ನನ್ನ ಕುಟುಂಬವು ಸೋಂಕು ರಕ್ಷೆಯನ್ನು ಪಡೆಯಬೇಕೋ?
“ಇದು ಮಗುವಿಗೆ ಚುಚ್ಚುಮದ್ದು ಹಾಕುವ ಸಮಯ,” ಎಂದು ವೈದ್ಯರು ಹೇಳುತ್ತಾರೆ. ಒಂದು ಸಣ್ಣ ಮಗುವಿಗೆ ಅದನ್ನು ಕೇಳುವುದು ಪ್ರಾಯಶಃ ಭಯ ಸೂಚಕ ಹೇಳಿಕೆಯಾಗಿರಬಹುದು, ಆದರೆ ಹೆತ್ತವರಿಂದ ಒಂದು ಪುನಃ ಭರವಸೆಯ ನಸುನಗೆ ಮತ್ತು ಅಂಗೀಕಾರದ ಸಮ್ಮತಿಯನ್ನು ಸೂಚಿಸುವ ತಲೆದೂಗುವಿಕೆಯೇ ಇದರ ಸಾಮಾನ್ಯವಾದ ಫಲಿತಾಂಶವಾಗಿದೆ.
ಹಾಗಿದ್ದರೂ, ಇತ್ತೀಚೆಗೆ, ಮಕ್ಕಳ ಮತ್ತು ವಯಸ್ಕರ ಸೋಂಕು ರಕ್ಷೆಯ ಕುರಿತು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಆಚರಣೆಗಳ ವಿಷಯದಲ್ಲಿ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ. ಯಾವ ಚುಚ್ಚು ಮದ್ದುಗಳು ನಿಜವಾಗಿಯೂ ಆವಶ್ಯವಾಗಿವೆ? ದುಷ್ಪರಿಣಾಮಗಳ ಕುರಿತೇನು? ಯಾವುದೇ ವಿಧದಲ್ಲಿ ರಕ್ತವು ಒಂದು ಲಸಿಕೆಯ ಉತ್ಪಾದನೆಯಲ್ಲಿ ಒಳಗೊಂಡಿದೆಯೋ?
ಕಳವಳಗೊಂಡ ಕ್ರೈಸ್ತ ಕುಟುಂಬವೊಂದಕ್ಕೆ ಪರಿಗಣಿಸಲಿಕ್ಕಾಗಿ ಒಳ್ಳೆಯ ಪ್ರಶ್ನೆಗಳು ಅಲ್ಲಿವೆ. ಆ ಉತ್ತರಗಳು ನಿಮ್ಮ ಮಕ್ಕಳ ಆರೋಗ್ಯ ಮತ್ತು ಭವಿಷ್ಯತ್ತಿನ ಮೇಲೆ, ಹಾಗೆಯೆ ನಿಮ್ಮ ಮೇಲೆಯೂ ಸಹ ಒಂದು ನೇರವಾದ ಸಂಬಂಧವನ್ನು ಹೊಂದಿರಸಾಧ್ಯವಿದೆ.
ಹಿನ್ನೆಲೆ
ಸಾವಿರದ ಒಂಬೈನೂರ ಐವತ್ತರುಗಳಲ್ಲಿ, ಪರಿಣಾಮಕಾರಿಯಾದ ಲಸಿಕೆಯೊಂದು ಪರಿಚಯಿಸಲ್ಪಟ್ಟು ಅದು ಅತ್ಯಧಿಕ ದೇಶಗಳಲ್ಲಿ ಪೋಲಿಯೋ ರೋಗದ ಭಯವನ್ನು ಕೊನೆಗೊಳಿಸಿತು. ಸಾವಿರದ ಒಂಬೈನೂರ ಎಂಬತ್ತರಲ್ಲಿ, ಪರಿಣಾಮಕಾರಿ ದೇವಿಹಾಕುವಿಕೆಯ ಕಾರ್ಯಕ್ರಮಗಳ ಫಲಿತಾಂಶವಾಗಿ ಸಿಡುಬಿನ ಉಪದ್ರವವನ್ನು ಇಡೀ ಪ್ರಪಂಚದಿಂದಲೇ ನಿರ್ಮೂಲ ಮಾಡಲಾಗಿದೆಯೆಂದು ಪ್ರಕಟಿಸಲ್ಪಟ್ಟಿತು. ಇದು ಬೆಂಜಮೀನ್ ಫ್ರಾಂಕ್ಲಿನ್ರ ಮಾತುಗಳನ್ನು ಸಮರ್ಥಿಸುವಂತೆ ಭಾಸವಾಯಿತು: “ಒಂದು ಪೌಂಡ್ ಗುಣಪಡಿಸುವಿಕೆಗಿಂತಲೂ ತಡೆಗಟ್ಟುವಿಕೆಯ ಒಂದು ಔನ್ಸು ಬೆಲೆಯುಳ್ಳದ್ದಾಗಿದೆ.”
ಇಂದು, ಸೋಂಕು ರಕ್ಷೆಯ ಕಾರ್ಯಕ್ರಮಗಳು ಅನೇಕ ರೋಗಗಳನ್ನು ನಿಯಂತ್ರಿಸುವುದರಲ್ಲಿ ಸಾಮಾನ್ಯವಾಗಿ ಪರಿಣಾಮಕಾರಿಯಾಗಿವೆ—ಕೆಲವನ್ನು ಹೆಸರಿಸಲು, ಧನುರ್ವಾಯು, ಪೋಲಿಯೋ, ಗಳಚರ್ಮರೋಗ (ಡಿಪ್ತೀರಿಯ), ಮತ್ತು ನಾಯಿಕೆಮ್ಮು. ಇನ್ನೂ ಹೆಚ್ಚಾಗಿ, ಕೆಲವು ಕಾರಣಗಳಿಂದಾಗಿ ಪಡೆದುಕೊಂಡ ಸೋಂಕು ರಕ್ಷೆಯು ಅಳ್ಳಕವಾದರೆ, ರೋಗವು ಮರುಕಳಿಸುತ್ತದೆ ಎಂದು ತೋರಿಸಲ್ಪಟ್ಟಿದೆ. ಒಂದು ದೇಶದಲ್ಲಿ ನಾಯಿಕೆಮ್ಮಿನೊಂದಿಗೆ ಇದು ಸಂಭವಿಸಿತ್ತು.
ಈ ಸೋಂಕು ರಕ್ಷೆಗಳು ಏನನ್ನು ಮಾಡುತ್ತವೆ? ಮೂಲಭೂತವಾಗಿ, ಎರಡು ವಿಧಗಳಲ್ಲಿ ಒಂದಾದ, ಅವುಗಳು ಜೀವಾಣುಗಳನ್ನು ಮತ್ತು ಸಾಂಕ್ರಾಮಿಕ ವಿಷಗಳನ್ನು ಒಳಗೊಂಡ ಪ್ಯಾತೊಜಿನ್ಗಳೆಂಬ ಸೋಂಕುರೋಗದ ನಿಯೋಗಿಗಳ ಆಕ್ರಮಣಗಳ ವಿರುದ್ಧವಾಗಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಪ್ರಥಮ ವಿಧಾನವನ್ನು ಕ್ರಿಯಾತ್ಮಕ ಸೋಂಕು ರಕ್ಷೆಯೆಂದು ಕರೆಯಲಾಗಿದೆ. ಈ ವಿಧಾನದಲ್ಲಿ ದೇಹಕ್ಕೆ ಅಪಾಯಕರವಾಗಿರದ ರೀತಿಯಲ್ಲಿ ಮಾರ್ಪಡಿಸಲ್ಪಟ್ಟಂತಹ ದುರ್ಬಲಗೊಳಿಸಲ್ಪಟ್ಟ ಅಥವಾ ಕೊಲ್ಲಲ್ಪಟ್ಟ ರೋಗಜನಕ [ಪ್ಯಾತೊಜಿನ್] (ಅಥವಾ ಅದರ ವಿಷವನ್ನು) ಈ ಚುಚ್ಚುಮದ್ದು ಒಳಗೊಂಡಿರುತ್ತದೆ. ದೇಹದ ಸ್ವಂತ ರಕ್ಷಣಾ ಯಂತ್ರವ್ಯೂಹವು ನಿಜವಾದ ರೋಗದ ನಿಯೋಗಿಯು ಬೆಳೆಯದಂತೆ ಹೋರಾಟ ನಡೆಸಬಲ್ಲ ಪ್ರತಿ ವಿಷವಸ್ತುಗಳೆಂದು ಕರೆಯಲ್ಪಡುವ ಸೂಕ್ಷ್ಮಾಣುಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ಸೋಂಕು ರಕ್ಷೆಯ ಚುಚ್ಚುಮದ್ದು ರೋಗಜನಕ ವಿಷದ (ನಂಜು) ಸ್ವತವನ್ನು ಒಳಗೊಂಡಿರುವುದಾದರೆ, ಅದನ್ನು ಜೀವಿಷಂದ ಎಂದು ಕರೆಯುತ್ತಾರೆ. ಅದು ಜೀವಂತವಾಗಿ ದುರ್ಬಲಗೊಳಿಸಲ್ಪಟ್ಟ (ಸಾರಗುಂದಿಸಿದ) ರೋಗಜನಕಗಳಿಂದ ಅಥವಾ ಕೊಂದ ಜೀವಿಗಳಿಂದ ಮಾಡಲ್ಪಟ್ಟಿರುವುದಾದರೆ, ಅದನ್ನು ಲಸಿಕೆಯೆಂದು ಕರೆಯುತ್ತಾರೆ.
ನೀವು ಊಹಿಸಸಾಧ್ಯವಿರುವಂತೆ, ಈ ಚುಚ್ಚುಮದ್ದುಗಳು ತತ್ಕ್ಷಣದ ಸೋಂಕು ರಕ್ಷೆಯನ್ನು ಉತ್ಪತ್ತಿಮಾಡುವುದಿಲ್ಲ. ಸಂರಕ್ಷಕ ಪ್ರತಿ ವಿಷವಸ್ತುಗಳನ್ನು ದೇಹವು ಉಂಟುಮಾಡುವಂತೆ ಮಾಡಲು ಅದು ಒಂದು ಕಾಲಾವಧಿಯ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಕ್ರಿಯಾತ್ಮಕ ಸೋಂಕು ರಕ್ಷೆಗಳು, ಮಕ್ಕಳ ಎಲ್ಲಾ ರೀತಿಯ ಚುಚ್ಚುಮದ್ದುಗಳು ಮತ್ತು ಲಸಿಕೆಹಾಕಣೆಗಳೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಸೂಜಿಮದ್ದುಗಳನ್ನು ಒಳಗೊಂಡಿವೆ. ಒಂದು ನಿರೀಕ್ಷಣೆಯೊಂದಿಗೆ (ಅನಂತರ ಚರ್ಚಿಸಲಾಗುತ್ತದೆ), ಉತ್ಪಾದನೆಯ ಯಾವುದೇ ಹಂತದಲ್ಲಿ ಇವುಗಳು ರಕ್ತದ ಉಪಯೋಗವನ್ನು ಒಳಗೂಡಿಸುವದಿಲ್ಲ.
ಇನ್ನೊಂದು ಕಾರ್ಯವಿಧಾನವು ನಿಷ್ಕ್ರಿಯ ಸೋಂಕು ರಕ್ಷೆಯೆಂದು ಕರೆಯಲ್ಪಡುತ್ತದೆ. ನಾಯಿ ಹುಚ್ಚಿನಂತಹ (ರೇಬೀಸ್) ಗಂಭೀರವಾದ ರೋಗವೊಂದಕ್ಕೆ ತುತ್ತಾಗಿರುವ ಸನ್ನಿವೇಶದಲ್ಲಿರುವ ವ್ಯಕ್ತಿಯೊಬ್ಬನಿಗೆ ಸಾಮಾನ್ಯವಾಗಿ ಇದನ್ನು ಕಾಯ್ದಿರಿಸಲಾಗುತ್ತದೆ. ಆ ವಿದ್ಯಮಾನದಲ್ಲಿ ಅದರ ಸ್ವಂತ ರಕ್ಷೆಯನ್ನು ಬೆಳೆಸಿಕೊಳ್ಳಲು ದೇಹಕ್ಕೆ ಸಮಯವಿರುವುದಿಲ್ಲ. ಆದುದರಿಂದ ಈಗಾಗಲೇ ಉತ್ಪಾದಿಸಲ್ಪಟ್ಟಿರುವ ಬೇರೆ ಯಾರಾದರೊಬ್ಬನ ಪ್ರತಿಕಾಯಗಳು ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಲ್ಲಿರುವ ರೋಗಜನಕಗಳೊಂದಿಗೆ ಸೆಣಸಲು ಚುಚ್ಚಲ್ಪಡುತ್ತವೆ. ಗ್ಯಾಮ ಗ್ಲಾಬ್ಯುಲಿನ್, ವಿಷರೋಧಿ, ಮತ್ತು ಅತಿರಕ್ಷೆಯ ನೀರಿನಂಥ ಹಳದಿ ದ್ರವ [ಸೀರಮ್]ಗಳು ರಕ್ಷೆಹೊಂದಿದ ಮಾನವರ ಯಾ ಪ್ರಾಣಿಗಳ ರಕ್ತದ ಸತ್ವದಿಂದ ಉತ್ಪಾದಿಸಲ್ಪಟ್ಟ ಔಷಧಪ್ರಮಾಣಗಳ ಕೆಲವು ಹೆಸರುಗಳಾಗಿವೆ. ಈ ಎರವಲು ಪಡೆದ, ಯಾ ನಿಷ್ಕ್ರಿಯ ರಕ್ಷೆಗಳು ತ್ವರಿತವಾಗಿ, ಆದರೆ ಕೇವಲ ತಾತ್ಕಾಲಿಕವಾಗಿ ಧಾಳಿಕೋರನ ವಿರುದ್ಧ ಹೋರಾಡಲು ಶರೀರಕ್ಕೆ ಸಹಾಯವನ್ನು ಕೊಡುವ ಉದ್ದೇಶವುಳ್ಳದ್ದಾಗಿರುತ್ತವೆ. ಎರವಲು ಪಡೆದ ಪ್ರತಿಕಾಯಗಳು ಬೇಗನೆ ಪರಕೀಯ ಸಸಾರಜನಕಗಳೋಪಾದಿ ದೇಹದೊಳಗಿಂದ ಹೊರಗೆ ಹಾಕಲ್ಪಡುತ್ತವೆ.
ನನ್ನ ಮಗುವಿಗೆ ಔಷಧಪ್ರಮಾಣಗಳು ಕೊಡಲ್ಪಡಬೇಕೊ?
ಈ ಹಿನ್ನೆಲೆಯಲ್ಲಿ ‘ನನ್ನ ಮಗು ಯಾವ ಸೋಂಕುರಕ್ಷೆಗಳನ್ನು ಪಡೆಯತಕ್ಕದ್ದು’ ಎಂದು ಕೆಲವರು ಇನ್ನೂ ಬೆರಗಾಗಬಹುದು. ಶೈಶವದ ಔಷಧಪ್ರಮಾಣಗಳು ಸುಲಭವಾಗಿ ದೊರಕುವ ಲೋಕದ ಅಧಿಕ ಭಾಗಗಳಲ್ಲಿ, ನಿಯತಕ್ರಮದ ಸೋಂಕುರಕ್ಷೆಗಳು ಗುರುತಿಸಲ್ಪಟ್ಟ ಶೈಶವದ ರೋಗಗಳ ಸಂಭವಗಳಲ್ಲಿ ನಾಟಕೀಯ ಕುಸಿತಗಳ ಪರಿಣಾಮಗಳನ್ನುಂಟುಮಾಡಿವೆ.
ಶಿಶುವೈದ್ಯಶಾಸ್ತ್ರದ ಅಕಾಡೆಮಿಯು ಹಲವಾರು ವರ್ಷಗಳ ವರೆಗೆ, ಲೋಕದ ಎಲ್ಲೆಡೆಗಳಲ್ಲಿರುವ ತದ್ರೀತಿಯ ಸಂಸ್ಥೆಗಳೊಂದಿಗೆ ಸಾಮಾನ್ಯವಾಗಿ ಸಹಮತದಲ್ಲಿದ್ದು, ಈ ಮುಂದಿನ ರೋಗಗಳಿಗೆ ನಿಯತಕ್ರಮದ ಸೋಂಕುರಕ್ಷೆಯನ್ನು ಶಿಫಾರಸ್ಸು ಮಾಡಿದೆ: ಗಂಟಲಮಾರಿ ರೋಗ, ನಾಯಿಕೆಮ್ಮು, ಮತ್ತು ಧನರ್ವಾಯು. ಸಾಮಾನ್ಯವಾಗಿ ಈ ಮೂರು ಸಂಯುಕ್ತಗೊಳಿಸಲ್ಪಟ್ಟು ಒಂದು ಔಷಧಪ್ರಮಾಣದೋಪಾದಿ—ಡಿಪಿಟಿ—ಕಡಿಮೆಪಕ್ಷ ಎರಡು ತಿಂಗಳುಗಳ ಅಂತರದೊಳಗೆ ಮೂರು ಪ್ರಬಲೀಕರಣ [ಬ್ಯೂಸರ್ಟ್] ಡಿಪಿಟಿಗಳೊಂದಿಗೆ ನೀಡಲ್ಪಡುತ್ತದೆ. ಇದರಿಂದ ಪ್ರತ್ಯೇಕವಾಗಿ, ದಡಾರ, ಗದ್ದುಬಾವು, ಮತ್ತು ರೂಬೆಲ್ಲಾ (ಜರ್ಮನ್ ದಡಾರ)ಗಳಿಗೆ ಒಂದು ಔಷಧಪ್ರಮಾಣವನ್ನು—ಎಮ್ಎಮ್ಆರ್—ಒಂದು ವರ್ಷ ವಯಸ್ಸಿನ ನಂತರದ ಮಕ್ಕಳಿಗೆ ಕೊಡಲಾಗುತ್ತದೆ. ಮೌಖಿಕ ಪೋಲಿಯೊ ಲಸಿಕೆಹಾಕುವ ನಾಲ್ಕು ಔಷಧಪ್ರಮಾಣಗಳನ್ನು (ಒಪಿವಿ) ಡಿಪಿಟಿಗಳಂತೆಯೇ ಕಾರ್ಯತಖ್ತೆಗನುಸಾರ ಕೊಡಲಾಗುತ್ತದೆ.a
ಅನೇಕ ಸ್ಥಳಗಳಲ್ಲಿ ಈ ನಿಯತಕ್ರಮದ ಸರಣಿಗಳು ಆಜ್ಞಾಪಿಕವಾಗಿವೆಯಾದರೂ, ಪ್ರಬಲೀಕರಣಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರಬಹುದು. ಇತ್ತೀಚೆಗೆ, ದಡಾರಗಳ ಅನೇಕ ತಲೆದೋರುವಿಕೆಗಳ ಫಲಿತಾಂಶವಾಗಿ, ಕೆಲವು ಪರಿಸ್ಥಿತಿಗಳಲ್ಲಿ ದಡಾರ ಲಸಿಕೆಹಾಕುವಿಕೆಯ ಹೆಚ್ಚಿನ ಪ್ರಬಲೀಕರಣಗಳನ್ನು ಶಿಫಾರಸ್ಸು ಮಾಡಲಾಯಿತು. ವಿವರಗಳಿಗಾಗಿ ನಿಮ್ಮ ಪ್ರದೇಶದ ವೈದ್ಯರೊಬ್ಬರನ್ನು ನೀವು ವಿಚಾರಿಸುವ ಅಗತ್ಯವಿರಬಹುದು.
ಇದಕ್ಕೆ ಕೂಡಿಸಿ, ನ್ಯುಮೋನಿಯ ಲಸಿಕೆ (ನುಮೊವಕ್ಸ್) ಬಂದಿರುತ್ತದೆ. ಇದು ಮಕ್ಕಳಿಗೆ ಮತ್ತು ಕೆಲವೊಂದು ಕಾರಣಕ್ಕಾಗಿ ನಿರ್ದಿಷ್ಟ ತರಹದ ನ್ಯುಮೋನಿಯಗಳಿಗೆ ತುತ್ತಾಗಬಹುದಾದ ಮಕ್ಕಳಿಗೆ ಮತ್ತು ಪ್ರಾಯಸ್ಥರಿಗೂ, ಜೀವಮಾನಕಾಲದ ರಕ್ಷೆಯನ್ನು ಒದಗಿಸುತ್ತದೆ ಎಂದು ತೋಚುತ್ತದೆ.
ಮಕ್ಕಳಿಗಾಗಿರುವ ಇನ್ನೊಂದು ಲಸಿಕೆಯು ಹಿಬ್ ಲಸಿಕೆ ಎಂದು ಕರೆಯಲ್ಪಡುತ್ತದೆ. ಇದನ್ನು ಶೈಶವದ ಸಾಮಾನ್ಯ ರೋಗಜನಕವಾದ ಹೀಮೊಫಿಲಸ್ ಇನ್ಫ್ಲುಯೆನ್ಸ ವಿರುದ್ಧವಾಗಿ ಸಂರಕ್ಷಿಸಿಕೊಳ್ಳಲು ಕೊಡಲ್ಪಡುತ್ತದೆ. ಈ ರೋಗಾಣು ಕೂಸುಗಳಲ್ಲಿ ಅನೇಕ ರೋಗಗಳಿಗೆ, ಹೆಚ್ಚು ಗಮನಾರ್ಹವಾಗಿ ಮಿದುಳುಬಳ್ಳಿಯ ಪೊರೆಗಳ ಉರಿಯೂತದ [ಮೆನಿಂಜೈಟಿಸ್] ಒಂದು ವಿಶೇಷವಾದ ವಿಧಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಲಸಿಕೆಯು ಸುರಕ್ಷತತೆಯದ್ದಾಗಿ ರುಜುವಾಗಿದೆ, ಮತ್ತು ಕೂಸು ಔಷಧಪ್ರಮಾಣಗಳ ಸರಣಿಗಳ ಒಂದು ಭಾಗವಾಗಿ ಅಧಿಕತಮವಾಗಿ ಶಿಫಾರಸ್ಸು ಮಾಡಲ್ಪಟ್ಟಿದೆ.
ಪ್ರಾಸಂಗಿಕವಾಗಿ, ಸೀತಾಳೆ ಸಿಡುಬುರೋಗಕ್ಕೆ [ಚಿಕನ್ ಪೊಕ್ಸ್] ಇನ್ನೂ ಒಂದು ನಿಯತಕ್ರಮದ ಸೋಂಕುರಕ್ಷೆಯು ಇಲ್ಲ. ಮತ್ತು ಮೊದಲು ತಿಳಿಸಿದಂತೆ ದೊಡ್ಡ ಸಿಡುಬುರೋಗದ [ಸ್ಮಾಲ್ ಪೊಕ್ಸ್] ಲಸಿಕೆಯು ಈಗ ದೊರಕುತ್ತಿಲ್ಲ ಯಾಕಂದರೆ ಲಸಿಕೆಹಾಕುವ ಲೋಕವ್ಯಾಪಕ ಕಾರ್ಯಕ್ರಮವು ಈ ಮಾರಕ ರೋಗವನ್ನು ಇಲ್ಲದಂತೆ ಮಾಡಿದೆ.
ಪಕ್ಕಪರಿಣಾಮಗಳ ಕುರಿತೇನು?
ಸೋಂಕುರಕ್ಷೆಯ ಪಕ್ಕಪರಿಣಾಮಗಳ ವಿವಾದಾಂಶದ ಕುರಿತೇನು? ಹೆಚ್ಚಿನ ಔಷಧಪ್ರಮಾಣಗಳೊಂದಿಗೆ, ಸಾಮಾನ್ಯವಾಗಿ ಮಗುವಿನ ಥಟ್ಟನೆ ಅಳು ಮತ್ತು ಕಣ್ಷಿಕ ಕಣ್ಣೀರುಗಳ ಆಚೆಗೆ, ಪಕ್ಕಪರಿಣಾಮಗಳು ಸಾಮಾನ್ಯವಾಗಿ ಮಿತವಾಗಿರುತ್ತವೆ ಮತ್ತು ತಾತ್ಕಾಲಿಕವಾಗಿರುತ್ತವೆ—ಹೆಚ್ಚೆಂದರೆ ಒಂದೆರಡು ದಿನಗಳ ಜ್ವರ. ಆದರೂ, ಈ ಔಷಧಪ್ರಮಾಣಗಳ ಅಪಾಯಗಳ ಕುರಿತು ಅನೇಕ ಹೆತ್ತವರಿಗೆ ವ್ಯಾಕುಲತೆಗಳಿರುತ್ತವೆ. ಅವರ ಮಕ್ಕಳ ಆರೋಗ್ಯದ ಹೆತ್ತವರ ಚಿಂತೆಯ ಸಮೀಕ್ಷೆಯನ್ನು ಒಂದು ವೈದ್ಯಕೀಯ ಅಧ್ಯಯನವು ನಡಿಸಿತು ಮತ್ತು ಸಮೀಕ್ಷಿಸಲ್ಪಟ್ಟ ಹೆತ್ತವರಲ್ಲಿ 57 ಪ್ರತಿಶತ ಸೋಂಕುರಕ್ಷೆಗಳ ಪ್ರತಿಕ್ರಿಯೆಯ ಕುರಿತು ವ್ಯಾಕುಲಿತರಾಗಿದ್ದರು.
ಇತ್ತೀಚೆಗೆ, ಡಿಪಿಟಿಯ ಒಂದು ಘಟಕಾಂಶದ ಬಗ್ಗೆ ಮಹಾ ಚಿಂತೆಯನ್ನು ಪ್ರಚುರಿಸಲಾಗಿದೆ. ಹೆಸರಿಸುವುದಾದರೆ ಪರ್ಟ್ಯುಸ್ಸಿಸ್, ಯಾ ನಾಯಿಕೆಮ್ಮುವಿನ ಘಟಕಾಂಶ. ಈ ಲಸಿಕೆಯ ಯಶಸ್ಸು ಗತಸಮಯಗಳಲ್ಲಿ ಈ ಭೀತಿಗೊಳಿಸಿದ ರೋಗವೊಂದರಲ್ಲಿ ಗಮನಾರ್ಹವಾದ ಕುಸಿತಕ್ಕೆ ಕಾರಣವಾಗಿತ್ತು—ಈ ಲಸಿಕೆಯ ಮೊದಲು ಪ್ರತಿವರ್ಷ ಕೇವಲ ಒಂದು ದೇಶದಲ್ಲಿ 2,00,000 ಕೇಸುಗಳು ಇದ್ದರೂ, ಈ ಲಸಿಕೆಯ ವ್ಯಾಪಕ ಬಳಕೆಯ ನಂತರ ಅದು ವರ್ಷಕ್ಕೆ 2,000ಕ್ಕೆ ಇಳಿದದೆ. ಆದಾಗ್ಯೂ, ಗಂಭೀರವಾದ ಪಕ್ಕಪರಿಣಾಮಗಳು—ಥಟ್ಟನೇ ರೋಗಗ್ರಸ್ತನಾಗುವುದು ಮತ್ತು ಮಿದುಳು ಹಾನಿ ಸಹ—ನೀಡಲ್ಪಟ್ಟ 1,00,000 ಔಷಧಪ್ರಮಾಣಗಳಲ್ಲಿ ಸುಮಾರು 1ರಂತೆ ಸಂಭವಿಸಿವೆ.
ಈ ಪ್ರತಿಕ್ರಿಯೆಯು ಅತಿ ವಿರಳವಾಗಿರುವುದಾದರೂ, ತಮ್ಮ ಮಕ್ಕಳು ಶಾಲೆಯಲ್ಲಿ ಅರ್ಹತೆಹೊಂದಲು ಔಷಧಪ್ರಮಾಣ ಪಡೆದುಕೊಳ್ಳುವುದರಲ್ಲಿ ಅವರ ಮಕ್ಕಳಿಗೆ ಅನುಮತಿಸುವಲ್ಲಿ ಅವರಿಗೆ ಕೊಂಚವೆ ಆಯ್ಕೆಯಿರುವದನ್ನು ಕಂಡುಕೊಳ್ಳುವ ಅನೇಕ ಹೆತ್ತವರ ಕೆಲವೊಂದು ಚಿಂತೆಗೆ ಅದು ಕಾರಣವಾಗುತ್ತದೆ. ನಾಯಿಕೆಮ್ಮು ರೋಗವು ಅಸಾಮಾನ್ಯವಾಗಿರುವುದಾದರೂ, ಒಂದು ಸಮಾಜಕ್ಕೆ ತಟ್ಟುವಾಗ ಅದರ ಧ್ವಂಸತೆಯು ಎಷ್ಟೆಂದರೆ, ಸರಾಸರಿ ಮಗುವಿಗೆ “ರೋಗ ಹಿಡಿಯುವದಕ್ಕಿಂತ ಲಸಿಕೆಯು ಹೆಚ್ಚು ಸುರಕ್ಷತೆಯದ್ದು” ಎಂಬ ತೀರ್ಮಾನಕ್ಕೆ ತಜ್ಞರು ಬಂದಿರುತ್ತಾರೆ. “ಮೊದಲಿನ ಔಷಧಪ್ರಮಾಣವು ಕೊಡಲ್ಪಟ್ಟಾಗ ಸೆಳವು, ಮಿದುಳುರಿತ, ನಾಭಿನರವ್ಯೂಹ ರೋಗಗಳ ಸಂಕೇತಗಳು, ಯಾ ಮೂರ್ಛೆತಪ್ಪಿಬೀಳುವಿಕೆ. ಹೊರತಾಗಿ ಸೋಂಕುರಕ್ಷೆ ನೀಡಲ್ಪಡಬೇಕೆಂದು ಅಂತಹ ತಜ್ಞರು ಸಲಹೆಯನ್ನೀಯುತ್ತಾರೆ. ‘ಅತಿರೇಕ ನಿದ್ರಾಪೂರಿತರಾಗಿರುವುದು, ಅತಿರೇಕ ಕಿರಿಚುವಿಕೆ (3 ಯಾ ಹೆಚ್ಚು ತಾಸುಗಳ ತನಕ ಎಡೆಬಿಡದೆ ಅಳುವುದು ಯಾ ಕಿರಿಚುವುದು), ಯಾ ತಾಪಮಾನವು 105°F (40.5°C)ಕ್ಕಿಂತಲೂ’ ಕೂಸುಗಳು ಅನುಭವಿಸಿದರೆ, ಲಸಿಕೆಯ ಅಧಿಕ ಔಷಧಪ್ರಮಾಣಗಳನ್ನು ಪಡೆಯಕೂಡದು.”b
ಜಪಾನ್ನಲ್ಲಿ ಅತಿ ನಿರೀಕ್ಷಾಭರಿತ ಪ್ರತೀಕ್ಷೆಗಳೊಂದಿಗೆ ಪ್ರಚಲಿತದಲ್ಲಿ ನೀಡಲ್ಪಡುವಂತೆ, ಅನೇಕ ದೇಶಗಳಲ್ಲಿ ಸಮಸ್ಯೆಗೆ ನಿಜ ಪರಿಹಾರವೆಂದರೆ ಜೀವಕಣಗಳಿಲ್ಲದ ಲಸಿಕೆಯೊಂದಾಗಿದೆ. ಈ ಹೊಸ ಮತ್ತು ಹೆಚ್ಚು ಸುರಕ್ಷತೆಯದ್ದೆಂದು ಭಾಸವಾಗುವ ಲಸಿಕೆಯು ಇತರ ದೇಶಗಳಲ್ಲೂ ದೊರಕುವಂತಾಗಿದೆ.
ಇತರ ನಿಯತಕ್ರಮದ ಕೂಸಿನ ಔಷಧಪ್ರಮಾಣಗಳು ಮತ್ತೆಮತ್ತೆ ಪರಿಣಾಮಕಾರಿಯಾದವುಗಳೂ, ಸಂಬಂಧಿತವಾಗಿ ಸುರಕ್ಷತೆಯವುಗಳೂ ಆಗಿ ರುಜುವಾಗಿವೆ.
ಪ್ರಾಯಸರ್ಥ ಸೋಂಕುರಕ್ಷೆಯ ಕುರಿತೇನು?
ವ್ಯಕ್ತಿಯೊಬ್ಬನು ಪ್ರಾಯಸ್ಥನಾದಾಗ, ಅವನು ನೆನಪಿನಲ್ಲಿಡಬೇಕಾದ ಕೆಲವೇ ಕ್ರಿಯಾತ್ಮಕ ಸೋಂಕುರಕ್ಷೆಗಳು ಇವೆ. ಆದರ್ಶಪ್ರಾಯವಾಗಿ, ಹೊರಗೆ ಒಡ್ಡಲ್ಪಟ್ಟಿರುವ ಯಾ ಶೈಶವದಲ್ಲಿನ ಸೋಂಕುರಕ್ಷೆಯ ಫಲಿತಾಂಶವಾಗಿ, ಎಲ್ಲಾ ಪ್ರಾಯಸ್ಥರು ಈಗಾಗಲೇ ದಡಾರ, ಕೆಪ್ಪಟೆ, ಮತ್ತು ಜರ್ಮನ್ ದಡಾರಗಳಿಂದ ರಕ್ಷಣೆಹೊಂದಿರತಕ್ಕದ್ದು. ಅಂತಹ ರಕ್ಷೆಯ ಕುರಿತು ಏನಾದರೂ ಪ್ರಶ್ನೆ ಇದ್ದಲ್ಲಿ, ಪ್ರಾಯಸ್ಥನೊಬ್ಬನಿಗೆ ವೈದ್ಯನು ಎಮ್ಎಮ್ಆರ್ ಔಷಧಪ್ರಮಾಣವನ್ನು ಶಿಫಾರಸ್ಸುಮಾಡಬಹುದು.
ಧನುರ್ವಾಯು [ಟೆಟಿನಸ್] ಜೀವಾಣುವಿಷದ ಒಂದು ಔಷಧಪ್ರಮಾಣವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಯಾ ಹಿಂದೆ ಮುಂದೆ, ದವಡೆ ಸೆಳವು ರೋಗದ ವಿರುದ್ಧ ಒಂದು ನಿವಾರಕದೋಪಾದಿ ಒಂದು ಒಳ್ಳೆಯ ವಿಚಾರವೆಂದು ಪರಿಗಣಿಸಲ್ಪಟ್ಟಿದೆ. ವಯಸ್ಸಾದವರು ಮತ್ತು ಅಸ್ಥಿಗತ ರೋಗವುಳ್ಳವರು ವಾರ್ಷಿಕ ಇನ್ಫ್ಲುಯೆನ್ಸ ಸೋಂಕುರಕ್ಷೆಗಳ ಕುರಿತು ಅವರ ವೈದ್ಯರೊಂದಿಗೆ ಪರೀಕ್ಷಿಸಿಕೊಳ್ಳಲು ಬಯಸಬಹುದು. ಲೋಕದ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿರುವವರು, ಯಾವ ಸ್ಥಳಗಳಿಗೆ ಅವರು ಹೋಗುತ್ತಾರೋ, ಅಲ್ಲಿ ಪೀತಜ್ವರ, ವಾಂತಿಬೇಧಿ ರೋಗ, ನೆಗಡಿ, ವಿಷಮಜ್ವರ, ಯಾ ಪೇಗ್ಲುಗಳಂತಹ ರೋಗಗಳು ಸ್ಥಳಿಕವಾಗಿರುವುದಾದರೆ ಅಂತಹವುಗಳ ವಿರುದ್ಧ ಸೋಂಕುರಕ್ಷೆಯನ್ನು ಪರಿಗಣಿಸತಕ್ಕದ್ದು.
ಇನ್ನೊಂದು ಕ್ರಿಯಾತ್ಮಕ ಸೋಂಕುರಕ್ಷೆಯು ಗಮನಕ್ಕೆ ಅರ್ಹವುಳ್ಳದ್ದಾಗಿದೆ ಯಾಕಂದರೆ ರಕ್ತದಿಂದ ಮಾಡಿದ ಕ್ರಿಯಾತ್ಮಕ ಸೋಂಕುರಕ್ಷೆಯು ಇದೊಂದು ಮಾತ್ರವೇ ಆಗಿರುತ್ತದೆ. ಅದು ಹೆಪ್ಟವಕ್ಸ್-ಬಿ ಎಂದು ಕರೆಯಲ್ಪಡುವ ಯಕೃತುದ್ರೇಕ [ಹೆಪಟೈಟಿಸ್]-ಬಿ ಲಸಿಕೆಯಾಗಿದೆ. ಆಕಸ್ಮಿಕವಾಗಿ ಯಕೃತುದ್ರೇಕ ಬಿಯಿಂದ ಪೀಡಿತರಾದ ರೋಗಿಗಳ ರಕ್ತದುತ್ಪನ್ಯಗಳೊಂದಿಗೆ ಒಡ್ಡಲ್ಪಡಬಹುದಾದರೂ, ಅದರ ಉತ್ಪಾದನೆಯ ಕಾರ್ಯವಿಧಾನದ ಕಾರಣ ಈ ಲಸಿಕೆಯು ಅನೇಕರಿಗೆ ವ್ಯಾಕುಲತೆಯನ್ನುಂಟುಮಾಡಿದೆ.
ಮೂಲತಃ, ಆರಿಸಲ್ಪಟ್ಟ ಯಕೃತುದ್ರೇಕ-ಬಿ ರೋಗಾಣು ವಾಹಕರ ರಕ್ತವನ್ನು ಸಂಚಯನಗೊಳಿಸಲಾಗುತ್ತದೆ ಮತ್ತು ಯಾವುದೇ ರೋಗಾಣುವನ್ನು ಕೊಲ್ಲುವಂತೆ ಉಪಚರಿಸಲಾಗುತ್ತದೆ. ಈ ಪರಿಷ್ಕೃತಗೊಳಿಸಲ್ಪಟ್ಟ, ನಿಷ್ಕ್ರಿಯಾತ್ಮಕ ಪ್ರತಿಜನಕವನ್ನು ಒಂದು ಲಸಿಕೆಯೋಪಾದಿ ಶರೀರದೊಳಗೆ ಚುಚ್ಚಬಹುದು. ಆದಾಗ್ಯೂ, ಲೈಂಗಿಕವಾಗಿ ಸ್ವೇಚ್ಛಾಚಾರಿಗಳಾಗಿರುವಂತಹವರ ರೋಗಪೀಡಿತ ಜನರಿಂದ ತೆಗೆಯಲ್ಪಟ್ಟ ರಕ್ತ ಉತ್ಪಾದಕಗಳ ಕೇಡಿಗೆ ಹೆದರುತ್ತಾ, ಈ ಲಸಿಕೆಯನ್ನು ತೆಗೆದುಕೊಳ್ಳಲು ಅನೇಕರು ನಿರಾಕರಿಸುತ್ತಾರೆ. ಇನ್ನೂ ಹೆಚ್ಚಾಗಿ, ಇನ್ನೊಬ್ಬ ವ್ಯಕ್ತಿಯ ರಕ್ತದಿಂದ ಅದು ವ್ಯುತ್ಪತ್ತಿಸಲ್ಪಟ್ಟಿರುವ ನೆಲೆಯಲ್ಲಿ, ಕೆಲವು ಶುದ್ಧಾಂತಃಕರಣದ ಕ್ರೈಸ್ತರು ಈ ಲಸಿಕೆಯನ್ನು ಪ್ರತಿರೋಧಿಸುತ್ತಾರೆ.c
ಯಕೃತುದ್ರೇಕ ಲಸಿಕೆಗಿರುವ ಅಂತಹ ಅಡಿಗ್ಡಳು ಇನ್ನೊಂದು ಭಿನ್ನವಾದ ಆದರೂ ತತ್ಸಮಾನ ಯಕೃತುದ್ರೇಕ-ಬಿ ಲಸಿಕೆಯ ಸಾಮರ್ಥ್ಯವುಳ್ಳ ಒಂದು ಬಿಡುಗಡೆಯಿಂದ ಪರಿಣಾಮಕಾರಿಯಾಗಿ ತೆಗೆದುಹಾಕಲ್ಪಟ್ಟಿವೆ. ಇದನ್ನು ತಳಿಶಾಸ್ತ್ರೀಯ ತಾಂತ್ರಿಕತೆಯಿಂದ ಉಂಟುಮಾಡಲ್ಪಟ್ಟಿದ್ದು, ಲಸಿಕೆಯು ಕಿಣ್ವದ ಕಣಗಳಿಂದ, ಯಾವುದೇ ಮಾನವ ರಕ್ತದ ಸೇರ್ಪಡೆಯಿಲ್ಲದೆ ಉತ್ಪಾದಿಸಲ್ಪಟ್ಟಿದೆ. ನೀವು ಆರೋಗ್ಯ-ಶುಶ್ರೂಷಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದಾದರೆ ಯಾ ಬೇರೆ ಇನ್ಯಾವುದಾದರೂ ಕಾರಣಗಳಿಗಾಗಿ ಯಕೃತುದ್ರೇಕ-ಬಿ ಲಸಿಕೆಯ ಒಬ್ಬ ಅಭ್ಯರ್ಥಿಯೆಂದು ಪರಿಗಣಿಸುವುದಾದರೆ, ನಿಮ್ಮ ವೈದ್ಯನೊಂದಿಗೆ ಈ ವಿಚಾರದಲ್ಲಿ ಚರ್ಚಿಸಲು ನೀವು ಬಯಸಬಹುದು.
ಲಸಿಕೆಯ ಉತ್ಪಾದನೆಯಲ್ಲಿ ರಕ್ತ
ರಕ್ತದ ದುರುಪಯೋಗದ ಮೇಲಿನ ಬೈಬಲಿನ ನಿಷೇಧದ ಕುರಿತು ಚಿಂತಿತರಾಗಿರುವ ಕ್ರೈಸ್ತರಿಗೆ ಇದೊಂದು ಪ್ರಾಮುಖ್ಯ ವಿಚಾರವನ್ನು ಎಬ್ಬಿಸುತ್ತದೆ. (ಅ. ಕೃತ್ಯಗಳು 15:28, 29) ರಕ್ತದಿಂದ ಮಾಡಿದ ಬೇರೆ ಯಾವುದಾದರೂ ಲಸಿಕೆಗಳು ಇವೆಯೋ?
ಸಾಮಾನ್ಯ ನಿಯಮದೋಪಾದಿ, ಹೆಪಟವಕ್ಸ್-ಬಿಯ ಹೊರತಾಗಿ, ಕ್ರಿಯಾತ್ಮಕ ಸೋಂಕುರಕ್ಷೆಗಳು ರಕ್ತದಿಂದ ಉತ್ಪಾದಿಸಲ್ಪಡುವುದಿಲ್ಲ. ಉದಾಹರಣೆಗಾಗಿ, ಕೂಸುಗಳ ಎಲ್ಲಾ ಔಷಧಪ್ರಮಾಣಗಳು ಇದರಲ್ಲಿ ಸೇರಿವೆ.
ನಿಷ್ಕ್ರಿಯ ಸೋಂಕುರಕ್ಷೆಯ ಕುರಿತು ಇದರ ವಿಪರ್ಯಸತ್ತೆಯು ಸತ್ಯವಾಗಿದೆ. ಪ್ರಾಯಶಃ ರೋಗಕ್ಕೆ ತುತ್ತಾದ ನಂತರ ಒಬ್ಬನಿಗೆ ಔಷಧಪ್ರಮಾಣವು ಕೊಡಲ್ಪಡಬೇಕೆಂದು ಸಲಹೆಯನ್ನಿತ್ತರೆ—ಒಂದು ತುಕ್ಕುಹಿಡಿದ ಮೊಳೆಯ ಮೇಲೆ ಕಾಲನಿಟ್ಟಾದ ನಂತರ ಯಾ ನಾಯಿಯಿಂದ ಕಡಿತಕ್ಕೊಳಗಾದ ನಂತರ—ಅಂತಹ ಸಂದರ್ಭಗಳಲ್ಲಿ ಔಷಧಪ್ರಮಾಣಗಳು (ಅವು ನಿಯತಕ್ರಮದ ಪ್ರಬಲೀಕರಣಗಳಾಗಿರದ ಹೊರತು) ಅತಿರಕ್ಷೆಯ ನೀರಿನಂಥ ಹಳದಿ ದ್ರವ [ಸೀರಮ್]ಗಳಾಗಿರುತ್ತವೆ ಮತ್ತು ಅವುಗಳು ರಕ್ತ ಬಳಸಿ ಮಾಡಿದವುಗಳಾಗಿವೆ. ಇದು ಆರ್ಏಚ್ ಗ್ಲಾಬ್ಯುಲಿನ್ (ರೊಗಮ್) ವಿಷಯದಲ್ಲೂ ಸತ್ಯವಾಗಿದೆ. ಕೆಲವೊಂದು ಕಾರಣದಿಂದ ಆರ್ಏಚ್-ನೆಗೆಟಿವ್ ತಾಯಿಗಳು, ಆರ್ಏಚ್-ಪಾಸಿಟಿವ್ ಕೂಸಿನ ಜನನದಲ್ಲಿ ಆಗುವಂತೆ, ಆರ್ಏಚ್-ಪಾಸಿಟಿವ್ ರಕ್ತಕ್ಕೆ ಒಡ್ಡಲ್ಪಟ್ಟಾಗ ಇದನ್ನು ಅನೇಕ ವೇಳೆ ಶಿಫಾರಸ್ಸು ಮಾಡಲ್ಪಡುತ್ತದೆ.
ಈ ನಿಷ್ಕ್ರಿಯ ಸೋಂಕುರಕ್ಷೆಗಳು ರಕ್ತದ ವಿವಾದಾಂಶದ ಬಗೆಯ ಚಿಂತೆಗೆ ಸಂಬಂಧಿಸಲ್ಪಟ್ಟಿರುವುದರಿಂದ, ಶುದ್ಧಾಂತಃಕರಣದ ಕ್ರೈಸ್ತರಿಂದ ಯಾವು ನಿಲುವು ತೆಗೆದುಕೊಳ್ಳಲ್ಪಡುತ್ತದೆ? ಈ ಪತ್ರಿಕೆಯ ಮತ್ತು ಇದರ ಸಂಗಾತಿಯಾದ ದ ವಾಚ್ಟವರ್ನ ಹಿಂದಿನ ಲೇಖನಗಳು ಒಂದು ಸುಸಂಗತವಾದ ನಿಲುವನ್ನು ಸಾದರಪಡಿಸಿವೆ: ಸ್ವತಃ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಈ ಚಿಕಿತ್ಸೆಯನ್ನು ಅವನು ಸ್ವೀಕರಿಸುವನೋ ಇಲ್ಲವೋ ಎಂಬುದರ ಕುರಿತು ವ್ಯಕ್ತಿಶಃ ಕ್ರೈಸ್ತನ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಗೆ ಬಿಡಲ್ಪಟ್ಟಿದೆ.d
ನನ್ನ ಕುಟುಂಬವು ಸೋಂಕುರಕ್ಷೆ ಪಡೆಯಬೇಕೋ?
ಜೀವಕ್ಕಾಗಿ ಕ್ರೈಸ್ತರಿಗೆ ಉನ್ನತವಾದ ಗೌರವವಿದೆ ಮತ್ತು ಅವರ ಕುಟುಂಬದ ಆರೋಗ್ಯಕ್ಕೋಸ್ಕರ ಅತ್ಯುತ್ತಮವಾದುದನ್ನು ಮಾಡಲು ಅವರು ಯಥಾರ್ಥವಾಗಿ ಬಯಸುತ್ತಾರೆ. ನಿಮ್ಮ ಕುಟುಂಬವು ಸೋಂಕುರಕ್ಷೆ ಪಡೆಯಬೇಕೋ ಎಂದು ಶುದ್ಧಾಂತಃಕರಣದಿಂದ ನೀವು ತೀರ್ಮಾನಿಸುವಿರೋ ಅದು ನೀವು ಮಾಡಬೇಕಾದ ವೈಯಕ್ತಿಕ ನಿರ್ಣಯವಾಗಿದೆ.—ಗಲಾತ್ಯ 6:5.
ಒಬ್ಬ ತಜ್ಞನು ಸನ್ನಿವೇಶವನ್ನು ಉತ್ತಮವಾಗಿ ಸಾರಾಂಶಿಸಿದ್ದಾನೆ: “ತಮ್ಮ ಮಕ್ಕಳಿಗಾಗಿ ನೀಡಲ್ಪಡುವ ಪ್ರತಿಯೊಂದು ವೈದ್ಯಕೀಯ ವ್ಯವಹಾರದ ಕುರಿತು ಹೆತ್ತವರಿಗೆ ತಿಳಿಸತಕ್ಕದ್ದು. ಅವರ ಮಕ್ಕಳ ಕೇವಲ ಕಾನೂನುಬದ್ಧ ಪಾಲಕರಾಗಿರುವುದಕ್ಕಿಂತಲೂ ಅವರು ಹೆಚ್ಚಾಗಿದ್ದಾರೆ. ಅವರ ಪೀಳಿಗೆಯು ಅವಲಂಬಿತವಾಗಿರುವ ಈ ಸಮಯಾವಧಿಯಲ್ಲಿ ತಮ್ಮ ಪೀಳಿಗೆಯ ಶ್ರೇಯೋಭಿವೃದ್ಧಿಗೆ ಮತ್ತು ಸುರಕ್ಷತೆಗೆ ಅವರು ಜವಾಬ್ದಾರರಾಗಿದ್ದಾರೆ.” ಸೋಂಕುರಕ್ಷೆಯ ಈ ವಿಷಯದಲ್ಲೂ, ಹಾಗೂ ಇನ್ನಿತರ ಎಲ್ಲಾ ವೈದ್ಯಕೀಯ ವಿಚಾರಗಳಲ್ಲಿ, ಯೆಹೋವನ ಸಾಕ್ಷಿಗಳು ಆ ಜವಾಬ್ದಾರಿಯನ್ನು ಅತಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.—ವೈದರೊಬ್ಬರಿಂದ ದತ್ತ ಲೇಖನ. (g93 8/8)
[ಅಧ್ಯಯನ ಪ್ರಶ್ನೆಗಳು]
a ಲೋಕಾರೋಗ್ಯ ಸಂಸ್ಥೆಯು ಯಕೃತುದ್ರೇಕ [ಹೆಪಟೈಟಿಸ್] ಬಿ ರೋಗದ ವಿರುದ್ಧ ಕೂಸುಗಳಿಗೆ ನಿಯತಕ್ರಮದ ಸೋಂಕುರಕ್ಷೆಯನ್ನು ಕೊಡುವಂತೆ ಲೋಕದ ಅನೇಕ ಭಾಗಗಳಲ್ಲಿ ಈಗ ಶಿಫಾರಸ್ಸು ಮಾಡುತ್ತದೆ.
b ಥಟ್ಟನೇ ರೋಗಗ್ರಸ್ತರಾಗುವ ಕುಟುಂಬ ಇತಿಹಾಸವು ಪ್ರತಿಕ್ರಿಯೆಗಳೊಂದಿಗೆ ಪರಸ್ಪರ ಸಂಬಂಧಿಸುವಂತೆ ಭಾಸವಾಗುವುದಿಲ್ಲ. ಮತ್ತು ಪ್ರತಿಕ್ರಿಯೆಯೊಂದಕ್ಕೆ ಉಸಿರಾಟದ ಸೋಂಕುಗಳು ಒಳಗಾಗಿಸುವುದಿಲ್ಲವಾದರೂ, ಮಗುವು ತುಸುವಾದರೂ ಅಸ್ವಸ್ಥವಾಗಿರುವುದಾದರೆ ಸಹ, ಔಷಧಪ್ರಮಾಣವನ್ನು ತಡೆಹಿಡಿಯುವುದು ವಿವೇಕಯುಕ್ತವೆಂದು ತೋಚಬಹುದು.
c ಜೂನ್ 1, 1990ರ ದ ವಾಚ್ಟವರ್ನಲ್ಲಿ “ವಾಚಕರಿಂದ ಪ್ರಶ್ನೆಗಳು” ನೋಡಿರಿ.
[ಪುಟ 26 ರಲ್ಲಿರುವ ಚೌಕ]
ರಕ್ತಜನ್ಯವಲ್ಲದ ಸೋಂಕುರಕ್ಷೆಗಳು
ಕೂಸು ಔಷಧಪ್ರಮಾಣಗಳು (ಡಿಪಿಟಿ, ಒಪಿವಿ, ಎಮ್ಎಮ್ಆರ್)
ಹಿಬ್ ಲಸಿಕೆ
ನ್ಯುಮೊವಕ್ಸ್
ಜೀವಾಣುವಿಷಗಳು [ಟಾಕ್ಸಾಡ್ಸ್]
ಫ್ಲೂ ಔಷಧಪ್ರಮಾಣಗಳು
ರಿಕಂಬಿವಕ್ಸ್-ಏಚ್ಬಿ
ರಕ್ತಜನ್ಯ ಸೋಂಕುರಕ್ಷೆಗಳು
ಹೆಪ್ಟವಕ್ಸ್-ಬಿ
ರೊಗಮ್
ವಿಷರೋಧಿಗಳು
ಆ್ಯಂಟಿವಿನೀನ್ (ಹಾವು ಮತ್ತು ಜೇಡರಹುಳದ ವಿಷಕ್ಕಾಗಿ)
ಸೋಂಕುರಕ್ಷೆಯ ಗ್ಲಾಬ್ಯುಲಿನ್ (ವಿವಿಧ ತೆರದ ರೋಗಗಳಿಗೆ)
ಗ್ಯಾಮ ಗ್ಲಾಬ್ಯುಲಿನ್
ಅತಿರಕ್ಷೆಯ ಸೀರಮ್ ತಯಾರಿಕೆಗಳು (ಉದಾಹರಣೆಗೆ, ನಾಯಿಹುಚ್ಚಿಗೆ ಪ್ರತಿರೋಧ)