ಪರಿವಿಡಿ
ಏಪ್ರಿಲ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಮೇ 31, 2010–ಜೂನ್ 6, 2010
ಯುವ ಜನರೇ—ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಬಲಪಡಿಸಿಕೊಳ್ಳಿ
ಪುಟ 3
ಜೂನ್ 7-13, 2010
ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಪವಿತ್ರಾತ್ಮದ ಪಾತ್ರ
ಪುಟ 7
ಜೂನ್ 14-20, 2010
ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!
ಪುಟ 20
ಜೂನ್ 21-27, 2010
ಕ್ರಿಸ್ತನನ್ನು ನೀವು ಪೂರ್ಣವಾಗಿ ಅನುಸರಿಸುತ್ತಿದ್ದೀರೊ?
ಪುಟ 24
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
ಯೆಹೋವನು ಯುವ ಜನರನ್ನು ಕಿವಿಗೊಡಲು, ಕಲಿಯಲು ಮತ್ತು ತನ್ನ ಮಾರ್ಗದರ್ಶನೆಯನ್ನು ಅನುಸರಿಸಲು ಆಮಂತ್ರಿಸುತ್ತಾನೆ. ಯೆಹೋವನನ್ನು ಪೂರ್ಣ ಹೃದಯದಿಂದ ಆರಾಧಿಸಲು ಬೈಬಲ್ ವಾಚನ, ಪ್ರಾರ್ಥನೆ ಮತ್ತು ಒಳ್ಳೇ ನಡತೆಯು ಯುವ ಜನರಿಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.
ಅಧ್ಯಯನ ಲೇಖನ 2 ಪುಟ 7-11
ಯೆಹೋವನ ಉದ್ದೇಶವು ಅದರ ಪೂರ್ಣ ನೆರವೇರಿಕೆಯ ಕಡೆಗೆ ಮುಂದೊತ್ತುತ್ತಾ ಇದೆ ಎಂಬುದು ನಮಗೆ ಗೊತ್ತಿದೆ. ಆ ಉದ್ದೇಶದ ನೆರವೇರಿಕೆಯಲ್ಲಿ ಹಿಂದೆ, ಈಗ ಮತ್ತು ಭವಿಷ್ಯತ್ತಿನಲ್ಲಿ ಪವಿತ್ರಾತ್ಮದ ಪಾತ್ರವನ್ನು ಈ ಲೇಖನವು ಪರಿಶೀಲಿಸುತ್ತದೆ.
ಅಧ್ಯಯನ ಲೇಖನ 3 ಪುಟ 20-24
ಸೈತಾನನ ಲೋಕದ ಅಂತ್ಯವು ಸಮೀಪಿಸುತ್ತಾ ಬರುವಾಗ ದೇವರೊಂದಿಗೆ ನಮ್ಮ ಸುಸಂಬಂಧವನ್ನು ಅಪಾಯಕ್ಕೆ ಹಾಕಬಲ್ಲ ವಿಷಯಗಳ ಚಿತ್ರಣಗಳಿಗೆ ನಾವು ಸತತವಾಗಿ ಒಡ್ಡಲ್ಪಡುತ್ತೇವೆ. ಈ ವಿಷಯಗಳಲ್ಲಿ ಕೆಲವು ಯಾವುವು, ಸೈತಾನನು ಅವನ್ನು ಏಕೆ ಉಪಯೋಗಿಸುತ್ತಾನೆ ಮತ್ತು ಅವುಗಳಿಂದ ನಮ್ಮನ್ನು ಹೇಗೆ ರಕ್ಷಿಸಬಲ್ಲೆವು ಎಂಬುದನ್ನು ಈ ಲೇಖನದಲ್ಲಿ ನಾವು ಚರ್ಚಿಸುವೆವು.
ಅಧ್ಯಯನ ಲೇಖನ 4 ಪುಟ 24-28
ದೇವರ ಸೇವೆಗಾಗಿ ನಮ್ಮ ಹುರುಪನ್ನು ಕಾಪಾಡಿಕೊಳ್ಳಲು ಯಾವುದು ನಮಗೆ ಸಹಾಯಕಾರಿ? ನಾವು ಕ್ರಿಸ್ತನನ್ನು ಅನುಸರಿಸುತ್ತಾ ಇರಲು ಬಯಸುವುದಾದರೆ ಯಾವ ಮಾನುಷ ಪ್ರವೃತ್ತಿಯಿಂದ ನಮ್ಮನ್ನು ಕಾಪಾಡಿಕೊಳ್ಳುವ ಅಗತ್ಯವಿದೆ? ಈ ಪ್ರಾಮುಖ್ಯ ಪ್ರಶ್ನೆಗಳ ಉತ್ತರಗಳನ್ನು ಈ ಲೇಖನವು ಪರಿಗಣಿಸುವುದು.
ಇತರ ಲೇಖನಗಳು:
ಯೆಹೋವನು ನಿಮ್ಮನ್ನು ಪ್ರಶ್ನಿಸುವಂತೆ ಬಿಡುತ್ತೀರೊ? 13
ಕಷ್ಟಗಳನ್ನು ತಾಳಿಕೊಳ್ಳುವುದು ಯೆಹೋವನಲ್ಲಿ ನಮ್ಮ ಭರವಸೆಯನ್ನು ವರ್ಧಿಸಿತು 16
ನೀವು “ಸುರಕ್ಷಿತವಾಗಿ” ಇರುವುದೇ ಯೆಹೋವನ ಅಪೇಕ್ಷೆ 29