ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜೂನ್‌ ಪು. 20-25
  • ನಿರ್ಧಾರ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿರ್ಧಾರ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಡ್ಡಿತಡೆ ಕಂಡು ಹಿಡಿಯೋಕೆ ಸಹಾಯ ಮಾಡಿ
  • ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡಿ
  • ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿ
  • ಸಮಸ್ಯೆನ ಜಯಿಸೋಕೆ ಸಹಾಯ ಮಾಡಿ
  • ವಿದ್ಯಾರ್ಥಿ ಯೆಹೋವನನ್ನ ಪ್ರೀತಿಸ್ತಾನೆ ಅಂತ ನಂಬಿ
  • ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • “ಹೋಗಿ, ಶಿಷ್ಯರನ್ನಾಗಿ ಮಾಡಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜೂನ್‌ ಪು. 20-25

ಅಧ್ಯಯನ ಲೇಖನ 27

ಗೀತೆ 79 ಸ್ಥಿರವಾಗಿ ನಿಲ್ಲಲು ಕಲಿಸೋಣ

ನಿರ್ಧಾರ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ

“ನಂಬಿಕೆಯಲ್ಲಿ ದೃಢವಾಗಿರಿ, . . . ಬಲಿಷ್ಠರಾಗಿರಿ.” —1 ಕೊರಿಂ. 16:13.

ಈ ಲೇಖನದಲ್ಲಿ ಏನಿದೆ?

ಯೆಹೋವನ ಸೇವೆ ಮಾಡೋ ನಿರ್ಧಾರ ಮಾಡೋಕೆ ವಿದ್ಯಾರ್ಥಿಗಳಿಗೆ ನಂಬಿಕೆ ಮತ್ತು ಧೈರ್ಯ ಬೇಕು. ಇದನ್ನ ಬೆಳೆಸ್ಕೊಳ್ಳೋಕೆ ನೀವು ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.

1-2. (ಎ) ಯೆಹೋವನ ಸಾಕ್ಷಿ ಆಗೋಕೆ ಯಾಕೆ ಬೈಬಲ್‌ ವಿದ್ಯಾರ್ಥಿಗಳು ಹಿಂದೆ ಮುಂದೆ ನೋಡಬಹುದು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

ನೀವು ಬೈಬಲ್‌ ಕಲಿಯುವಾಗ ಯೆಹೋವನ ಸಾಕ್ಷಿ ಆಗೋಕೆ ಹಿಂದೆ ಮುಂದೆ ನೋಡಿದ್ರಾ? ಯೆಹೋವನ ಸಾಕ್ಷಿ ಆದ್ರೆ ನಿಮ್ಮ ಜೊತೆ ಕೆಲಸ ಮಾಡೋರು, ಸ್ನೇಹಿತರು ಮತ್ತು ಕುಟುಂಬದವರು ಏನಂತಾರೋ ಅಂತ ನಿಮಗೆ ಭಯ ಆಗಿರಬಹುದು. ಬೈಬಲಲ್ಲಿ ಇರೋದನ್ನೆಲ್ಲ ಪಾಲಿಸೋಕಾಗುತ್ತೋ ಇಲ್ವೋ ಅನ್ನೋ ಚಿಂತೆ ಆಗಿರಬಹುದು. ಒಂದುವೇಳೆ ನಿಮಗೆ ಈ ತರ ಅನಿಸಿದ್ರೆ ಈಗ ನಿಮ್ಮ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿ ಆಗೋಕೆ ಯಾಕೆ ಹಿಂದೆ ಮುಂದೆ ನೋಡ್ತಿದ್ದಾರೆ ಅಂತ ಅರ್ಥ ಆಗುತ್ತೆ ಅಲ್ವಾ?

2 ಈ ತರ ಭಯ ಇದ್ರೆ ಸೇವೆ ಮಾಡೋ ನಿರ್ಧಾರ ಮಾಡೋಕೆ ಕಷ್ಟ ಆಗುತ್ತೆ ಅಂತ ಯೇಸು ಅರ್ಥ ಮಾಡ್ಕೊಂಡನು. (ಮತ್ತಾ. 13:20-22) ಕೆಲವರು ಆತನ ಶಿಷ್ಯರಾಗೋಕೆ ಹಿಂದೆ ಮುಂದೆ ನೋಡಿದಾಗ ಯೇಸು ಬೇಜಾರು ಮಾಡ್ಕೊಳ್ಳಲಿಲ್ಲ, ಅವ್ರಿಗೆ ಸಹಾಯ ಮಾಡಿದನು. ಅಷ್ಟೇ ಅಲ್ಲ, ಅಂಥವ್ರಿಗೆ ಹೇಗೆ ಸಹಾಯ ಮಾಡಬೇಕು ಅಂತ ತನ್ನ ಶಿಷ್ಯರಿಗೂ ಹೇಳ್ಕೊಟ್ಟನು. ಉದಾಹರಣೆಗೆ, (1) ಯಾವ ಅಡ್ಡಿತಡೆಗಳು ಬರ್ತಿದೆ ಅಂತ ಕಂಡುಹಿಡಿಯೋದು ಹೇಗೆ, (2) ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋದು ಹೇಗೆ, (3) ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಳ್ಳೋದು ಹೇಗೆ ಮತ್ತು (4) ಬರ್ತಿರೋ ಸಮಸ್ಯೆಗಳನ್ನ ಜಯಿಸೋದು ಹೇಗೆ ಅಂತ ಕಲಿಸಿಕೊಟ್ಟನು. ನಾವು ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕನ ಬಳಸಿ ಬೈಬಲ್‌ ಸ್ಟಡಿ ಮಾಡ್ವಾಗ ಯೇಸು ಕೊಟ್ಟ ಈ ಸಲಹೆಗಳನ್ನ ಹೇಗೆ ಪಾಲಿಸಬಹುದು ಅಂತ ನೋಡೋಣ.

ಅಡ್ಡಿತಡೆ ಕಂಡು ಹಿಡಿಯೋಕೆ ಸಹಾಯ ಮಾಡಿ

3. ಯೇಸುವಿನ ಶಿಷ್ಯನಾಗೋಕೆ ನಿಕೊದೇಮನಿಗೆ ಯಾವ ಅಡ್ಡಿತಡೆ ಇತ್ತು?

3 ನಿಕೊದೇಮ ಯೆಹೂದ್ಯರ ಒಬ್ಬ ಮುಖ್ಯ ನಾಯಕನಾಗಿದ್ದ. ಯೇಸುವಿನ ಶಿಷ್ಯನಾಗೋಕೆ ಅವನಿಗೂ ಒಂದು ಅಡ್ಡಿತಡೆ ಬಂತು. ಯೇಸು ಸಿಹಿಸುದ್ದಿ ಸಾರೋಕೆ ಶುರು ಮಾಡಿದ 6 ತಿಂಗಳಲ್ಲೇ ‘ಯೇಸುನೇ ದೇವರು ಕಳ್ಸಿರೋ ಮೆಸ್ಸೀಯ’ ಅಂತ ನಿಕೊದೇಮ ಅರ್ಥ ಮಾಡ್ಕೊಂಡ. (ಯೋಹಾ. 3:1, 2) ಆದ್ರೂ ಯಾರಿಗೂ ಗೊತ್ತಾಗದೇ ಇರೋ ತರ ಯೇಸುನ ಕತ್ತಲಲ್ಲಿ ರಾತ್ರಿ ಹೊತ್ತು ಭೇಟಿ ಮಾಡ್ತಿದ್ದ. ಯಾಕೆ? ಯಾಕಂದ್ರೆ ಅವನಿಗೆ ‘ಬೇರೆ ಯೆಹೂದ್ಯರು ನನಗೇನು ಮಾಡ್ತಾರೋ ಅನ್ನೋ ಭಯ ಇತ್ತು.’ (ಯೋಹಾ. 7:13; 12:42) ಅಷ್ಟೇ ಅಲ್ಲ, ‘ನಾನು ಯೇಸುವಿನ ಶಿಷ್ಯನಾಗಿಬಿಟ್ರೆ, ಎಲ್ಲಿ ನನಗಿರೋ ಹೆಸ್ರನ್ನ, ಹಣ-ಆಸ್ತಿನ ಕಳ್ಕೊಳ್ತಿನೋ’ ಅನ್ನೋ ಭಯನೂ ಅವನಿಗೆ ಇದ್ದಿರಬಹುದು.a

4. ದೇವರು ತನ್ನಿಂದ ಏನು ಬಯಸ್ತಿದ್ದಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಯೇಸು ನಿಕೊದೇಮನಿಗೆ ಹೇಗೆ ಸಹಾಯ ಮಾಡಿದನು?

4 ನಿಕೊದೇಮನಿಗೆ ಮೋಶೆಯ ನಿಯಮ ಪುಸ್ತಕದ ಬಗ್ಗೆ ತುಂಬ ಚೆನ್ನಾಗಿ ಗೊತ್ತಿತ್ತು. ಆದ್ರೆ ಯೆಹೋವ ತನ್ನಿಂದ ಏನು ಬಯಸ್ತಾನೆ ಅಂತ ಅವನು ಸರಿಯಾಗಿ ಅರ್ಥ ಮಾಡ್ಕೊಂಡಿರಲಿಲ್ಲ. ಇದನ್ನ ತಿಳ್ಕೊಳ್ಳೋಕೆ ಅವನಿಗೆ ಸಹಾಯ ಬೇಕಿತ್ತು. ಯೇಸು ಅವನಿಗೆ ಹೇಗೆ ಸಹಾಯ ಮಾಡಿದನು? ಯೇಸು ಅವನಿಗೋಸ್ಕರ ಟೈಮ್‌ ಮಾಡ್ಕೊಂಡನು. ರಾತ್ರಿಯಾದ್ರೂ ಹೋಗಿ ಅವನ ಜೊತೆ ಮಾತಾಡ್ತಿದ್ದನು. ಅವನು ಶಿಷ್ಯನಾಗಬೇಕಂದ್ರೆ ಏನು ಮಾಡಬೇಕು ಅಂತ ನೇರವಾಗಿ ಸ್ಪಷ್ಟವಾಗಿ ಹೇಳಿದನು. ಅವನು ಪಾಪಗಳಿಗೆ ಪಶ್ಚಾತ್ತಾಪ ಪಡಬೇಕು, ನೀರಿಂದ ದೀಕ್ಷಾಸ್ನಾನ ತಗೋಬೇಕು ಮತ್ತು ದೇವರ ಮಗನಲ್ಲಿ ನಂಬಿಕೆ ಇಡಬೇಕು ಅಂತ ಹೇಳಿದನು.—ಯೋಹಾ. 3:5, 14-21.

5. ಯೆಹೋವನ ಸಾಕ್ಷಿ ಆಗೋಕೆ ಯಾವ ಅಡ್ಡಿತಡೆ ಇದೆ ಅಂತ ಕಂಡುಹಿಡಿಯೋಕೆ ವಿದ್ಯಾರ್ಥಿಗೆ ನೀವು ಹೇಗೆ ಸಹಾಯ ಮಾಡಬಹುದು?

5 ವಿದ್ಯಾರ್ಥಿ ಬೈಬಲನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರೂ ಪ್ರಗತಿ ಮಾಡೋಕೆ ಏನು ಅಡ್ಡಿ ಆಗ್ತಿದೆ ಅಂತ ಕಂಡುಹಿಡಿಯೋಕೆ ನಾವು ಸಹಾಯ ಮಾಡಬೇಕು. ಕೆಲವು ಸಲ ಕೆಲಸಕ್ಕೆ ಜಾಸ್ತಿ ಟೈಮ್‌ ಕೊಡ್ತಿರೋದ್ರಿಂದ, ಕುಟುಂಬದವರು ವಿರೋಧ ಮಾಡ್ತಿರೋದ್ರಿಂದ ವಿದ್ಯಾರ್ಥಿ ಪ್ರಗತಿ ಮಾಡದೇ ಇರಬಹುದು. ಆಗ ನೀವು ಯೇಸು ತರಾನೇ ವಿದ್ಯಾರ್ಥಿಗೋಸ್ಕರ ಟೈಮ್‌ ಮಾಡ್ಕೊಳ್ಳಿ. ಅವ್ರನ್ನ ಕಾಫಿ ಕುಡಿಯೋಕೆ ಅಥವಾ ಹೊರಗಡೆ ಎಲ್ಲಾದ್ರೂ ಕರ್ಕೊಂಡು ಹೋಗಿ ಮಾತಾಡಿ. ಈ ತರ ಮಾಡಿದ್ರೆ ಅವ್ರ ಜೀವನದಲ್ಲಿ ಏನಾಗ್ತಿದೆ, ಯಾಕೆ ಕಷ್ಟ ಆಗ್ತಿದೆ ಅಂತ ಅವರು ನಿಮ್ಮ ಹತ್ರ ಹೇಳ್ಕೊಬಹುದು. ಆಗ ಅವ್ರಿಗೆ ಯಾವ ಅಡ್ಡಿತಡೆ ಇದೆ ಅಂತ ನಿಮಗೆ ಅರ್ಥ ಆಗುತ್ತೆ. ಆಮೇಲೆ ಅವ್ರೇನು ಬದಲಾವಣೆ ಮಾಡ್ಕೊಬೇಕು ಅಂತ ನೀವು ಹೇಳಬಹುದು. ಆದ್ರೆ ಅವರು ಇದನ್ನ ‘ನೀವು ಹೇಳ್ತಿದ್ದೀರ ಅಂತ ಅಲ್ಲ, ಯೆಹೋವನ ಮೇಲಿರೋ ಪ್ರೀತಿಯಿಂದ ಮಾಡಬೇಕು’ ಅಂತ ಪ್ರೋತ್ಸಾಹಿಸಿ.

6. ಕಲೀತಿರೋ ವಿಷ್ಯನ ಪಾಲಿಸೋಕೆ ನೀವು ಹೇಗೆ ವಿದ್ಯಾರ್ಥಿಗೆ ಧೈರ್ಯ ತುಂಬಬಹುದು? (1 ಕೊರಿಂಥ 16:13)

6 ಬೈಬಲಲ್ಲಿ ಇರೋದನ್ನೆಲ್ಲ ಪಾಲಿಸೋಕೆ ಯೆಹೋವನೇ ಸಹಾಯ ಮಾಡ್ತಾನೆ ಅಂತ ವಿದ್ಯಾರ್ಥಿಗಳು ಅರ್ಥ ಮಾಡ್ಕೊಬೇಕು. ಆಗ ಅವರು ಕಲ್ತಿರೋದನ್ನ ಪಾಲಿಸೋಕೆ ಧೈರ್ಯದಿಂದ ಮುಂದೆ ಬರ್ತಾರೆ. (1 ಕೊರಿಂಥ 16:13 ಓದಿ.) ನಾವೆಲ್ಲ ಒಂದರ್ಥದಲ್ಲಿ ಸ್ಕೂಲ್‌ ಟೀಚರ್‌ಗಳ ತರ ಇದ್ದೀವಿ. ನಿಮಗೆ ಯಾವ ತರದ ಟೀಚರ್‌ ಇಷ್ಟ ಆಗ್ತಿದ್ರು? ಕಷ್ಟವಾದ ಪಾಠನ ನಿಮಗೆ ಅರ್ಥ ಮಾಡಿಸೋಕೆ, ಸ್ವಲ್ಪ ಟೈಮ್‌ ತಗೊಂಡು, ತಾಳ್ಮೆಯಿಂದ, ‘ನಿನ್ನ ಕೈಯಲ್ಲಿ ಆಗುತ್ತೆ, ಇದನ್ನ ಹೀಗ್‌ ಮಾಡಿ ನೋಡು’ ಅಂತ ಧೈರ್ಯ ತುಂಬ್ತಿದ್ದ ಟೀಚರ್‌ ಅಲ್ವಾ? ನಾವೂ ಬೈಬಲ್‌ ವಿದ್ಯಾರ್ಥಿಗಳ ಜೊತೆ ಇದೇ ತರ ನಡ್ಕೊಬೇಕು. ಒಬ್ಬ ಒಳ್ಳೆ ಬೈಬಲ್‌ ಟೀಚರ್‌ ದೇವರು ನಮ್ಮಿಂದ ಏನೆಲ್ಲ ಬಯಸ್ತಾನೆ ಅಂತ ಕಲಿಸ್ತಾರೆ ನಿಜ. ಆದ್ರೆ ಅದೇ ಸಮಯದಲ್ಲಿ ಇಲ್ಲಿವರೆಗೆ ಕಲ್ತಿರೋ ವಿಷ್ಯನ ಪಾಲಿಸೋಕೆ ದೇವರೇ ಅವ್ರಿಗೆ ಸಹಾಯ ಮಾಡ್ತಾನೆ ಅಂತ ಧೈರ್ಯನೂ ತುಂಬ್ತಾರೆ. ಅದನ್ನ ಹೇಗೆ ಮಾಡೋದು ಅಂತ ನಾವೀಗ ನೋಡೋಣ.

ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡಿ

7. ಜನ್ರಲ್ಲಿ ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡೋಕೆ ಯೇಸು ಏನು ಮಾಡಿದನು?

7 ಜನ್ರಿಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಮಾತ್ರ ಕಲ್ತಿರೋದನ್ನ ಪಾಲಿಸೋಕೆ ಮುಂದೆ ಬರ್ತಾರೆ ಅಂತ ಯೇಸು ಅರ್ಥ ಮಾಡ್ಕೊಂಡನು. ಅದಕ್ಕೆ ತನ್ನ ಶಿಷ್ಯರಿಗೆ ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋ ವಿಷ್ಯಗಳನ್ನ ಆಗಾಗ ಕಲಿಸ್ತಿದ್ದನು. ಉದಾಹರಣೆಗೆ, ಮಕ್ಕಳಿಗೆ ಯಾವಾಗ್ಲೂ ಒಳ್ಳೇದನ್ನೇ ಮಾಡೋ ಒಬ್ಬ ಒಳ್ಳೆ ಅಪ್ಪ ತರ ಯೆಹೋವ ಇದ್ದಾನೆ ಅಂತ ಯೇಸು ಹೇಳಿದನು. (ಮತ್ತಾ. 7:9-11) ಅಲ್ಲಿದ್ದ ಕೆಲವ್ರಿಗೆ ಅವ್ರ ಅಪ್ಪಂದ್ರು ಇಷ್ಟು ಪ್ರೀತಿ ತೋರಿಸದೇ ಇದ್ದಿರಬಹುದು. ಆದ್ರೆ ಯೇಸು ಅವ್ರಿಗೆ, ‘ಮನೆ ಬಿಟ್ಟು ಹೋದ ತನ್ನ ಮಗನನ್ನ ಒಬ್ಬ ಅಪ್ಪ ಹೋಗಿ ಅಪ್ಕೊಂಡು, ಅವನನ್ನ ವಾಪಸ್ಸು ಕರ್ಕೊಂಡ’ ಉದಾಹರಣೆನ ಹೇಳಿದಾಗ ಅವ್ರಿಗೆ ಹೇಗೆ ಅನಿಸಿರಬಹುದು ಅಂತ ಯೋಚ್ನೆ ಮಾಡಿ. ಯೆಹೋವ ನಮ್ಮೆಲ್ರನ್ನೂ ತುಂಬ ಪ್ರೀತಿಸ್ತಾನೆ ಅಂತ ಅವ್ರಿಗೆ ಆಗ ಚೆನ್ನಾಗಿ ಅರ್ಥ ಆಗಿರುತ್ತೆ.—ಲೂಕ 15:20-24.

8. ಬೈಬಲ್‌ ವಿದ್ಯಾರ್ಥಿ ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ನೀವು ಹೇಗೆ ಸಹಾಯ ಮಾಡಬಹುದು?

8 ಬೈಬಲ್‌ ವಿದ್ಯಾರ್ಥಿ ಯೆಹೋವನ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ನೀವೇನು ಮಾಡಬೇಕು? ನಿಮ್ಮ ಬೈಬಲ್‌ ಸ್ಟಡಿಯಲ್ಲಿ ಯೆಹೋವನ ಗುಣಗಳ ಬಗ್ಗೆ ಆಗಾಗ ತಿಳಿಸಿ. ಪ್ರತಿ ಸಲ ಸ್ಟಡಿ ಮುಗಿದ ಮೇಲೆ ‘ಇವತ್ತು ಕಲಿತ ವಿಷ್ಯದಿಂದ ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಹೇಗೆ ಗೊತ್ತಾಯ್ತು?’ ಅಂತ ಕೇಳಿ. ಬಿಡುಗಡೆ ಬೆಲೆ ಬಗ್ಗೆ ಹೇಳುವಾಗ ‘ಅದ್ರಿಂದ ನಿಮಗೇನು ಪ್ರಯೋಜ್ನ?’ ಅಂತ ಕೇಳಿ. (ರೋಮ. 5:8; 1 ಯೋಹಾ. 4:10) ‘ಯೆಹೋವ ನನ್ನನ್ನೂ ತುಂಬ ಪ್ರೀತಿಸ್ತಾನೆ’ ಅಂತ ವಿದ್ಯಾರ್ಥಿ ಅರ್ಥ ಮಾಡ್ಕೊಂಡ್ರೆ ಯೆಹೋವನನ್ನ ಪ್ರೀತಿಸೋಕೆ ಮುಂದೆ ಬರ್ತಾನೆ.—ಗಲಾ. 2:20.

9. ಮೈಕಲ್‌ ಬದಲಾಗೋಕೆ ಯಾವುದು ಸಹಾಯ ಮಾಡ್ತು?

9 ಇಂಡೋನೇಷ್ಯಾದ ಮೈಕಲ್‌ ಅನ್ನೋ ವ್ಯಕ್ತಿಯ ಅನುಭವ ನೋಡಿ. ಅವನು ಸತ್ಯದಲ್ಲೇ ಬೆಳೆದ, ಆದ್ರೆ ದೀಕ್ಷಾಸ್ನಾನ ತಗೊಂಡಿರಲಿಲ್ಲ. ಅವನಿಗೆ 18 ವರ್ಷ ಆದಾಗ ಬೇರೆ ದೇಶಕ್ಕೆ ಹೋಗಿ ಲಾರಿ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ. ಸ್ವಲ್ಪ ವರ್ಷ ಆದ್ಮೇಲೆ ಅವನು ಮದುವೆ ಆದ. ಆದ್ರೆ ತನ್ನ ಕುಟುಂಬನ ತನ್ನ ಊರಲ್ಲೇ ಬಿಟ್ಟು ಮತ್ತೆ ಬೇರೆ ದೇಶಕ್ಕೆ ಹೋಗಿ ಕೆಲಸ ಮಾಡ್ತಿದ್ದ. ಆ ಸಮಯದಲ್ಲಿ ಅವನ ಹೆಂಡತಿ ಮತ್ತು ಮಗಳು ಬೈಬಲ್‌ ಕಲಿತು ಒಳ್ಳೆ ಪ್ರಗತಿ ಮಾಡ್ತಿದ್ರು. ಒಂದಿನ ಮೈಕಲ್‌ ತಾಯಿ ತೀರಿಹೋದ್ರು. ಆಗ ಅವನು ಕೆಲಸ ಬಿಟ್ಟು ತನ್ನ ಅಪ್ಪನ ನೋಡ್ಕೊಳ್ಳೋಕೆ ವಾಪಸ್‌ ಊರಿಗೆ ಬಂದ. ಆಗ ಅವನೂ ಬೈಬಲ್‌ ಕಲಿಯೋಕೆ ಶುರು ಮಾಡಿದ. ಹೀಗೆ ಒಂದಿನ ಬೈಬಲ್‌ ಸ್ಟಡಿ ಮಾಡ್ವಾಗ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 27ನೇ ಪಾಠದಲ್ಲಿರೋ “ಹೆಚ್ಚನ್ನ ತಿಳಿಯೋಣ” ಭಾಗ ಚರ್ಚೆ ಮಾಡ್ತಿದ್ರು. ಅಲ್ಲಿ, ಯೆಹೋವ ತನ್ನ ಒಬ್ಬನೇ ಮಗ ಕಷ್ಟಪಟ್ಟು ಸಾಯೋ ತರ ಬಿಟ್ಟನು, ನಮಗೋಸ್ಕರ ಅವನನ್ನ ತ್ಯಾಗ ಮಾಡಿದನು ಅಂತ ಕಲಿತಾಗ ಮೈಕಲ್‌ಗೆ ಕಣ್ಣು ತುಂಬಿ ಬಂತು. ಆ ವಿಷ್ಯ ಅವನ ಮನಸ್ಸು ಮುಟ್ತು. ಆಗ ಅವನು ತನ್ನ ಜೀವನ ಬದಲಾಯಿಸ್ಕೊಂಡು ದೀಕ್ಷಾಸ್ನಾನ ತಗೊಂಡ.

ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿ

10. ಶಿಷ್ಯರಿಗೆ ತಮ್ಮ ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಯೇಸು ಹೇಗೆ ಸಹಾಯ ಮಾಡಿದನು? (ಲೂಕ 5:5-11) (ಚಿತ್ರ ನೋಡಿ.)

10 ಎಷ್ಟೋ ಶಿಷ್ಯರಿಗೆ ಯೇಸುನೇ ಮೆಸ್ಸೀಯ ಅಂತ ತಕ್ಷಣ ಅರ್ಥ ಆಯ್ತು. ಆದ್ರೆ ಸಿಹಿಸುದ್ದಿ ಸಾರೋದು ಮುಖ್ಯ ಅಂತ ಅವರು ಅರ್ಥ ಮಾಡ್ಕೊಳ್ಳಲಿಲ್ಲ. ಪೇತ್ರ ಮತ್ತು ಅಂದ್ರೆಯ ಈಗಾಗಲೇ ಯೇಸುವಿನ ಶಿಷ್ಯರಾಗಿದ್ದರು, ಆದ್ರೂ ಯೇಸು ಅವ್ರಿಗೆ ‘ಪೂರ್ಣಸಮಯ ನನ್ನ ಶಿಷ್ಯರಾಗಿ’ ಅಂತ ಕರೆದನು. (ಮತ್ತಾ. 4:18, 19) ಅವರು ಆ ಟೈಮಲ್ಲಿ ಮೀನು ಹಿಡಿತಾ ಒಳ್ಳೆ ವ್ಯಾಪಾರ ಮಾಡ್ತಿದ್ರು ಅಂತ ಅನಿಸುತ್ತೆ. ಅವ್ರ ಜೊತೆ ಯಾಕೋಬ ಮತ್ತು ಯೋಹಾನನೂ ಇದ್ದಿರಬಹುದು. (ಮಾರ್ಕ 1:16-20) ಆದ್ರೆ ಯೇಸು ಕರೆದಾಗ ಅವರು ತಮ್ಮ ‘ಬಲೆಗಳನ್ನ ಬಿಟ್ಟು’ ಯೇಸುನ ಹಿಂಬಾಲಿಸಿದ್ರು. ಈ ತೀರ್ಮಾನ ಮಾಡಿದಾಗ ತಮ್ಮ ಕುಟುಂಬನ ನೋಡ್ಕೊಳ್ಳೋಕೂ ಅವರು ಗ್ಯಾರಂಟಿ ಪ್ಲಾನ್‌ ಮಾಡಿರ್ತಾರೆ. ಅವರು ಈ ತರ ಸಿಹಿಸುದ್ದಿಗೆ ಮೊದಲ ಸ್ಥಾನ ಕೊಡೋಕೆ ಯಾವುದು ಸಹಾಯ ಮಾಡ್ತು? ಯೇಸು ಮಾಡಿದ ದೊಡ್ಡ ಅದ್ಭುತ! ಆ ಅದ್ಭುತನ ನೋಡಿದಾಗ ‘ಯೆಹೋವ ನಮ್ಮ ಕೈ ಬಿಡಲ್ಲ, ನಮ್ಮನ್ನ ಖಂಡಿತ ನೋಡ್ಕೊಳ್ತಾನೆ’ ಅನ್ನೋ ಭರವಸೆ ಅವ್ರಿಗೆ ಬಂತು. ಆ ಅದ್ಭುತದ ಬಗ್ಗೆ ಲೂಕ ಪುಸ್ತಕದಲ್ಲಿದೆ.—ಲೂಕ 5:5-11 ಓದಿ.

‘ನನ್ನ ಶಿಷ್ಯರಾಗಿ’ ಅಂತ ಯೇಸು ಕರೆದಾಗ ಇಬ್ಬರು ಬೆಸ್ತರು ಆತನ ಕಡೆಗೆ ಹೋಗ್ತಿದ್ದಾರೆ. ಬೇರೆ ಬೆಸ್ತರು ದೋಣಿಗಳಲ್ಲೇ ಇದ್ದು ಬಲೆಗಳನ್ನ ಹೊಲಿತಿದ್ದಾರೆ.

ಜೀವನದಲ್ಲಿ ಯಾವುದು ಮುಖ್ಯ ಅಂತ ಯೇಸು ಶಿಷ್ಯರಿಗೆ ಅರ್ಥ ಮಾಡಿಸಿದ ರೀತಿಯಿಂದ ನಾವೇನು ಕಲಿತೀವಿ? (ಪ್ಯಾರ 10 ನೋಡಿ)b


11. ವಿದ್ಯಾರ್ಥಿಗಿರೋ ನಂಬಿಕೆನ ಜಾಸ್ತಿ ಮಾಡೋಕೆ ನೀವೇನು ಹೇಳಬಹುದು?

11 ನಾವಂತೂ ಅದ್ಭುತಗಳನ್ನ ಮಾಡೋಕಾಗಲ್ಲ. ಆದ್ರೆ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ಟವ್ರಿಗೆ ಆತನು ಹೇಗೆ ಸಹಾಯ ಮಾಡಿದ್ದಾನೆ ಅಂತ ನೀವು ನೋಡಿರ್ತೀರ. ಅಂಥ ಅನುಭವಗಳನ್ನ ನಿಮ್ಮ ವಿದ್ಯಾರ್ಥಿಗೆ ಹೇಳಿ. ಉದಾಹರಣೆಗೆ, ನೀವು ಮೀಟಿಂಗ್‌ ಬರೋಕೆ ಶುರು ಮಾಡ್ದಾಗ ಯೆಹೋವ ಹೇಗೆ ಸಹಾಯ ಮಾಡಿದನು ಅಂತ ನೆನಪಿಸ್ಕೊಳ್ಳಿ. ಮೀಟಿಂಗ್‌ ಇರೋದ್ರಿಂದ ಇನ್ಮೇಲೆ ಓವರ್‌ ಟೈಮ್‌ ಮಾಡೋಕಾಗಲ್ಲ ಅಂತ ನೀವು ಬಾಸ್‌ ಹತ್ರ ಹೇಳಿರಬಹುದು. ಆಗ ಯೆಹೋವ ಹೇಗೆ ಸಹಾಯ ಮಾಡಿದನು ಅಂತ ನೀವು ನೋಡಿರ್ತೀರ. ಅದು ನಿಮ್ಮ ನಂಬಿಕೆ ಜಾಸ್ತಿ ಮಾಡಿರುತ್ತೆ. ಅದ್ರ ಬಗ್ಗೆ ನಿಮ್ಮ ವಿದ್ಯಾರ್ಥಿಗೆ ಹೇಳಿ.

12. (ಎ) ಬೇರೆ ಬೇರೆ ಸಹೋದರರನ್ನ ಯಾಕೆ ಸ್ಟಡಿಗೆ ಕರ್ಕೊಂಡು ಹೋಗಬೇಕು? (ಬಿ) ವಿದ್ಯಾರ್ಥಿ ಮನಸ್ಸು ಮುಟ್ಟೋ ತರ ಕಲಿಸೋಕೆ ವಿಡಿಯೋಗಳನ್ನ ಹೇಗೆ ಬಳಸಬಹುದು? ಉದಾಹರಣೆ ಕೊಡಿ.

12 ಬೇರೆ ಸಹೋದರರು ಯೆಹೋವನಿಗೆ ಮೊದಲ ಸ್ಥಾನ ಕೊಡೋಕೆ ಏನೆಲ್ಲ ಮಾಡಿದ್ರು ಅಂತ ವಿದ್ಯಾರ್ಥಿ ಕೇಳಿಸ್ಕೊಂಡಾಗ ಅವನಿಗೆ ಪ್ರಯೋಜ್ನ ಆಗುತ್ತೆ. ಹಾಗಾಗಿ ನಿಮ್ಮ ಸ್ಟಡಿಗೆ ಬೇರೆ ಬೇರೆ ಸಹೋದರರನ್ನ ಕರ್ಕೊಂಡು ಹೋಗಿ. ಅವರು ಸತ್ಯಕ್ಕೆ ಹೇಗೆ ಬಂದ್ರು? ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡೋಕೆ ಏನೆಲ್ಲ ಮಾಡ್ತಿದ್ದಾರೆ ಅಂತ ಕೇಳಿ? ಅಷ್ಟೇ ಅಲ್ಲ, ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕನ ಬಳಸಿ ಸ್ಟಡಿ ಮಾಡುವಾಗ “ಹೆಚ್ಚನ್ನ ತಿಳಿಯೋಣ” ಮತ್ತು “ಇದನ್ನೂ ನೋಡಿ” ಅನ್ನೋ ಭಾಗದಲ್ಲಿರೋ ವಿಡಿಯೋಗಳನ್ನ ವಿದ್ಯಾರ್ಥಿ ಜೊತೆ ನೋಡಿ ಚರ್ಚಿಸಿ. ಉದಾಹರಣೆಗೆ, ಪಾಠ 37ರಲ್ಲಿ ಯೆಹೋವ ದೇವರು ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ ಅನ್ನೋ ವಿಡಿಯೋ ಇದೆ. ಅದ್ರಲ್ಲಿರೋ ಕೆಲವು ವಿಷ್ಯಗಳನ್ನ ನಿಮ್ಮ ವಿದ್ಯಾರ್ಥಿ ಜೊತೆ ಚರ್ಚೆ ಮಾಡಿ.

ಸಮಸ್ಯೆನ ಜಯಿಸೋಕೆ ಸಹಾಯ ಮಾಡಿ

13. ವಿರೋಧನ ಜಯಿಸೋಕೆ ಯೇಸು ತನ್ನ ಶಿಷ್ಯರನ್ನ ಹೇಗೆ ತಯಾರಿ ಮಾಡಿದನು?

13 ಶಿಷ್ಯರಿಗೆ ಬೇರೆಯವ್ರಿಂದ, ಕುಟುಂಬದವ್ರಿಂದ ವಿರೋಧ ಬರುತ್ತೆ ಅಂತ ಯೇಸು ಪದೇ ಪದೇ ಎಚ್ಚರಿಸಿದ್ದನು. (ಮತ್ತಾ. 5:11; 10:22, 36) ಯೇಸು ಸಾಯೋ ಸ್ವಲ್ಪ ಮುಂಚೆ ‘ನಿಮ್ಮನ್ನ ಜನ್ರು ಸಾಯಿಸಲೂಬಹುದು’ ಅಂತಾನೂ ಹೇಳಿದನು. (ಮತ್ತಾ. 24:9; ಯೋಹಾ. 15:20; 16:2) ಹಾಗಾಗಿ ‘ಸಿಹಿಸುದ್ದಿ ಸಾರುವಾಗ ಹುಷಾರಾಗಿರಿ, ನೀವು ಸಾರುವಾಗ ಜನ ವಿರೋಧ ಮಾಡಿದ್ರೆ ವಾದ ಮಾಡೋಕೆ ಹೋಗಬೇಡಿ, ಜಾಣ್ಮೆ ತೋರಿಸಿ. ಹೀಗೆ ಮಾಡಿದ್ರೆ ನೀವು ಯಾವಾಗ್ಲೂ ಸಿಹಿಸುದ್ದಿ ಸಾರ್ತಾ ಇರಬಹುದು’ ಅಂತ ಹೇಳಿದನು.

14. ವಿರೋಧನ ಜಯಿಸೋಕೆ ವಿದ್ಯಾರ್ಥಿನ ನೀವು ಹೇಗೆ ತಯಾರಿ ಮಾಡಬಹುದು? (2 ತಿಮೊತಿ 3:12)

14 ವಿರೋಧನ ಜಯಿಸೋಕೆ ನೀವೂ ನಿಮ್ಮ ವಿದ್ಯಾರ್ಥಿಯನ್ನ ತಯಾರಿ ಮಾಡಬೇಕು. ಅವನು ಸತ್ಯ ಕಲಿಯೋದನ್ನ ನೋಡಿ ಸಂಬಂಧಿಕರು, ಜೊತೆ ಕೆಲಸ ಮಾಡೋರು ಮತ್ತು ಫ್ರೆಂಡ್ಸ್‌ ಏನೆಲ್ಲ ಹೇಳಬಹುದು ಅಂತ ನೀವು ಮೊದಲೇ ವಿವರಿಸಬೇಕು. (2 ತಿಮೊತಿ 3:12 ಓದಿ.) ವಿದ್ಯಾರ್ಥಿ ಬದಲಾಗೋದನ್ನ ನೋಡಿದಾಗ ಅವನ ಜೊತೆ ಕೆಲಸ ಮಾಡೋರು ರೇಗಿಸಬಹುದು, ಸಂಬಂಧಿಕರು ‘ನೀನು ನಂಬ್ತಿರೋದೆಲ್ಲ ಸುಳ್ಳು, ಅದೆಲ್ಲ ತಪ್ಪು’ ಅಂತ ಹೇಳಬಹುದು. ಇದನ್ನೆಲ್ಲ ನೀವು ವಿದ್ಯಾರ್ಥಿಗೆ ಮೊದಲೇ ವಿವರಿಸಿರಬೇಕು. ನಾವು ಎಷ್ಟು ಬೇಗ ಸಮಸ್ಯೆನ ಜಯಿಸೋಕೆ ನಮ್ಮ ವಿದ್ಯಾರ್ಥಿಯನ್ನ ತಯಾರಿ ಮಾಡ್ತಿವೋ ಅಷ್ಟು ಬೇಗ ಅವರು ಸಮಸ್ಯೆನ ನಿಭಾಯಿಸೋಕೆ ರೆಡಿ ಆಗ್ತಾರೆ.

15. ಕುಟುಂಬದಿಂದ ಬರೋ ವಿರೋಧನ ಜಯಿಸೋಕೆ ಬೈಬಲ್‌ ವಿದ್ಯಾರ್ಥಿಗೆ ನೀವು ಹೇಗೆ ಸಹಾಯ ಮಾಡಬಹುದು?

15 ಕುಟುಂಬದವ್ರಿಂದ ವಿರೋಧ ಬಂದಾಗ ಅವರು ಯಾಕೆ ವಿರೋಧ ಮಾಡ್ತಿದ್ದಾರೆ ಅಂತ ಅರ್ಥ ಮಾಡ್ಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ. ಅವನ ಕುಟುಂಬದವರು ‘ಇವನನ್ನ ಯಾರೋ ಬ್ರೈನ್‌ ವಾಶ್‌ ಮಾಡಿಬಿಟ್ಟಿದ್ದಾರೆ’ ಅಂತ ಅಥವಾ ‘ಇವನಿಗೆ ಸುಳ್ಳು ಹೇಳ್ತಿದ್ದಾರೆ’ ಅಂತ ಅಂದ್ಕೊಂಡಿರಬಹುದು. ಅವನ ಕುಟುಂಬದವ್ರಿಗೆ ಸಾಕ್ಷಿಗಳ ಮೇಲೆ ಒಳ್ಳೆ ಅಭಿಪ್ರಾಯನೂ ಇಲ್ಲದೆ ಇರಬಹುದು. ಇದನ್ನೆಲ್ಲ ವಿದ್ಯಾರ್ಥಿಗೆ ಅರ್ಥ ಮಾಡಿಸಿ. ಯೇಸುಗೂ ಅವನ ಸ್ವಂತ ಕುಟುಂಬದವ್ರೇ ವಿರೋಧ ತಂದ್ರು ಅನ್ನೋದನ್ನ ನೆನಪಿಸಿ. (ಮಾರ್ಕ 3:21; ಯೋಹಾ. 7:5) ನಿಮ್ಮ ಬೈಬಲ್‌ ವಿದ್ಯಾರ್ಥಿ ಕುಟುಂಬದವ್ರ ಜೊತೆ, ಬೇರೆಯವ್ರ ಜೊತೆ ಮಾತಾಡುವಾಗ ತಾಳ್ಮೆಯಿಂದ ಮತ್ತು ವಿವೇಚನೆಯಿಂದ ಮಾತಾಡೋಕೆ ಸಹಾಯ ಮಾಡಿ.

16. ವಿದ್ಯಾರ್ಥಿ ತನ್ನ ಸಂಬಂಧಿಕರ ಹತ್ರ ಜಾಣ್ಮೆಯಿಂದ ಮಾತಾಡೋಕೆ ನೀವು ಹೇಗೆ ಕಲಿಸಬಹುದು?

16 ಕೆಲವು ಸಲ ಸಂಬಂಧಿಕರು ಆಸಕ್ತಿ ತೋರಿಸಬಹುದು. ಆಗ ಸಿಕ್ಕಿದ್ದೇ ಚಾನ್ಸ್‌ ಅಂತ ಎಲ್ಲಾನೂ ಒಂದೇ ಸಲ ಹೇಳದೇ ಇರೋಕೆ ನಿಮ್ಮ ವಿದ್ಯಾರ್ಥಿಗೆ ಕಲಿಸಬೇಕು. ಯಾಕಂದ್ರೆ ಎಲ್ಲಾನೂ ಒಂದೇ ಸಲ ಹೇಳಿಬಿಟ್ರೆ ಸಂಬಂಧಿಕರಿಗೆ ಬೋರ್‌ ಆಗಬಹುದು, ‘ಅಯ್ಯೋ ಇಷ್ಟೊಂದು ಇದ್ಯಾ’ ಅಂತ ಅನಿಸಬಹುದು ಅಥವಾ ‘ಇನ್ನೊಂದು ಸಲ ಮಾತಾಡೋದೇ ಬೇಡಪ್ಪ’ ಅಂತ ಅಂದ್ಕೊಬಹುದು. ಹಾಗಾಗಿ ತಾವು ಕಲ್ತಿರೋ ಯಾವುದಾದ್ರೂ ಒಂದು ಅಥವಾ ಎರಡು ವಿಷ್ಯದ ಬಗ್ಗೆ ಮಾತ್ರ ಮಾತಾಡೋಕೆ ಹೇಳಿ. ಆಗ ಮತ್ತೆ ಇನ್ನೊಂದ್ಸಲ ಮಾತಾಡೋಕೂ ಅವಕಾಶ ಸಿಗುತ್ತೆ. (ಕೊಲೊ. 4:6) ಸಂಬಂಧಿಕರಿಗೆ jw.org ವೆಬ್‌ಸೈಟ್‌ ಬಗ್ಗೆ ತೋರಿಸೋಕೆ ಹೇಳಿ. ಆಗ ಅವರು ಸಾಕ್ಷಿಗಳ ಬಗ್ಗೆ ಏನೆಲ್ಲ ತಿಳ್ಕೊಬೇಕೋ ಅದನ್ನ ಅವ್ರ ಫ್ರೀ ಟೈಮ್‌ನಲ್ಲಿ ತಿಳ್ಕೋತಾರೆ.

17. ಸಾಕ್ಷಿಗಳ ಬಗ್ಗೆ ಯಾರಾದ್ರೂ ಪ್ರಶ್ನೆ ಕೇಳಿದಾಗ ಹೇಗೆ ಉತ್ರ ಕೊಡಬೇಕು ಅಂತ ವಿದ್ಯಾರ್ಥಿಗೆ ಟ್ರೈನಿಂಗ್‌ ಕೊಡೋಕೆ ನೀವೇನು ಮಾಡಬಹುದು? (ಚಿತ್ರ ನೋಡಿ.)

17 “ಜನರು ಕೇಳುವ ಪ್ರಶ್ನೆಗಳು” ಅನ್ನೋ ಒಂದು ಸರಣಿ jw.org ವೆಬ್‌ಸೈಟ್‌ನಲ್ಲಿದೆ. ಅದನ್ನ ಬಳಸಿ ಸಂಬಂಧಿಕರು ಮತ್ತು ಜೊತೆ ಕೆಲಸದವರು ಕೇಳೋ ಪ್ರಶ್ನೆಗೆ ಉತ್ರ ಕೊಡೋಕೆ ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಬಹುದು. (2 ತಿಮೊ. 2:24, 25) ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿ ಪ್ರತಿ ಪಾಠ ಮುಗಿದ ಮೇಲೆ “ಕೆಲವರು ಹೀಗಂತಾರೆ” ಅನ್ನೋ ಭಾಗನ ಚರ್ಚಿಸಿ. ಅದ್ರಲ್ಲಿರೋ ಪ್ರಶ್ನೆಗೆ ಹೇಗೆ ಸ್ವಂತ ಮಾತಲ್ಲಿ ಉತ್ರ ಕೊಡಬಹುದು ಅಂತ ವಿದ್ಯಾರ್ಥಿಗೆ ಪ್ರಾಕ್ಟೀಸ್‌ ಮಾಡಿಸಿ. ಅವ್ರ ಉತ್ರದಲ್ಲಿ ಏನಾದ್ರೂ ಬದಲಾವಣೆ ಮಾಡಬೇಕಿದ್ರೆ ಅದನ್ನ ನೇರವಾಗಿ, ಪ್ರೀತಿಯಿಂದ ಹೇಳಿ. ಈ ತರ ಪ್ರಾಕ್ಟೀಸ್‌ ಮಾಡೋದ್ರಿಂದ ನಿಮ್ಮ ವಿದ್ಯಾರ್ಥಿ ತಾನು ನಂಬೋದನ್ನ ಧೈರ್ಯವಾಗಿ ಬೇರೆಯವ್ರ ಹತ್ರ ಹೇಳೋಕಾಗುತ್ತೆ.

ಸೇವೆಗೆ ಹೇಗೆ ತಯಾರಿ ಮಾಡೋದು ಅಂತ ಒಬ್ಬ ಸಹೋದರಿ ಬೈಬಲ್‌ ಅಧ್ಯಯನ ಮಾಡುವಾಗ ತನ್ನ ವಿದ್ಯಾರ್ಥಿಗೆ ಕಲಿಸ್ತಿದ್ದಾರೆ. “ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?” ಅನ್ನೋ ಕರಪತ್ರ ಬಳಸಿ ವಿದ್ಯಾರ್ಥಿ ಸಹೋದರಿಯ ಹತ್ರ ಸೇವೆಲಿ ಮಾತಾಡೋ ತರ ಪ್ರ್ಯಾಕ್ಟೀಸ್‌ ಮಾಡ್ತಿದ್ದಾಳೆ.

ಸಿಹಿಸುದ್ದಿ ಸಾರೋಕೆ ವಿದ್ಯಾರ್ಥಿನ ಪ್ರೋತ್ಸಾಹಿಸಿ, ಮೊದ್ಲೇ ಅವರ ಜೊತೆ ಪ್ರ್ಯಾಕ್ಟೀಸ್‌ ಮಾಡಿ (ಪ್ಯಾರ 17 ನೋಡಿ)c


18. ಸಿಹಿಸುದ್ದಿ ಸಾರೋಕೆ ನೀವು ನಿಮ್ಮ ವಿದ್ಯಾರ್ಥಿಯನ್ನ ಹೇಗೆ ಪ್ರೋತ್ಸಾಹಿಸಬಹುದು? (ಮತ್ತಾಯ 10:27)

18 ಯೇಸು ಎಲ್ಲ ಜನ್ರಿಗೂ ಸಿಹಿಸುದ್ದಿ ಸಾರಬೇಕು ಅಂತ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 10:27 ಓದಿ.) ಒಬ್ಬ ವಿದ್ಯಾರ್ಥಿ ಎಷ್ಟು ಬೇಗ ತಾನು ಕಲಿತಿರೋ ವಿಷ್ಯಗಳನ್ನ ಬೇರೆಯವ್ರ ಹತ್ರ ಹೇಳೋಕೆ ಶುರು ಮಾಡ್ತಾನೋ ಅಷ್ಟು ಬೇಗ ಯೆಹೋವನ ಮೇಲೆ ಆತ್ಕೊಳ್ಳೋಕೆ ಕಲಿತಾನೆ. ಇದನ್ನ ಮಾಡೋಕೆ ನೀವು ಹೇಗೆ ಸಹಾಯ ಮಾಡಬಹುದು? ಅಭಿಯಾನ ನಡೆಯೋ ಸಮಯದಲ್ಲಿ ಪ್ರಚಾರಕನಾಗೋಕೆ ಆಗುತ್ತಾ ಅಂತ ವಿದ್ಯಾರ್ಥಿನ ಕೇಳಿ. ಎಷ್ಟೋ ಜನ್ರಿಗೆ ಅಭಿಯಾನದ ಸಮಯದಲ್ಲಿ ಸಿಹಿಸುದ್ದಿ ಸಾರೋದು ಸುಲಭ ಅಂತ ಅನಿಸಿದೆ, ಅದ್ರ ಬಗ್ಗೆನೂ ಅವರ ಹತ್ರ ಹೇಳಿ. ಅಷ್ಟೇ ಅಲ್ಲ, ಮಧ್ಯವಾರದ ಕೂಟಗಳಲ್ಲೂ ಕೆಲವು ಚಿಕ್ಕ ಪುಟ್ಟ ನೇಮಕಗಳನ್ನ ಮಾಡೋ ಗುರಿಯನ್ನ ಇಡೋಕೆ ಹೇಳಿ. ಈ ತರ ವಿದ್ಯಾರ್ಥಿ ಒಂದೊಂದೇ ಗುರಿಯನ್ನ ಇಟ್ಟು ಅದನ್ನ ಮುಟ್ತಾ ಹೋದ್ರೆ ಅವನು ಕಲಿತಿರೋ ವಿಷ್ಯಗಳ ಬಗ್ಗೆ ಧೈರ್ಯದಿಂದ ಬೇರೆಯವ್ರ ಹತ್ರ ಹೇಳೋಕಾಗುತ್ತೆ.

ವಿದ್ಯಾರ್ಥಿ ಯೆಹೋವನನ್ನ ಪ್ರೀತಿಸ್ತಾನೆ ಅಂತ ನಂಬಿ

19. (ಎ) ಯೇಸು ಶಿಷ್ಯರ ಮೇಲೆ ಹೇಗೆ ನಂಬಿಕೆ ಇಟ್ಟನು? (ಬಿ) ನಾವು ಅದೇ ತರ ಏನು ಮಾಡಬೇಕು?

19 ಯೇಸು ಸ್ವರ್ಗಕೆ ಹೋಗೋ ಮುಂಚೆ ತನ್ನ ಶಿಷ್ಯರಿಗೆ ‘ನಾವೆಲ್ರೂ ಮತ್ತೆ ಜೊತೆ ಸೇರ್ತೀವಿ’ ಅಂತ ಹೇಳಿದನು. ಆದ್ರೆ ಯೇಸು ಅವರೆಲ್ರೂ ಸ್ವರ್ಗಕ್ಕೆ ಹೋಗೋದ್ರ ಬಗ್ಗೆ ಹೇಳ್ತಿದ್ದಾನೆ ಅಂತ ಶಿಷ್ಯರಿಗೆ ಅರ್ಥ ಆಗಲಿಲ್ಲ. ಆಗ ಯೇಸು ‘ಅಯ್ಯೋ ಇವ್ರಿಗಿನ್ನೂ ಅರ್ಥ ಆಗಲಿಲ್ವಲ್ಲಾ’ ಅಂತ ಅಂದ್ಕೊಂಡು ಬೇಜಾರು ಮಾಡ್ಕೊಳ್ಳಲಿಲ್ಲ. ಬದಲಿಗೆ ‘ಇವರು ನಿಯತ್ತಾಗಿದ್ದಾರೆ ಇವ್ರಿಗೆ ಸೇವೆ ಮಾಡೋ ಆಸೆ ಇದೆ’ ಅಂತ ಅರ್ಥ ಮಾಡ್ಕೊಂಡನು. (ಯೋಹಾ. 14:1-5, 8) ಅಷ್ಟೇ ಅಲ್ಲ, ‘ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಬಗ್ಗೆ ಇವ್ರಿಗೆ ಅರ್ಥ ಮಾಡ್ಕೊಳ್ಳೋಕೆ ಇನ್ನೂ ಟೈಮ್‌ ಬೇಕಾಗುತ್ತೆ’ ಅಂತಾನೂ ತಿಳ್ಕೊಂಡನು. (ಯೋಹಾ. 16:12) ಯೇಸು ತರಾನೇ ನಾವೂ ಇರಬೇಕು. ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೂ ಯೆಹೋವನ ಸೇವೆ ಮಾಡೋ ಆಸೆ ಇದೆ ಅಂತ ನಾವು ನಂಬಬೇಕು, ಅವ್ರ ಮೇಲೆ ಭರವಸೆ ಇಡಬೇಕು.

ಒಬ್ಬ ವಿದ್ಯಾರ್ಥಿ ಎಷ್ಟು ಬೇಗ ತಾನು ಕಲಿತಿರೋ ವಿಷ್ಯಗಳನ್ನ ಬೇರೆಯವ್ರ ಹತ್ರ ಹೇಳೋಕೆ ಶುರು ಮಾಡ್ತಾನೋ ಅಷ್ಟು ಬೇಗ ಯೆಹೋವನ ಮೇಲೆ ಆತ್ಕೊಳ್ಳೋಕೆ ಕಲಿತಾನೆ

20. ಮಲಾವಿಯಲ್ಲಿರೋ ಒಬ್ಬ ಸಹೋದರಿ ತನ್ನ ಬೈಬಲ್‌ ವಿದ್ಯಾರ್ಥಿ ಮೇಲೆ ಹೇಗೆ ನಂಬಿಕೆ ಇಟ್ಟಳು?

20 ಸರಿಯಾಗಿರೋದನ್ನೇ ಮಾಡಬೇಕು ಅನ್ನೋ ಆಸೆ ನಿಮ್ಮ ವಿದ್ಯಾರ್ಥಿಗಳಿಗೂ ಇದೆ ಅನ್ನೋದನ್ನ ನಂಬಿ! ಮಲಾವಿ ದೇಶದಲ್ಲಿರೋ ಚಿಫುಂಡೋ ಅನ್ನೋ ಸಹೋದರಿಯ ಅನುಭವ ನೋಡಿ. ಅವರು ಅಲಿನಾಫೆ ಅನ್ನೋ ಒಬ್ಬ ಕ್ಯಾಥೋಲಿಕ್‌ ಸ್ತ್ರೀ ಜೊತೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಿಂದ ಬಳಸಿ ಬೈಬಲ್‌ ಸ್ಟಡಿ ಮಾಡ್ತಿದ್ರು. 14ನೇ ಪಾಠ ಮುಗಿದ್ಮೇಲೆ ಸಹೋದರಿ ಚಿಫುಂಡೋ, ಅಲಿನಾಫೆ ಹತ್ರ ‘ಮೂರ್ತಿ ಪೂಜೆ ಮಾಡೋದ್ರ ಬಗ್ಗೆ ನಿನಗೇನು ಅನಿಸುತ್ತೆ?’ ಅಂತ ಕೇಳಿದ್ರು. ಆಗ ಅಲಿನಾಫೆ ಕೋಪದಲ್ಲಿ “ಅದು ನನ್ನಿಷ್ಟ, ನನ್ನ ನಿರ್ಧಾರ” ಅಂತ ಹೇಳಿದಳು. ಆಗ ಸಹೋದರಿ ಚಿಫುಂಡೋಗೆ ತನ್ನ ಮನಸಲ್ಲೇ ‘ಓ ಇಲ್ಲಿಗೆ ಮುಗೀತು, ಇನ್ನೂ ಈ ಸ್ಟಡಿ ಕಂಟಿನ್ಯೂ ಆಗಲ್ಲ’ ಅಂತ ಅನಿಸುತ್ತೆ. ಆದ್ರೂ ಸಹೋದರಿ ಚಿಫುಂಡೋ ತಾಳ್ಮೆ ಕಳ್ಕೊಳ್ಳಲ್ಲ, ‘ಅಲಿನಾಫೆ ನಿಧಾನವಾಗಿ ಬದಲಾಗ್ತಾಳೆ. ಮೂರ್ತಿ ಪೂಜೆ ಮಾಡೋದು ತಪ್ಪು ಅಂತ ಅರ್ಥ ಮಾಡ್ಕೊಳ್ತಾಳೆ’ ಅಂತ ನಂಬ್ತಾರೆ. ಸ್ವಲ್ಪ ತಿಂಗಳಾದ್ಮೇಲೆ 34ನೇ ಪಾಠ ಮಾಡ್ವಾಗ ಸಹೋದರಿ ಚಿಫುಂಡೋ, ಅಲಿನಾಫೆಗೆ “ಯೆಹೋವ ದೇವರ ಬಗ್ಗೆ ಮತ್ತು ಬೈಬಲ್‌ ಬಗ್ಗೆ ಕಲಿತಿದ್ದರಿಂದ ನಿಮಗೆ ಇಲ್ಲಿವರೆಗೂ ಏನೆಲ್ಲಾ ಪ್ರಯೋಜನ ಸಿಕ್ಕಿದೆ?” ಅಂತ ಕೇಳ್ತಾರೆ. ಆಗ ಅಲಿನಾಫೆ “ನಂಗೆ ತುಂಬ ಪ್ರಯೋಜ್ನ ಸಿಕ್ಕಿದೆ, ಯೆಹೋವನ ಸಾಕ್ಷಿಗಳು ಬೈಬಲಲ್ಲಿ ಇರೋದನ್ನೇ ಮಾಡ್ತಾರೆ. ಬೈಬಲ್‌ ಒಂದು ವಿಷ್ಯನ ತಪ್ಪು ಅಂತ ಹೇಳಿದ್ರೆ, ಅದನ್ನ ಅವರು ಯಾವತ್ತೂ ಮಾಡೋಕೆ ಹೋಗಲ್ಲ” ಅಂತ ಹೇಳ್ತಾಳೆ. ಹೀಗೆ ಅಲಿನಾಫೆ ಮೂರ್ತಿ ಪೂಜೆ ಮಾಡೋದನ್ನ ಬಿಟ್ಟು ಕೊನೆಗೂ ದೀಕ್ಷಾಸ್ನಾನ ತಗೊಳ್ತಾಳೆ.

21. ಯೆಹೋವನ ಸೇವೆ ಮಾಡೋ ನಿರ್ಧಾರ ಮಾಡೋಕೆ ವಿದ್ಯಾರ್ಥಿಗೆ ನಾವು ಹೇಗೆ ಸಹಾಯ ಮಾಡಬಹುದು?

21 ‘ಬೆಳೆಸೋದು ಯೆಹೋವ ದೇವರೇ’ ಆದ್ರೂ ಒಬ್ಬ ಬೈಬಲ್‌ ವಿದ್ಯಾರ್ಥಿ ಪ್ರಗತಿ ಮಾಡೋಕೆ ನಾವೂ ಕೈ ಜೋಡಿಸಬೇಕು. (1 ಕೊರಿಂ. 3:7) ಯೆಹೋವ ನಮ್ಮಿಂದ ಏನು ಬಯಸ್ತಾನೆ ಅಂತ ಕಲಿಸೋದಷ್ಟೇ ಅಲ್ಲ ಆತನ ಮೇಲೆ ಜಾಸ್ತಿ ಪ್ರೀತಿ ಬೆಳೆಸ್ಕೂಳ್ಳೋಕೂ ಕಲಿಸಬೇಕು. ಜೀವನದಲ್ಲಿ ಎಲ್ಲದಕ್ಕಿಂತಲೂ ಆತನ ಸೇವೆ ಮಾಡೋದೇ ಮುಖ್ಯ ಅಂತ ಅರ್ಥ ಮಾಡಿಸಬೇಕು. ಸಮಸ್ಯೆಗಳು, ವಿರೋಧಗಳು ಬಂದಾಗ ಆತನ ಮೇಲೆ ಆತ್ಕೊಳ್ಳೋದೇ ಮುಖ್ಯ ಅಂತ ಹೇಳ್ಕೊಡಬೇಕು. ವಿದ್ಯಾರ್ಥಿ ಮೇಲೆ ನಂಬಿಕೆ ಇದೆ ಅಂತ ತೋರಿಸಬೇಕು. ಆಗ ಅವ್ರಿಗೂ ‘ನಾನೂ ಯೆಹೋವ ಹೇಳೋ ತರ ನಡ್ಕೊಳ್ಳೋಕಾಗುತ್ತೆ’ ಅಂತ ಅನಿಸುತ್ತೆ. ಆಗ ಅವರು ಒಂದಲ್ಲ ಒಂದಿನ ಯೆಹೋವನ ಸೇವೆ ಮಾಡೋ ನಿರ್ಧಾರ ಮಾಡ್ತಾರೆ.

ನಾವು ಬೈಬಲ್‌ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು . . .

  • ಅಡ್ಡಿತಡೆಗಳನ್ನ ಕಂಡುಹಿಡಿಯೋಕೆ

  • ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ಳೋಕೆ

  • ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಳೋಕೆ

ಗೀತೆ 7 ಯೆಹೋವ, ನಮ್ಮ ಶಕ್ತಿ

a ಯೇಸುನ ಭೇಟಿ ಮಾಡಿ ಎರಡೂವರೆ ವರ್ಷ ಆದ್ಮೇಲೂ ನಿಕೊದೇಮ ಇನ್ನೂ ಯೆಹೂದ್ಯರ ಮುಖ್ಯ ನ್ಯಾಯಾಲಯದ ಸದಸ್ಯನಾಗಿದ್ದ. (ಯೋಹಾ. 7:45-52) ಕೆಲವು ಇತಿಹಾಸಗಾರರು ‘ಯೇಸು ತೀರಿ ಹೋದ್ಮೇಲೇನೇ ನಿಕೊದೇಮ ಶಿಷ್ಯನಾಗಿದ್ದು’ ಅಂತ ಹೇಳಿದ್ದಾರೆ.—ಯೋಹಾ. 19:38-40.

b ಚಿತ್ರ ವಿವರಣೆ : ಪೇತ್ರ ಮತ್ತು ಬೇರೆ ಶಿಷ್ಯರು ಮೀನು ಹಿಡಿಯೋ ವ್ಯಾಪಾರ ಬಿಟ್ಟು ಯೇಸುವನ್ನ ಹಿಂಬಾಲಿಸ್ತಾರೆ.

c ಚಿತ್ರ ವಿವರ : ತನ್ನ ನಂಬಿಕೆಯನ್ನ ಬೇರೆಯವ್ರ ಹತ್ರ ಹೇಳೋದು ಹೇಗೆ ಅಂತ ಒಬ್ಬ ಸಹೋದರಿ ತನ್ನ ಬೈಬಲ್‌ ವಿದ್ಯಾರ್ಥಿಗೆ ಕಲಿಸ್ತಿದ್ದಾಳೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ