“ಆಶ್ರಯನಗರ”ದಲ್ಲಿ ಉಳಿದುಕೊಂಡು ಜೀವಿಸಿರಿ!
“ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕಾಗಿತ್ತು.”—ಅರಣ್ಯಕಾಂಡ 35:28.
1. ರಕ್ತದ ಮುಯ್ಯಿಗಾರನು ಯಾರು, ಮತ್ತು ಬೇಗನೆ ಅವನು ಯಾವ ಕ್ರಿಯೆಗೈಯುವನು?
ಯೆಹೋವನ ರಕ್ತದ ಮುಯ್ಯಿಗಾರನಾದ ಯೇಸು ಕ್ರಿಸ್ತನು ಇನ್ನೇನು ಏಟು ಕೊಡಲಿದ್ದಾನೆ. ತನ್ನ ದೇವದೂತ ಸಂಬಂಧಿತ ಸೇನೆಗಳೊಂದಿಗೆ, ಈ ಮುಯ್ಯಿಗಾರನು ಬೇಗನೆ ಪಶ್ಚಾತ್ತಾಪರಹಿತ ರಕ್ತಾಪರಾಧಿಗಳಾಗಿರುವ ಎಲ್ಲರ ವಿರುದ್ಧ ಕ್ರಿಯೆಗೈಯುವನು. ಹೌದು, ತೀವ್ರವಾಗಿ ಸಮೀಪಿಸುತ್ತಿರುವ “ಮಹಾ ಸಂಕಟ”ದ ಸಮಯದಲ್ಲಿ, ಯೇಸು ದೇವರ ವಧಕಾರನಂತೆ ಕಾರ್ಯಮಾಡುವನು. (ಮತ್ತಾಯ 24:21, 22; ಯೆಶಾಯ 26:21) ಆಗ ಮಾನವಜಾತಿಯು ತನ್ನ ರಕ್ತಾಪರಾಧದ ಪರಿಣಾಮಗಳಿಂದ ತಪ್ಪಿಸಿಕೊಳ್ಳದು.
2. ಆಶ್ರಯದ ಏಕಮಾತ್ರ ನಿಜ ಸ್ಥಳವು ಯಾವುದು, ಮತ್ತು ಯಾವ ಪ್ರಶ್ನೆಗಳಿಗೆ ಉತ್ತರಗಳು ಬೇಕಾಗಿವೆ?
2 ಸುರಕ್ಷತೆಗೆ ಮಾರ್ಗವು, ಈ ಸೂಚಿತರೂಪದ ಆಶ್ರಯನಗರದ ದಾರಿಯನ್ನು ಕಂಡುಹಿಡಿದು, ಒಬ್ಬನ ಜೀವಕ್ಕಾಗಿ ಓಡುವುದೇ ಆಗಿದೆ! ನಗರದೊಳಗೆ ಸೇರಿಸಲ್ಪಟ್ಟಲ್ಲಿ, ಆಶ್ರಿತನೊಬ್ಬನು ಅಲ್ಲಿ ಉಳಿಯಬೇಕಿತ್ತು ಏಕೆಂದರೆ ಅದು ಮಾತ್ರ ಆಶ್ರಯದ ನಿಜವಾದ ಸ್ಥಳವಾಗಿದೆ. ಆದರೆ ನೀವು ಹೀಗೆ ಕುತೂಹಲಪಡಬಹುದು, ‘ನಮ್ಮಲ್ಲಿ ಹೆಚ್ಚಿನವರು ಯಾರನ್ನೂ ಎಂದೂ ಕೊಲ್ಲದೆ ಇರುವುದರಿಂದ, ನಾವು ನಿಜವಾಗಿಯೂ ರಕ್ತಾಪರಾಧಿಗಳೊ? ಯೇಸು ರಕ್ತದ ಮುಯ್ಯಿಗಾರನಾಗಿರುವುದು ಏಕೆ? ಆಧುನಿಕ ದಿನದ ಆಶ್ರಯನಗರವು ಏನಾಗಿದೆ? ಅದನ್ನು ಯಾರಾದರೂ ಸುರಕ್ಷಿತವಾಗಿ ಬಿಡಸಾಧ್ಯವಿದೆಯೆ?’
ನಾವು ನಿಜವಾಗಿಯೂ ರಕ್ತಾಪರಾಧಿಗಳಾಗಿದ್ದೇವೊ?
3. ಭೂಮಿಯ ಕೋಟ್ಯಂತರ ಜನರು ರಕ್ತಾಪರಾಧದಲ್ಲಿ ಪಾಲು ಹೊಂದಿದ್ದಾರೆಂದು ನೋಡಲು, ಮೋಶೆಯ ಧರ್ಮಶಾಸ್ತ್ರದ ಯಾವ ವೈಶಿಷ್ಟ್ಯವು ನಮಗೆ ಸಹಾಯ ಮಾಡುವುದು?
3 ಭೂಮಿಯ ಕೋಟ್ಯಂತರ ಜನರು ರಕ್ತಾಪರಾಧವನ್ನು ಹಂಚಿಕೊಳ್ಳುತ್ತಾರೆಂಬುದನ್ನು ಕಾಣುವಂತೆ, ಮೋಶೆಯ ಧರ್ಮಶಾಸ್ತ್ರದ ಒಂದು ವೈಶಿಷ್ಟ್ಯವು ನಮಗೆ ಸಹಾಯಮಾಡುವುದು. ರಕ್ತಪಾತಕ್ಕೆ ದೇವರು ಇಸ್ರಾಯೇಲ್ಯರ ಮೇಲೆ ಕೂಡು ಹೊಣೆಯನ್ನು ಹೊರಿಸಿದನು. ಯಾರಾದರೊಬ್ಬನು ಕೊಲೆಮಾಡಲ್ಪಟ್ಟು ಅವನ ಕೊಲೆಗಾರನು ಯಾರೆಂದು ತಿಳಿಯದೆ ಹೋಗುವಲ್ಲಿ, ಹತ್ತಿರದ ನಗರವನ್ನು ಗೊತ್ತುಮಾಡಲು ನ್ಯಾಯಾಧೀಶರು ಸುತ್ತಮುತ್ತಲಿನ ನಗರಗಳ ಅಂತರವನ್ನು ಅಳೆಯಬೇಕಿತ್ತು. ದೋಷವನ್ನು ತೊಲಗಿಸಲು, ರಕ್ತಾಪರಾಧಿಯೆಂದು ತೋರುವ ಆ ನಗರದ ಹಿರಿಯರು, ಯಾವ ಕೆಲಸವನ್ನೂ ಮಾಡದ ಒಂದು ಎಳೆಯ ಹಸುವಿನ ಕುತ್ತಿಗೆಯನ್ನು ವ್ಯವಸಾಯಮಾಡಲ್ಪಡದ ನೀರಿನ ತಗ್ಗುಪ್ರದೇಶದಲ್ಲಿ ಮುರಿಯಬೇಕಿತ್ತು. ಇದನ್ನು ಲೇವಿಯ ಯಾಜಕರ ಮುಂದೆ ಮಾಡಲಾಯಿತು ‘ಏಕೆಂದರೆ ಯೆಹೋವನು ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕೆಂದು ಆದುಕೊಂಡಿದ್ದಾನೆ.’ ನಗರದ ಹಿರಿಯರು ಹಸುವಿನ ಮೇಲೆ ತಮ್ಮ ಕೈಗಳನ್ನು ತೊಳೆದುಕೊಂಡು, ಹೇಳಿದ್ದು: “ನಮ್ಮ ಕೈಗಳು ಈ ಹತ್ಯವನ್ನು ಮಾಡಲಿಲ್ಲ, ನಮ್ಮ ಕಣ್ಣುಗಳು ನೋಡಲಿಲ್ಲ; ಯೆಹೋವನೇ, ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು ಕ್ಷಮಿಸಬೇಕು; ಅನ್ಯಾಯವಾದ ನರಹತ್ಯದೋಷ ಫಲವು ನಿನ್ನ ಜನರಾದ ಇಸ್ರಾಯೇಲ್ಯರಿಗೆ ತಗಲದಿರಲಿ ಎಂದು ಹೇಳಬೇಕು.” (ಧರ್ಮೋಪದೇಶಕಾಂಡ 21:1-9) ಇಸ್ರಾಯೇಲ್ ದೇಶವು ರಕ್ತದಿಂದ ಮಲಿನಗೊಳ್ಳುವಂತೆ ಅಥವಾ ಅದರ ಜನರು ಕೂಡು ರಕ್ತಾಪರಾಧವನ್ನು ಹೊರುವಂತೆ ಯೆಹೋವ ದೇವರು ಬಯಸಲಿಲ್ಲ.
4. ರಕ್ತಾಪರಾಧದ ಯಾವ ದಾಖಲೆ ಮಹಾ ಬಾಬೆಲಿಗಿದೆ?
4 ಹೌದು, ಕೂಡು ಅಥವಾ ಸಮುದಾಯ ರಕ್ತಾಪರಾಧ ಎಂಬ ವಿಷಯವೊಂದಿದೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಮೇಲಿರುವ ಮಹತ್ತಾದ ರಕ್ತಾಪರಾಧವನ್ನು ಪರಿಗಣಿಸಿರಿ. ಆಕೆ ಯೆಹೋವನ ಸೇವಕರ ರಕ್ತದಿಂದ ಮತ್ತಳಾಗಿದ್ದಾಳೆ! (ಪ್ರಕಟನೆ 17:5, 6; 18:24) ಕ್ರೈಸ್ತಪ್ರಪಂಚದ ಧರ್ಮಗಳು ಸಮಾಧಾನದ ಪ್ರಭುವನ್ನು ಅನುಸರಿಸುತ್ತೇವೆ ಎಂದು ಹೇಳಿಕೊಂಡರೂ, ಯುದ್ಧಗಳು, ಮಠೀಯ ನ್ಯಾಯಸ್ಥಾನಗಳು, ಮತ್ತು ಮಾರಕವಾದ ಧಾರ್ಮಿಕಯುದ್ಧಗಳು ದೇವರ ಮುಂದೆ ಆಕೆಯನ್ನು ರಕ್ತಾಪರಾಧಿಯನ್ನಾಗಿ ಮಾಡಿವೆ. (ಯೆಶಾಯ 9:6; ಯೆರೆಮೀಯ 2:34) ವಾಸ್ತವದಲ್ಲಿ, ಈ ಶತಮಾನದ ಎರಡು ಜಾಗತಿಕ ಯುದ್ಧಗಳಲ್ಲಿನ ಕೋಟ್ಯಂತರ ಮರಣಗಳಿಗೆ ಹೆಚ್ಚಿನ ದೋಷವನ್ನು ಆಕೆ ಹೊರಬೇಕು. ಆದುದರಿಂದ, ಸುಳ್ಳು ಧರ್ಮದ ಅನುಯಾಯಿಗಳು, ಅಷ್ಟೇ ಅಲ್ಲದೆ ಮಾನವ ಕಾದಾಟದಲ್ಲಿನ ಬೆಂಬಲಿಗರು ಮತ್ತು ಭಾಗಿಗಳು ದೇವರ ಮುಂದೆ ರಕ್ತಾಪರಾಧಿಗಳಾಗಿದ್ದಾರೆ.
5. ಯಾವ ರೀತಿಯಲ್ಲಿ ಕೆಲವು ಜನರು ಇಸ್ರಾಯೇಲಿನಲ್ಲಿನ ಉದ್ದೇಶರಹಿತ ಕೊಲೆಗಾರನಂತೆ ಇದ್ದಾರೆ?
5 ಕೆಲವು ಜನರು ಮಾನವ ಮರಣವನ್ನು ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯ ಮುಖಾಂತರ ಉಂಟುಮಾಡಿದ್ದಾರೆ. ಇತರರು, ಇದು ದೇವರ ಚಿತ್ತವೆಂದು ಧಾರ್ಮಿಕ ನಾಯಕರಿಂದ ಬಹುಶಃ ಮನಗಾಣಿಸಲ್ಪಟ್ಟು, ಸಾಮೂಹಿಕ ಕಗ್ಗೊಲೆಯಲ್ಲಿ ಭಾಗವಹಿಸಿದ್ದಾರೆ. ಇನ್ನೂ ಇತರರು ದೇವರ ಸೇವಕರನ್ನು ಹಿಂಸಿಸಿ ಕೊಂದಿದ್ದಾರೆ. ನಾವು ಇಂತಹ ವಿಷಯಗಳನ್ನು ಮಾಡಿರದಿದ್ದರೂ, ಮಾನವ ಜೀವದ ನಷ್ಟಕ್ಕೆ ಸಮುದಾಯ ಹೊಣೆಯಲ್ಲಿ ನಾವು ಭಾಗಿಗಳಾಗಿದ್ದೇವೆ, ಏಕೆಂದರೆ ನಮಗೆ ದೇವರ ನಿಯಮ ಮತ್ತು ಚಿತ್ತವು ತಿಳಿದಿರಲಿಲ್ಲ. ನಾವು ‘ತನ್ನ ಜೊತೆಗಾರನನ್ನು ಅರಿವಿಲ್ಲದೆ ಕೊಂದ ಮತ್ತು ಅವನನ್ನು ಈ ಹಿಂದೆ ದ್ವೇಷಿಸದ’ ಉದ್ದೇಶರಹಿತ ಕೊಲೆಗಾರನಂತೆ ಇದ್ದೇವೆ. (ಧರ್ಮೋಪದೇಶಕಾಂಡ 19:4) ಅಂತಹ ವ್ಯಕ್ತಿಗಳು ಕರುಣೆಗಾಗಿ ದೇವರಲ್ಲಿ ಬೇಡಿಕೊಳ್ಳಬೇಕು ಮತ್ತು ಸೂಚಿತರೂಪದ ಆಶ್ರಯನಗರದೊಳಗೆ ಓಡಿಹೋಗಬೇಕು. ಇಲ್ಲದಿದ್ದರೆ ಅವರು ರಕ್ತದ ಮುಯ್ಯಿಗಾರನನ್ನು ಮರಣಾಂತಿಕವಾಗಿ ಸಂಧಿಸುವರು.
ಯೇಸುವಿನ ಪ್ರಮುಖ ಪಾತ್ರಗಳು
6. ಯೇಸು ಮಾನವಜಾತಿಯ ಅತಿ ಹತ್ತಿರದ ಸಂಬಂಧಿಯೆಂದು ಏಕೆ ಹೇಳಸಾಧ್ಯವಿದೆ?
6 ಇಸ್ರಾಯೇಲಿನಲ್ಲಿ ರಕ್ತದ ಮುಯ್ಯಿಗಾರನು ಹತವಾದವನ ಹತ್ತಿರದ ರಕ್ತಸಂಬಂಧಿಯಾಗಿದ್ದನು. ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ, ಮತ್ತು ವಿಶೇಷವಾಗಿ ಯೆಹೋವನ ಹತರಾದ ಸೇವಕರ ಪರವಾಗಿ ಮುಯ್ಯಿತೀರಿಸಲು, ಪ್ರಚಲಿತ ದಿನದ ರಕ್ತದ ಮುಯ್ಯಿಗಾರನು ಸಕಲ ಮಾನವಜಾತಿಯ ರಕ್ತಸಂಬಂಧಿಯಾಗಿರಬೇಕು. ಆ ಪಾತ್ರವು ಯೇಸು ಕ್ರಿಸ್ತನ ಮೂಲಕ ಪೂರೈಸಲ್ಪಟ್ಟಿದೆ. ಅವನೊಬ್ಬ ಪರಿಪೂರ್ಣ ಮನುಷ್ಯನಾಗಿ ಜನಿಸಿದನು. ಒಂದು ಪ್ರಾಯಶ್ಚಿತ್ತ ಯಜ್ಞದೋಪಾದಿ ಯೇಸು ತನ್ನ ಪಾಪರಹಿತ ಜೀವವನ್ನು ಮರಣದಲ್ಲಿ ಒಪ್ಪಿಸಿಬಿಟ್ಟನು, ಮತ್ತು ಸ್ವರ್ಗಕ್ಕೆ ಅವನ ಪುನರುತ್ಥಾನದ ತರುವಾಯ, ಪಾಪಪೂರ್ಣ ಆದಾಮನ ಸಾಯುತ್ತಿರುವ ಸಂತತಿಯವರ ಸಲುವಾಗಿ, ದೇವರಿಗೆ ಅದರ ಮೌಲ್ಯವನ್ನು ಸಾದರಪಡಿಸಿದನು. ಹೀಗೆ ಕ್ರಿಸ್ತನು ಮಾನವಜಾತಿಯ ವಿಮೋಚಕ, ನಮ್ಮ ಅತಿ ಹತ್ತಿರದ ಸಂಬಂಧಿ—ರಕ್ತದ ಯೋಗ್ಯ ಮುಯ್ಯಿಗಾರನಾದನು. (ರೋಮಾಪುರ 5:12; 6:23; ಇಬ್ರಿಯ 10:12) ತನ್ನ ಅಭಿಷಿಕ್ತ ಹೆಜ್ಜೆಜಾಡಿನ ಹಿಂಬಾಲಕರಿಗೆ ಒಬ್ಬ ಸಹೋದರನಂತೆ ಯೇಸು ಗುರುತಿಸಲ್ಪಟ್ಟಿದ್ದಾನೆ. (ಮತ್ತಾಯ 25:40, 45; ಇಬ್ರಿಯ 2:11-17) ಸ್ವರ್ಗೀಯ ರಾಜನೋಪಾದಿ, ಭೂಪ್ರಜೆಗಳಂತೆ ಅವನ ಯಜ್ಞದಿಂದ ಪ್ರಯೋಜನ ಪಡೆಯುವವರಿಗೆ ಅವನು “ನಿತ್ಯನಾದ ತಂದೆ” ಆಗುತ್ತಾನೆ. ಇವರು ಸದಾಕಾಲ ಜೀವಿಸುವರು. (ಯೆಶಾಯ 9:6, 7) ಆದುದರಿಂದ, ಯೆಹೋವನು ಸೂಕ್ತವಾಗಿಯೇ ಮಾನವಜಾತಿಯ ಈ ಸಂಬಂಧಿಯನ್ನು ರಕ್ತದ ಮುಯ್ಯಿಗಾರನಂತೆ ನೇಮಿಸಿದ್ದಾನೆ.
7. ಮಹಾಯಾಜಕನೋಪಾದಿ ಯೇಸು ಮಾನವರಿಗಾಗಿ ಏನನ್ನು ಮಾಡುತ್ತಾನೆ?
7 ಯೇಸು ಒಬ್ಬ ಪಾಪರಹಿತ, ಪರೀಕ್ಷಿಸಲ್ಪಟ್ಟ, ಸಹಾನುಭೂತಿಯುಳ್ಳ ಮಹಾಯಾಜಕನೂ ಆಗಿದ್ದಾನೆ. (ಇಬ್ರಿಯ 4:15) ಆ ಸ್ಥಾನದಲ್ಲಿ ಅವನು ತನ್ನ ಪಾಪಪರಿಹಾರಕ ಯಜ್ಞದ ಮೌಲ್ಯವನ್ನು ಮಾನವಜಾತಿಗೆ ಅನ್ವಯಿಸುತ್ತಾನೆ. ಆಶ್ರಯನಗರಗಳು ‘ಇಸ್ರಾಯೇಲ್ಯ ಪುತ್ರರಿಗಾಗಿ ಪರದೇಶದವನಿಗಾಗಿ ಮತ್ತು ಅವರಲ್ಲಿನ ನೆಲಸಿಗರಿಗಾಗಿ’ ಸ್ಥಾಪಿಸಲ್ಪಟ್ಟಿದ್ದವು. (ಅರಣ್ಯಕಾಂಡ 35:15) ಆದುದರಿಂದ ಮಹಾಯಾಜಕನು ತನ್ನ ಯಜ್ಞದ ಮೌಲ್ಯವನ್ನು ಪ್ರಥಮವಾಗಿ ತನ್ನ ಅಭಿಷಿಕ್ತ ಹಿಂಬಾಲಕರಿಗೆ, ‘ಇಸ್ರಾಯೇಲ್ಯ ಪುತ್ರರಿಗೆ’ ಅನ್ವಯಿಸಿದನು. ಈಗ ಅದು ಸೂಚಿತರೂಪದ ಆಶ್ರಯನಗರದಲ್ಲಿರುವ ‘ಪರದೇಶದವರಿಗೆ’ ಮತ್ತು ‘ನೆಲಸಿಗರಿಗೆ’ ಅನ್ವಯಿಸಲ್ಪಡುತ್ತಿದೆ. ಕರ್ತನಾದ ಯೇಸು ಕ್ರಿಸ್ತನ ಈ “ಬೇರೆ ಕುರಿಗಳು” ಭೂಮಿಯ ಮೇಲೆ ಸದಾಕಾಲ ಜೀವಿಸಲು ನಿರೀಕ್ಷಿಸುತ್ತಾರೆ.—ಯೋಹಾನ 10:16; ಕೀರ್ತನೆ 37:29, 34.
ಇಂದಿನ ಆಶ್ರಯನಗರ
8. ಸೂಚಿತರೂಪದ ಆಶ್ರಯನಗರವು ಏನಾಗಿದೆ?
8 ಸೂಚಿತರೂಪದ ಆಶ್ರಯನಗರವು ಏನಾಗಿದೆ? ಅದು ಆರು ಲೇವಿಯ ಆಶ್ರಯನಗರಗಳಲ್ಲಿ ಒಂದೂ, ಇಸ್ರಾಯೇಲಿನ ಮಹಾಯಾಜಕನ ಮನೆಯೂ ಆಗಿದ್ದ ಹೆಬ್ರೋನ್ನಂತಹ ಯಾವುದೊ ಭೌಗೋಲಿಕ ಸ್ಥಳವಾಗಿರುವುದಿಲ್ಲ. ಇಂದಿನ ಆಶ್ರಯನಗರವು, ರಕ್ತದ ಪಾವಿತ್ರ್ಯದ ಕುರಿತಾದ ದೇವರ ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಮ್ಮನ್ನು ಮರಣದಿಂದ ರಕ್ಷಿಸಲಿಕ್ಕಾಗಿರುವ ದೇವರ ಮುನ್ನೇರ್ಪಾಡಾಗಿದೆ. (ಆದಿಕಾಂಡ 9:6) ಉದ್ದೇಶಪೂರ್ವಕವಾಗಿಯೊ ಇಲ್ಲವೆ ಉದ್ದೇಶರಹಿತವಾಗಿಯೊ, ಆ ಆಜ್ಞೆಯನ್ನು ಉಲ್ಲಂಘಿಸುವ ಪ್ರತಿಯೊಬ್ಬನು, ಮಹಾಯಾಜಕನಾದ ಯೇಸು ಕ್ರಿಸ್ತನ ರಕ್ತದಲ್ಲಿ ನಂಬಿಕೆಯ ಮುಖಾಂತರ ದೇವರ ಕ್ಷಮಾಪಣೆಯನ್ನು ಮತ್ತು ತನ್ನ ಪಾಪದ ಅಳಿಸುವಿಕೆಯನ್ನು ಕೋರಬೇಕು. ಸ್ವರ್ಗೀಯ ನಿರೀಕ್ಷೆಗಳನ್ನು ಪಡೆದಿರುವ ಅಭಿಷಿಕ್ತ ಕ್ರೈಸ್ತರು ಮತ್ತು ಭೌಮಿಕ ಪ್ರತೀಕ್ಷೆಗಳನ್ನು ಪಡೆದಿರುವ “ಮಹಾ ಸಮೂಹ”ದವರು ಯೇಸುವಿನ ಪಾಪಪರಿಹಾರಕ ಯಜ್ಞದ ಪ್ರಯೋಜನಗಳ ಲಾಭವನ್ನು ಪಡೆದಿದ್ದಾರೆ ಮತ್ತು ಸೂಚಿತರೂಪದ ಆಶ್ರಯನಗರದಲ್ಲಿದ್ದಾರೆ.—ಪ್ರಕಟನೆ 7:9, 14; 1 ಯೋಹಾನ 1:7; 2:1, 2.
9. ರಕ್ತದ ಕುರಿತು ದೇವರ ಆಜ್ಞೆಯನ್ನು ತಾರ್ಸದ ಸೌಲನು ಹೇಗೆ ಉಲ್ಲಂಘಿಸಿದನು, ಆದರೆ ಮನೋಭಾವದ ಬದಲಾವಣೆಯನ್ನು ಅವನು ಹೇಗೆ ಪ್ರದರ್ಶಿಸಿದನು?
9 ತಾನೊಬ್ಬ ಕ್ರೈಸ್ತನಾಗುವ ಮುಂಚೆ, ಅಪೊಸ್ತಲ ಪೌಲನು ರಕ್ತದ ಕುರಿತಾದ ಆಜ್ಞೆಯನ್ನು ಉಲಂಘಿಸಿದ್ದನು. ತಾರ್ಸದ ಸೌಲನಂತೆ, ಅವನು ಯೇಸುವಿನ ಹಿಂಬಾಲಕರನ್ನು ಹಿಂಸಿಸಿದನು ಮತ್ತು ಅವರ ಕೊಲೆಗೂ ಸಮ್ಮತಿಸಿದನು. “ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು,” ಎಂದನು ಪೌಲನು. (1 ತಿಮೊಥೆಯ 1:13; ಅ. ಕೃತ್ಯಗಳು 9:1-19) ಸೌಲನಲ್ಲಿ, ನಂಬಿಕೆಯ ಅನೇಕ ಕ್ರಿಯೆಗಳಿಂದ ತದನಂತರ ರುಜುಪಡಿಸಿದ ಒಂದು ಪಶ್ಚಾತ್ತಾಪದ ಮನೋಭಾವವಿತ್ತು. ಆದರೆ ಸೂಚಿತರೂಪದ ಆಶ್ರಯನಗರವನ್ನು ಪ್ರವೇಶಿಸುವ ಸಲುವಾಗಿ, ಪ್ರಾಯಶ್ಚಿತದ್ತಲ್ಲಿ ನಂಬಿಕೆಗಿಂತ ಹೆಚ್ಚಿನದ್ದು ಕೇಳಿಕೊಳ್ಳಲ್ಪಡುತ್ತದೆ.
10. ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಹೇಗೆ ಪಡೆಯಸಾಧ್ಯವಿದೆ, ಮತ್ತು ಅದನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು?
10 ರಕ್ತಪಾತದ ಸಂಬಂಧದಲ್ಲಿ ದೇವರ ಕಡೆಗೆ ತನಗೊಂದು ಒಳ್ಳೆಯ ಮನಸ್ಸಾಕ್ಷಿಯಿದೆ ಎಂದು ರುಜುಪಡಿಸಸಾಧ್ಯವಿದ್ದಲ್ಲಿ ಮಾತ್ರ, ಒಬ್ಬ ಉದ್ದೇಶರಹಿತ ಕೊಲೆಗಾರನು ಇಸ್ರಾಯೇಲಿನ ಆಶ್ರಯನಗರಗಳಲ್ಲೊಂದರಲ್ಲಿ ಉಳಿಯಬಹುದಿತ್ತು. ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಪಡೆಯಲು, ನಾವು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಡಬೇಕು, ನಮ್ಮ ಪಾಪಗಳ ವಿಷಯದಲ್ಲಿ ಪಶ್ಚಾತ್ತಾಪಪಡಬೇಕು ಮತ್ತು ನಮ್ಮ ಜೀವನಮಾರ್ಗವನ್ನು ಬದಲಾಯಿಸಬೇಕು. ಕ್ರಿಸ್ತನ ಮುಖಾಂತರ ದೇವರಿಗೆ ಒಂದು ಪ್ರಾರ್ಥನಾಪೂರ್ವಕ ಸಮರ್ಪಣೆಯಲ್ಲಿ ಒಂದು ಒಳ್ಳೆಯ ಮನಸ್ಸಾಕ್ಷಿಗಾಗಿ ಬೇಡುವ ಅಗತ್ಯ ನಮಗಿದೆ, ಇದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಬೇಕು. (1 ಪೇತ್ರ 3:20, 21) ಯೆಹೋವನೊಂದಿಗೆ ನಾವು ಒಂದು ಶುದ್ಧವಾದ ಸಂಬಂಧವನ್ನು ಪಡೆದಿರುವಂತೆ ಈ ಒಳ್ಳೆಯ ಮನಸ್ಸಾಕ್ಷಿಯು ಅನುಮತಿಸುತ್ತದೆ. ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವ ಏಕೈಕ ಮಾರ್ಗವು, ಪ್ರಾಚೀನ ಆಶ್ರಯನಗರಗಳಲ್ಲಿದ್ದ ಆಶ್ರಿತರು ಧರ್ಮಶಾಸ್ತ್ರಕ್ಕೆ ವಿಧೇಯರಾಗಿ ತಮ್ಮ ಕೆಲಸದ ನೇಮಕಗಳನ್ನು ನೆರವೇರಿಸಿದಂತೆಯೇ, ದೇವರ ಆವಶ್ಯಕತೆಗಳೊಂದಿಗೆ ಅನುವರ್ತಿಸಿ, ಸೂಚಿತರೂಪದ ಆಶ್ರಯನಗರದಲ್ಲಿ ನಮಗೆ ನೇಮಿಸಲ್ಪಟ್ಟ ಕೆಲಸವನ್ನು ಮಾಡುವುದೇ ಆಗಿದೆ. ಯೆಹೋವನ ಜನರಿಗಾಗಿರುವ ಇಂದಿನ ಪ್ರಧಾನ ಕೆಲಸವು ರಾಜ್ಯದ ಸಂದೇಶವನ್ನು ಘೋಷಿಸುವುದಾಗಿದೆ. (ಮತ್ತಾಯ 24:14; 28:19, 20) ಆ ಕೆಲಸವನ್ನು ಮಾಡುವುದು, ಪ್ರಚಲಿತ ದಿನದ ಆಶ್ರಯನಗರದ ಉಪಯುಕ್ತ ನಿವಾಸಿಗಳಾಗಿರುವಂತೆ ನಮಗೆ ಸಹಾಯಮಾಡುವುದು.
11. ಇಂದಿನ ಆಶ್ರಯನಗರದೊಳಗೆ ಸುರಕ್ಷಿತವಾಗಿ ನಾವು ಉಳಿಯಬೇಕಾದರೆ ಏನನ್ನು ತೊರೆಯಬೇಕು?
11 ಇಂದಿನ ಆಶ್ರಯನಗರವನ್ನು ಬಿಡುವುದು, ನಮ್ಮನ್ನು ನಾಶನಕ್ಕೆ ಈಡುಮಾಡಿಕೊಳ್ಳುವಂತಿದೆ, ಏಕೆಂದರೆ ರಕ್ತದ ಮುಯ್ಯಿಗಾರನು ರಕ್ತಾಪರಾಧಿಗಳಾಗಿರುವ ಎಲ್ಲರ ವಿರುದ್ಧ ಬೇಗನೆ ಕ್ರಿಯೆಗೈಯುವನು. ಇದು, ಈ ರಕ್ಷಣಾತ್ಮಕ ನಗರದ ಹೊರಗೆ ಅಥವಾ ಅದರ ಹುಲ್ಲುಗಾವಲಿನ ಗಡಿಯ ಬಳಿಯಲ್ಲಿರುವ ಒಂದು ಅಪಾಯಕರ ಕ್ಷೇತ್ರದಲ್ಲಿ ಹಿಡಿಯಲ್ಪಡುವ ಸಮಯವಾಗಿರುವುದಿಲ್ಲ. ಮಹಾಯಾಜಕನ ಪಾಪಪರಿಹಾರಕ ಯಜ್ಞದಲ್ಲಿ ನಾವು ನಂಬಿಕೆಯನ್ನು ಕಳೆದುಕೊಂಡರೆ, ಸೂಚಿತರೂಪದ ಆಶ್ರಯನಗರದ ಹೊರಗೆ ನಮ್ಮನ್ನು ಕಂಡುಕೊಳ್ಳಬಹುದು. (ಇಬ್ರಿಯ 2:1; 6:4-6) ನಾವು ಲೌಕಿಕ ವಿಧಗಳನ್ನು ಸ್ವೀಕರಿಸಿದರೆ, ಯೆಹೋವನ ಸಂಸ್ಥೆಯಲ್ಲಿ ಪೂರ್ಣವಾಗಿ ಒಳಗೊಂಡಿರದಿದ್ದರೆ, ಅಥವಾ ನಮ್ಮ ಸ್ವರ್ಗೀಯ ತಂದೆಯ ನೀತಿಯ ಮಟ್ಟಗಳನ್ನು ಬಿಟ್ಟುಹೋಗುವುದಾದರೂ, ನಾವು ಸುರಕ್ಷಿತರಾಗಿರಲಾರೆವು.—1 ಕೊರಿಂಥ 4:4.
ಆಶ್ರಯನಗರದಿಂದ ವಿಮುಕ್ತಗೊಳಿಸಲ್ಪಡುವುದು
12. ಈ ಹಿಂದೆ ರಕ್ತಾಪರಾಧಿಗಳಾದವರು ಸೂಚಿತರೂಪದ ಆಶ್ರಯನಗರದಲ್ಲಿ ಎಷ್ಟು ಸಮಯ ಉಳಿಯಬೇಕು?
12 ಇಸ್ರಾಯೇಲಿನಲ್ಲಿನ ಒಬ್ಬ ಉದ್ದೇಶರಹಿತ ಕೊಲೆಗಾರನು ಆಶ್ರಯನಗರದಲ್ಲಿ “ಮಹಾಯಾಜಕನು ಜೀವದಿಂದಿರುವ ತನಕ” ಉಳಿಯಬೇಕಿತ್ತು. (ಅರಣ್ಯಕಾಂಡ 35:28) ಹಾಗಾದರೆ ಈ ಹಿಂದೆ ರಕ್ತಾಪರಾಧಿಗಳಾದವರು ಸೂಚಿತರೂಪದ ಆಶ್ರಯನಗರದಲ್ಲಿ ಎಷ್ಟು ಸಮಯ ಉಳಿಯಬೇಕು? ಅವರಿಗೆ ಮಹಾಯಾಜಕನಾದ ಯೇಸು ಕ್ರಿಸ್ತನ ಸೇವೆಗಳ ಅಗತ್ಯ ಇನ್ನುಮುಂದೆ ಇರದಿರುವ ತನಕ. “ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ” ಎಂದು ಪೌಲನು ಹೇಳಿದನು. (ಇಬ್ರಿಯ 7:25) ಪಾಪದ ಯಾವುದೇ ದೋಷಗಳು ಮತ್ತು ಹಿಂದಿನ ರಕ್ತಾಪರಾಧವು ಮುಂದುವರಿಯುವ ತನಕ, ದೇವರೊಂದಿಗೆ ಯೋಗ್ಯವಾದ ನೆಲೆಯನ್ನು ಅಪರಿಪೂರ್ಣ ಮಾನವರು ಪಡೆದಿರಲು ಸಾಧ್ಯವಾಗುವಂತೆ, ಮಹಾಯಾಜಕನ ಸೇವೆಗಳು ಅಗತ್ಯವಾಗಿವೆ.
13. ಆಧುನಿಕ ದಿನದ ‘ಇಸ್ರಾಯೇಲ್ಯ ಪುತ್ರರು’ ಯಾರು, ಮತ್ತು ಅವರು “ಆಶ್ರಯನಗರ”ದಲ್ಲಿ ಎಷ್ಟು ಸಮಯ ಉಳಿಯಬೇಕು?
13 ಪ್ರಾಚೀನ ಆಶ್ರಯನಗರಗಳು, ‘ಇಸ್ರಾಯೇಲ್ಯ ಪುತ್ರರಿಗೆ,’ ಪರದೇಶದವರಿಗೆ, ಮತ್ತು ನೆಲಸಿಗರಿಗಾಗಿ ಸ್ಥಾಪಿಸಲ್ಪಟ್ಟಿದ್ದವೆಂಬುದನ್ನು ಜ್ಞಾಪಿಸಿಕೊಳ್ಳಿರಿ. ‘ಇಸ್ರಾಯೇಲ್ಯ ಪುತ್ರರು’ ಆತ್ಮಿಕ ಇಸ್ರಾಯೇಲ್ಯರಾಗಿದ್ದಾರೆ. (ಗಲಾತ್ಯ 6:16) ಅವರು ಭೂಮಿಯ ಮೇಲೆ ಜೀವದಿಂದಿರುವ ತನಕ ಸೂಚಿತರೂಪದ ಆಶ್ರಯನಗರದಲ್ಲಿ ಉಳಿಯಬೇಕು. ಏಕೆ? ಏಕೆಂದರೆ ಅವರಿನ್ನೂ ಅಪರಿಪೂರ್ಣ ಶರೀರದಲ್ಲಿದ್ದಾರೆ, ಆದುದರಿಂದ ತಮ್ಮ ಸ್ವರ್ಗೀಯ ಮಹಾಯಾಜಕನ ಪರಿಹಾರಕ ಮೌಲ್ಯದ ಅಗತ್ಯ ಅವರಿಗಿದೆ. ಆದರೆ ಈ ಅಭಿಷಿಕ್ತ ಕ್ರೈಸ್ತರು ಮರಣಹೊಂದಿ, ಸ್ವರ್ಗದಲ್ಲಿ ಆತ್ಮ ಜೀವಕ್ಕೆ ಪುನರುತ್ಥಾನಗೊಂಡಾಗ, ಅವರಿಗೆ ಇನ್ನುಮುಂದೆ ಮಹಾಯಾಜಕನ ಪರಿಹಾರಕ ಸೇವೆಗಳ ಅಗತ್ಯ ಇರುವುದಿಲ್ಲ; ಅವರು ಇನ್ನುಮುಂದೆ ರಕ್ತಾಪರಾಧಿ ಮಾನವರಾಗಿರುವುದಿಲ್ಲ. ಇಂತಹ ಪುನರುತಿತ್ಥ ಅಭಿಷಿಕ್ತರಿಗಾಗಿ ಮಹಾಯಾಜಕನು ಒಂದು ಪರಿಹಾರಕ, ರಕ್ಷಣಾತ್ಮಕ ಸ್ಥಾನದಲ್ಲಿ ಮರಣಹೊಂದಿರುವನು.
14. ಸ್ವರ್ಗೀಯ ಪ್ರತೀಕ್ಷೆಯಿರುವವರು ಇಂದಿನ ಆಶ್ರಯನಗರದಲ್ಲಿ ಉಳಿಯಬೇಕೆಂಬುದನ್ನು ಇನ್ನಾವ ವಿಷಯವೂ ಕೇಳಿಕೊಳ್ಳುತ್ತದೆ?
14 ಸ್ವರ್ಗದಲ್ಲಿ “ಕ್ರಿಸ್ತನೊಂದಿಗೆ ಸಹಬಾಧ್ಯಸ್ಥ”ರಾಗಿರುವವರು, ಮರಣದಲ್ಲಿ ತಮ್ಮ ಭೂಜೀವನವನ್ನು ನಂಬಿಗಸ್ತಿಕೆಯಿಂದ ಮುಗಿಸುವ ತನಕ ಸೂಚಿತರೂಪದ ಆಶ್ರಯನಗರದಲ್ಲಿ ಉಳಿಯಬೇಕೆಂಬುದನ್ನು ಮಾನವ ಸ್ವರೂಪದ ಒಡೆತನವೇ ಕೇಳಿಕೊಳ್ಳುತ್ತದೆ. ಅವರು ಮರಣಹೊಂದಿದಾಗ, ಅವರು ಮಾನವ ಸ್ವರೂಪವನ್ನು ನಿತ್ಯಕ್ಕೂ ತ್ಯಜಿಸಿಬಿಡುವರು. (ರೋಮಾಪುರ 8:17, NW; ಪ್ರಕಟನೆ 2:10) ಯೇಸುವಿನ ಯಜ್ಞವು ಮಾನವ ಸ್ವರೂಪ ಇರುವವರಿಗೆ ಮಾತ್ರ ಅನ್ವಯಿಸುತ್ತದೆ. ಆದಕಾರಣ, ಸ್ವರ್ಗದಲ್ಲಿ ಅನಂತವಾಗಿ “ದೈವಸ್ವಭಾವದಲ್ಲಿ ಪಾಲನ್ನು ಹೊಂದು”ವವರಾಗಿ ವಾಸಿಸುವ, ಆತ್ಮ ಜೀವಿಗಳಾಗಿ ಪುನರುತ್ಥಾನಗೊಂಡ ಆತ್ಮಿಕ ಇಸ್ರಾಯೇಲ್ಯರ ವಿಷಯದಲ್ಲಿ ಮಹಾಯಾಜಕನು ಮರಣಹೊಂದುತ್ತಾನೆ.—2 ಪೇತ್ರ 1:4.
15. ಆಧುನಿಕ ದಿನದ ‘ಪರದೇಶದವರು’ ಮತ್ತು ‘ನೆಲಸಿಗರು’ ಯಾರು ಮತ್ತು ಅವರಿಗಾಗಿ ಮಹಾಯಾಜಕನು ಏನು ಮಾಡುವನು?
15 ಸೂಚಿತರೂಪದ ಆಶ್ರಯನಗರವನ್ನು ಬಿಡುವಂತೆ ಅವರಿಗೆ ಅನುಮತಿ ನೀಡುತ್ತಾ, ಮಹಾಯಾಜಕನು ಆಧುನಿಕ ದಿನದ ‘ಪರದೇಶದವರ’ ಮತ್ತು ‘ನೆಲಸಿಗರ’ ಸಂಬಂಧದಲ್ಲಿ ಯಾವಾಗ “ಮರಣಹೊಂದುವನು”? ಮಹಾ ಸಮೂಹದ ಈ ಸದಸ್ಯರು, ಮಹಾ ಸಂಕಟದ ತರುವಾಯ, ಕೂಡಲೆ ಈ ಆಶ್ರಯನಗರದಿಂದ ಹೊರಗೆ ಬರಲು ಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ? ಏಕೆಂದರೆ ಅವರಿನ್ನೂ ತಮ್ಮ ಅಪರಿಪೂರ್ಣ, ಪಾಪಮಯ ಶರೀರದಲ್ಲಿರುವರು ಮತ್ತು ಮಹಾಯಾಜಕನ ಸಂರಕ್ಷಣೆಯ ಕೆಳಗೆ ಉಳಿಯುವ ಅಗತ್ಯ ಅವರಿಗಿರುವುದು. ತನ್ನ ಸಾವಿರ ವರ್ಷದ ರಾಜತ್ವ ಮತ್ತು ಯಾಜಕತ್ವದ ಸಮಯದಲ್ಲಿ ಆತನ ಪರಿಹಾರಕ ಸೇವೆಗಳ ಲಾಭವನ್ನು ತಮಗಾಗಿ ಪಡೆದುಕೊಳ್ಳುವ ಮೂಲಕ, ಅವರು ಮಾನವ ಪರಿಪೂರ್ಣತೆಯನ್ನು ಪಡೆಯುವರು. ಆಗ, ಸ್ವಲ್ಪ ಸಮಯಕ್ಕಾಗಿ ಸೈತಾನ ಮತ್ತು ಅವನ ದೆವ್ವಗಳ ಬಿಡುಗಡೆಯ ಮೂಲಕ ತಮ್ಮ ಸಮಗ್ರತೆಯ ಅಂತಿಮ, ಅನಂತವಾಗಿ ನಿರ್ಣಾಯಕವಾಗಿರುವ ಪರೀಕೆಗ್ಷಾಗಿ ಯೇಸು ಅವರನ್ನು ದೇವರಿಗೆ ಒಪ್ಪಿಸುವನು. ದೈವಿಕ ಸಮ್ಮತಿಯಿಂದ ಅವರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರಿಂದ, ಯೆಹೋವನು ಅವರನ್ನು ನೀತಿವಂತರೆಂದು ಘೋಷಿಸುವನು. ಹೀಗೆ ಅವರು ಮಾನವ ಪರಿಪೂರ್ಣತೆಯ ಸಂಪೂರ್ಣತೆಯನ್ನು ತಲಪುವರು.—1 ಕೊರಿಂಥ 15:28; ಪ್ರಕಟನೆ 20:7-10.a
16. ಮಹಾ ಸಂಕಟದಿಂದ ಪಾರಾದವರಿಗೆ ಮಹಾಯಾಜಕನ ಪರಿಹಾರಕ ಸೇವೆಗಳ ಅಗತ್ಯ ಇನ್ನುಮುಂದೆ ಇರದಿರುವುದು ಯಾವಾಗ?
16 ಆದುದರಿಂದ, ಮಹಾ ಸಂಕಟದಲ್ಲಿ ಪಾರಾಗಿ ಉಳಿಯುವವರು, ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಕೊನೆಯ ತನಕ ಸೂಚಿತರೂಪದ ಆಶ್ರಯನಗರದಲ್ಲಿ ಉಳಿಯುವ ಮೂಲಕ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಬೇಕಾಗುವುದು. ಪರಿಪೂರ್ಣಗೊಳಿಸಲ್ಪಟ್ಟ ಮಾನವರೋಪಾದಿ, ಅವರಿಗೆ ಇನ್ನುಮುಂದೆ ಮಹಾಯಾಜಕನ ಪರಿಹಾರಕ ಸೇವೆಗಳ ಅಗತ್ಯವಿರುವುದಿಲ್ಲ ಮತ್ತು ಅವನ ಸಂರಕ್ಷಣೆಯಿಂದ ಅವರು ಹೊರಗೆ ಬರುವರು. ಯೇಸು ಆಗ ಮಹಾಯಾಜಕನೋಪಾದಿ ಅವರ ವಿಷಯದಲ್ಲಿ ಮರಣಹೊಂದುವನು, ಏಕೆಂದರೆ ತನ್ನ ಯಜ್ಞದ ಶುದ್ಧೀಕರಿಸುವ ರಕ್ತದಿಂದ ಅವರ ಪರವಾಗಿ ಕ್ರಿಯೆಗೈಯುವ ಅಗತ್ಯ ಇನ್ನುಮುಂದೆ ಅವನಿಗಿರುವುದಿಲ್ಲ. ಆ ಸಮಯದಲ್ಲಿ ಅವರು ಸೂಚಿತರೂಪದ ಆಶ್ರಯನಗರವನ್ನು ಬಿಡುವರು.
17. ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಪುನರುತ್ಥಾನಗೊಳ್ಳುವವರಿಗೆ, ಸೂಚಿತರೂಪದ ಆಶ್ರಯನಗರವನ್ನು ಪ್ರವೇಶಿಸಿ, ಅಲ್ಲಿ ಉಳಿಯುವ ಅಗತ್ಯವಿರುವುದಿಲ್ಲ ಏಕೆ?
17 ಯೇಸುವಿನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ ಪುನರುತ್ಥಾನಗೊಳ್ಳುವವರು ಸೂಚಿತರೂಪದ ಆಶ್ರಯನಗರವನ್ನು ಪ್ರವೇಶಿಸಿ, ಮಹಾಯಾಜಕನ ಮರಣದ ತನಕ ಅಲ್ಲಿ ಉಳಿಯಬೇಕೊ? ಇಲ್ಲ, ಏಕೆಂದರೆ ಸಾಯುವ ಮೂಲಕ ಅವರು ತಮ್ಮ ಪಾಪಕ್ಕಾಗಿ ದಂಡವನ್ನು ಸಲ್ಲಿಸಿದರು. (ರೋಮಾಪುರ 6:7; ಇಬ್ರಿಯ 9:27) ಆದರೂ, ಅವರು ಪರಿಪೂರ್ಣತೆಯನ್ನು ತಲಪುವಂತೆ ಮಹಾಯಾಜಕನು ಸಹಾಯ ಮಾಡುವನು. ಸಹಸ್ರ ವರ್ಷಗಳ ಯುಗದ ನಂತರ ಅವರು ಯಶಸ್ವಿಯಾಗಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದಾದರೆ, ಭೂಮಿಯ ಮೇಲೆ ಅನಂತ ಜೀವನದ ಖಾತರಿಯೊಂದಿಗೆ ದೇವರು ಅವರನ್ನು ನೀತಿವಂತರೆಂದೂ ಘೋಷಿಸುವನು. ದೇವರ ಆವಶ್ಯಕತೆಗಳಿಗನುಸಾರ ಅನುವರ್ತಿಸಲು ವಿಫಲವಾಗುವುದು, ಸಮಗ್ರತೆಯನ್ನು ಕಾಪಾಡುವವರೋಪಾದಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದಿರುವ ಯಾವುದೇ ಮಾನವರ ಮೇಲೆ ಖಂಡನಾತ್ಮಕ ನ್ಯಾಯತೀರ್ಪನ್ನು ಮತ್ತು ನಾಶನವನ್ನು ತರುವುದು ನಿಶ್ಚಯ.
18. ಯೇಸುವಿನ ರಾಜತ್ವ ಮತ್ತು ಯಾಜಕತ್ವದ ಸಂಬಂಧದಲ್ಲಿ, ಯಾವುದು ಮಾನವಜಾತಿಯೊಂದಿಗೆ ಸದಾಕಾಲ ಉಳಿಯುವುದು?
18 ಇಸ್ರಾಯೇಲ್ಯ ಮಹಾಯಾಜಕರು ಕಟ್ಟಕಡೆಗೆ ಮರಣಹೊಂದಿದರು. ಆದರೆ ಯೇಸು “ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕ”ನಾಗಿದ್ದಾನೆ. (ಓರೆಅಕ್ಷರಗಳು ನಮ್ಮವು.) (ಇಬ್ರಿಯ 6:19, 20; 7:3) ಆದುದರಿಂದ ಮಾನವಜಾತಿಯ ಕಡೆಗೆ ಮಧ್ಯವರ್ತಿಸುವ ಒಬ್ಬ ಮಹಾಯಾಜಕನೋಪಾದಿ ಯೇಸುವಿನ ಅಧಿಕಾರದ ಮುಗಿಯುವಿಕೆಯು ಅವನ ಜೀವನವನ್ನು ಅಂತ್ಯಗೊಳಿಸುವುದಿಲ್ಲ. ಅರಸ ಮತ್ತು ಮಹಾಯಾಜಕನಂತೆ ಅವನ ಸೇವೆಯ ಒಳ್ಳೆಯ ಪರಿಣಾಮಗಳು ಮಾನವಜಾತಿಯೊಂದಿಗೆ ಸದಾಕಾಲ ಉಳಿಯುವುವು, ಮತ್ತು ಈ ಸ್ಥಾನಗಳಲ್ಲಿ ಸೇವೆಮಾಡಿದ್ದಕ್ಕಾಗಿ ಮಾನವರು ಅವನಿಗೆ ಚಿರಋಣಿಗಳಾಗಿರುವರು. ಅದಲ್ಲದೆ, ನಿತ್ಯತೆಯ ಉದ್ದಕ್ಕೂ ಯೆಹೋವನ ಶುದ್ಧಾರಾಧನೆಯಲ್ಲಿ ಯೇಸು ನಾಯಕತ್ವವನ್ನು ವಹಿಸುವನು.—ಫಿಲಿಪ್ಪಿ 2:5-11.
ನಮಗಾಗಿರುವ ಅಮೂಲ್ಯ ಪಾಠಗಳು
19. ಆಶ್ರಯನಗರಗಳ ಮುನ್ನೇರ್ಪಾಡಿನಿಂದ ದ್ವೇಷ ಮತ್ತು ಪ್ರೀತಿಯ ಕುರಿತು ಯಾವ ಪಾಠವನ್ನು ಕಲಿಯಸಾಧ್ಯವಿದೆ?
19 ಆಶ್ರಯನಗರಗಳ ಮುನ್ನೇರ್ಪಾಡಿನಿಂದ ನಾವು ವಿವಿಧ ಪಾಠಗಳನ್ನು ಕಲಿಯಬಲ್ಲೆವು. ದೃಷ್ಟಾಂತಕ್ಕೆ, ತಾನು ಕೊಂದವನಿಗಾಗಿ ಕ್ರೂರ ದ್ವೇಷವಿರುವ ಯಾವ ಕೊಲೆಗಾರನೂ ಆಶ್ರಯನಗರವೊಂದರಲ್ಲಿ ವಾಸಿಸಲು ಅನುಮತಿಸಲ್ಪಡಲಿಲ್ಲ. (ಅರಣ್ಯಕಾಂಡ 35:20, 21) ಆದುದರಿಂದ ಸೂಚಿತರೂಪದ ಆಶ್ರಯನಗರದಲ್ಲಿರುವ ಯಾವನಾದರೂ, ಒಬ್ಬ ಸಹೋದರನ ವಿಷಯವಾಗಿ ತನ್ನ ಹೃದಯದಲ್ಲಿ ದ್ವೇಷವನ್ನು ವಿಕಸಿಸಲು ಹೇಗೆ ಬಿಟ್ಟಾನು? “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ,” ಎಂದು ಅಪೊಸ್ತಲ ಯೋಹಾನನು ಬರೆದನು, “ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.” ಆದದರಿಂದ ನಾವು “ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ.”—1 ಯೋಹಾನ 3:15; 4:7.
20. ರಕ್ತದ ಮುಯ್ಯಿಗಾರನಿಂದ ಸಂರಕ್ಷಣೆಯನ್ನು ಪಡೆಯಲಿಕ್ಕಾಗಿ ಸೂಚಿತರೂಪದ ಆಶ್ರಯನಗರದಲ್ಲಿರುವವರು ಏನು ಮಾಡಬೇಕು?
20 ರಕ್ತದ ಮುಯ್ಯಿಗಾರನಿಂದ ಸಂರಕ್ಷಣೆಯನ್ನು ಪಡೆಯಲಿಕ್ಕಾಗಿ, ಉದ್ದೇಶರಹಿತ ಕೊಲೆಗಾರರು ಆಶ್ರಯನಗರವೊಂದರಲ್ಲಿ ಉಳಿಯಬೇಕಿತ್ತು ಮತ್ತು ಅದರ ಹುಲ್ಲುಗಾವಲು ಪ್ರದೇಶಗಳ ಆಚೆ ಅಲೆದಾಡಬಾರದಿತ್ತು. ಸೂಚಿತರೂಪದ ಆಶ್ರಯನಗರದಲ್ಲಿರುವವರ ಕುರಿತೇನು? ರಕ್ತದ ಮಹಾ ಮುಯ್ಯಿಗಾರನಿಂದ ರಕ್ಷಣೆಗಾಗಿ ಅವರು ನಗರವನ್ನು ಬಿಡಬಾರದು. ಹಾಗೆ ಹೇಳುವುದಾದರೆ, ಹುಲ್ಲುಗಾವಲು ಪ್ರದೇಶಗಳ ಅಂಚಿಗೆ ಹೋಗುವಂತಿರುವ ಆಕರ್ಷಣೆಗಳ ವಿರುದ್ಧ ಅವರು ಎಚ್ಚರವಾಗಿರಬೇಕು ನಿಶ್ಚಯ. ತಮ್ಮ ಹೃದಯಗಳಲ್ಲಿ ಸೈತಾನನ ಲೋಕಕ್ಕಾಗಿ ಪ್ರೀತಿಯು ಬೆಳೆಯುವಂತೆ ಬಿಡದಿರಲು ಅವರು ಜಾಗರೂಕರಾಗಿರಬೇಕು. ಇದು ಪ್ರಾರ್ಥನೆ ಮತ್ತು ಪ್ರಯತ್ನವನ್ನು ಕೇಳಿಕೊಳ್ಳಬಹುದು, ಆದರೆ ಅವರ ಜೀವಗಳು ಅದರ ಮೇಲೆ ಅವಲಂಬಿಸಿರುತ್ತವೆ.—1 ಯೋಹಾನ 2:15-17; 5:19.
21. ಇಂದಿನ ಆಶ್ರಯನಗರದಲ್ಲಿರುವವರ ಮೂಲಕ ಯಾವ ಪ್ರತಿಫಲದಾಯಕ ಕೆಲಸವು ಮಾಡಲ್ಪಡುತ್ತಿದೆ?
21 ಪ್ರಾಚೀನ ಆಶ್ರಯನಗರಗಳಲ್ಲಿದ್ದ ಉದ್ದೇಶರಹಿತ ಕೊಲೆಗಾರರು ಉತ್ಪನ್ನಕಾರಕ ಕಾರ್ಮಿಕರಾಗಿರಬೇಕಿತ್ತು. ತದ್ರೀತಿಯಲ್ಲಿ, ಅಭಿಷಿಕ್ತ ‘ಇಸ್ರಾಯೇಲ್ಯ ಪುತ್ರರು’ ಕೊಯಿನ್ಲ ಕೆಲಸಗಾರರಾಗಿ ಮತ್ತು ರಾಜ್ಯ ಘೋಷಕರಾಗಿ ಒಂದು ಉತ್ತಮವಾದ ಮಾದರಿಯನ್ನಿಟ್ಟಿದ್ದಾರೆ. (ಮತ್ತಾಯ 9:37, 38; ಮಾರ್ಕ 13:10) ಇಂದಿನ ಆಶ್ರಯನಗರದಲ್ಲಿನ ‘ಪರದೇಶದವರು’ ಮತ್ತು ‘ನೆಲಸಿಗ’ರಂತೆ, ಭೂಪ್ರತೀಕ್ಷೆಗಳಿರುವ ಕ್ರೈಸ್ತರಿಗೆ ಭೂಮಿಯಲ್ಲಿರುವ ಅಭಿಷಿಕ್ತರೊಂದಿಗೆ ಈ ಜೀವರಕ್ಷಕ ಕೆಲಸವನ್ನು ಮಾಡುವ ಸುಯೋಗವಿದೆ. ಮತ್ತು ಇದು ಎಂತಹ ಪ್ರತಿಫಲದಾಯಕ ಕೆಲಸವಾಗಿದೆ! ಸೂಚಿತರೂಪದ ಆಶ್ರಯನಗರದಲ್ಲಿ ನಂಬಿಗಸ್ತಿಕೆಯಿಂದ ಕೆಲಸಮಾಡುವವರು ರಕ್ತದ ಮುಯ್ಯಿಗಾರನ ಮೂಲಕ ಬರುವ ಅನಂತ ಮರಣದಿಂದ ತಪ್ಪಿಸಿಕೊಳ್ಳುವರು. ಬದಲಿಗೆ, ದೇವರ ಮಹಾಯಾಜಕನಂತೆ ಅವನ ಸೇವೆಯಿಂದ ಅವರು ಅನಂತ ಪ್ರಯೋಜನಗಳನ್ನು ಪಡೆಯುವರು. ನೀವು ಆಶ್ರಯನಗರದಲ್ಲಿ ಉಳಿದುಕೊಂಡು ಸದಾಕಾಲ ಜೀವಿಸುವಿರೊ?
[ಪಾದಟಿಪ್ಪಣಿ]
ನೀವು ಹೇಗೆ ಉತ್ತರಿಸುವಿರಿ?
◻ ಭೂಮಿಯ ಕೋಟ್ಯಂತರ ಜನರು ರಕ್ತಾಪರಾಧಿಗಳಾಗಿದ್ದಾರೆಂದು ಏಕೆ ಹೇಳಸಾಧ್ಯವಿದೆ?
◻ ಮಾನವಜಾತಿಯ ಸಂಬಂಧದಲ್ಲಿ ಯಾವ ಪಾತ್ರಗಳನ್ನು ಯೇಸು ಕ್ರಿಸ್ತನು ಪೂರೈಸುತ್ತಾನೆ?
◻ ಸೂಚಿತರೂಪದ ಆಶ್ರಯನಗರವು ಏನಾಗಿದೆ, ಮತ್ತು ಅದನ್ನು ಒಬ್ಬನು ಹೇಗೆ ಪ್ರವೇಶಿಸುತ್ತಾನೆ?
◻ ಸೂಚಿತರೂಪದ ಆಶ್ರಯನಗರದಿಂದ ಜನರು ಯಾವಾಗ ವಿಮುಕ್ತಗೊಳಿಸಲ್ಪಡುವರು?
◻ ಆಶ್ರಯನಗರಗಳ ಮುನ್ನೇರ್ಪಾಡಿನಿಂದ ಯಾವ ಅಮೂಲ್ಯ ಪಾಠಗಳನ್ನು ನಾವು ಕಲಿಯಬಲ್ಲೆವು?
[ಪುಟ 16 ರಲ್ಲಿರುವ ಚಿತ್ರ]
ಯೇಸು ಕ್ರಿಸ್ತನಿಂದ ಯಾವ ಪ್ರಮುಖ ಪಾತ್ರಗಳು ಪೂರೈಸಲ್ಪಡುತ್ತಿವೆ ಎಂದು ನಿಮಗೆ ಗೊತ್ತೊ?