17 ನಾನು ಆತನನ್ನ ನೋಡಿದಾಗ ಸತ್ತವನ ತರ ಆತನ ಕಾಲ ಹತ್ರ ಬಿದ್ದುಬಿಟ್ಟೆ.
ಆತನು ನನ್ನ ಮೇಲೆ ಬಲಗೈ ಇಟ್ಟು ಹೀಗಂದ: “ಭಯಪಡಬೇಡ. ನಾನೇ ಮೊದಲನೆಯವನು,+ ನಾನೇ ಕೊನೆಯವನು.+ 18 ನಾನು ಸತ್ತು ಹೋಗಿದ್ದೆ.+ ಆದ್ರೆ ಈಗ ಜೀವಿಸ್ತಾ ಇದ್ದೀನಿ.+ ಶಾಶ್ವತವಾಗಿ ಜೀವಿಸ್ತೀನಿ.+ ನನ್ನ ಹತ್ರ ಸಾವಿನ ಮತ್ತು ಸಮಾಧಿಯ ಬೀಗದ ಕೈಗಳಿವೆ.+