-
ಅರಣ್ಯಕಾಂಡ 11:31-34ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಆಗ ಯೆಹೋವ ಗಾಳಿ ಬೀಸೋ ತರ ಮಾಡಿದನು. ಆ ಗಾಳಿ ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನ ಹೊತ್ಕೊಂಡು ಬಂದು ಇಸ್ರಾಯೇಲ್ಯರ ಪಾಳೆಯದ ಸುತ್ತ ಬೀಳಿಸ್ತು.+ ಪಾಳೆಯದ ಎರಡೂ ಬದಿಗಳಲ್ಲಿ ಒಂದು ದಿನದ ಪ್ರಯಾಣದಷ್ಟು ದೂರದ ತನಕ ಲಾವಕ್ಕಿಗಳು ಬಿದ್ದಿದ್ವು. ಅವು ನೆಲದಿಂದ ಎರಡು ಮೊಳ* ಎತ್ತರದಷ್ಟು ಬಿದ್ದಿದ್ವು. 32 ಜನ ಆ ಇಡೀ ದಿನ, ಇಡೀ ರಾತ್ರಿ, ಅಷ್ಟೇ ಅಲ್ಲ ಮಾರನೇ ದಿನನೂ ಲಾವಕ್ಕಿಗಳನ್ನ ಕೂಡಿಸ್ಕೊಳ್ತಾ ಇದ್ರು. ನಿದ್ದೆನೂ ಮಾಡ್ದೆ ಕೂಡಿಸ್ಕೊಳ್ತಾ ಇದ್ರು. ಒಬ್ಬೊಬ್ರೂ ಕಡಿಮೆ ಅಂದ್ರೆ ಹತ್ತು ಹೋಮೆರ್‌ನಷ್ಟು* ಲಾವಕ್ಕಿಗಳನ್ನ ಕೂಡಿಸ್ಕೊಂಡ್ರು. ಅವರು ಅವುಗಳನ್ನ ಪಾಳೆಯದ ಸುತ್ತ ಹರಡಿ ಒಣಗಿಸಿದ್ರು. 33 ಆದ್ರೆ ಮಾಂಸವನ್ನ ಅವರು ಬಾಯಲ್ಲಿಟ್ಟು ಅಗಿಯೋಕೂ ಮುಂಚೆನೇ ಅವ್ರ ಮೇಲೆ ಯೆಹೋವನ ಕೋಪ ಹೊತ್ತಿ ಉರಿತು. ಯೆಹೋವ ತುಂಬ ಜನ್ರನ್ನ ಘೋರ ವ್ಯಾಧಿಯಿಂದ ಸಾಯಿಸಿದನು.+
34 ಆ ಸ್ಥಳಕ್ಕೆ ಅವರು ಕಿಬ್ರೋತ್-ಹತಾವಾ*+ ಅಂತ ಹೆಸರಿಟ್ರು. ಯಾಕಂದ್ರೆ ಆಹಾರಕ್ಕಾಗಿ ಅತಿಯಾಸೆ ಪಟ್ಟು ನಾಶವಾದ ಜನ್ರನ್ನ ಅಲ್ಲಿ ಸಮಾಧಿ ಮಾಡಿದ್ರು.+
-