ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಸಪ್ಟಂಬರ 10 ರ ವಾರ
ಸಂಗೀತ 30 (117)
12 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಲ್ಲಿ ಆಯ್ದ ಪ್ರಕಟನೆಗಳು. ಪ್ರಶ್ನಾ ಪೆಟ್ಟಿಗೆಯನ್ನು ಓದಿರಿ ಮತ್ತು ಯೆಹೋವನ ಸಂಸ್ಥೆಯನ್ನು ಪ್ರತಿನಿಧಿಸುವಾಗ ಯೋಗ್ಯ ಉಡುಪು, ತಲೆಬಾಚುವಿಕೆ ಮತ್ತು ನೀಟುತನದ ಮಹತ್ವದ ಕುರಿತು ಸಂಕ್ಷೇಪವಾಗಿ ತಿಳಿಸಿರಿ. ಈ ಶನಿವಾರಕ್ಕಾಗಿ ಪತ್ರಿಕಾ ಸಾಕ್ಷಿಯನ್ನು ಪ್ರೋತ್ಸಾಹಿಸಿರಿ.
18 ನಿ: “ರಾಜ್ಯ ಸಂದೇಶವನ್ನು ಹಬ್ಬಿಸು ವುದರಲ್ಲಿ ಆಸಕ್ತರಾಗಿರ್ರಿ.” ಪ್ರಶ್ನೋತ್ತ ರ ಆವರಿಸುವಿಕೆ. ಪಾರಾ 6 ನ್ನು ಚರ್ಚಿಸಿದ ನಂತರ, ಬ್ರೊಷೂರ್ ನೀಡುವದು ಹೇಗೆಂಬದನ್ನು ಪಾರಾದಲ್ಲಿ ಸೂಚಿಸಿದ ಪ್ರಕಾರ ದೃಶ್ಯ ಮಾಡಿರಿ. ಸಂಭಾಷಣೆಯ ವಿಷಯವನ್ನು ಉಪಯೋಗಿಸಿರಿ. ಕ್ಷೇತ್ರಸೇವೆಯಲ್ಲಿ ಹುರುಪನ್ನು ತೋರಿಸುವ ಅಗತ್ಯವನ್ನು ಒತ್ತಿ ಹೇಳಿರಿ.
15 ನಿ: “ಕ್ಷೇತ್ರಸೇವೆಯನ್ನು ಪ್ರಗತಿಗೊಳಿಸಲು ಶಾಲೆಯನ್ನು ಉಪಯೋಗಿಸುವುದು.” ಶಾಲಾ ಮೇಲ್ವಿಚಾರಕನು ಥಿಯೋಕ್ರೆಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ 19ನೇ ಅಧ್ಯಯನವನ್ನು ಸಭೆಯೊಂದಿಗೆ ಚರ್ಚಿಸುವನು. ಕ್ಷೇತ್ರಸೇವೆಯಲ್ಲಿ ನಮ್ಮ ಪ್ರಗತಿಗೆ ಶಾಲೆಯು ನೆರವಾಗುವ ವಿಧಾನಗಳನ್ನು ಎತ್ತಿಹೇಳಿರಿ. ಶಾಲೆಯಲ್ಲಿ ಸೇರಿರುವವರು ತಮ್ಮ ಭಾಷಣಗಳನ್ನು ಮತ್ತು ದೃಶ್ಯಗಳನ್ನು ಸ್ಥಳೀಕ ಕ್ಷೇತ್ರದಲ್ಲಿ ಉಪಯೋಗಿಸಲಿಕ್ಕಾಗಿ ವ್ಯಾವಹಾರ್ಯವಾಗಿ ಮಾಡುವಂತೆ ಉತ್ತೇಜಿಸಿರಿ.
ಸಂಗೀತ 31 (3) ಮತ್ತು ಸಮಾಪ್ತಿ ಪ್ರಾರ್ಥನೆ.
ಸಪ್ಟಂಬರ 17ರ ವಾರ
ಸಂಗೀತ 211 (105)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಎಕೌಂಟ್ ರಿಪೋರ್ಟ್. ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ಮಾಡಲ್ಪಟ್ಟ ಕಾಣಿಕೆಗಳಿಗಾಗಿ ಸೊಸೈಟಿಯ ಅಂಗೀಕಾರಗಳನ್ನು ಓದಿರಿ. ಅಂಥ ಕಾಣಿಕೆಗಳಿಗಾಗಿ ಮತ್ತು ಸ್ಥಳಿಕ ಸಭೆಯನ್ನು ಬೆಂಬಲಿಸುವದಕ್ಕಾಗಿ ಸಹೋದರರನ್ನು ಪ್ರಶಂಸಿಸಿರಿ. ವಾರಾಂತ್ಯದ ಸೇವೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಉತ್ತೇಜನ ಕೊಡಿ.
18 ನಿ: “ತಾಳ್ಮೆಯಿಂದ ಫಲ ಕೊಡುತ್ತಾ ಇರ್ರಿ.” ಪುರವಣಿ ಆಧರಿತ ಭಾಷಣ. ವಿಷಯದ ಸ್ಥಳೀಕ ಅನ್ವಯವನ್ನು ಮಾಡುತ್ತಾ, ಎಲ್ಲರೂ ತಮ್ಮ ವೈಯಕ್ತಿಕ ಪರಿಸ್ಥಿತಿಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡುವಂತೆ ಪ್ರೋತ್ಸಾಹಿಸಿರಿ.
17 ನಿ: “ಒಂದು ಬೈಬಲ್ ಅಭ್ಯಾಸವನ್ನು ನೀವೇಕೆ ನಡಿಸಬೇಕು.” ಪ್ರಶ್ನೋತ್ತರ ಚರ್ಚೆ. ಯಾರನ್ನಾದರೂ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಿಂದುವಿಗೆ ನಡಿಸಿದ ಒಬ್ಬ ಪ್ರಚಾರಕ ಯಾ ಪಯನೀಯರನನ್ನು ಸಂಕ್ಷೇಪವಾಗಿ ಇಂಟರ್ವ್ಯೂ ಮಾಡಿರಿ. ಅವನ ಯಾ ಅವಳ ಮತ್ತು ವಿದ್ಯಾರ್ಥಿಗಳ ನಡುವೆ ಯಾವ ರೀತಿಯ ಸಂಬಂಧವು ಬೆಳೆಯಿತು ಮತ್ತು ಅಭ್ಯಾಸಗಳನ್ನು ನಡಿಸಿದ್ದರಿಂದ ಯಾವ ಪ್ರಯೋಜನಗಳು ದೊರೆತವೆಂದು ಹೇಳಲಿ.
ಸಂಗೀತ 133 (68) ಮತ್ತು ಸಮಾಪ್ತಿ ಪ್ರಾರ್ಥನೆ.
ಸಪ್ಟಂಬರ 24 ರ ವಾರ
ಸಂಗೀತ 29 (11)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ವಾರಾಂತ್ಯದ ಕ್ಷೇತ್ರಸೇವೆಯಲ್ಲಿ ಭಾಗವಹಿಸುವುದನ್ನೂ ಉತ್ತೇಜಿಸಿರಿ.
20 ನಿ: “ನಿಮ್ಮ ಮಕ್ಕಳು ಶಾಲೆಯಲ್ಲಿ ದೃಢರಾಗಿ ನಿಲ್ಲುತ್ತಿದ್ದಾರೋ?” ಸಭೆಯೊಂದಿಗೆ ಪ್ರಶ್ನೋತ್ತರ ಚರ್ಚೆ. ಪಾರಾಗಳನ್ನು ಮತ್ತು ವಚನಗಳನ್ನು ಓದಿಸಿರಿ. ಕೊಟ್ಟ ವಿಷಯಕ್ಕೆ ಹೊಂದುವ ಯಾವುದೇ ಸ್ಥಳೀಕ ಅನುಭವಗಳಿದ್ದರೆ, ಸಮಯವಿದ್ದ ಹಾಗೆ ಅವನ್ನು ನೀಡಬಹುದು.
15 ನಿ: ಸ್ಥಳೀಕ ಅಗತ್ಯತೆಗಳು ಅಥವಾ “ಸ್ಟೇಂಡ್ ಫರ್ಮ್—ಡು ನಾಟ್ ಸ್ಟಂಬಲ್” ಎಂಬ ಎಪ್ರಿಲ್ 15, 1990 ವಾಚ್ಟವರ್ ಪುಟ 26-28 ರಲೇಖನಾಧರಿತ ಭಾಷಣ. (ದೇಶಭಾಷೆ: “ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗಬೇಡಿರಿ” ಕಾ.ಬು. 6⁄90)
ಸಂಗೀತ 191 (42) ಮತ್ತು ಸಮಾಪ್ತಿ ಪ್ರಾರ್ಥನೆ.
ಒಕ್ಟೋಬರ 1 ರ ವಾರ
ಸಂಗೀತ 92 (51)
7 ನಿ: ಸ್ಥಳೀಕ ತಿಳಿಸುವಿಕೆಗಳು. ಭಾರತದ ಮೇ ಸೇವಾ ವರದಿಯನ್ನು ಚರ್ಚಿಸಿರಿ ಮತ್ತು ಆ ತಿಂಗಳಲ್ಲಿ ಸಭೆಯು ಮಾಡಿದ ಯಾವುದೇ ಉತ್ತಮ ವೈಶಿಷ್ಟ್ಯವನ್ನು ತಿಳಿಸಿರಿ. ಕ್ಷೇತ್ರಸೇವಾ ವರದಿಯನ್ನು ತಕ್ಕ ಸಮಯಕ್ಕೆ ಹಾಕುವ ಮಹತ್ವವನ್ನು ಹೇಳಿರಿ.
23 ನಿ: “ಸುವಾರ್ತೆಯನ್ನು ನೀಡುವುದು—ಅನೌಪಚಾರಿಕ ಸಾಕ್ಷಿ ಕೊಡಲು ಸಂದರ್ಭವನ್ನು ಮಾಡುವ ಮೂಲಕ.” ಪ್ರಶ್ನೋತ್ತ ರ ಚರ್ಚೆ. 3ನೇ ಪಾರಾ ಚರ್ಚಿಸಿದನಂತರ, ಅನೌಪಚಾರಿಕ ಸಾಕ್ಷಿ ನೀಡುವದಕ್ಕೆ ಬೇರೆ ಯಾವ ಸಂದರ್ಭಗಳು ಇವೆಯೆಂದು ತಿಳಿಸಲು ಸಭೆಯನ್ನು ಕೇಳಿರಿ. ಹೊಸ ಶಾಲಾ ವರ್ಷವು ಯುವಕರಿಗೆ ಸತ್ಯದ ಕುರಿತು ಮಾತಾಡುವ ಸಂದರ್ಭಗಳನ್ನು ಹೇಗೆ ಒದಗಿಸುತ್ತದೆಂದು ತಿಳಿಸಿರಿ. 6ನೇ ಪಾರಾದ ನಂತರ, ಅನೌಪಚಾರಿಕ ಸಾಕ್ಷಿಯಲ್ಲಿ ಸಾಫಲ್ಯ ಪಡೆದ ಒಂದೆರಡು ಪ್ರಚಾರಕರನ್ನು ಸಂಕ್ಷೇಪವಾಗಿ ಇಂಟರ್ವ್ಯೂ ಮಾಡಿರಿ. ಕೇಳಿರಿ: ‘ಯಾವ ಸಂದರ್ಭಗಳಲ್ಲಿ ಅವರು ಸಾರುತ್ತಾರೆ? ಸಾರುವ ಈ ವಿಧಾನವನ್ನು ಅವರೇಕೆ ಪರಿಣಾಮಕಾರಿಯಾಗಿ ಕಾಣುತ್ತಾರೆ? : ಅವರಿಗೆ ಹೇಗೆ ಪ್ರಯೋಜನವಾಗಿದೆ?’ ಪ್ರತಿದಿನವೂ ಸುವಾರ್ತೆಯನ್ನು ಹಂಚುವ ಗುರಿಯನ್ನಿಡುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಜನರ ಕಡೆಗೆ ಆಳವಾದ ಚಿಂತೆಯನ್ನು ತೋರಿಸುವ ಅಗತ್ಯವನ್ನು ಒತ್ತಿಹೇಳಿ, ಕೊನೆಗೊಳಿಸಿರಿ.
15 ನಿ: ಒಕ್ಟೋಬರದಲಿ ಕ್ರಿಯೇಶನ್ ಪುಸ್ತಕ ನೀಡಿರಿ. ಭಾಷಣ ಮತ್ತು ದೃಶ್ಯ. ಒಕ್ಟೋಬರದಲ್ಲಿ ಕ್ರಿಯೇಶನ್ ಪುಸ್ತಕ ನೀಡುವಾಗ ಮಾತಾಡುವ ವಿಷಯಗಳನ್ನು ಚರ್ಚಿಸಿರಿ. 16 ಮತ್ತು 17 ಅಧ್ಯಾಯಗಳಾದ “ದೇವರು ಕಷ್ಟಾನುಭವವನ್ನೇಕೆ ಅನುಮತಿಸುತ್ತಾನೆ?” ಮತ್ತು “ಬೈಬಲನ್ನು ನಂಬಬಹುದೋ?” ಎಂಬ ಸಮಾಚಾರಗಳು ಮನೆಯವನಿಗೆ ಪ್ರಾಯಶ: ಅಪ್ಪೀಲಾದೀತು. ವಿಕಾಸವಾದವನ್ನು ತಪ್ಪೆಂದು ಸ್ಥಾಪಿಸಲು ಮತ್ತು ನಿರ್ಮಾಣಿಕನಾದ ದೇವರಲ್ಲಿ ನಂಬಿಕೆಯನ್ನು ಕಟ್ಟಲು ಇಬ್ರಿಯ 3:4 ಮತ್ತು ಪ್ರಕಟನೆ 4:11 ಮುಂತಾದ ವಚನವನ್ನುಪಯೋಗಿಸಿ ನುರಿತ ಪ್ರಚಾರಕನು ಒಂದು ದೃಶ್ಯಮಾಡಲಿ. ರೀಸನಿಂಗ್ ಪುಸ್ತಕದಲ್ಲಿ “ಕ್ರಿಯೇಶನ್” ಕೆಳಗಿರುವ ಸಮಾಚಾರವನ್ನು ಸಮಯವಿದ್ದರೆ ಬಳಸಬಹುದು. ಸಭೆಯ ಕ್ಷೇತ್ರ ಸೇವಾ ಏರ್ಪಾಡನ್ನು ತಿಳಿಸಿರಿ ಮತ್ತು ಎಲ್ಲರೂ ಭಾಗವಹಿಸುವಂತೆ ಆಮಂತ್ರಿಸಿರಿ.
ಸಂಗೀತ 129 (66) ಮತ್ತು ಸಮಾಪ್ತಿ ಪ್ರಾರ್ಥನೆ.