಸ್ಥರಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡುವವು.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:1-4.

  • ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿ
    ಕಾವಲಿನಬುರುಜು—1999 | ಸೆಪ್ಟೆಂಬರ್‌ 15
    • ವಿವೇಕವು ತಿಳಿವಳಿಕೆ, ಒಳನೋಟ, ಜಾಣತನ ಮತ್ತು ಯೋಚನಾ ಸಾಮರ್ಥ್ಯವನ್ನು ಸೇರಿಸಿ ಅನೇಕ ಅಂಶಗಳ ಮಿಶ್ರಣವಾಗಿದೆ. ತಿಳಿವಳಿಕೆಯು, ಒಂದು ವಿಷಯವನ್ನು ಪರಿಶೀಲಿಸಿ, ಅದರ ವಿಭಿನ್ನ ಭಾಗಗಳು ಮತ್ತು ಇಡೀ ವಿಷಯದ ನಡುವಿನ ಸಂಬಂಧಗಳನ್ನು ಗ್ರಹಿಸುವ ಮೂಲಕ ಅದರ ಸಂಯೋಜನೆಯನ್ನು ವಿವೇಚಿಸುವ ಸಾಮರ್ಥ್ಯವಾಗಿದೆ. ಒಳನೋಟವನ್ನು ಹೊಂದಲಿಕ್ಕಾಗಿ, ಕಾರಣಗಳ ಅರಿವು, ಮತ್ತು ಒಂದು ನಿರ್ದಿಷ್ಟ ಮಾರ್ಗಕ್ರಮವು ಏಕೆ ಸರಿ ಅಥವಾ ತಪ್ಪಾಗಿದೆಯೆಂಬುದರ ಗ್ರಹಿಕೆಯು ಆವಶ್ಯಕವಾಗಿದೆ. ಉದಾಹರಣೆಗಾಗಿ, ತಿಳಿವಳಿಕೆಯುಳ್ಳ ಒಬ್ಬ ಮನುಷ್ಯನು, ಯಾರಾದರೂ ತಪ್ಪಾದ ದಿಕ್ಕಿನಲ್ಲಿ ಸಾಗುತ್ತಿರುವುದಾದರೆ ಅದನ್ನು ವಿವೇಚಿಸಬಲ್ಲನು ಮತ್ತು ಅವನು ತತ್‌ಕ್ಷಣವೇ ಅಂಥವನಿಗೆ ಮುಂದಿರುವಂತಹ ಅಪಾಯದ ಕುರಿತಾಗಿ ಎಚ್ಚರಿಸಬಹುದು. ಆದರೆ ಆ ವ್ಯಕ್ತಿಯು ಆ ದಿಕ್ಕಿನ ಕಡೆಗೆ ಏಕೆ ಸಾಗುತ್ತಿದ್ದಾನೆಂಬುದನ್ನು ತಿಳಿದುಕೊಳ್ಳಲು ಮತ್ತು ಅವನನ್ನು ಪಾರುಗೊಳಿಸುವ ಅತ್ಯಂತ ಪರಿಣಾಮಕಾರಿ ಮಾರ್ಗದ ಕುರಿತು ಯೋಚಿಸಲು ಒಳನೋಟದ ಅಗತ್ಯವಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ