ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಸಪ್ಟಂಬರ 9ರ ವಾರ
ಸಂಗೀತ 165 (81)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಸ್ಥಳೀಕ ಕ್ಷೇತ್ರಕ್ಕೆ ತಕ್ಕದಾದ ಒಂದೆರಡು ಪತ್ರಿಕಾ ಪ್ರಸಂಗಗಳನ್ನು ಸೂಚಿಸಿರಿ ಮತ್ತು ಎಲ್ಲಾ ಪ್ರಚಾರಕರು ಈ ವಾರಾಂತ್ಯದ ಕ್ಷೇತ್ರಸೇವೆಗೆ ಹೋಗುವಂತೆ ಉತ್ತೇಜನ ಕೊಡಿರಿ. ಮುಂದಿನ ವಾರ ಸೇವಾಕೂಟಕ್ಕೆ ರೀಸನಿಂಗ್ ಪುಸ್ತಕ ತನ್ನಿರಿ.
20 ನಿ: “ದೇವರ ನಾಮವನ್ನು ಪೂರ್ಣವಾಗಿ ಸ್ತುತಿಸಿರಿ.” ಪ್ರಶ್ನೋತ್ತರ ಚರ್ಚೆ. ಸದ್ಯದ ಸಂಭಾಷಣೆಗಾಗಿ ವಿಷಯವನ್ನು ಹೇಗೆ ಉಪಯೋಗಿಸಬಹುದೆಂದು ತೋರಿಸುವ ಒಂದು ಚೆನ್ನಾಗಿ ತಯಾರಿಸಿದ ದೃಶ್ಯದಿಂದ ಸಮಾಪ್ತಿಗೊಳಿಸಿರಿ. ಸ್ಥಳೀಕ ಪರಿಸ್ಥಿತಿಗಳಿಗೆ ಅಳವಡಿಸಿರಿ. ತನ್ನ ತಕ್ಕದಾದ ಗುರುತು ಪರಿಚಯವನ್ನು ಮಾಡಿದ ಮೇಲೆ, ಪ್ರಚಾರಕನು ಹೀಗನ್ನಬಹುದು: “ಭವಿಷ್ಯದ ಕಡೆಗೆ ಆಶಾವಾದದ ಹೊರನೋಟದಿಂದ ನೋಡುವಂತೆ ನಾವು ಇಂದು ನಿಮ್ಮ ನೆರೆಯವರ ಸಂಗಡ ಮಾಡಾಡುತ್ತಿದ್ದೇವೆ. ಲೋಕದ ಧುರೀಣರು ಒಂದು ಉತ್ತಮ ಲೋಕಕ್ಕಾಗಿ ತಮ್ಮ ಯೋಜನೆಗಳ ಕುರಿತು ಆಗಿಂದಾಗ್ಯೆ ಮಾತಾಡುತ್ತಿರುತ್ತಾರೆ. ಅವರ ನಿರೀಕ್ಷೆಗಳು ಯಾವುದರ ಮೇಲೆ ಆಧರಿಸಿವೆ? ಒಂದು ಉತ್ತಮ ಲೋಕವನ್ನು ಮನುಷ್ಯರು ತರಶಕ್ತರೆಂದು ನೀವು ನಂಬುತ್ತೀರೋ? [ಉತ್ತರಕ್ಕೆ ಅವಕಾಶಕೊಡಿ.] ಇದರ ಕುರಿತು ಪ್ರವಾದಿ ಯೆರೆಮೀಯನು ಹೇಳಿದ ಸಂಗತಿಯು ಯೆರೆಮೀಯ 10:23ರಲ್ಲಿ ದಾಖಲೆಯಾಗಿದೆ. [ಓದಿ.] ನಾವು ಭವಿಷ್ಯದ ಕುರಿತು ನಿಶ್ಚಯತೆಯಿಂದ ಇರಬಹುದು ಯಾಕಂದರೆ ದೇವರ ತಾನೇ ಮಾಡಿದ ವಾಗ್ದಾನವು ನಮಗಿದೆ. ಮತ್ತು ಆತನ ವಾಗ್ದಾನಗಳು ಎಂದೂ ಸೋಲಲಾರವು. ಅಪೊಸ್ತಲ ಪೇತ್ರನು ಹೀಗೆ ಬರೆದಿದ್ದಾನೆ. [2 ಪೇತ್ರ 3:13 ಓದಿ.] ಈ ಬ್ರೋಷರಲ್ಲಿ ಆ ದೃಢ ವಾಗ್ದಾನವು ಹೇಗೆ ಎತ್ತಿಹೇಳಲ್ಪಟ್ಟಿದೆ ಎಂದು ನೋಡಿರಿ. ಆ ಮೇಲೆ ನೀಡಲ್ಪಡುವ ಬ್ರೋಷರಿನಿಂದ ತಕ್ಕದಾದ ಮಾಹಿತಿಯನ್ನು ಪ್ರಚಾರಕನು ಮನೆಯವನಿಗೆ ತೋರಿಸುವನು.
15 ನಿ: “ನೆಡುವುದು ಮತ್ತು ನೀರು ಹೊಯ್ಯುವುದು—ಶಿಷ್ಯರನ್ನಾಗಿ ಮಾಡುವುದಕ್ಕಾಗಿ ಹೆಜ್ಜೆಗಳು.” 3ನೇ ಪುಟದ ಪುರವಣಿಯಲ್ಲಿ 1-9 ಪಾರಾಗಳನ್ನು ಸಭೆಯೊಂದಿಗೆ ಚರ್ಚಿಸಿರಿ. 7-9ನೇ ಪಾರಾಗಳನ್ನು ಚರ್ಚಿಸುವಾಗ, ಪ್ರಚಾರಕರ ಅತಿ ಚಿಕ್ಕ ಇಂಟರ್ವ್ಯೂಗಳನ್ನು ಮಾಡಿ ವಿಷಯದ ವ್ಯಾವಹಾರ್ಯ ಅನ್ವಯವನ್ನು ತೋರಿಸಿರಿ ಅಥವಾ ವಿಷಯಗಳನ್ನು ದೃಷ್ಟಾಂತಿಸುವ ಸ್ಥಳೀಕ ಅನುಭವಗಳನ್ನು ಹೇಳಿಸಿರಿ. ಅನುಭವಗಳು ಅಥವಾ ಇಂಟರ್ವ್ಯೂಗಳು ಚುಟುಕಾಗಿ, ವಿಷಯಕ್ಕೆಷ್ಟೋ ಅಷ್ಟೇ ಇರಲಿ.
ಸಂಗೀತ 130 (58) ಮತ್ತು ಸಮಾಪ್ತಿ ಪ್ರಾರ್ಥನೆ
ಸಪ್ಟಂಬರ 16ರ ವಾರ
ಸಂಗೀತ 72 (58)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಅಕೌಂಟ್ಸ್ ರಿಪೋರ್ಟ್. ಸೊಸೈಟಿಗೆ ಕಳುಹಿಸಿದ ಕಾಣಿಕೆಗಳ ಅಂಗೀಕಾರ ಪತ್ರ ಮತ್ತು ಗಣ್ಯತೆಯ ಮಾತುಗಳಿದ್ದರೆ ಸಭೆಗೆ ಓದಿಹೇಳಿರಿ. ಹಾಗೂ ಸ್ಥಳೀಕ ಸಭೆಯ ಅಗತ್ಯತೆಗಳನ್ನು ಬೆಂಬಲಿಸಿದಕ್ಕಾಗಿ ಸಹೋದರರನ್ನು ಪ್ರಶಂಸಿಸಿರಿ. ವಾರಾಂತ್ಯದ ಕ್ಷೇತ್ರಸೇವೆಯಲ್ಲಿ ಭಾಗವಹಿಸಲು ಉತ್ತೇಜಿಸಿರಿ ಮತ್ತು ಬೇರೆ ಸಮಯದ ಗುಂಪು ಸಾಕ್ಷಿಗಾಗಿ ಇರುವ ಏರ್ಪಾಡಗಳನ್ನು ತಿಳಿಸಿರಿ.
15 ನಿ: “ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ—ಭಾಗ 2.” ಲೇಖನವನ್ನು ಆವರಿಸಿ ಉತ್ತೇಜಕ ಮತ್ತು ಬೋಧಪ್ರದ ಭಾಷಣ ಕೊಡಿರಿ ಮತ್ತು ರೀಸನಿಂಗ್ ಪುಸ್ತಕದ ಉಪಯೋಗವನ್ನು ದೃಷ್ಟಾಂತಿಸಿರಿ. ತಿಳಿನಿದ ವಿಷಯಗಳನ್ನು ಬೇರೆಯವರು ದೃಶ್ಯಮಾಡುವ ಅಗತ್ಯವಿಲ್ಲ, ಈ ಉತ್ತಮ ಕ್ಷೇತ್ರ ಸೇವಾ ಉಪಕರಣದಲ್ಲಿ ಸಮಾಚಾರವನ್ನು ಕಂಡುಹಿಡಿಯುವುದು ಮತ್ತು ಉಪಯೋಗಿಸುವುದು ಹೇಗೆಂಬದನ್ನು ಭಾಷಕನೇ ಸರಳವಾಗಿ ತೋರಿಸಬಹುದು. ಕ್ಷೇತ್ರಸೇವೆಗಾಗಿ ತಯಾರಿಸುವುದರಲ್ಲಿ ಪ್ರ್ಯಾಕ್ಟಿಸ್ ಸೆಶ್ಯನ್ನ ಮೂಲ್ಯತೆಯ ತೋರಿಸುವ ಚಿಕ್ಕ ದೃಶ್ಯಮಾಡಿರಿ. ಸಮಯವಿದ್ದರೆ, ಪ್ರಚಾರಕರು ಇದನ್ನು ಹೇಗೆ ಮಾಡುತ್ತಾರೆಂದು ವಿವರಿಸುವಂತೆ ಆಮಂತ್ರಿಸಿರಿ.
20 ನಿ: “ನೆಡುವುದು ಮತ್ತು ನೀರು ಹೊಯ್ಯುವುದು—ಶಿಷ್ಯರನ್ನಾಗಿ ಮಾಡುವುದಕ್ಕಾಗಿ ಹೆಜ್ಜೆಗಳು.” ಪುರವಣಿಯಲ್ಲಿ ಕಳೆದ ವಾರ ಆವರಿಸಿದ ವಿಷಯಕ್ಕೆ ಜೋಡಿಸುವ ಚಿಕ್ಕ ಪೀಠಿಕೆಯ ನಂತರ, ಪುಟ 3 ಮತ್ತು 4ರಲ್ಲಿ ಪಾರಾ 10-20ರ ಪ್ರಶ್ನೋತ್ತರ ಪುನರ್ವಿಮರ್ಶೆಯನ್ನು ನಡಿಸಿರಿ. ನಮ್ಮ ರಾಜ್ಯ ಸೇವೆಯ ಹಿಂದಿನ ಸಂಚಿಕೆಗಳಲ್ಲಿ ನೀಡಲಾಗಿದ್ದ ಸಲಹೆಗಳನ್ನು ಅನ್ವಯಿಸಿದ ಮೂಲಕ ತಮ್ಮ ಶುಶ್ರೂಷೆಯನ್ನು ಹೇಗೆ ಪ್ರಗತಿ ಮಾಡಿದರು ಮತ್ತು ಬೈಬಲಭ್ಯಾಸವನ್ನು ಹೇಗೆ ಆರಂಭಿಸಿದರೆಂಬದನ್ನು ಕೆಲವು ಪ್ರಚಾರಕರು ಹೇಳ ಶಕ್ತರಾಗಬಹುದು.
ಸಂಗೀತ 48 (28) ಮತ್ತು ಸಮಾಪ್ತಿ ಪ್ರಾರ್ಥನೆ.
ಸಪ್ಟಂಬರ 23ರ ವಾರ
ಸಂಗೀತ 174 (13)
5 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ಜಿಲ್ಲಾ ಅಧಿವೇಶನಗಳನ್ನು ಹಾಜರಾಗಲು ಮುಂಚಿತವಾಗಿ ಯೋಜನೆಗಳನ್ನು ಮಾಡುವಂತೆ ಸಹೋದರರನ್ನು ಉತ್ತೇಜಿಸಿರಿ. ಸಮಯವಿದ್ದರೆ, ಈ ವಾರಾಂತ್ಯದ ಮನೆ-ಮನೆ ಸೇವೆಯಲ್ಲಿ ನೀಡಲು ಸದ್ಯದ ಪತ್ರಿಕೆಗಳಲ್ಲಿ ಯಾವ ಲೇಖನ ಅತ್ಯುತ್ತಮವಾಗಿವೆ ಎಂದು ತಿಳಿಸಿರಿ.
20 ನಿ: “ಸುವಾರ್ತೆಯನ್ನು ನೀಡುವುದು—ಹೆಚ್ಚು ಸಲ ಸೇವೆಯಾದ ಕ್ಷೇತ್ರಗಳಲ್ಲಿ.” ಪ್ರಶ್ನೋತ್ತರ. ಸಮಾಚಾರದ ಸ್ಥಳೀಕ ಅನ್ವಯವನ್ನು ಮಾಡಿರಿ ಅಥವಾ ಸಭೆಯ ಅಗತ್ಯತೆಗಳಿಗೆ ಅಳವಡಿಸಿಕೊಳ್ಳಿರಿ.
20 ನಿ: “ಸಭಾ ಪುಸ್ತಕಭ್ಯಾಸ ಏರ್ಪಾಡು—ಭಾಗ 2.” ದಕ್ಷನಾದ ಪುಸ್ತಕಭ್ಯಾಸ ನಿರ್ವಾಹಕನಿಂದ ಪ್ರೋತ್ಸಾಹನೀಯ ಭಾಷಣ.
ಸಂಗೀತ 25 (119) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 30ರ ವಾರ
ಸಂಗೀತ 134 (106)
15 ನಿ: ಸ್ಥಳೀಕ ತಿಳಿಸುವಿಕೆಗಳು. ಸಭೆಯ ಕ್ಷೇತ್ರ ಸೇವಾ ಏರ್ಪಾಡುಗಳಲ್ಲಿ ಮತ್ತು ಪಯನೀಯರ್ ಪ್ರಚಾರಕರಿಗೆ ಉತ್ತೇಜನ ಮತ್ತು ಸಹಾಯವನ್ನು ಕೊಡುವುದಕ್ಕೆ ಏನೆಲ್ಲಾ ಮಾಡಲಾಗಿದೆ ಎಂಬದರ ಸವಿಸ್ತಾರ ಚರ್ಚೆ. ತಮ್ಮ ಪಯನೀಯರ ಸೇವೆಯನ್ನು ಮೊದಲಾಗಿ ಪ್ರಾಂಭಿಸುವವರ ಅಗತ್ಯತೆಗಳಿಗಾಗಿ ವಿಶೇಷ ಗಮನ ಕೊಡಿರಿ. ಈ ವಾರಾಂತ್ಯದ ಕ್ಷೇತ್ರಸೇವೆಯಲ್ಲಿ ಭಾಗವಹಿಸಲು ಉತ್ತೇಜನ ಕೊಡಿರಿ ಮತ್ತು ಹೊಸ ತಿಂಗಳ ಕ್ಷೇತ್ರ ಸೇವೆಯ ನೀಡುವಿಕೆಗಾಗಿ ಕ್ರಿಯೇಶನ್ ಪುಸ್ತಕದ ಸಂಗ್ರಹವನ್ನು ತಕ್ಕೊಳ್ಳುವಂತೆ ಪ್ರಚಾರಕರಿಗೆ ನೆನಪು ಮಾಡಿರಿ.
15 ನಿ: “ಸ್ಥಳೀಕ ಅಗತ್ಯತೆಗಳು. ಹರಟೆಯ ವಿಷಯದ ಮೇಲೆ ಚರ್ಚೆ ಅಥವಾ ಭಾಷಣದ ಆಧಾರಕ್ಕಾಗಿ ಜೂನ್ 8, 1991ರ ಅವೇಕ್! ಮುಖಪುಟ ಲೇಖನಗಳನ್ನು ಉಪಯೋಗಿಸಬಹುದು. (ದೇಶಭಾಷೆ: ಕಾವಲಿನಬುರುಜು 91 5⁄1 “ಹಾನಿಕರ ಹರಟೆಯ ವಿರುದ್ಧವಾಗಿ ಎಚ್ಚರದಿಂದಿರಿ.”)
15 ನಿ: “ಆತ್ಮಿಕ ಗುರಿಗಳ ಕಡೆಗೆ ನೀವು ಕುಟುಂಬವಾಗಿ ಕಾರ್ಯನಡಿಸುತ್ತೀರೋ?” ಪ್ರಶ್ನೋತ್ತರ ಚರ್ಚೆ. ಸಮಯವು ಅನುಮತಿಸುವ ಪ್ರಕಾರ ಪರೆಗ್ರಾಫ್ ಮತ್ತು ವಚನಗಳನ್ನು ಓದಿಸಿರಿ.
ಸಂಗೀತ 16 (101) ಮತ್ತು ಸಮಾಪ್ತಿ ಪ್ರಾರ್ಥನೆ.