ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಮೇ 6ರ ವಾರ
ಸಂಗೀತ 191 (42)
10ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಚಂದಾಗಳನ್ನು ಯೋಗ್ಯವಾಗಿ ನಿರ್ವಹಿಸುವ ವಿಧಾನ (ಎಸ್-11) ಕುರಿತಾದ ಸೂಚನೆಗಳನ್ನು ಸಭೆಯೊಂದಿಗೆ ಸಂಕ್ಷೇಪವಾಗಿ ಪುನರ್ವಿಮರ್ಶಿಸಿರಿ.
15 ನಿ: “ಸಭೆಯಲ್ಲಿ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು.” ಭಾಷಣವನ್ನು ಹಿಂಬಾಲಿಸಿ ಚೆನ್ನಾಗಿ ತಯಾರಿತ ದೃಶ್ಯ. ಸಹೋದರಿಯರು ಯಾವಾಗ ಮತ್ತು ಏಕೆ ತಲೆಗೆ ಮುಸುಕು ಹಾಕಬೇಕೆಂಬ ಸಮಾಚಾರವನ್ನು ಕಂಡುಹಿಡಿಯಲು ಇಂಡೆಕ್ಸ್ನ್ನು ಹೇಗೆ ಉಪಯೋಗಿಸಬಹುದೆಂದು ಪುಸ್ತಕಭ್ಯಾಸ ನಿರ್ವಾಹಕನು ಒಬ್ಬ ವಿವಾಹ ದಂಪತಿಗಳಿಗೆ ವಿವರಿಸುತ್ತಾನೆ.
20 ನಿ: ಹೊಸ ಸಂಭಾಷಣೆಗಾಗಿ ವಿಷಯ. ಸಭೆಯೊಂದಿಗೆ ಹೊಸ ವಿಷಯವನ್ನು ಚರ್ಚಿಸಿರಿ. ಅಲ್ಲದೆ, ಮಾತಾಡುವ ವಿವಿಧ ವಿಷಯಗಳನ್ನು ಹೊಸ ವಾಚ್ಟವರ್ ಸಂಚಿಕೆಯಿಂದ ಚರ್ಚಿಸಿರಿ. ಸಾಹಿತ್ಯದಲ್ಲಿ ನಿಜಾಸಕ್ತಿಯನ್ನು ತೋರಿಸಿರುವ ಮತ್ತು ಚಂದಾ ಪಡೆಯಲು ಸಂತೋಷಿಸ ಬಹುದಾದ ಜನರಿಗೆ ವಿಚಾರಯುಕ್ತ ಪರಿಗಣನೆ ತೋರಿಸುವಂತೆ ಸಹೋದರರನ್ನು ಉತ್ತೇಜಿಸಿರಿ. ಚೆನ್ನಾಗಿ ತಯಾರಿಸಿದ ಪ್ರಚಾರಕನು ಕೆಳಗಿನ ಪ್ರಸಂಗವನ್ನು ಕೊಡಲಿ: “ಹಲ್ಲೋ, ನನ್ನ ಹೆಸರು—. ನಾನೊಂದು ಚಿಕ್ಕ ಸಂದರ್ಶನೆ ಮಾಡುತ್ತಿದ್ದೇನೆ ಯಾಕಂದರೆ ನನಗೊಂದು ಪ್ರಶ್ನೆ ಕೇಳಲಿದೆ. ನಮ್ಮ ಜೀವಮಾನದಲ್ಲಿ ಬಾಳುವ ಶಾಂತಿ ಬರಲಿದೆ ಎಂದು ನೀವು ನೆನಸುತ್ತೀರೋ? [ಉತ್ತರಕ್ಕೆ ಅವಕಾಶ ಕೊಡಿ.] ಗತಕಾಲದ ಸಂಗತಿಗಳಿಂದ ತೀರ್ಮಾನಿಸುವಲ್ಲಿ, ನಿರೀಕ್ಷೆಗೆ ಹೆಚ್ಚೇನೂ ಆಧಾರವಿಲ್ಲ. ಆದರೂ, ಲೂಕ 21ರಲ್ಲಿ ನಮ್ಮ ಕಾಲಕ್ಕಾಗಿ ಏನು ಪ್ರವಾದಿಸಲ್ಪಟ್ಟಿದೆ ಎಂದು ನೋಡಿರಿ. [10, 11, 26ನೇ ವಚನ ಓದಿರಿ.] ಈ ಪರಿಸ್ಥಿತಿಗಳು, ಒಂದನೇ ಲೋಕ ಯುದ್ಧದ ಸಮಯದಿಂದ ನೆಲೆಸಿವೆ. ಆದರೂ, ನಾವು ನಿರೀಕ್ಷೆ ರಹಿತರಾಗಿಲ್ಲ. ಮಾನವ ಕುಲದ ಅತಿ ತೊಂದರೆಗೆ ಕಾರಣವಾಗಿರುವ ಅವೇ ಪರಿಸ್ಥಿತಿಗಳು ರುಜುವಾತು ನೀಡುತ್ತವೆ ಏನಂದರೆ ದೇವರ ರಾಜ್ಯವು ಬೇಗನೆ ಭೂಮಿಯನ್ನು ಶುದ್ಧೀಕರಿಸಿ ಬಾಳುವ ಶಾಂತಿಯನ್ನು ತರುವುದು ಎಂಬದಾಗಿ. ಇದನ್ನೇ ಯೇಸು 28 ಮತ್ತು 31ನೇ ವಚನದಲ್ಲಿ ತಿಳಿಸುತ್ತಿದ್ದಾನೆ. [ವಚನಗಳನ್ನು ಓದಿರಿ.] ಈ ಅನಿಷ್ಟಕರ ಮತ್ತು ನಿರಾಶೆಯ ಪರಿಸ್ಥಿತಿಗಳು ಕಾರ್ಯಥಃ ಬೇಗನೆ ಬರಲಿರುವ ಒಂದು ಆಶ್ಚರ್ಯಕರ ಬದಲಾವಣೆಯ ರುಜುವಾತಾಗಿವೆ. ಇದೊಂದು ಶುಭವಾರ್ತೆ ಅಲ್ಲವೇ? [ಉತ್ತರಕ್ಕೆ ಅವಕಾಶ ಕೊಡಿ.] ಈ ವಾಚ್ಟವರ್ ಲೇಖನವು [ತಕ್ಕದಾದ ಪರಿಚ್ಛೇದ ಯಾ ಚಿತ್ರವನ್ನು ಆರಿಸಿರಿ] ಬೇಗನೇ ಬರಲಿರುವ ಆ ಕೆಲವು ಬದಲಾವಣೆಗಳನ್ನು ತಿಳಿಸುತ್ತವೆ ಮತ್ತು ನೀವೂ ನಿಮ್ಮ ಕುಟುಂಬವೂ ಅವನ್ನು ಆನಂದಿಸಲು ಹೇಗೆ ಜೀವಿಸಬಹುದೆಂದು ತೋರಿಸುತ್ತದೆ. ಈ ವಿಷಯವಾಗಿ ನಿಮಗೆ ಹೆಚ್ಚಿನ ನೆರವನ್ನೀಯಲು ನಾವೀ ಪತ್ರಿಕೆಯ ವಾರ್ಷಿಕ ಚಂದಾವನ್ನು ರೂ.50ಕ್ಕೆ ನೀಡುತ್ತೇವೆ.” (ತಿಂಗಳ ಪತ್ರಿಕೆಗೆ ವರ್ಷಕ್ಕೆ ರೂ.25.) ಪತ್ರಿಕೆಗಳು ಪ್ರಕಟವಾಗುವ ಭಾಷೆಗಳ ಸಂಖ್ಯೆಯನ್ನು ಮತ್ತು ನಮ್ಮ ಚಟುವಟಿಕೆಯ ಲೋಕವ್ಯಾಪಕತೆಯನ್ನೂ ತಿಳಿಸಬಹುದು. ನಮ್ಮ ಸ್ವಯಂಸೇವಾ ಪ್ರಯತ್ನಗಳು ಬೈಬಲ್ ಶಿಕ್ಷಣವನ್ನು ಪ್ರವರ್ಧಿಸಲು ನೆರವಾಗುತ್ತವೆ. ಎಲ್ಲರೂ ‘ಹೊಸ ಸಂಭಾಷಣೆಗಾಗಿ ವಿಷಯ’ವನ್ನು ಉಪಯೋಗಿಸುವಂತೆ ಉತ್ತೇಜಿಸುವ ಮಾಲಕ ಈ ಭಾಗವನ್ನು ಕೊನೆಗೊಳಿಸಿರಿ.
ಸಂಗೀತ 60 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 13ರ ವಾರ
ಸಂಗೀತ 43 (103)
5 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವ ಪ್ರಭುತ್ವ ವಾರ್ತೆ.
15 ನಿ: “ಸುವಾರ್ತೆ ನೀಡುವುದು—ಕಿವಿಗೊಡುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ.” ಸಮಾಚಾರದ ಪ್ರಶ್ನೋತ್ತರ ಚರ್ಚೆ. ನಾಲ್ಕನೇ ಪರಿಚ್ಛೇದವನ್ನು ಚರ್ಚಿಸುವಾಗ, ವೈಯಕ್ತಿಕ ಗಮನದ ವಿಷಯಗಳಲ್ಲಿ ಮನೆಯವನು ಕೊಟ್ಟ ಹೇಳಿಕೆಗಳಿಗೆ ಕಿವಿಗೊಡಲು ತಪ್ಪಿದ ಕಾರಣ ಒಂದು ಒಳ್ಳೇ ಸಂಭಾಷಣೆಯ ಸುಸಂದರ್ಭವನ್ನು ಪ್ರಚಾರಕನು ಹೇಗೆ ಕಳಕೊಳ್ಳುತ್ತಾನೆಂದು ತೋರಿಸುವ ದೃಶ್ಯವನ್ನು ಮಾಡಿರಿ. ಅದನ್ನು ಹೇಗೆ ನಿರ್ವಹಿಸ ಸಾಧ್ಯವಿತ್ತೆಂದು ಸಭಿಕರನ್ನು ಕೇಳಿರಿ. ಆ ಮೇಲೆ, ಅದೇ ಪ್ರಚಾರಕನು ಆ ದೃಶ್ಯವನ್ನು ಪುನಃ ಮಾಡಲಿ, ಆದರೆ ಈ ಸಲ, ಮನೆಯವನೊಂದಿಗೆ ಒಳ್ಳೇ ಸಂಭಾಷಣೆಯನ್ನು ವಿಕಸಿಸುವ ಮೂಲಕ ಅದನ್ನು ಸರಿಯಾಗಿ ಮಾಡುವದು ಹೇಗೆಂದು ತೋರಿಸಲಿ.
25 ನಿ: “ನಮ್ಮ ವೈಯಕ್ತಿಕ ಪ್ರಯತ್ನಕ್ಕೆ ಅನುಗುಣ ಪ್ರಮಾಣದಲ್ಲಿ ಕೊಯ್ಯುವುದು.” ಪುರವಣಿ ಲೇಖನದಲ್ಲಿ ಆಧರಿತ ಭಾಷಣ ಮತ್ತು ಚರ್ಚೆ. ಇದನ್ನು ಹಿರಿಯನು ನಡಿಸಬೇಕು. ಸಮಾಚಾರದ ಸ್ಥಳೀಕ ಅನ್ವಯವನ್ನು ಮಾಡಿರಿ. ಸಮಯವಿದ್ದ ಹಾಗೆ ಪರಿಚ್ಛೇದಗಳನ್ನು ಮತ್ತು ಕೊಟ್ಟ ವಚನಗಳನ್ನು ಓದಬಹುದು.
ಸಂಗೀತ 128 (10) ಮತ್ತು ಸಮಾಪ್ತಿ ಪ್ರಾರ್ಥನೆ.
ಮೇ 20ರ ವಾರ
ಸಂಗೀತ 28 (5)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಅಕೌಂಟ್ಸ್ ರಿಪೋರ್ಟ್. ಲೋಕವ್ಯಾಪಕ ಕಾರ್ಯಕ್ಕಾಗಿ ಕೊಟ್ಟ ಆರ್ಥಿಕ ಬೆಂಬಲಕ್ಕಾಗಿ ಸೊಸೈಟಿಯ ಗಣ್ಯತೆಯ ಹೇಳಿಕೆಗಳನ್ನು ಸೇರಿಸಿರಿ. ಸ್ಥಳೀಕ ಸಭಾ ಅಗತ್ಯತೆಗಳಿಗಾಗಿ ಕೊಟ್ಟ ಉದಾರ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.
15 ನಿ: “ಕಾವಲಿನಬುರುಜು ಓದುವಂತೆ ಇತರರಿಗೆ ಉತ್ತೇಜನ ಕೊಡಿರಿ.” ಇದರ ಉತ್ಸಾಹಭರಿತ ಭಾಷಣವನ್ನು ಹಿಂಬಾಲಿಸಿ, ಕಾವಲಿನಬುರುಜನ್ನು ಅವರು ಗಣ್ಯಮಾಡುವುದೇಕೆ ಮತ್ತು ಅದನ್ನು ಕ್ರಮವಾಗಿ ಓದುವುದರಿಂದ ಹೇಗೆ ಪ್ರಯೋಜನ ಹೊಂದಿದ್ದಾರೆ ಎಂಬ ಎರಡು-ಮೂರು ತಯಾರಿತ ಹೇಳಿಕೆಗಳನ್ನು ಪ್ರಚಾರಕರಿಂದ ಪಡೆಯಿರಿ.
20 ನಿ: “ಕೂಟಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿರಿ ಮತ್ತು ಮುಗಿಸಿರಿ.” ಪ್ರಶ್ನೋತ್ತರ ಚರ್ಚೆ. ಎಲ್ಲಾ ಪರಿಚ್ಛೇದ
ಗಳನ್ನು ಓದಿರಿ.
ಸಂಗೀತ 8 (84) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 27ರ ವಾರ
ಸಂಗೀತ 118 (99)
10 ನಿ: ಸ್ಥಳೀಕ ತಿಳಿಸುವಿಕೆಗಳು. ರಾಜ್ಯಗೃಹವನ್ನು ಶುಚಿಮಾಡುವ ಏರ್ಪಾಡನ್ನು ಪರಾಮರ್ಶಿಸಿರಿ. ಯೆಹೋವನ ಆರಾಧನೆಯ ಸ್ಥಳವನ್ನು ಶುಚಿಯಾಗಿಡುವುದರಲ್ಲಿ ಸಹಕಾರದ ಅಗತ್ಯವನ್ನು ಸಹೋದರರು ಗಣ್ಯಮಾಡುವಂತೆ ಸಹಾಯ ಮಾಡಿರಿ. ಅಧಿಕ ಸಮಾಚಾರಕ್ಕಾಗಿ, “ನಿಮ್ಮ ರಾಜ್ಯ ಗೃಹವನ್ನು ನೀವು ಗೌರವಿಸುತ್ತೀರೋ?” ಲೇಖನವನ್ನು 9⁄89ರ ನಮ್ಮ ರಾಜ್ಯದ ಸೇವೆ ಪುಟ 7ನ್ನು ನೋಡಿ.
15 ನಿ: “ನಮ್ಮ ಪ್ರಕಾಶನಗಳ ಸದುಪಯೋಗ ಮಾಡಿರಿ.” ಪ್ರಶ್ನೋತ್ತರ ಚರ್ಚೆ.
10 ನಿ: ಅಟೆಂಡೆಂಟರ ಕೆಲಸ. ಅಟೆಂಡೆಂಟರ ಮೇಲ್ವಿಚಾರ ನೋಡುವ ಸಹೋದರನನ್ನು ಇಂಟರ್ವ್ಯೂ ಮಾಡಿರಿ. ಅವರ ಕರ್ತವ್ಯಗಳನ್ನು ಚರ್ಚಿಸಿರಿ ಮತ್ತು ಸಭೆಯು ಅಟೆಂಡೆಂಟರೊಂದಿಗೆ ಹೇಗೆ ಸಹಕರಿಸಬಹುದೆಂದು ತಿಳಿಸಿರಿ. (ಆರ್ಗನೈಸ್ಟ್ ಟು ಅಕಾಂಪ್ಲಿಶ್ ಯುವರ್ ಮಿನಿಷ್ಟ್ರಿ, ಪುಟ 63-4, ಮತ್ತು 1⁄90ರ ನಮ್ಮ ರಾಜ್ಯದ ಸೇವೆ, ಪುಟ 6ನ್ನು ನೋಡಿ.) ಕೆಲವು ಸಾರಿ ಅಟೆಂಡೆಂಟರು ಹೆತ್ತವರಿಗೆ ಅವರ ಮಕ್ಕಳ ಗಲಾಟೆಯನ್ನು ನಿಲ್ಲಿಸುವ ವಿಷಯವಾಗಿ ಎಚ್ಚರಿಕೆ ಕೊಡಬಹುದೆಂದು ತಿಳಿಸಿರಿ. ನಮ್ಮ ಕೂಟಗಳಲ್ಲಿ ಆರಾಮ ಮತ್ತು ಕ್ರಮಬದ್ಧತೆಯನ್ನು, ಹಾಜರಿ ಲೆಕ್ಕಿಸುವುದನ್ನು ಮತ್ತು ವೃದ್ಧರು ಹಾಗೂ ನಿರ್ಬಲರನ್ನು ಕೂತುಕೊಳ್ಳಿಸುವುದೇ ಮುಂತಾದ ಕೆಲಸಗಳೂ ಅಟೆಂಡೆಂಟರಿದೆ.
10 ನಿ: ಶುಶ್ರೂಷೆಯಲ್ಲಿ ಟ್ರೇಕ್ಟ್ಗಳನ್ನು ಉಪಯೋಗಿಸುವುದು. ದೊರೆಯುವ ಬೇರೆ ಬೇರೆ ಟ್ರೇಕ್ಟ್ಗಳನ್ನು ಸಹೋದರರಿಗೆ ತೋರಿಸಿ, ಅವನ್ನು ಉಪಯೋಗಿಸುವ ಬೇರೆ ಬೇರೆ ವಿಧಾನಗಳನ್ನು ಚರ್ಚಿಸಿರಿ. ಸಭಿಕರು ಟ್ರೇಕ್ಟ್ಗಳನ್ನು ಹೇಗೆ ಉಪಯೋಗಿಸುತ್ತಾರೆಂದು ಕೇಳಿರಿ, ಪ್ರಾಯಶಃ ಅವರಿಗೆ ಸಿಕ್ಕಿದ ಕೆಲವು ಅನುಭವಗಳನ್ನು ತಿಳಿಸಬಹುದು. ಟ್ರೇಕ್ಟ್ನಲ್ಲಿ ಅಭ್ಯಾಸಗಳನ್ನು ಆರಂಭಿಸುವ ವಿಧಾನಗಳನ್ನು ಫೆಬ್ರವರಿಯಲ್ಲಿ ನಾವು ಚರ್ಚಿಸಿದ್ದೆವು. ಇದರಿಂದ ದೊರೆತ ಫಲಿತಾಂಶಗಳ ಅನುಭವಗಳನ್ನು ಹೇಳಿಸಿರಿ. ಅವುಗಳ ಉಪಯೋಗದಿಂದ ದೊರೆತ ಬೇರೆ ಅನುಭವಗಳಿಗಾಗಿ ಇಂಡೆಕ್ಸ್ನಲ್ಲಿ “ಟ್ರೇಕ್ಟ್ಸ್” ಶೀರ್ಷಿಕೆಯನ್ನೂ ನೋಡಿರಿ.
ಸಂಗೀತ 181 (10) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 3ರ ವಾರ
ಸಂಗೀತ 221 (73)
5 ನಿ: ಸ್ಥಳೀಕ ತಿಳಿಸುವಿಕೆಗಳು.
15 ನಿ: ವಿರಾಮದ ವೇಳೆಯನ್ನು ಸಮತೆಯಿಂದ ಬಳಸುವುದು. ವಿರಾಮದ ಸಮಯದ ಕುರಿತು ಹಲವಾರು ಯುವಕರನ್ನು ಇಂಟರ್ವ್ಯೂ ಮಾಡಿರಿ. ಯಂಗ್ ಪೀಪಲ್ ಆಸ್ಕ್ ಪುಸ್ತಕದ 35-37 ಅಧ್ಯಾಯಗಳ ವಿಷಯವನ್ನು ಉಪಯೋಗಿಸಿರಿ. ಇಂಟರ್ವ್ಯೂ ಮಾಡುವ ಸಹೋದರನು ಹೀಗೆ ಕೇಳಬಹುದು: ನೀವೇನನ್ನು ಓದುತ್ತೀರೋ ಆ ವಿಷಯದಲ್ಲಿ ಆಯ್ಕೆ ಮಾಡುವ ಅಗತ್ಯವಿದೆಯೇಕೆ? ತಕ್ಕದಾದ ವಾಚನ ಸಮಾಚಾರವನ್ನು ನೀವು ಹೇಗೆ ಆರಿಸಬಹುದು? ಟೀವೀ ವೀಕ್ಷಣೆಯ ಕೆಲವು ಹಾನಿಕಾರಕ ಪರಿಣಾಮಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಲೌಕಿಕ ಯುವಕರನ್ನು ಅನುಕರಿಸದಿರುವುದರಿಂದ ನೀವೇನನನ್ನೂ ಕಳಕೊಳ್ಳುವುದಿಲ್ಲವೇಕೆ? ಅವರನ್ನು ಅನುಕರಿಸುವುದೇಕೆ ಅಪಾಯಕಾರಿ? ಹಿತಕರವಾದ ಮನೋರಂಜನೆಯನ್ನು ಆನಂದಿಸುವ ಕೆಲವು ವಿಧಗಳು ಯಾವುವೆಂದು ನೀವು ಕಂಡಿರುವಿರಿ? ಈ ಕ್ಷೇತ್ರದಲ್ಲಿ ನಾವು ಸಮತೆಯಲ್ಲಿರುವ ಅಗತ್ಯವಿದೆಯೇಕೆ?
15 ನಿ: ಮನೆಯಿಂದ ಮನೆಗೆ ಸಾರಿರಿ. ಉತ್ಸಾಹಭರಿತ ಮತ್ತು ಪ್ರೋತ್ಸಾಹನೀಯ ಭಾಷಣ, ಆರ್ಗನೈಸ್ಟ್ ಟು ಅಕಾಂಪ್ಲಿಶ್ ಯುವರ್ ಮಿನಿಷ್ಟ್ರಿ, ಪುಟ 84-7ರ ಆಧಾರದಲ್ಲಿ. ಸ್ಥಳೀಕ ಅನ್ವಯವನ್ನು ಮಾಡಿರಿ. ಮನೆಯಿಂದ ಮನೆಗೆ ಸಾರಲು ಸಭಾ ಗುಂಪು-ಸಾಕ್ಷಿಯ ಏರ್ಪಾಡುಗಳಿಗೆ ಗಮನ ಸೆಳೆಯಿರಿ. ಹೊಸ ಪ್ರಚಾರಕರಿಗೆ ಮನೆ ಮನೆಯ ಸೇವೆಯಲ್ಲಿ ಪರಿಣಾಮಕಾರಿಯಾಗಲು ತರಬೇತು ನೀಡುವ ಮಹತ್ವವನ್ನು ಎತ್ತಿಹೇಳಿರಿ.
10 ನಿ: ಸ್ಥಳೀಕ ಅಗತ್ಯತೆಗಳು ಅಥವಾ “ಪರ್ಫೆಕ್ಟ್ ಗವರ್ನ್ಮೆಂಟ್ ಎಟ್ ಲಾಸ್ಟ್!” ಎವೇಕ್! 90 12⁄22, ಪುಟ 20-4. (ದೇಶಭಾಷೆ: “ಲೋಕದ ಆಡಳಿತೆ ಬದಲಾಗುತ್ತಾ ಇದೆ” ಕಾ.ಬು. 90 3⁄1.)
ಸಂಗೀತ 12 (24) ಮತ್ತು ಸಮಾಪ್ತಿ ಪ್ರಾರ್ಥನೆ.