-
ಕೀರ್ತನೆ 78:43-51ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
43 ಈಜಿಪ್ಟಲ್ಲಿ ಆತನು ತೋರಿಸಿದ ಗುರುತುಗಳನ್ನ,+
ಸೋನ್ ಪ್ರದೇಶದಲ್ಲಿ ಆತನು ಮಾಡಿದ ಅದ್ಭುತಗಳನ್ನ ಅವರು ಮರೆತುಬಿಟ್ರು.
44 ಆತನು ನೈಲ್ ನದಿ ನೀರನ್ನ ರಕ್ತ ಮಾಡಿದ,+
ಅವರು ನದಿ ನೀರನ್ನ ಕುಡಿಯೋಕೆ ಆಗದ ಹಾಗೆ ಮಾಡಿದ.
46 ಆತನು ಅವ್ರ ಬೆಳೆಯನ್ನ ಹೊಟ್ಟೆಬಾಕ ಮಿಡತೆಗಳಿಗೆ ಕೊಟ್ಟ,
ಆತನು ಅವ್ರ ಕೈಕೆಲಸದ ಫಲವನ್ನ ಮಿಡತೆಗಳ ಪಾಲುಮಾಡಿದ.+
47 ಆಲಿಕಲ್ಲಿನ ಮಳೆಯಿಂದ+ ಅವ್ರ ದ್ರಾಕ್ಷಿಬಳ್ಳಿಯನ್ನ,
ಅವ್ರ ಅತ್ತಿ ಮರಗಳನ್ನ ನಾಶಮಾಡಿದ.
49 ಆತನು ಅವ್ರ ಮೇಲೆ ತನ್ನ ರೋಷಾಗ್ನಿಯನ್ನ ಸುರಿಸಿದ,
ಕೋಪ, ಕ್ರೋಧ ಮತ್ತು ಸಂಕಟಗಳನ್ನ ತಂದ,
ಅವ್ರ ಮೇಲೆ ವಿಪತ್ತು ತರೋಕೆ ದೇವದೂತರ ದಂಡನ್ನ ಕಳಿಸಿದ.
50 ಆತನು ತನ್ನ ಕೋಪ ತೋರಿಸೋಕೆ ದಾರಿಮಾಡ್ಕೊಂಡ.
ಸಾವಿಂದ ಅವ್ರನ್ನ ಕಾಪಾಡಲಿಲ್ಲ,
ಅಂಟುರೋಗಗಳಿಗೆ ಅವ್ರನ್ನ* ಒಪ್ಪಿಸಿಬಿಟ್ಟ.
51 ಕೊನೆಗೆ ಆತನು ಈಜಿಪ್ಟಿನವರ ಮೊದಲ ಗಂಡುಮಕ್ಕಳನ್ನ ಕೊಂದುಹಾಕಿದ,+
ಹಾಮನ ಡೇರೆಯಲ್ಲಿ ಮೊದಲು ಹುಟ್ಟಿದವ್ರಿಗೆ ಅಂತ್ಯ ಹಾಡಿದ.
-