20 ಯೆಹೋವ ನಿನಗೆ ಕಷ್ಟಗಳನ್ನ ರೊಟ್ಟಿ ತರ, ದಬ್ಬಾಳಿಕೆನ ನೀರಿನ ತರ ಕೊಡೋದಾದ್ರೂ+ ನಿನ್ನ ಮಹಾ ಬೋಧಕ ಇನ್ಮುಂದೆ ನಿನ್ನಿಂದ ಮರೆಯಾಗಿರಲ್ಲ. ನೀನು ನಿನ್ನ ಮಹಾ ಬೋಧಕನನ್ನ+ ಕಣ್ಣಾರೆ ನೋಡ್ತೀಯ. 21 ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿದ್ರೆ “ಇದೇ ದಾರಿ,+ ಇದ್ರಲ್ಲೇ ನಡಿ” ಅನ್ನೋ ಮಾತು ನಿನ್ನ ಹಿಂದಿಂದ ನಿನ್ನ ಕಿವಿಗೆ ಬೀಳುತ್ತೆ.+