ನಿಮ್ಮ ವಾಸಸ್ಥಾನವನ್ನು ಬದಲಾಯಿಸುತ್ತಿದ್ದೀರೊ?
ಈ ಪ್ರಶ್ನೆಗೆ ನಿಮ್ಮ ಉತ್ತರವು ಹೌದು ಎಂದಾಗಿರುವುದಾದರೆ, ಆಗ ನೀವು ಮತ್ತು ಇತರರು ಪ್ರಥಮವಾಗಿ ಮಾಡಬೇಕಾದ ಅನೇಕ ವಿಷಯಗಳಿವೆ. ಕೆಳಗೆ ರೇಖಿಸಲ್ಪಟ್ಟಿರುವ ಮೂಲಭೂತ ಹೆಜ್ಜೆಗಳನ್ನು ಅನುಸರಿಸುವುದರ ಮೂಲಕ, ನೀವು ಬಲುಬೇಗನೆ ನಿಮ್ಮ ಹೊಸ ಸಭೆಯಲ್ಲಿ ನೆಲೆಗೊಳ್ಳುವಿರಿ.
(1) ನೀವು ಎಲ್ಲಿಗೆ ಸ್ಥಳಾಂತರಿಸುತ್ತೀರೆಂಬುದು ನಿಮಗೆ ಗೊತ್ತಿರುವಲ್ಲಿ, ಈಗಿನ ಸಭೆಯ ಸೆಕ್ರಿಟರಿಗೆ ನಿಮ್ಮ ಹೊಸ ಸಭೆಯ ರಾಜ್ಯ ಸಭಾಗೃಹದ ವಿಳಾಸವನ್ನು ಪಡೆದುಕೊಳ್ಳಲು ಸಾಧ್ಯವಾಗಬಲ್ಲದು. ಆ ಸ್ಥಳಕ್ಕೆ ನೀವು ಮುಟ್ಟಿದ ಬಳಿಕ ತತ್ಕ್ಷಣ ರಾಜ್ಯ ಸಭಾಗೃಹ ಎಲ್ಲಿದೆಯೆಂದು ಹುಡುಕಿ, ಸಭೆಯ ಕೂಟದ ಸಮಯಗಳನ್ನು ಸರಿಯಾಗಿ ತಿಳಿದುಕೊಳ್ಳಿರಿ. ರಾಜ್ಯ ಸಭಾಗೃಹವನ್ನು ಒಂದಕ್ಕಿಂತಲೂ ಹೆಚ್ಚು ಸಭೆಗಳು ಉಪಯೋಗಿಸುತ್ತಿರುವುದಾದರೆ, ನೀವು ಯಾವ ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದೀರೆಂಬುದನ್ನು ಹಿರಿಯರಿಂದ ಕೇಳಿತಿಳಿದುಕೊಳ್ಳಿರಿ. ಕೂಟಗಳಿಗೆ ಹಾಜರಾಗಲು ಮತ್ತು ಸ್ಥಳಿಕ ಹಿರಿಯರೊಂದಿಗೆ ಪರಿಚಿತರಾಗಲು ತಡಮಾಡಬೇಡಿ.
(2) ಈಗಿನ ನಿಮ್ಮ ಸಭೆ ಮತ್ತು ನಿಮ್ಮ ಹೊಸ ಸಭೆ ಇವೆರಡರ ಸೆಕ್ರಿಟರಿಗಳು ನಿಮ್ಮ ಮತ್ತು ನಿಮ್ಮ ಕುಟುಂಬದ ಕಾಂಗ್ರಿಗೇಷನ್ಸ್ ಪಬ್ಲಿಷರ್ ರೆಕಾರ್ಡ್ ಕಾರ್ಡುಗಳನ್ನು ವರ್ಗಾಯಿಸುವುದರಲ್ಲಿ ಪರಸ್ಪರ ಸಹಕರಿಸುವರು. ನಿಮ್ಮ ಹೊಸ ಸಭೆಯ ಹಿರಿಯರಿಗೆ ಪರಿಚಯ ಪತ್ರವೊಂದನ್ನು ಕೂಡ ಕಳುಹಿಸಲಾಗುವುದು. (ಮಾರ್ಚ್ 1991ರ ನಮ್ಮ ರಾಜ್ಯದ ಸೇವೆಯ ಪ್ರಶ್ನೆ ಪೆಟ್ಟಿಗೆಯನ್ನು ನೋಡಿರಿ.) ಅಲ್ಲಿನ ಸಭಾ ಸೇವಾ ಕಮಿಟಿಯು ಆ ಕ್ಷೇತ್ರದ ಪುಸ್ತಕ ಅಭ್ಯಾಸ ಚಾಲಕನಿಗೆ ನಿಮ್ಮ ಆಗಮನದ ಕುರಿತು ಮಾಹಿತಿಯನ್ನು ಕೊಡತಕ್ಕದ್ದು. ಅವನು ನಿಮ್ಮನ್ನು ಸಂಪರ್ಕಿಸಿ, ನಿಮ್ಮ ಹೊಸ ಪುಸ್ತಕ ಅಭ್ಯಾಸ ಗುಂಪು ಎಲ್ಲಿ ಒಟ್ಟುಗೂಡುತ್ತದೆಂಬುದನ್ನು ಕಂಡುಹಿಡಿಯಲು ಸಹಾಯಮಾಡುವನು.—ರೋಮಾ. 15:7.
(3) ನಿಮ್ಮ ಹೊಸ ಸಭೆಯಲ್ಲಿರುವ ಪ್ರಚಾರಕರೆಲ್ಲರಿಗೂ ವಹಿಸಲು ಆನಂದಭರಿತ ಪಾತ್ರವಿದೆ—ಅದೇನಂದರೆ ನಿಮ್ಮೊಂದಿಗೆ ಪರಿಚಯಮಾಡಿಕೊಂಡು ನಿಮ್ಮನ್ನು ಸಂತೋಷದಿಂದ ಬರಮಾಡಿಕೊಳ್ಳುವುದೇ. (3 ಯೋಹಾನ 8ನ್ನು ಹೋಲಿಸಿರಿ.) ನಿಜ ಇದರರ್ಥ, ಸಹೋದರ ಸಹೋದರಿಯರೊಂದಿಗೆ ಉತ್ತೇಜನದಾಯಕ ಮತ್ತು ಬಲವರ್ಧಕವಾಗಿರುವ ಮಾತುಗಳ ವಿನಿಮಯದಲ್ಲಿ ಆನಂದಿಸಲು ನೀವು ಕೂಟಗಳಿಗೆ ಹಾಜರಿರಲೇಬೇಕು.
(4) ನಿಮ್ಮ ಹೊಸ ಸಭೆಯೊಂದಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲಿಕ್ಕಾಗಿ, ನಿಮ್ಮ ವಾಸಸ್ಥಾನವನ್ನು ಬದಲಾಯಿಸುವುದರಲ್ಲಿ ಒಳಗೂಡಿರುವ ಎಲ್ಲ ಕೆಲಸವು ಮುಗಿಯುವ ವರೆಗೆ ನೀವು ಕಾಯಬೇಕಾಗಿರುವುದಿಲ್ಲ. ರಾಜ್ಯಾಭಿರುಚಿಗಳನ್ನು ನೀವು ಪ್ರಥಮವಾಗಿಡುವಾಗ, ಇತರ ವಿಷಯಗಳು ಪೂರೈಸಲ್ಪಡುವವು ಮತ್ತು ನಿಮ್ಮ ಹೊಸ ಪರಿಸರದಲ್ಲಿ ನೀವು ಹೆಚ್ಚು ಹಾಯಾಗಿರುವಿರಿ. (ಮತ್ತಾ. 6:33) ನೀವು ನಿಮ್ಮ ಹೊಸ ಮನೆಯಲ್ಲಿ ತಳವೂರಿದ ನಂತರ, ಸಭೆಯಿಂದ ಕೆಲವರನ್ನು ನೀವು ನಿಮ್ಮ ಮನೆಗೆ ಆಮಂತ್ರಿಸಿ, ಅವರೊಂದಿಗೆ ಹೆಚ್ಚು ಪರಿಚಿತರಾಗಬಹುದು.—ರೋಮಾ. 12:13ಬಿ.
ವಾಸಸ್ಥಾನವನ್ನು ಬದಲಾಯಿಸುವುದು ಒಂದು ದೊಡ್ಡ ಕೆಲಸವಾಗಿದೆ. ಆದಾಗ್ಯೂ, ಸೂಚಿಸಲ್ಪಟ್ಟಿರುವ ಎಲ್ಲ ವಿಷಯಗಳನ್ನು ಪ್ರತಿಯೊಬ್ಬರೂ ಮಾಡುವುದಾದರೆ, ಆಗ ಯಾವುದೇ ಆತ್ಮಿಕ ಹಿಮ್ಮೆಟ್ಟುವಿಕೆಗಳು ಇರಲಾರವು. ಅದರಲ್ಲಿ ಒಳಗೊಂಡಿರುವ ಪ್ರತಿಯೊಬ್ಬರ ಮೇಲೆ ನಮ್ಮ ಪ್ರೀತಿಯ ಕ್ರೈಸ್ತ ಸಹೋದರತ್ವದ ಒಳ್ಳೆಯ ಪ್ರಭಾವವು ಬೀರುವುದು.