ಜನರನ್ನು ಕತ್ತಲೆಯಿಂದ ಬೆಳಕಿಗೆ ನಡಿಸಿರಿ
1 ಆತ್ಮಿಕ ಕತ್ತಲೆಯು ಭೂಮಿಯನ್ನು ಆವರಿಸಿದೆ. (ಯೆಶಾಯ 60:2) ಮಾನವಕುಲವು ಪಾಪಕ್ಕೆ ಬಿದ್ದಂದಿನಿಂದ, “ಈ ವ್ಯವಸ್ಥೆಯ ದೇವರಾದ” ಸೈತಾನನು ಜನರನ್ನು ಆತ್ಮಿಕ ಕತ್ತಲೆಯೊಳಗೆ ಇಟ್ಟಿದ್ದಾನೆ, ಇದರ ಫಲಿತಾಂಶವು ನೈತಿಕ ನೀತಿಭ್ರಷ್ಟತೆಯೇ.—2 ಕೊರಿಂ. 4:4.
2 ನಾವೀಗ ಸತ್ಯದ ಜ್ಞಾನೋದಯವನ್ನು ಪಡೆದಿರಲಾಗಿ, ಯೇಸುವಿನಂತೆ ಜನರ ಕಡೆಗೆ ಕನಿಕರದ ಭಾವವನ್ನು ತೋರಿಸುತ್ತೇವೋ? (ಮತ್ತಾಯ 9:36) ಹಾಗಿದ್ದರೆ, ಆತನು ಅಪೊಸ್ತಲ ಪೌಲನಿಗೆ ಕೊಟ್ಟ ಆದೇಶವಾದ, ‘ಜನರ ಕಣ್ಣುಗಳನ್ನು ತೆರೆದು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಳ್ಳುವಂತೆ’ ಮಾಡುವುದರ ಭಾವಾರ್ಥವನ್ನು ಗಣ್ಯಮಾಡುವೆವು. —ಅಪೊ. 26:16-18.
ಮನಸ್ಸು ಮತ್ತು ಹೃದಯಗಳನ್ನು ಬೆಳಗಿಸಿರಿ
3 ಸೈತಾನನು ತನಗೆ ಬಲಿಯಾದವರ ಮನಸ್ಸನ್ನು ಕುರುಡು ಮಾಡುವುದರಿಂದ ಮತ್ತು ಹೃದಯದ ಕ್ಷಿಪ್ರ ಗ್ರಾಹಿತ್ವವನ್ನು ಕುಂದಿಸುವುದರಿಂದ, ಅವರ ಸಹಾಯಕ್ಕಾಗಿ ನಾವೇನು ಮಾಡಬಲ್ಲೆವು? ಎಫೆಸದವರು ತಮ್ಮ ಮನೋನೇತ್ರಗಳನ್ನು ತಿಳುವಳಿಕೆಯಿಂದ ಬೆಳಗಿಸುವಂತೆ ಪೌಲನು ಪ್ರಾರ್ಥಿಸಿದ್ದನು. (ಎಫೆ. 1:17, 18) ಹೃದಯವನ್ನು ತಲಪಲು ದೇವರ ವಾಕ್ಯಕ್ಕಿಂತ ಹೆಚ್ಚು ಶಕ್ತಿಶಾಲಿ ಬೇರೊಂದಿಲ್ಲ. (ಇಬ್ರಿ. 4:12) ಇದನ್ನು ತಿಳಿದ ನಾವು, ಇತರರೊಂದಿಗೆ ಮಾತಾಡುವಾಗ ಬೈಬಲನ್ನು ಬಳಸುವುದರಲ್ಲಿ ನಮ್ಮ ನಿಪುಣತೆಯನ್ನು ವಿಕಸಿಸಲು ಪ್ರೇರಿಸಲ್ಪಡಬೇಕು.
4 ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವು, ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತೆ ನಿಮಗೆ ಸಹಾಯ ಮಾಡಬಹುದು. ಕ್ಷೇತ್ರ ಸೇವೆಗಾಗಿ ನೀವು ಚೆನ್ನಾಗಿ ತಯಾರು ಮಾಡುತ್ತೀರೋ? ಮನೆಯವರ ಆಸಕ್ತಿಯನ್ನು ಸೆಳೆಯುವ ಸಂಭಾಷಣಾ ಅವಕಾಶಗಳ ಚಿರಪರಿಚಯವನ್ನು ಮಾಡಿಕೊಳ್ಳಲು ಪ್ರ್ಯಾಕ್ಟಿಸ್ ಸೆಶ್ಶನ್ಗಳನ್ನು ನೀವು ಮಾಡುತ್ತೀರೋ? ಪ್ರಚಲಿತ ‘ಸಂಭಾಷಣೆಗಾಗಿ ವಿಷಯ’ವನ್ನು ಕಲಿಯುವ ಮಹತ್ವವನ್ನು ಪರಿಗಣಿಸಿ, ಅದನ್ನು ಪ್ರಯೋಗಿಸಲು ಪ್ರಯತ್ನಿಸುತ್ತೀರೋ? ಮನೆ ಬಾಗಲಲ್ಲಿ ಶಾಸ್ತ್ರವಚನಗಳ ಮೇಲೆ ಮನವೊಪ್ಪಿಸುವ ವಿವೇಚನೆಯನ್ನು ಮಾಡಲು ಯತ್ನಿಸುತ್ತೀರೋ?—ಅಪೊ. 17:2.
ಕಾವಲಿನಬುರುಜು ಒಂದು ಸಹಾಯಕ
5 ಕಾವಲಿನಬುರುಜು ಮಿಲ್ಯಾಂತರ ಜನರಿಗೆ ಕತ್ತಲೆಯಿಂದ ಬೆಳಕಿಗೆ ತಿರುಗಲು ಸಹಾಯ ಮಾಡಿದೆ. ಬೈಬಲಿನ ನೈತಿಕ ತತ್ವಗಳನ್ನು ಅನ್ವಯಿಸುವುದು ಹೇಗೆ, ನಮ್ಮ ದಿನಗಳಿಗಾಗಿರುವ ಅದರ ಪ್ರವಾದನೆಗಳನ್ನು ಅರ್ಥಮಾಡುವುದು ಹೇಗೆ ಮತ್ತು ಯೆಹೋವನು ಮೆಚ್ಚುವ ಮಾರ್ಗದಲ್ಲಿ ನಡೆಯುವಂತೆ ಸತ್ಯ ಮತ್ತು ಸುಳ್ಳು ಧರ್ಮದ ನಡುವಣ ಭೇದವನ್ನು ತಿಳಿಯುವುದು ಹೇಗೆಂಬದನ್ನು ಅದು ತೋರಿಸುತ್ತದೆ.
6 ಕಾವಲಿನಬುರುಜು ಪಕ್ಷಸಮರ್ಥನೆ ಮಾಡಿರುವ ಬೈಬಲ್ ಸತ್ಯವು ಏನನ್ನು ಉತ್ಪಾದಿಸಿದೆ? ಎಲ್ಲಾ ವಿಧದ ಜನರು ದೇವರ ಮತ್ತು ಆತನ ಕುಮಾರನ ನಿಷ್ಕೃಷ್ಟ ಜ್ಞಾನದ ಮೂಲಕ ರಕ್ಷಣೆ ಪಡೆಯಲು ಸಹಾಯ ಮಾಡಲ್ಪಟ್ಟಿದ್ದಾರೆ. (ಯೋಹಾ. 17:3; 1 ತಿಮೊ. 2:4) ಒಬ್ಬ ವಾಚಕರು ಬರೆದದ್ದು: ‘ಕಾವಲಿನಬುರುಜು ಎಂದರೆ ನನಗೆ ತುಂಬಾ ಗಣ್ಯತೆ! ಅದರ ಲೇಖನಗಳು ನಾವು ಜೀವಿಸುವ ಸಮಯ ಮತ್ತು ಕಾಲಗಳನ್ನು ಸ್ಪಷ್ಟವಾಗಿ ಕಾಣುವಂತೆ ಎಲ್ಲರಿಗೂ ಸಹಾಯ ಮಾಡಲೇಬೇಕು. ನಿಶ್ಚಯವಾಗಿಯೂ ಆತ್ಮಿಕ ಭೋಜನವಾಗಿರುವ ಈ ಕಾವಲಿನಬುರುಜು ತಯಾರಿಕೆಯಲ್ಲಿ ಮಾಡಲ್ಪಡುವ ಬಹಳಷ್ಟು ಸಂಶೋಧನೆ, ಅಧ್ಯಯನ ಮತ್ತು ಕೆಲಸಕ್ಕಾಗಿ ನಾನು ನಿಮಗೆ ಅತ್ಯಂತ ಅಭಾರಿ.’
ವಿವೇಚನೆ ಉಪಯೋಗಿಸಿರಿ
7 ಕಾವಲಿನಬುರುಜು ಚಂದಾ ಚಟುವಟಿಕೆಯ ಈ ಎರಡನೆ ತಿಂಗಳಲ್ಲಿ, ಜನರನ್ನು ಕತ್ತಲೆಯಿಂದ ಬೆಳಕಿಗೆ ನಡಿಸುವಂತೆ ಇರುವ ಸಂದರ್ಭಗಳಿಗಾಗಿ ನಾವು ಹುಡುಕುವ ಅಗತ್ಯವಿದೆ. ಇದನ್ನು ಮಾಡಲು ಮನೆಮನೆಯ ಸೇವೆಯಲ್ಲಿ ಜನರೊಂದಿಗೆ ನಡಿಸುವ ಬೈಬಲ್ ಚರ್ಚೆಗಳು ನಮಗೆ ಸಹಾಯ ಮಾಡುತ್ತವೆ. ರಾಜ್ಯ ಸಂದೇಶದಲ್ಲಿ ಜನರಿಗೆ ನಿಜಾಸಕ್ತಿಯು ಹುಟ್ಟುವಂತೆ ನಾವು ಸಹಾಯ ಮಾಡಬಯಸುತ್ತೇವೆ. ಇದನ್ನು ಮಾಡುವ ಒಂದು ಅತ್ಯುತ್ತಮ ವಿಧಾನವು ಕಾವಲಿನಬುರುಜು ವಾರ್ಷಿಕ ಚಂದಾವನ್ನು ಅವರಿಗೆ ನೀಡುವುದೇ. ವ್ಯಕ್ತಿಯು ಚಂದಾ ತಕ್ಕೊಳ್ಳದಿದ್ದರೂ ಪತ್ರಿಕೆಗಳನ್ನು ಸ್ವೀಕರಿಸಿದಾದ್ದರೆ ಅವರನ್ನು, ನಿಮ್ಮ ಪತ್ರಿಕಾ ಮಾರ್ಗದಲ್ಲಿ ಸೇರಿಸಲು ಪ್ರಯತ್ನಿಸಿರಿ. ತಕ್ಕ ಸಮಯದಲ್ಲಿ ಅವರು, ಚಂದಾ ಮೂಲಕವಾಗಿ ಪತ್ರಿಕೆಗಳು ಕ್ರಮವಾಗಿ ಮನೆಗೆ ಬರುವ ಮಹತ್ವವನ್ನು ಗಣ್ಯಮಾಡಾರು. ಮತ್ತು ಎಲ್ಲಿ ಚಂದಾ ನೀಡಿರುವಿರೋ ಅಲ್ಲಿ ಒಳ್ಳೇ ದಾಖಲೆಯನ್ನು ಬರೆದಿಟ್ಟು, ಪುನರ್ಭೇಟಿ ಮಾಡಿರಿ ಮತ್ತು ಚಂದಾ ತೀರಲಿರುವಾಗ ನವೀಕರಣ ಮಾಡಿರಿ.
8 ನಾವು ಮನೆಮನೆಯ ಸೇವೆ ಮಾಡುವಾಗ, ಬೀದಿ ಸಾಕ್ಷಿ ಕೊಡುವಾಗ, ಅಥವಾ ಸಹೋದ್ಯೋಗಿಗಳಿಗೆ, ಸಹಪಾಠಿಗಳಿಗೆ ಮತ್ತು ಸಂಬಂಧಿಕರಿಗೆ ಅವಿಧಿ ಸಾಕ್ಷಿಕೊಡುವಾಗ, ಜನರನ್ನು ಬಿಡುಗಡೆ ಮಾಡುವ ಸತ್ಯವನ್ನು ಪ್ರಚುರಿಸುತ್ತೇವೆಂದು ನೆನಪಿಡಿರಿ. (ಯೋಹಾ. 8:32) ಅವರು ಬಿಡುಗಡೆಯನ್ನು ಹೊಂದಿ, ನಿತ್ಯ ಜೀವದ ನಿರೀಕ್ಷೆಯನ್ನು ಪಡಕೊಳ್ಳಲು, ಕತ್ತಲೆಯಿಂದ ಬೆಳಕಿಗೆ ಅವರನ್ನು ತಿರುಗಿಸಲು ಒಂದು ವಿಶೇಷ ಉಪಕರಣವು ಕಾವಲಿನಬುರುಜು ಆಗಿದೆ.