ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೃತಜ್ಞರಾಗಿರಬೇಕು ಏಕೆ?
    ಕಾವಲಿನಬುರುಜು—1998 | ಫೆಬ್ರವರಿ 15
    • ಎಂಬ ಮನೋಭಾವದಿಂದ ಹೆಚ್ಚೆಚ್ಚಾಗಿ ಸ್ಥಾನಭರ್ತಿಯಾಗುತ್ತಿದೆ. ಈ ಪರಿಸ್ಥಿತಿಯು ಕಡೇ ದಿವಸಗಳ ಗುರುತಿನ ಚಿಹ್ನೆಗಳಲ್ಲಿ ಒಂದು ಚಿಹ್ನೆಯಾಗಿದೆ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಕಡೇ ದಿವಸಗಳಲ್ಲಿ ಸಮಯಗಳು ಬಹಳ ಅಪಾಯಕಾರಿಯಾಗಿರುವವು ಎಂಬುದನ್ನು ನೀವು ಗ್ರಹಿಸತಕ್ಕದ್ದು. ಮನುಷ್ಯರು ತೀರ ಸ್ವಾರ್ಥಿಗಳಾಗುವರು . . . ಅವರಲ್ಲಿ ಕೃತಜ್ಞತೆಯ ವಿಪರೀತ ಕೊರತೆಯಿರುವುದು.”—2 ತಿಮೊಥೆಯ 3:1, 2, ಫಿಲಿಪ್ಸ್‌.

      ಇತರ ವಿದ್ಯಮಾನಗಳಲ್ಲಿ, ಕೃತಜ್ಞತೆಯು ಮುಖಸ್ತುತಿಯಿಂದ ಸ್ಥಾನಭರ್ತಿಯಾಗುತ್ತದೆ. ಕೃತಜ್ಞತೆಯ ಅಭಿವ್ಯಕ್ತಿಗಳು ಯಾವುದೇ ವೈಯಕ್ತಿಕ ಲಾಭದ ಕುರಿತಾಗಿ ಯೋಚಿಸದೆ ಅಂತರಂಗದಿಂದ ಮಾಡಲ್ಪಡುತ್ತವೆ. ಆದರೆ ಮುಖಸ್ತುತಿಯು, ಸಾಮಾನ್ಯವಾಗಿ ಕಪಟವೂ ಅತಿಶಯಿಸಿ ಹೇಳಲ್ಪಟ್ಟಂಥದ್ದೂ ಆಗಿರುತ್ತದೆ. ಇದು ಬಡ್ತಿಗಾಗಿ ಅಥವಾ ನಿರ್ದಿಷ್ಟ ವೈಯಕ್ತಿಕ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂಬ ಗುಪ್ತ ಹೇತುವಿನಿಂದ ಉಂಟಾಗಬಹುದು. (ಯೂದ 16) ಅಂಥ ನಯನುಡಿಗಳು, ಮುಖಸ್ತುತಿಯನ್ನು ಪಡೆದುಕೊಳ್ಳುವ ಮೋಡಿಹಾಕುವುದಲ್ಲದೆ, ದುರಭಿಮಾನ ಹಾಗೂ ಗರ್ವದ ಫಲವಾಗಿ ಬಂದವುಗಳಾಗಿರಬಲ್ಲವು. ಹಾಗಾದರೆ, ಕಪಟತನದ ಮುಖಸ್ತುತಿಗೆ ಬಲಿಯಾಗಲು ಯಾರು ತಾನೇ ಇಷ್ಟಪಡುವರು? ಆದರೆ ಯಥಾರ್ಥವಾದ ಕೃತಜ್ಞತೆಯು ನಿಜವಾಗಿಯೂ ಉಲ್ಲಾಸದಾಯಕವಾಗಿರುತ್ತದೆ.

      ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಯು ಹಾಗೆ ಮಾಡುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಹೃದಯದಾಳದಿಂದ ಕೃತಜ್ಞನಾಗಿರುವ ಕಾರಣ ಅವನು ಅನುಭವಿಸುವ ಹೃದಯೋಲ್ಲಾಸವು, ಅವನ ಸಂತೋಷ ಹಾಗೂ ಶಾಂತಿಗೆ ನೆರವನ್ನೀಡುತ್ತದೆ. (ಜ್ಞಾನೋಕ್ತಿ 15:13, 15ನ್ನು ಹೋಲಿಸಿರಿ.) ಮತ್ತು ಕೃತಜ್ಞತೆಯು ಒಂದು ಸಕಾರಾತ್ಮಕ ಗುಣವಾಗಿರುವುದರಿಂದ, ಅದು ಕೋಪ, ಹೊಟ್ಟೆಕಿಚ್ಚು ಹಾಗೂ ಅಸಮಾಧಾನದಂಥ ನಕಾರಾತ್ಮಕ ಭಾವನೆಗಳಿಂದ ಅವನನ್ನು ಕಾಪಾಡುತ್ತದೆ.

      “ಕೃತಜ್ಞತೆಯುಳ್ಳವರಾಗಿರ್ರಿ”

      ಕೃತಜ್ಞತೆಯ ಅಥವಾ ಉಪಕಾರಭಾವದ ಒಂದು ಮನೋಭಾವವನ್ನು ವಿಕಸಿಸಿಕೊಳ್ಳಲು ಬೈಬಲು ನಮ್ಮನ್ನು ಪ್ರಚೋದಿಸುತ್ತದೆ. ಪೌಲನು ಬರೆದುದು: “ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ.” (1 ಥೆಸಲೊನೀಕ 5:18) ಮತ್ತು ಪೌಲನು ಕೊಲೊಸ್ಸೆಯವರಿಗೆ ಸಲಹೆನೀಡಿದ್ದು: “ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ; . . . ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ.” (ಕೊಲೊಸ್ಸೆ 3:15) ಹಲವಾರು ಕೀರ್ತನೆಗಳು ಉಪಕಾರದ ಅಭಿವ್ಯಕ್ತಿಗಳನ್ನು ಒಳಗೊಂಡಿವೆ. ಹೃತ್ಪೂರ್ವಕ ಕೃತಜ್ಞತೆಯು ಒಂದು ದೈವಿಕ ಗುಣವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. (ಕೀರ್ತನೆ 27:4; 75:1) ಸ್ಫುಟವಾಗಿ, ಜೀವಿತದ ಪ್ರತಿದಿನದ ವಿಷಯಗಳಲ್ಲಿ ನಾವು ಉಪಕಾರಭಾವವನ್ನು ತೋರಿಸುವಾಗ ಯೆಹೋವ ದೇವರು ಪ್ರಸನ್ನನಾಗುತ್ತಾನೆ.

      ಆದರೆ ಈ ಅಪಕಾರಭಾವದ ಲೋಕದಲ್ಲಿ ನಾವು ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಲು ಯಾವ ಅಂಶಗಳು ಕಷ್ಟಕರವನ್ನಾಗಿ ಮಾಡುತ್ತವೆ? ದೈನಂದಿನ ಜೀವಿತದಲ್ಲಿ ಉಪಕಾರಭಾವದ ಮನೋಭಾವವನ್ನು ನಾವು ಹೇಗೆ ತೋರಿಸಬಹುದು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.

  • ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಿರಿ
    ಕಾವಲಿನಬುರುಜು—1998 | ಫೆಬ್ರವರಿ 15
    • ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಿರಿ

      ನ್ಯೂ ಯಾರ್ಕ್‌ ರಾಜ್ಯದಲ್ಲಿ ವೈದ್ಯನೊಬ್ಬನು ವಿಷಮ ಸ್ಥಿತಿಯಲ್ಲಿದ್ದ ಮರೀ ಎಂಬುವಳ ಜೀವವನ್ನು ಉಳಿಸುತ್ತಾನೆ. ಆದರೆ 50 ವರ್ಷ ಪ್ರಾಯದ ಮರೀ ವೈದ್ಯನಿಗೆ ಉಪಕಾರವನ್ನೂ ಹೇಳುವುದಿಲ್ಲ ಇಲ್ಲವೇ ತನ್ನ ಖರ್ಚನ್ನೂ ಪಾವತಿಮಾಡುವುದಿಲ್ಲ. ಕೃತಘ್ನತೆಯ ಎಂಥ ಒಂದು ಉದಾಹರಣೆ!

      ಒಮ್ಮೆ, ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಭಯಂಕರವಾದ ಕುಷ್ಠರೋಗದಿಂದ ಪೀಡಿತರಾಗಿದ್ದ ಹತ್ತು ಜನರನ್ನು ಎದುರಾದನು ಎಂದು ಬೈಬಲು ಹೇಳುತ್ತದೆ. ಅವರು ಗಟ್ಟಿ ಸ್ವರಗಳಿಂದ ಅವನನ್ನು ಹೀಗೆ ಕೂಗಿದರು: “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು.” ಯೇಸು ಆಜ್ಞಾಪಿಸಿದ್ದು: “ನೀವು ಹೋಗಿ ಯಾಜಕರಿಗೆ ಮೈ ತೋರಿಸಿಕೊಳ್ಳಿರಿ.” ಕುಷ್ಠರೋಗಿಗಳು ಅವನ ನಿರ್ದೇಶನವನ್ನು ಸ್ವೀಕರಿಸಿ, ದಾರಿಯಲ್ಲಿ ಹೋಗುತ್ತಿದ್ದಂತೆ ತಮ್ಮ ಪುನಸ್ಸ್ಥಾಪಿತ ಆರೋಗ್ಯವನ್ನು ಕಂಡು ಅನುಭವಿಸಲಾರಂಭಿಸಿದರು.

      ವಾಸಿಗೊಂಡ ಕುಷ್ಠರೋಗಿಗಳಲ್ಲಿ ಒಂಬತ್ತು ಜನರು ತಮ್ಮ ದಾರಿಯಲ್ಲಿ ಮುಂದುವರಿಯುತ್ತಾ ಹೋದರು. ಆದರೆ ಮತ್ತೊಬ್ಬ ಕುಷ್ಠರೋಗಿ, ಒಬ್ಬ ಸಮಾರ್ಯದವನು, ಯೇಸುವನ್ನು ಹುಡುಕಲು ಹಿಂದಿರುಗಿದನು. ಹಿಂದೆ ಕುಷ್ಠರೋಗಿಯಾಗಿದ್ದ ಇವನು ದೇವರನ್ನು ಸ್ತುತಿಸಿದನು ಮತ್ತು ಯೇಸುವನ್ನು ಕಂಡುಕೊಂಡಾಗ, ಅವನಿಗೆ ಉಪಕಾರವನ್ನು ಹೇಳುತ್ತಾ ಅವನ ಪಾದಗಳಿಗೆ ಬಿದ್ದನು. ಅದಕ್ಕೆ ಪ್ರತಿಯಾಗಿ ಯೇಸು ಹೇಳಿದ್ದು: “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ.”—ಲೂಕ 17:11-19.

      “ಮಿಕ್ಕ ಒಂಭತ್ತು ಮಂದಿ ಎಲ್ಲಿ?” ಎಂಬ ಪ್ರಶ್ನೆಯಿಂದ ಒಂದು ಮಹತ್ತ್ವದ ಪಾಠವು ಸೂಚಿಸಲ್ಪಟ್ಟಿದೆ. ಮರೀಯಂತೆ ಆ ಒಂಬತ್ತು ಕುಷ್ಠರೋಗಿಗಳಲ್ಲಿ ಒಂದು ಗಂಭೀರತರನಾದ ಕೊರತೆಯಿತ್ತು—ಅವರು ಕೃತಜ್ಞತೆಯನ್ನು ತೋರಿಸಲಿಲ್ಲ. ಅಂಥ ಕೃತಘ್ನತೆಯು ಇಂದು ತೀರ ವ್ಯಾಪಕವಾಗಿದೆ. ಇದಕ್ಕೆ ಕಾರಣವೇನು?

      ಕೃತಘ್ನತೆಯ ಮೂಲ ಕಾರಣ

      ಕೃತಘ್ನತೆಯು ಮೂಲಭೂತವಾಗಿ ಸ್ವಾರ್ಥದಿಂದ ಹುಟ್ಟುತ್ತದೆ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರನ್ನು ಪರಿಗಣಿಸಿರಿ. ಯೆಹೋವನು ಅವರನ್ನು ದೈವಿಕ ಗುಣಗಳೊಂದಿಗೆ ಸೃಷ್ಟಿಸಿದನು ಹಾಗೂ ಅವರ ಸಂತೋಷಕ್ಕಾಗಿ ಪ್ರತಿಯೊಂದನ್ನೂ ಒದಗಿಸಿದನು. ಒಂದು ಸುಂದರವಾದ ಉದ್ಯಾನವನದಂಥ ಗೃಹ, ಕುಂದುಕೊರತೆಗಳಿಲ್ಲದ ಪರಿಸರಗಳು, ಮತ್ತು ಅರ್ಥಭರಿತವೂ ಸಂತೃಪ್ತಿದಾಯಕವೂ ಆದ ಕೆಲಸವನ್ನು ಅವರಿಗೆ ಕೊಟ್ಟನು. (ಆದಿಕಾಂಡ 1:26-29; 2:16, 17) ಆದರೂ, ಸೈತಾನನು ಅವರನ್ನು ಸ್ವಾರ್ಥ ಅಭಿಲಾಷೆಗಳಿಂದ ಪ್ರಲೋಭನೆಗೊಳಿಸಿದನು ಮತ್ತು ಈ ಒತ್ತಡದಿಂದ ಆ ದಂಪತಿಗಳು ಅವಿಧೇಯರಾದರು ಮತ್ತು ಯೆಹೋವನ ಔದಾರ್ಯಕ್ಕೆ ತಾತ್ಸಾರವನ್ನು ತೋರಿಸಿದರು.—ಆದಿಕಾಂಡ 3:1-5; ಪ್ರಕಟನೆ 12:9.

      ಪುರಾತನ ಇಸ್ರಾಯೇಲಿನ ಜನರನ್ನು ಸಹ ಪರಿಗಣಿಸಿರಿ. ದೇವರು ಇವರನ್ನು ತನ್ನ ವಿಶೇಷ ಸ್ವತ್ತಿನ ರೂಪದಲ್ಲಿ ಆಯ್ಕೆಮಾಡಿದ್ದನು. ಸಾ.ಶ.ಪೂ. 1513, ನೈಸಾನ್‌ 14ರ ರಾತ್ರಿಯಂದು ಎಲ್ಲ ಇಸ್ರಾಯೇಲ್ಯ ಹೆತ್ತವರು ಎಷ್ಟು ಕೃತಜ್ಞರಾಗಿದ್ದಿರಬೇಕು! ಆ ಅತಿ ಮುಖ್ಯ ರಾತ್ರಿಯಂದು, ದೇವರ ದೂತನು “ಐಗುಪ್ತದೇಶದಲ್ಲಿರುವ ಪ್ರತಿ ಚೊಚ್ಚಲುಮಗುವನ್ನು” (NW) ಕೊಂದನಾದರೂ, ಸರಿಯಾಗಿ ಗುರುತುಹಾಕಿದ್ದ ಇಸ್ರಾಯೇಲ್ಯ ಮನೆಗಳನ್ನು ಹಾದುಹೋದನು. (ವಿಮೋಚನಕಾಂಡ 12:12, 21-24, 30) ಮತ್ತು ಕೆಂಪು ಸಮುದ್ರದಲ್ಲಿ ಫರೋಹನ ಸೈನ್ಯದಿಂದ ರಕ್ಷಿಸಲ್ಪಟ್ಟಾಗ, ಕೃತಜ್ಞತೆಯಿಂದ ಹೃದಯತುಂಬಿದವರಾಗಿ, ‘ಮೋಶೆಯೂ ಇಸ್ರಾಯೇಲ್ಯರೂ ಯೆಹೋವನ ಸ್ತೋತ್ರಕ್ಕಾಗಿ ಕೀರ್ತನೆಯನ್ನು ಹಾಡಿದರು.’—ವಿಮೋಚನಕಾಂಡ 14:19-28; 15:1-21.

      ಆದರೂ, ಐಗುಪ್ತ್ಯವನ್ನು ಬಿಟ್ಟುಹೋದ ಕೆಲವು ವಾರಗಳ ಬಳಿಕ, ‘ಇಸ್ರಾಯೇಲ್ಯರ ಸಮೂಹವೆಲ್ಲಾ . . . ಗುಣುಗುಟ್ಟಲು’ ಪ್ರಾರಂಭಿಸಿತು. ಅವರು ಎಷ್ಟು ಬೇಗನೆ ಕೃತಘ್ನತೆಗೆ ಬಲಿಬಿದ್ದರು! ಅವರು ದಾಸರಾಗಿದ್ದ ಐಗುಪ್ತ್ಯದಲ್ಲಿ, ‘ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇ ತುಂಬ ಊಟಮಾಡುತ್ತಿದ್ದ’ ಸಮಯ ನಷ್ಟಕ್ಕಾಗಿ ವಿಷಾದಪಟ್ಟರು. (ವಿಮೋಚನಕಾಂಡ 16:1-3) ಸ್ಫುಟವಾಗಿಯೇ, ಸ್ವಾರ್ಥತೆಯು ಕೃತಜ್ಞತೆಯನ್ನು ವಿಕಸಿಸಿಕೊಳ್ಳುವುದರ ಹಾಗೂ ತೋರಿಸುವುದರ ವಿರುದ್ಧ ಕಾರ್ಯನಡೆಸುತ್ತದೆ.

      ಪಾಪಪೂರ್ಣ ಆದಾಮನ ವಂಶಜರಾಗಿರಲಾಗಿ ಎಲ್ಲ ಮಾನವರು ಸ್ವಲ್ಪ ಸ್ವಾರ್ಥತೆ ಮತ್ತು ಕೃತಘ್ನತೆಯುಳ್ಳವರಾಗಿ ಜನಿಸಿರುತ್ತಾರೆ. (ರೋಮಾಪುರ 5:12) ಅಪಕಾರಭಾವವು ಸಹ, ಈ ಲೋಕದ ಜನರನ್ನು ಆಳುವ ಸ್ವಾರ್ಥ ಮನೋಭಾವದ ಒಂದು ಭಾಗವಾಗಿದೆ. ನಾವು ಉಸಿರಾಡುವ ಗಾಳಿಯಂತೆ, ಆ ಮನೋಭಾವವು ಎಲ್ಲೆಡೆಯೂ ಇದೆ ಮತ್ತು ಅದು ನಮ್ಮನ್ನು ಬಾಧಿಸುತ್ತದೆ. (ಎಫೆಸ 2:1, 2) ಆದುದರಿಂದ ನಾವು ಕೃತಜ್ಞತಾಪೂರ್ವಕ ಮನೋವೃತ್ತಿಯನ್ನು ವಿಕಸಿಸಿಕೊಳ್ಳುವ ಅಗತ್ಯವಿದೆ. ನಾವು ಅದನ್ನು ಹೇಗೆ ಮಾಡಬಹುದು?

      ಮನನ ಆವಶ್ಯಕ!

      ವೆಬ್‌ಸ್ಟರ್‌ ತರ್ಡ್‌ ನ್ಯೂ ಇಂಟರ್‌ನ್ಯಾಷನಲ್‌ ಡಿಕ್ಷನೆರಿ ಕೃತಜ್ಞತೆಯನ್ನು, “ಆಭಾರಿಗಳಾಗಿರುವ ಒಂದು ಸ್ಥಿತಿ: ಉಪಕಾರಮಾಡುವವನ ಉಪಕಾರವನ್ನು ಪ್ರತಿಯಾಗಿ ಕೊಡಲು ಪ್ರಚೋದಿಸುವ ಅವನ ಕಡೆಗಿನ ಆದರಣೆ ಮತ್ತು ಸ್ನೇಹಶೀಲ ಭಾವನೆ” ಆಗಿ ಅರ್ಥನಿರೂಪಿಸುತ್ತದೆ. ಒಂದು ಭಾವನೆಯನ್ನು ಯಾಂತ್ರಿಕವಾಗಿ ಆನ್‌ ಮತ್ತು ಆಫ್‌ ಮಾಡಲು ಸಾಧ್ಯವಿಲ್ಲ; ಅದು ಒಬ್ಬ ವ್ಯಕ್ತಿಯ ಹೃದಯದಾಳದಿಂದಲೇ ಸ್ವಪ್ರೇರಣೆಯಿಂದ ಚಿಮ್ಮಬೇಕು. ಕೃತಜ್ಞತೆಯು, ಒಳ್ಳೆಯ ಶಿಷ್ಟಾಚಾರಗಳ ಬರಿಯ ಪ್ರದರ್ಶನ ಅಥವಾ ಮರ್ಯಾದೆಯ ಒಂದು ರೂಪಕ್ಕಿಂತಲೂ ಹೆಚ್ಚಿನ ವಿಷಯವಾಗಿದೆ; ಅದು ಹೃದಯದಿಂದ ಹುಟ್ಟುತ್ತದೆ.

      ಹೃದಯದಾಳದಿಂದ ಕೃತಜ್ಞತಾಪೂರ್ವಕರಾಗಿರುವುದನ್ನು ನಾವು ಹೇಗೆ ಕಲಿಯಸಾಧ್ಯವಿದೆ? ಬೈಬಲು ನಮ್ಮ ಅನಿಸಿಕೆಗಳನ್ನು ನಮ್ಮ ಯೋಚನೆಗಳ ಆಯ್ಕೆಗೆ ಸಂಬಂಧಿಸುತ್ತದೆ. (ಎಫೆಸ 4:22-24) ಕೃತಜ್ಞತಾಭಾವದ ಅನಿಸಿಕೆಯಾಗುವುದನ್ನು ಕಲಿತುಕೊಳ್ಳುವುದು, ನಾವು ಪಡೆದುಕೊಳ್ಳುವಂಥ ಉಪಕಾರಗಳ ಬಗ್ಗೆ ಗಣ್ಯತಾಪೂರ್ವಕವಾಗಿ ಮನನಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಈ ಸಂಬಂಧದಲ್ಲಿ, ಮಾನಸಿಕ-ಆರೋಗ್ಯ ಕ್ಷೇತ್ರದಲ್ಲಿ ಕೆಲಸಮಾಡುವ ಡಾ. ವೇನ್‌ ಡಬ್ಲ್ಯೂ. ಡೈಅರ್‌ ಹೇಳುವುದು: “ಆಲೋಚನೆಯೊಂದನ್ನು ಮೊದಲು ಅನುಭವಿಸುವ ಹೊರತು ನಿಮಗೆ ಅನಿಸಿಕೆ (ಭಾವನೆ) ಇರಸಾಧ್ಯವಿಲ್ಲ.”

      ಉದಾಹರಣೆಗೆ, ನಮ್ಮ ಸುತ್ತಮುತ್ತಲಿರುವ ಸೃಷ್ಟಿಗಾಗಿರುವ ಉಪಕಾರಭಾವದ ವಿಷಯವನ್ನು ತೆಗೆದುಕೊಳ್ಳಿರಿ. ಮೋಡ ಕವಿದಿರದ ರಾತ್ರಿಯಂದು ನಕ್ಷತ್ರಮಯ ಮುಗಿಲನ್ನು ನೀವು ನೋಡುವಾಗ, ನೀವು ಏನನ್ನು ಅನುಭವಿಸುತ್ತೀರೋ ಅದರ ಕುರಿತಾಗಿ ನಿಮಗೆ ಹೇಗನಿಸುತ್ತದೆ? ರಾಜ ದಾವೀದನು ತಾನು ಅನುಭವಿಸಿದ ಭಯಭಕ್ತಿಯನ್ನು ಹೀಗೆ ವ್ಯಕ್ತಪಡಿಸಿದನು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” ಮತ್ತು ಆ ರಾತ್ರಿಯ ನೀರವತೆಯಲ್ಲಿ, ದಾವೀದನನ್ನು ಈ ರೀತಿಯಲ್ಲಿ ಬರೆಯುವಂತೆ ಪ್ರಚೋದಿಸುತ್ತಾ, ನಕ್ಷತ್ರಗಳು ಅವನೊಂದಿಗೆ ಮಾತಾಡಿದವು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” ನಕ್ಷತ್ರಮಯ ಆಕಾಶಗಳು ದಾವೀದನನ್ನು ಅಷ್ಟೊಂದು ಗಾಢವಾಗಿ ಏಕೆ ಪ್ರಭಾವಿಸಿದವು? ಅವನೇ ಉತ್ತರಿಸುವುದು: “ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ [“ಮನನಮಾಡುತ್ತೇನೆ,” NW]; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.”—ಕೀರ್ತನೆ 8:3, 4; 19:1; 143:5.

      ದಾವೀದನ ಪುತ್ರನಾದ ಸೊಲೊಮೋನನು ಸಹ ಸೃಷ್ಟಿಯ ಅದ್ಭುತಕಾರ್ಯಗಳ ಕುರಿತಾಗಿ ಆಲೋಚಿಸುವ ಮೌಲ್ಯವನ್ನು ಗಣ್ಯಮಾಡಿದನು. ಉದಾಹರಣೆಗೆ, ನಮ್ಮ ಭೂಮಿಯನ್ನು ನವಚೈತನ್ಯಗೊಳಿಸುವುದರಲ್ಲಿ ಮಳೆ ಮೋಡಗಳು ವಹಿಸುವ ಪಾತ್ರದ ಸಂಬಂಧದಲ್ಲಿ ಅವನು ಬರೆದುದು: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” (ಪ್ರಸಂಗಿ 1:7) ಹೀಗೆ, ಮಳೆ ಹಾಗೂ ನದಿಗಳು ಭೂಮಿಯನ್ನು ನವಚೈತನ್ಯಗೊಳಿಸಿದ ಬಳಿಕ, ಸಾಗರಗಳಿಂದ ಅವುಗಳ ನೀರು ಪರಿವರ್ತನೆಗೊಂಡು ಮತ್ತೆ ಮೋಡಗಳಿಗೆ ಹಿಂದಿರುಗುತ್ತವೆ. ನೀರಿನ ಈ ಶುದ್ಧೀಕರಿಸುವಿಕೆ ಮತ್ತು ಪರಿವರ್ತನಾ ಶ್ರೇಣಿಯಿಲ್ಲದೆ ಈ ಭೂಮಿಯು ಹೇಗಿರುತ್ತಿತ್ತು? ಸೊಲೊಮೋನನು ಈ ಆಲೋಚನೆಗಳ ಕುರಿತಾಗಿ ಯೋಚಿಸುತ್ತಿದ್ದಾಗ ಎಷ್ಟು ಕೃತಜ್ಞತಾಭಾವವನ್ನು ಅನುಭವಿಸಿದ್ದಿರಬೇಕು!

      ಒಬ್ಬ ಕೃತಜ್ಞತಾಭಾವವುಳ್ಳ ವ್ಯಕ್ತಿಯು, ಕುಟುಂಬ ಸದಸ್ಯರು, ಸ್ನೇಹಿತರು, ಮತ್ತು ಪರಿಚಯಸ್ಥರೊಂದಿಗಿನ ತನ್ನ ಸಂಬಂಧಗಳನ್ನು ಸಹ ಮಾನ್ಯ ಮಾಡುತ್ತಾನೆ. ಅವರ ದಯಾಪರ ಕೃತ್ಯಗಳು ಅವನ ಗಮನವನ್ನು ಸೆರೆಹಿಡಿಯುತ್ತವೆ. ಅವರ ಉಪಕಾರಗಳನ್ನು ಅವನು ಗಣ್ಯತಾಭಾವದಿಂದ ಪರಿಗಣಿಸಿದಂತೆ, ಅವನಿಗೆ ಹೃದಯದಾಳದಿಂದ ಉಪಕಾರಭಾವದ ಅನಿಸಿಕೆಯಾಗುತ್ತದೆ.

      ಕೃತಜ್ಞತೆಯನ್ನು ವ್ಯಕ್ತಪಡಿಸುವುದು

      “ಉಪಕಾರ” ಅನ್ನುವುದು ಎಂಥ ಒಂದು ಸರಳ ನುಡಿಯಾಗಿದೆ! ಇಂಥ ಒಂದು ಅಭಿವ್ಯಕ್ತಿಯನ್ನು ನುಡಿಯುವುದು ಬಹಳ ಸುಲಭ. ಹಾಗೆ ಹೇಳಲಿಕ್ಕೆ ತುಂಬ ಅವಕಾಶಗಳಿವೆ. ಯಾರೋ ಒಬ್ಬರು ನಮಗಾಗಿ ಬಾಗಿಲನ್ನು ತೆರೆಯುವಾಗ ಅಥವಾ ನಾವು ಬೀಳಿಸಿಬಿಟ್ಟ ಯಾವುದೋ ವಸ್ತುವನ್ನು ಎತ್ತಿಕೊಡುವಾಗ, ಆದರಣೀಯವೂ ಪ್ರಾಮಾಣಿಕವೂ ಆದ ಉಪಕಾರವನ್ನು ಹೇಳುವುದು ಎಷ್ಟು ಚೈತನ್ಯದಾಯಕ! ಆ ಅಭಿವ್ಯಕ್ತಿಯು, ಒಬ್ಬ ಅಂಗಡಿಯ ಕ್ಲರ್ಕ್‌ ಅಥವಾ ರೆಸ್ಟೊರೆಂಟ್‌ನಲ್ಲಿರುವ ಒಬ್ಬ ಪರಿಚಾರಿಕೆ ಅಥವಾ ಪೋಸ್ಟ್‌ಮ್ಯಾನ್‌ನ ಕೆಲಸವನ್ನು ಸುಲಭವೂ ಹೆಚ್ಚು ಪ್ರತಿಫಲದಾಯಕವೂ ಆದದ್ದಾಗಿ ಮಾಡಸಾಧ್ಯವಿದೆ.

      ಥ್ಯಾಂಕ್‌-ಯೂ ಕಾರ್ಡ್‌ಗಳನ್ನು ಕಳುಹಿಸುವುದು, ದಯಾಪರ ಕೃತ್ಯಗಳಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಅನುಕೂಲಕರ ವಿಧವಾಗಿದೆ. ಅಂಗಡಿಗಳಲ್ಲಿ ಲಭ್ಯವಿರುವ ಕಾರ್ಡ್‌ಗಳಲ್ಲಿ ಅನೇಕ ಕಾರ್ಡುಗಳು, ಭಾವೋದ್ವೇಗಗಳನ್ನು ಬಹಳ ಮನೋಹರವಾಗಿ ವ್ಯಕ್ತಪಡಿಸುತ್ತವೆ. ಆದರೆ ಹೆಚ್ಚು ಹಿಡಿಸುವಂತಹದ್ದಾಗಿರುವ ನಿಮ್ಮ ಸ್ವಂತ ಬರವಣಿಗೆಯಲ್ಲಿ ಗಣ್ಯತೆಯ ನುಡಿಗಳನ್ನು ಕೂಡಿಸುವುದು ಒಂದು ಪ್ರೀತಿಪರವಾದ ವಿಧವಾಗಿರಲಿಕ್ಕಿಲ್ಲವೋ? ಕೆಲವರು ಮುದ್ರಿತ ಗ್ರೀಟಿಂಗ್‌ ಕಾರ್ಡ್‌ ಅನ್ನು ಉಪಯೋಗಿಸಲು ಇಷ್ಟಪಡುವುದಿಲ್ಲ, ಅದಕ್ಕೆ ಬದಲಾಗಿ ವೈಯಕ್ತಿಕ ಚೀಟಿಯನ್ನು ಕಳುಹಿಸುತ್ತಾರೆ.—ಜ್ಞಾನೋಕ್ತಿ 25:11ನ್ನು ಹೋಲಿಸಿರಿ.

      ನಮ್ಮ ಕೃತಜ್ಞತೆಗೆ ತೀರ ಅರ್ಹರಾದ ವ್ಯಕ್ತಿಗಳು ಬಹುಶಃ ನಮ್ಮ ಮನೆಯಲ್ಲಿರುವ ಅತಿ ನಿಕಟವರ್ತಿಗಳಾಗಿದ್ದಾರೆ. ಒಬ್ಬ ಸಮರ್ಥಳಾದ ಪತ್ನಿಯ ಕುರಿತಾಗಿ ಬೈಬಲು ಹೇಳುವುದು: “ಆಕೆಯ ಪತಿಯು ಎದ್ದುನಿಂತು ಆಕೆಯನ್ನು ಶ್ಲಾಘಿಸುವನು” (NW). (ಜ್ಞಾನೋಕ್ತಿ 31:28) ಒಬ್ಬ ಪತಿಯು ತನ್ನ ಪತ್ನಿಗೆ ನೀಡುವ ಉಪಕಾರಗಳ ಹೃತ್ಪೂರ್ವಕ ಅಭಿವ್ಯಕ್ತಿಗಳು, ಶಾಂತಿ ಹಾಗೂ ಸಂತೃಪ್ತಿಕರವಾದ ಮನೆ ವಾತಾವರಣವಕ್ಕೆ ನೆರವನ್ನು ನೀಡುವುದಿಲ್ಲವೋ? ಮತ್ತು ಪತಿಯು ಮನೆಗೆ ಹಿಂದಿರುಗಿದಾಗ ತನ್ನ ಪತ್ನಿಯಿಂದ ಆದರಣೀಯವೂ ಗಣ್ಯತಾಪೂರ್ವಕವೂ ಆದ ಅಭಿವಂದನೆಯನ್ನು ಕೇಳಿಸಿಕೊಳ್ಳಲು ಸಂತೋಷಿತನಾಗಿರುವುದಿಲ್ಲವೋ? ಈಗಿನ ದಿವಸಗಳಲ್ಲಿ, ವಿವಾಹದ ಮೇಲೆ ಅನೇಕ ಒತ್ತಡಗಳಿವೆ ಮತ್ತು ಒತ್ತಡಗಳು ತುಂಬ ಹೆಚ್ಚಾದಾಗ ಕೋಪವು ಸುಲಭವಾಗಿ ಭುಗಿಲೇಳುತ್ತದೆ. ಉಪಕಾರಭಾವದವನೊಬ್ಬನು ತೀರ ಕಟ್ಟುನಿಟ್ಟಿನವನಾಗಿರುವುದಿಲ್ಲ ಮತ್ತು ಕ್ಷಮಿಸಲು ಶೀಘ್ರನಾಗಿರುತ್ತಾನೆ.

      ಯುವ ವ್ಯಕ್ತಿಗಳು ಸಹ ತಮ್ಮ ಹೆತ್ತವರಿಗೆ ಹೃತ್ಪೂರ್ವಕ ಗಣ್ಯತೆಯ ಅಭಿವ್ಯಕ್ತಿಗಳನ್ನು ನೀಡಲು ಅರಿವುಳ್ಳವರಾಗಿರುವ ಅಗತ್ಯವಿದೆ. ಹೆತ್ತವರು ಪರಿಪೂರ್ಣರಲ್ಲ ಎಂಬುದೇನೋ ನಿಜ, ಆದರೆ ಅದು ಅವರು ನಿಮಗಾಗಿ ಏನನ್ನು ಮಾಡಿದ್ದಾರೋ ಅದಕ್ಕಾಗಿ ಕೃತಘ್ನರಾಗಿರಲು ಕಾರಣವಾಗಿರುವುದಿಲ್ಲ. ನೀವು ಹುಟ್ಟಿದಾಗಿನಿಂದಲೂ ಅವರು ನೀಡಿರುವ ಪ್ರೀತಿ ಮತ್ತು ಗಮನವನ್ನು ಎಂದೂ ಕೊಂಡುಕೊಳ್ಳಸಾಧ್ಯವಿಲ್ಲ. ಅವರು ನಿಮಗೆ ದೇವರ ಜ್ಞಾನವನ್ನು ಕಲಿಸಿಕೊಟ್ಟಿರುವುದಾದರೆ, ಕೃತಜ್ಞರಾಗಿರಲು ನಿಮಗೆ ಇನ್ನೂ ಹೆಚ್ಚಿನ ಕಾರಣವಿದೆ.

      “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು” ಎಂದು ಕೀರ್ತನೆ 127:3 ಹೇಳುತ್ತದೆ. ಆದುದರಿಂದ ಹೆತ್ತವರು, ತಮ್ಮ ಮಕ್ಕಳ ಕೆಲಸಕ್ಕೆ ಬಾರದ ವಿಷಯಗಳ ಕುರಿತು ಆಗಾಗ್ಗೆ ಮೂದಲಿಸುವ ಬದಲು ಅವರಿಗೆ ಶ್ಲಾಘನೆಯನ್ನು ನೀಡಲಿಕ್ಕೆ ಅವಕಾಶಗಳನ್ನು ಹುಡುಕಬೇಕು. (ಎಫೆಸ 6:4) ಮತ್ತು ತಮ್ಮ ಆರೈಕೆಯ ಕೆಳಗಿರುವ ಎಳೆಯರಿಗೆ ಕೃತಜ್ಞತೆಯ ಮನೋಭಾವವನ್ನು ವಿಕಸಿಸಲಿಕ್ಕಾಗಿ ಸಹಾಯಮಾಡಲು ಎಂಥ ಒಂದು ಸುಯೋಗವು ಅವರಿಗಿದೆ!—ಜ್ಞಾನೋಕ್ತಿ 29:21ನ್ನು ಹೋಲಿಸಿರಿ.

      ದೇವರ ಕಡೆಗೆ ಉಪಕಾರಭಾವವುಳ್ಳವರಾಗಿರುವುದು

      ಯೆಹೋವ ದೇವರು ‘ಎಲ್ಲಾ ಒಳ್ಳೇ ದಾನಗಳು ಕುಂದಿಲ್ಲದ ಎಲ್ಲಾ ವರಗಳ’ ದಾತನಾಗಿದ್ದಾನೆ. (ಯಾಕೋಬ 1:17) ವಿಶೇಷವಾಗಿ ಜೀವದ ಕೊಡುಗೆಯು ಪ್ರಾಮುಖ್ಯವಾಗಿದೆ. ಏಕೆಂದರೆ ನಾವು ಜೀವವನ್ನು ಕಳೆದುಕೊಳ್ಳುವಲ್ಲಿ ನಮ್ಮಲ್ಲಿರುವ ಪ್ರತಿಯೊಂದು ವಿಷಯವೂ ಅಥವಾ ಯೋಜಿಸುವ ಪ್ರತಿಯೊಂದು ಕಾರ್ಯವೂ ಬೆಲೆಯಿಲ್ಲದ್ದಾಗಿ ಹೋಗುವುದು. “[ಯೆಹೋವ ದೇವರನ್ನು] ಜೀವದ ಬುಗ್ಗೆ”ಯಾಗಿ ಜ್ಞಾಪಿಸಿಕೊಳ್ಳುವಂತೆ ನಮ್ಮನ್ನು ಶಾಸ್ತ್ರವಚನಗಳು ಪ್ರಚೋದಿಸುತ್ತವೆ. (ಕೀರ್ತನೆ 36:5, 7, 9; ಅ. ಕೃತ್ಯಗಳು 17:28) ದೇವರ ಕಡೆಗೆ ಒಂದು ಕೃತಜ್ಞತಾಪೂರ್ವಕ ಹೃದಯವನ್ನು ವಿಕಸಿಸಿಕೊಳ್ಳಲು, ನಾವು ನಮ್ಮ ಶಾರೀರಿಕ ಹಾಗೂ ಆತ್ಮಿಕ ಜೀವಿತಗಳನ್ನು ಪೋಷಿಸುವ ಆತನ ಉದಾರವಾದ ಒದಗಿಸುವಿಕೆಗಳ ಕುರಿತಾಗಿ ಮನನ ಮಾಡುವ ಅಗತ್ಯವಿದೆ. (ಕೀರ್ತನೆ 1:1-3; 77:11, 12) ಅಂಥ ಒಂದು ಹೃದಯವು ನುಡಿಗಳಲ್ಲಿ ಹಾಗೂ ಕ್ರಿಯೆಗಳಲ್ಲಿ ಗಣ್ಯತೆಯನ್ನು ತೋರಿಸುವಂತೆ ನಮ್ಮನ್ನು ಪ್ರೇರಿಸುವುದು.

      ದೇವರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಸ್ಪಷ್ಟವಾದ ವಿಧವು ಪ್ರಾರ್ಥನೆಯಾಗಿದೆ. ಕೀರ್ತನೆಗಾರನಾದ ದಾವೀದನು ಪ್ರಕಟಿಸಿದ್ದು: “ಯೆಹೋವನೇ ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.” (ಕೀರ್ತನೆ 40:5) ನಾವು ಅದೇ ರೀತಿಯಲ್ಲಿ ಪ್ರೇರಿಸಲ್ಪಡುವಂತಾಗಲಿ.

      ದಾವೀದನು ತಾನು ಇತರರೊಂದಿಗೆ ಆಡಿದ ಮಾತುಗಳ ಮೂಲಕ ಸಹ ದೇವರಿಗಾಗಿರುವ ತನ್ನ ಗಣ್ಯತೆಯನ್ನು ತೋರಿಸಲು ದೃಢನಿಶ್ಚಯವುಳ್ಳವನಾಗಿದ್ದನು. ಅವನು ಹೇಳಿದ್ದು: “ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.” (ಕೀರ್ತನೆ 9:1) ದೇವರ ಕುರಿತಾಗಿ ಇತರರೊಟ್ಟಿಗೆ ಮಾತಾಡುವುದು, ಆತನ ವಾಕ್ಯದಿಂದ ಸತ್ಯವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ನಮ್ಮನ್ನು ವ್ಯಕ್ತಪಡಿಸಿಕೊಳ್ಳುವುದು, ಪ್ರಾಯಶಃ ಆತನಿಗೆ ನಮ್ಮ ಕೃತಜ್ಞತೆಯನ್ನು ತೋರಿಸುವ ಒಂದು ಅತ್ಯುತ್ತಮವಾದ ವಿಧವಾಗಿದೆ. ಮತ್ತು ಇದು ಜೀವಿತದ ಇತರ ಕ್ಷೇತ್ರಗಳಲ್ಲಿ ಹೆಚ್ಚು ಕೃತಜ್ಞತಾಪೂರ್ವಕರಾಗಿರುವಂತೆ ನಮಗೆ ಸಹಾಯಮಾಡುವುದು.

      “ಯಾರು ಸ್ತುತಿಯಜ್ಞವನ್ನು [“ಉಪಕಾರಭಾವಗಳನ್ನು,” NW] ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು” ಎಂದು ಯೆಹೋವನು ಹೇಳುತ್ತಾನೆ. ಆತನಿಗೆ ನೀವು ತೋರಿಸುವ ಹೃತ್ಪೂರ್ವಕ ಕೃತಜ್ಞತೆಯಿಂದ ಬರುವ ಹರ್ಷವನ್ನು ನೀವು ಅನುಭವಿಸುವಂತಾಗಲಿ.—ಕೀರ್ತನೆ 50:23; 100:2.

      [ಪುಟ 7 ರಲ್ಲಿರುವ ಚಿತ್ರ]

      ಜೀವವು ದೇವರಿಂದ ಬಂದ ಒಂದು ಕೊಡುಗೆಯಾಗಿದೆ. ಒಂದು ವೈಯಕ್ತಿಕ ಆಸ್ಥೆಯನ್ನು ಕೂಡಿಸಲು ಖಾತ್ರಿಪಡಿಸಿಕೊಳ್ಳಿರಿ

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ